KN/720529 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್
KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ |
"'ನನ್ನ ಪ್ರೀತಿಯ ಪ್ರಭು, ನಾನು ನನ್ನ ಬಗ್ಗೆ ಚಿಂತಿಸುತ್ತಿಲ್ಲ, ಏಕೆಂದರೆ ನಾನು ವಿಷಯ ಪಡೆದುಕೊಂಡಿದ್ದೇನೆ. ಅಜ್ಞಾನವನ್ನು ಹೇಗೆ ದಾಟಬೇಕು ಅಥವಾ ವೈಕುಂಠಕ್ಕೆ ಹೋಗುವುದು ಅಥವಾ ಮುಕ್ತಿ ಹೊಂದುವುದು ಹೇಗೆ ಎಂಬುದರ ಬಗ್ಗೆ ನನಗೆ ಯಾವುದೇ ಸಮಸ್ಯೆ ಇಲ್ಲ. ಈ ಸಮಸ್ಯೆಗಳು ಬಗೆಹರಿದಿವೆ. ನೀವು ಹೇಗೆ ಪರಿಹರಿಸಿದ್ದೀರಿ? 'ತ್ವದ್-ವೀರ್ಯ ಗಾಯನ ಮಹಾಮೃತ ಮಗ್ನ ಚಿತ್ತ:'; ನಾನು ಯಾವಾಗಲೂ ನಿಮ್ಮ ಚಟುವಟಿಕೆಗಳನ್ನು ವೈಭವೀಕರಿಸಲು ತೊಡಗಿರುವ ಕಾರಣ, ನನ್ನ ಸಮಸ್ಯೆಯು ಪರಿಹಾರವಾಗಿದೆ.
ಹಾಗಾದರೆ ನಿಮ್ಮ ಸಮಸ್ಯೆ ಏನು? ಸಮಸ್ಯೆಯು 'ಸೋಚೇ' : ನಾನು ದುಃಖಿಸುತ್ತಿದ್ದೇನೆ, 'ಸೋಚೇ ತತೋ ವಿಮುಖ ಚೇತಸಃ', ನಿನ್ನಿಂದ ವಿಮುಖರಾದವರು. ನಿಮ್ಮ ಬಗ್ಗೆ ವಿಮುಖರಾಗಿ, ಅವರು ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ, 'ಮಾಯಾ ಸುಖಯಾ', ಭಾವಿಸಲಾದ ಸಂತೋಷಕ್ಕಾಗಿ, ಈ ದುಷ್ಟರು. ಹೀಗಾಗಿ ಅವರಿಗಾಗಿ ಕೊರಗುತ್ತಿದ್ದೇನೆ’. ಇದು ನಮ್ಮ ವೈಷ್ಣವ ತತ್ವ. ಕೃಷ್ಣನ ಪಾದಕಮಲಗಳಲ್ಲಿ ಆಶ್ರಯ ಪಡೆದವನಿಗೆ ಯಾವುದೇ ತೊಂದರೆಯಿಲ್ಲ. ಆದರೆ ಕೃಷ್ಣನನ್ನು ಮರೆತು ಸುಮ್ಮನೆ ಕಷ್ಟಪಟ್ಟು ದುಡಿಯುತ್ತಿರುವ ದುಷ್ಟರನ್ನು ಬಿಡಿಸುವುದು ಹೇಗೆ ಎಂಬುದೇ ಆತನ ಸಮಸ್ಯೆ. ಅದು ಸಮಸ್ಯೆಯಾಗಿದೆ." |
720529 - ಉಪನ್ಯಾಸ SB 02.03.11-12 - ಲಾಸ್ ಎಂಜಲೀಸ್ |