KN/760107 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನೆಲ್ಲೂರು

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
“ಪುಣ್ಯ ಕಾರ್ಯಗಳಿಂದ ನೀವು ಊರ್ಧ್ವ ಲೋಕಗಳಿಗೆ ಏರಬಹುದು, ಆದರೆ ಅದು ನಿಮ್ಮ ಭೌತಿಕ ಪ್ರಪಂಚದ ಸಂಕಟಗಳ ಸಮಾಪ್ತಿಯಾಗಿದೆ ಎಂದರ್ಥವಲ್ಲ. ಆದ್ದರಿಂದ, ಕೃಷ್ಣ ಹೇಳುತ್ತಾನೆ, “ಆಬ್ರಹ್ಮ-ಭುವನಾಳ್ ಲೋಕಃ ಪುನರ್ ಆವರ್ತಿನೋ ಆರ್ಜುನ (ಭ.ಗೀ 8.16).” ನೀವೂ ಬ್ರಹ್ಮಲೋಕಕ್ಕೆ ಬಡ್ತಿ ಹೊಂದಿದರೂ, ಅಲ್ಲಿ ಜೀವನ ಮಟ್ಟ, ಜೀವನದ ಅವಧಿ ತುಂಬಾ ದೊಡ್ಡದಾಗಿದ್ದರೂ, ಈ ಭೌತಿಕ ನೋವುಗಳು ಮತ್ತು ಆನಂದವನ್ನು ನೀವು ಅಲ್ಲಿ ತಪ್ಪಿಸಲು ಸಾಧ್ಯವಿಲ್ಲ, ಏಕೆಂದರೆ ನಿಮ್ಮ ಪುಣ್ಯಕಾರ್ಯಗಳ ಫಲವನ್ನು ಅನುಭವಿಸಿ ಮುಗಿಸಿದ ನಂತರ ನೀವು ಮರಳಿ ಬರುತ್ತೀರಿ..., ಈ ಅಧೋಲೋಕಕ್ಕೆ ನೀವು ಮತ್ತೆ ಹಿಂತಿರುಗಬೇಕಾಗುತ್ತದೆ. ಕ್ಷೀಣೇ ಪುಣ್ಯೇ ಪುನರ್ ಮರ್ತ್ಯ-ಲೋಕಂ ವಿಶಂತಿ (ಭ.ಗೀ 9.21). ಪುಣ್ಯ ಕಾಯರ್ಗಳ ಫಲ ಮುಗಿದ ನಂತರ, ನಿಮ್ಮನ್ನು ಮತ್ತೆ ಅಧೋಲೋಕಗಳಿಗೆ ಎಳೆಯಲಾಗುತ್ತದೆ. "ಆದ್ದರಿಂದ, ನೀವು ಭಕ್ತಿ ಪಥಕ್ಕೆ ಹೋಗದಿದ್ದರೆ… ಕೃಷ್ಣ ಹೇಳುವ ಪ್ರಕಾರ “ಭಕ್ತ್ಯಾ ಮಾಮ್ ಅಭಿಜಾನಾತಿ ಯಾವಾನ್ ಯಶ್ ಚಾಸ್ಮಿ ತತ್ವತಃ (ಭ.ಗೀ 18.55), ನೀವು ದೇವರನ್ನು, ಕೃಷ್ಣನನ್ನು, ಅರ್ಥಮಾಡಿಕೊಳ್ಳಲು ಬಯಸಿದರೆ ಅದಕ್ಕೆ ಏಕೈಕ ಮಾರ್ಗ, ಭಕ್ತ್ಯಾ, ಭಕ್ತಿ, ಅಥವಾ ಭಕ್ತಿ ಸೇವೆಯನ್ನು ಸ್ವೀಕರಿಸುವುದು.”
760107 - ಉಪನ್ಯಾಸ SB 06.01.09 - ನೆಲ್ಲೂರು