KN/720817 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನೀವು ಹೇಳಿದರೆ, 'ಮಾನವ ಸಮಾಜವನ್ನು ಉಳಿಸಲು ನೀವು ಏಕೆ ಆಸಕ್ತಿ ಹೊಂದಿದ್ದೀರಿ?' ಅದು ಕೃಷ್ಣನ ವ್ಯವಹಾರ. ಕೃಷ್ಣನು ಬಯಸುತ್ತಾನೆ, ದೇವರು ಬಯಸುತ್ತಾನೆ, 'ಈ ಎಲ್ಲಾ ಜೀವಿಗಳು, ಅವರು ಮನೆಗೆ ಹಿಂತಿರುಗಬೇಕು, ದೇವರಿಗೆ ಹಿಂತಿರುಗಬೇಕು. ಅವರು ಯಾಕೆ ನರಳುತ್ತಿದ್ದಾರೆ?' ಆದ್ದರಿಂದ ಕೃಷ್ಣನು ವೈಯಕ್ತಿಕವಾಗಿ ಬರುತ್ತಾನೆ.

ಪರಿತ್ರಾಣಾಯ ಸಾಧುನಾಂ ವಿನಾಶಾಯ ಚ ದುಷ್ಕೃತಮ್ ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ (BG 4.8)

ಕೃಷ್ಣನು ತುಂಬಾ ಚಿಂತಿತನಾಗಿದ್ದಾನೆ. ನಾವು ಇಲ್ಲಿ ನರಳುತ್ತಿದ್ದೇವೆ, ಇಲ್ಲಿ ಕೊಳೆಯುತ್ತಿದ್ದೇವೆ. ನಾವು ಕೃಷ್ಣನ ಮಕ್ಕಳು. ನಾವು ಇಲ್ಲಿ ಕೊಳೆಯುತ್ತೇವೆ ಎಂದು ನೋಡಲು ಕೃಷ್ಣನಿಗೆ ಇಷ್ಟವಿಲ್ಲ. ಅವನು ಬಯಸುತ್ತಾನೆ, 'ಮನೆಗೆ ಹಿಂತಿರುಗಿ, ನನ್ನೊಂದಿಗೆ ನೃತ್ಯ ಮಾಡಿ, ನನ್ನೊಂದಿಗೆ ತಿನ್ನಿರಿ'. ಆದರೆ ಈ ಕಿಡಿಗೇಡಿಗಳು ಹೋಗುವುದಿಲ್ಲ. ಅವರು ಇಲ್ಲಿ ಅಂಟಿಕೊಳ್ಳುತ್ತಾರೆ: 'ಇಲ್ಲ ಸಾರ್. ಇಲ್ಲಿ ತುಂಬಾ ಚೆನ್ನಾಗಿದೆ. ನಾನು ಹಂದಿಯಾಗುತ್ತೇನೆ ಮತ್ತು ಮಲವನ್ನು ತಿನ್ನುತ್ತೇನೆ. ಅದು ತುಂಬಾ ಹಿತಕರವಾಗಿದೆ'. ಹಾಗಾಗಿ ಇದು ಸದ್ಯದ ಪರಿಸ್ಥಿತಿ."

720817 - ಉಪನ್ಯಾಸ SB 01.02.14 - ಲಾಸ್ ಎಂಜಲೀಸ್