KN/720624 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಹಾಗಾಗಿ ಸತ್ಯವನ್ನು ಕಂಡಿರಬೇಕು, ಸತ್ಯವನ್ನು ಅರಿತುಕೊಂಡಿರಬೇಕು. ತದ್-ವಿಜ್ಞಾನಾರ್ಥಂ ಸ ಗುರುಂ ಏವಾಭಿಗಚ್ಛೇತ್ (MU 1.2.12).

ಗುರು ಎಂದರೆ ಸತ್ಯವನ್ನು ಕಂಡವನು ಎಂದರ್ಥ. ಅವನು ಸತ್ಯವನ್ನು ಹೇಗೆ ನೋಡಿದನು? ಪರಂಪರಾ ವ್ಯವಸ್ಥೆಯ ಮೂಲಕ. ಕೃಷ್ಣನು ಇದನ್ನು ಹೇಳಿದನು, ನಂತರ ಬ್ರಹ್ಮನು ಅದೇ ಮಾತನ್ನು ಹೇಳಿದನು, ನಂತರ ನಾರದನು ಹೇಳಿದನು, ವ್ಯಾಸದೇವನು ಹೇಳಿದನು, ಮತ್ತು ನಂತರ ಶಿಷ್ಯ ಪರಂಪರೆ, ಮಾಧ್ವಾಚಾರ್ಯ, ಮಾಧವೇಂದ್ರ ಪುರಿ, ಈಶ್ವರಪುರಿ, ಭಗವಾನ್ ಚೈತನ್ಯ, ಶಾಸ-ಗೋಸ್ವಾಮಿ, ಕೃಷ್ಣದಾಸ ಕವಿರಾಜ ಗೋಸ್ವಾಮಿ, ಶ್ರೀನಿವಾಸ ಆಚಾರ್ಯ, ನರೋತ್ತಮ ದಾಸ ಠಾಕುರ, ವಿಶ್ವನಾಥ ಚಕ್ರವರ್ತಿ ಠಾಕುರ-ಈ ರೀತಿಯಲ್ಲಿ-ಜಗನ್ನಾಥ ದಾಸ ಬಾಬಾಜಿ, ಗೌರ ಕಿಶೋರ ದಾಸ ಬಾಬಾಜಿ. ಭಕ್ತಿಸಿದ್ಧಾಂತ ಸರಸ್ವತಿ. ನಂತರ ನಾವು ಅದೇ ವಿಷಯವನ್ನು ಮಾತನಾಡುತ್ತಿದ್ದೇವೆ. 'ನಾವು ಆಧುನೀಕರಣಗೊಂಡಿರುವುದರಿಂದ, ನಾವು... ಆಧುನಿಕ ವಿಜ್ಞಾನ ಬದಲಾಗಿದೆ' ಎಂದಲ್ಲ. ಏನು ಬದಲಾಗಿಲ್ಲ. ಅದೆಲ್ಲ ಮೂರ್ಖತನ."

720624 - ಉಪನ್ಯಾಸ SB 02.04.01 - ಲಾಸ್ ಎಂಜಲೀಸ್