"ನಾವು ಎಷ್ಟು ಅಜ್ಞಾನಿಗಳು ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ನಾವೆಲ್ಲರೂ ಅಜ್ಞಾನದಲ್ಲಿದ್ದೇವೆ. ಈ ಶಿಕ್ಷಣವು ಬೇಕಾಗಿದೆ ಏಕೆಂದರೆ ಜನರು, ಈ ಅಜ್ಞಾನದಿಂದ, ಅವರು ಪರಸ್ಪರ ಜಗಳವಾಡುತ್ತಿದ್ದಾರೆ. ಒಂದು ರಾಷ್ಟ್ರ ಇನ್ನೊಂದು ರಾಷ್ಟ್ರದೊಂದಿಗೆ ಹೋರಾಡುತ್ತಿದೆ, ಒಂದು ಧರ್ಮದವರು ಇನ್ನೊಂದು ಧರ್ಮದೊಂದಿಗೆ ಹೋರಾಡುತ್ತಿದ್ದಾರೆ. ಆದರೆ ಇದೆಲ್ಲವೂ ಅಜ್ಞಾನವನ್ನು ಆಧರಿಸಿದೆ. ನಾನು ಈ ದೇಹವಲ್ಲ. ಆದ್ದರಿಂದ ಶಾಸ್ತ್ರ ಹೇಳುತ್ತದೆ, ಯಸ್ಯಾತ್ಮಬುದ್ಧಿಃ ಕುಣಪೇ ತ್ರಿಧಾತುಕೇ (SB 10.84.13). ಆತ್ಮ-ಬುದ್ಧಿಃ ಕುಣಪೆ, ಇದು ಮೂಳೆಗಳು ಮತ್ತು ಸ್ನಾಯುಗಳ ಚೀಲವಾಗಿದೆ ಮತ್ತು ಇದನ್ನು ಮೂರು ಧಾತುಗಳಿಂದ ತಯಾರಿಸಲಾಗುತ್ತದೆ. ಧಾತು ಎಂದರೆ ಅಂಶ. ಆಯುರ್ವೇದ ಪದ್ಧತಿಯ ಪ್ರಕಾರ: ಕಫ, ಪಿತ್ತ, ವಾಯು. ವಸ್ತು ಅಂಶಗಳು. ಆದ್ದರಿಂದ ನಾನು ಆತ್ಮ. ನಾನು ದೇವರ ಭಾಗವಾಗಿದ್ದೇನೆ. ಅಹಂ ಬ್ರಹ್ಮಾಸ್ಮಿ. ಇದೇ ವೇದ ವಿದ್ಯೆ. ನೀವು ಈ ಭೌತಿಕ ಪ್ರಪಂಚಕ್ಕೆ ಸೇರಿದವರಲ್ಲ ಎಂದು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ನೀವು ಆಧ್ಯಾತ್ಮಿಕ ಜಗತ್ತಿಗೆ ಸೇರಿದವರು. ನೀವು ದೇವರ ಭಾಗವಾಗಿದ್ದೀರಿ."
|