KN/740102b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈಹಾ. ಈಹಾ ಎಂದರೆ "ಆಸೆ." ಯಸ್ಯ, ಒಬ್ಬನ ಆಸೆ. ಅವನು ಯಾವಾಗಲೂ ಕೃಷ್ಣನ ಸೇವೆ ಮಾಡುವುದು ಹೇಗೆ ಎಂದು ಯೋಚಿಸುತ್ತಾನೆ. ಇಡೀ ಪ್ರಪಂಚದ ಸಾಮಾನುಗಳೊಂದಿಗೆ ಕೃಷ್ಣನಿಗೆ ಹೇಗೆ ಸೇವೆ ಮಾಡಬೇಕೆಂದು ಅಂತಹ ವ್ಯಕ್ತಿ ಯೋಜಿಸುತ್ತಾನೆ. ಈಹಾ ಯಸ್ಯ ಹರೇರ್ ದಾಸ್ಯೇ. ಅವನ ಮುಖ್ಯ ಗುರಿ ಕರ್ಮಣಾ ಮನಸಾ ವಾಚಾ. ಒಬ್ಬನು ತನ್ನ ಕಾರ್ಯಗಳಿಂದ ಕೃಷ್ಣನ ಸೇವೆಯನ್ನು ಮಾಡಬಹುದು, ಕರ್ಮಣಾ; ಮನಸ್ಸಿನಿಂದ, ಅದನ್ನು ಹೇಗೆ ಚೆನ್ನಾಗಿ ಮಾಡಬಹುದು ಎಂಬ ಆಲೋಚನೆಯಿಂದ. ಮನಸ್ಸು ಕೂಡ ಬೇಕು. ಕರ್ಮಣಾ ಮನಸಾ ವಾಚಾ. ಮತ್ತು ಪದಗಳಿಂದ. ಹೇಗೆ? ಉಪದೇಶದಿಂದ. ಅಂತಹ ವ್ಯಕ್ತಿ, ನಿಖಿಲಸ್ವ್ ಅಪಿ ಅವಸ್ಥಾಸು, ಜೀವನದ ಯಾವುದೇ ಸ್ಥಿತಿಯಲ್ಲಿ ಅವನು ಇರಬಹುದು... ಅವನು ವೃಂದಾವನದಲ್ಲಿರಬಹುದು ಅಥವಾ ನರಕದಲ್ಲಿರಬಹುದು. ಅವನಿಗೆ ಕೃಷ್ಣನನ್ನು ಹೊರತುಪಡಿಸಿ ಬೇರೆ ಯಾವುದರೊಂದಿಗೂ ಯಾವುದೇ ಸಂಬಂಧವಿಲ್ಲ. ಜೀವನ್-ಮುಕ್ತಃ ಸ ಉಚ್ಯತೇ: ಅವನು ಯಾವಾಗಲೂ ಮುಕ್ತನಾಗಿರುತ್ತಾನೆ. ಅದು ಅಗತ್ಯ."
740102 - ಉಪನ್ಯಾಸ SB 01.16.05 - ಲಾಸ್ ಎಂಜಲೀಸ್