KN/720312 ಸಂಭಾಷಣೆ - ಶ್ರೀಲ ಪ್ರಭು ಪಾದರ ಅಮೃತ ವಾಣಿ ವೃಂದಾವನ
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
ಪ್ರಭುಪಾದರು: ಒಂದು ಪುಸ್ತಕವಿದೆ, ಬಹುಶಃ ನೀವು ಅದನ್ನು ಓದಿರಬಹುದು, 'ಅಕ್ವೇರಿಯನ್ ಗಾಸ್ಪೆಲ್'. ಆ ಪುಸ್ತಕದಲ್ಲಿ ಕ್ರಿಸ್ಟೋ ಎಂಬ ಗ್ರೀಕ್ ಪದವಿದೆ ಎಂದು ನಾನು ಓದಿದ್ದೇನೆ. ಕ್ರಿಸ್ಟೋ... ಕೆಲವೊಮ್ಮೆ ನಾವು ಕೃಷ್ಣ ಎಂದು ಹೇಳುವುದಿಲ್ಲ, ನಾವು ಕ್ರಿಸ್ತ ಎಂದು ಹೇಳುತ್ತೇವೆ. ಡಾ. ಕಪೂರ್: ಕ್ರಿಸ್ತ, ಹೌದು, ವಿಶೇಷವಾಗಿ ಬಂಗಾಳಿಯಲ್ಲಿ. ಪ್ರಭುಪಾದರು: ಹೌದು, ಆದ್ದರಿಂದ ಈ ಕ್ರಿಸ್ಟೋ ಪದವು 'ಅಭಿಷೇಕ' ಎಂದರ್ಥ. ಕೃಷ್ಣನ ಮುಖಕ್ಕೆ ಅಭಿಷೇಕ ಮಾಡಲಾಗಿದೆ. ಮತ್ತು 'ಪ್ರೀತಿ' ಕೂಡ. ಈ 'ಕ್ರಿಸ್ತ' ಎಂಬ ಬಿರುದನ್ನು ಯೇಸುವಿಗೆ ದೇವರ ಮೇಲಿನ ಪ್ರೀತಿಯಿಂದಾಗಿ ನೀಡಲಾಯಿತು. ಆದ್ದರಿಂದ,ಕೃಷ್ಣ ಅಥವಾ ಕ್ರಿಸ್ಟೋ ಎಂದರೆ 'ದೇವರ ಮೇಲಿನ ಪ್ರೀತಿ'. |
720312 - ಸಂಭಾಷಣೆ - ವೃಂದಾವನ |