"ಜನರು ಓದುವುದರಲ್ಲಿ ಆಸಕ್ತಿ ಹೊಂದಿದ್ದಾರೆ, ಆದರೆ ಅವರು ಕೇವಲ ತಥಾಕಥಿತ ಸಾಹಿತ್ಯ, ಕಾವ್ಯಗಳನ್ನು ಓದುತ್ತಿದ್ದಾರೆ. ಆದರೆ ನಮಗೆ ಅಂತಹ ಸಾಹಿತ್ಯದಲ್ಲಿ ಆಸಕ್ತಿ ಇಲ್ಲ ಏಕೆಂದರೆ ಅದು ಕೃಷ್ಣ-ಕಥೆ ಅಲ್ಲ. ನಮಗೆ ಶ್ರೀಮದ್-ಭಾಗವತದಲ್ಲಿ ಮತ್ತು ಭಗವದ್ಗೀತೆಯಲ್ಲಿ ಆಸಕ್ತಿ ಇದೆ. ಯಾಕೆ? ಏಕೆಂದರೆ ಅದು ಕೃಷ್ಣ-ಕಥೆ. ಒಲವು ಒಂದೇನೇ. ಎಲ್ಲರೂ ಏನನ್ನಾದರೂ ಓದಲು ಬಯಸುತ್ತಾರೆ. ಹಾಗಾಗಿ ನಾವೂ ಸಹ ಏನನ್ನಾದರೂ ಓದಲು ಬಯಸುತ್ತೇವೆ. ಆದರೆ ನಾವು ಭಗವದ್ಗೀತೆ, ಭಾಗವತಮ್, ಚೈತನ್ಯ-ಚರಿತಾಮೃತವನ್ನು ಓದುತ್ತೇವೆ ಏಕೆಂದರೆ ಅದರಲ್ಲಿ ಕೃಷ್ಣ-ಕಥೆ ಇದೆ. ಎಷ್ಟೇ ಚೆನ್ನಾಗಿ ರಚಿಸಲ್ಪಟ್ಟಿದ್ದರೂ ನಮಗೆ ಬೇರೆ ಯಾವುದೇ ಅಸಂಗತ ಸಾಹಿತ್ಯದಲ್ಲಿ ಆಸಕ್ತಿ ಇಲ್ಲ."
|