KN/720423 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಟೊಕಿಯೊ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈ ಪರಿಸ್ಥಿತಿ, ವಸ್ತುವಿನೊಂದಿಗಿನ ನಮ್ಮ ಸಂಪರ್ಕವು ಕನಸಿನಂತೆಯೇ ಇದೆ.

ವಾಸ್ತವವಾಗಿ, ನಾವು ಬಿದ್ದಿಲ್ಲ. ಆದ್ದರಿಂದ, ನಾವು ಪತಿತರಾಗಿಲ್ಲದ ಕಾರಣ, ಯಾವುದೇ ಕ್ಷಣದಲ್ಲಿ ನಾವು ನಮ್ಮ ಕೃಷ್ಣ ಪ್ರಜ್ಞೆಯನ್ನು ಪುನರುಜ್ಜೀವನಗೊಳಿಸಬಹುದು. ನಮಗೆ ಅರ್ಥವಾದ ತಕ್ಷಣ 'ನನಗೂ ಇದಕ್ಕೂ ಸಂಬಂಧವಿಲ್ಲ. ನಾನು ಕೃಷ್ಣನ ಸೇವಕ, ಅವನ ಶಾಶ್ವತ ಸೇವಕ.'; ಅಷ್ಟೇ. ತಕ್ಷಣವೇ ನಾವು ಮುಕ್ತಿ ಹೊಂದುತ್ತೇವೆ. ನಿಖರವಾಗಿ ಹಾಗೆ: ನೀವು ತಕ್ಷಣ ...; ಕೆಲವೊಮ್ಮೆ ನಾವು ಹಾಗೆ ಮಾಡುತ್ತೇವೆ. ಭಯದ ಕನಸು ತುಂಬಾ ಅಸಹನೀಯವಾದಾಗ, ನಾವು ಕನಸನ್ನು ಮುರಿಯುತ್ತೇವೆ. ಇಲ್ಲದಿದ್ದರೆ ಅದು ಅಸಹನೀಯವಾಗುತ್ತದೆ. ಅಂತೆಯೇ, ನಾವು ಕೃಷ್ಣ ಪ್ರಜ್ಞೆಯ ಹಂತಕ್ಕೆ ಬಂದ ತಕ್ಷಣ ನಾವು ಯಾವುದೇ ಕ್ಷಣದಲ್ಲಿ ಈ ಭೌತಿಕ ಸಂಪರ್ಕವನ್ನು ಮುರಿಯಬಹುದು: 'ಓಹ್, ಕೃಷ್ಣ ನನ್ನ ಶಾಶ್ವತ ಗುರು. ನಾನು ಆತನ ಸೇವಕ'. ಅಷ್ಟೇ. ಇದೇ ದಾರಿ. ವಾಸ್ತವವಾಗಿ, ನಾವು ಬಿದ್ದಿಲ್ಲ. ಯಾರೂ ಬೀಳಲು ಸಾಧ್ಯವಿಲ್ಲ. ಅದೇ ಉದಾಹರಣೆ: ವಾಸ್ತವವಾಗಿ ಹುಲಿ ಇಲ್ಲ; ಇದು ಒಂದು ಕನಸು. ಹಾಗೆಯೇ ಕೆಳಮಟ್ಟಕ್ಕಿಳಿದ ಪರಿಸ್ಥಿತಿಯೂ ಒಂದು ಕನಸಾಗಿದೆ. ನಾವು ಬಿದ್ದವರಲ್ಲ. ಆ ಭ್ರಮೆಯ ಸ್ಥಿತಿಯನ್ನು ನಾವು ಯಾವುದೇ ಕ್ಷಣದಲ್ಲಿ ಬಿಟ್ಟುಬಿಡಬಹುದು."

720423 - ಉಪನ್ಯಾಸ SB 02.09.01 - ಟೊಕಿಯೊ