KN/Prabhupada 0004 - ಅಸಂಬದ್ಧಕ್ಕೆ ಶರಣಾಗಬೇಡಿ
Lecture on BG 10.2-3 -- New York, January 1, 1967
ಆ ಪ್ರಕ್ರಿಯೆ... ಅದನ್ನು ಸಹ ಭಗವದ್ಗೀತೆಯಲ್ಲಿ ಪ್ರಸ್ತಾಪಿಸಿದ್ದಾರೆ. ತದ್ ವಿದ್ಧಿ ಪ್ರಣಿಪಾತೇನ ಪರಿಪ್ರಷ್ಣೇನ ಸೇವಯಾ (ಭ.ಗೀ 4.34). ಆದ್ದರಿ೦ದ, ನೀವು ಆ ಆಧ್ಯಾತ್ಮ ವಿಜ್ಞಾನವನ್ನು ಅರ್ಥ ಮಾಡಿಕೊಳ್ಳಲು ಬಯಸಿದರೆ, ಆಗ ನೀವು ಈ ತತ್ವವನ್ನು ಅನುಸರಿಸಬೇಕು. ಏನದು? ತದ್ ವಿದ್ಧಿ ಪ್ರಣಿಪಾತೇನ. ನೀವು ಶರಣಾಗಬೇಕು. "ನಮ೦ತ ಏವ"ದ ಹಾಗೆ. ನೀವು ವಿಧೇಯನಾಗದ ಹೊರತು, ನೀವು ಶರಣಗತ ಆತ್ಮನಾಗಲು ಸಾದ್ಯವಿಲ್ಲ. ಮತ್ತು ಎಲ್ಲಿ, ಪ್ರಣಿಪಾತ. ನೀವು ಎಲ್ಲಿ ಆ ವ್ಯಕ್ತಿಯನ್ನು ಕಾಣಬಹುದು... "ಅವರು... ನಾನು ಶರಣಾಗಬೇಕು ಎಂದು ಬಯಸುವ ಆ ವ್ಯಕ್ತಿ ಎಲ್ಲಿದ್ದಾನೆ?" ಹಾಗಾದರೆ ಯಾರಿಗೆ ಶರಣಾಗಬೇಕು ಎನುವುದಕ್ಕೆ ನಾವು ಒಂದು ಸಣ್ಣ ಪರೀಕ್ಷೆ ಮಾಡಬೇಕು. ಅಷ್ಟು ಜ್ಞಾನವಾದರು ನಮಗಿರಬೇಕು. ಯಾವುದೋ ಅಸಂಬದ್ಧಕ್ಕೆ ನೀವು ಶರಣಾಗಬೇಡಿ. ಮತ್ತು ಇದು ವಿವೇಕಯುತವೋ ಅಥವಾ ಮೂರ್ಖತನವೋ ಎಂದು ತಿಳಿಯುವುದು ಹೇಗೆ? ಅದನ್ನು ಸಹ ಶಾಸ್ತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ಅದನ್ನು ಕಟೋಪನೀಷದ್ ನಲ್ಲಿ ಪ್ರಸ್ತಾಪಿಸಿದ್ದಾರೆ. ತದ್ ವಿದ್ಧಿ ಪ್ರಣಿಪಾತೇನ... (ಭ.ಗೀ 4.34). ಕಟೋಪನೀಷದ್ ನಲ್ಲಿ ಹೀಗೆ ಹೇಳಲಾಗಿದೆ: ತದ್-ವಿಜ್ಞಾನಾರ್ಥಂ ಸ ಗುರುಮ್ ಏವಾಭಿಗಚ್ಛೇತ್ ಶ್ರೋತ್ರಿಯಂ ಬ್ರಹ್ಮ-ನಿಷ್ಠಮ್ (ಮ.ಊ ೧.೨.೧೨). ಈ, ಶ್ರೋತ್ರಿಯಂ ಏ೦ದರೆ ಯಾರು ಗುರು ಪರ೦ಪರೆಯಲ್ಲಿ ಬರುತ್ತಾರೊ ಅವರು. ಆದರೆ ಅವರು ಗುರು ಪರಂಪರೆಯಲ್ಲಿ ಬಂದವರು ಎಂದು ಪುರಾವೆ ಏನು? ಬ್ರಹ್ಮ-ನಿಷ್ಟ೦. ಬ್ರಹ್ಮ-ನಿಷ್ಟ೦ ಅ೦ದರೆ ಪರಮ-ಸತ್ಯದಲ್ಲಿ ಅವರಿಗೆ ಸಂರ್ಪೂಣ ಶ್ರದ್ಧೆಯಿದೆ ಎಂದರ್ಥ. ಆದ್ದರಿ೦ದ, ಅಲ್ಲಿ ನೀವು ಶರಣಾಗಬೇಕು. ಪ್ರಣಿಪಾತ. ಪ್ರಣಿಪಾತ ಎ೦ದರೆ ಪ್ರಕ್ರ್ಷಟ ರೂಪೇಣ ನಿಪಾತಂ, ಯಾವುದೇ ಹಿಂಜರಿಕೆ ಇಲ್ಲ.
ಒ೦ದು ವೇಳೆ ಅಂತಹ ವ್ಯಕ್ತಿಯನ್ನು ಕಂಡರೆ, ಆಗ ಅಲ್ಲಿ ಶರಣಾಗಿ. ಪ್ರಣಿಪಾತ. ಅವರಿಗೆ ಸೇವೆ ಮಾಡಲು ಪ್ರಯತ್ನಿಸಿ, ಅವರನ್ನು ಮೆಚ್ಚಿಸಲು ಪ್ರಯತ್ನಿಸಿ, ಮತ್ತು ಅವರನ್ನು ಪ್ರಶ್ನಿಸಿ. ಆಗ ಎಲ್ಲಾ ವಿಷಯವೂ ವ್ಯಕ್ತವಾಗುತ್ತದೆ. ನಾವು ಈ ತರಹದ ಅಧಿಕೃತ ವ್ಯಕ್ತಿಯನ್ನು ಕ೦ಡುಹಿಡಿದು ಅವರಿಗೆ ಶರಣಾಗಬೇಕು. ಅವರಿಗೆ ಶರಣಾಗುವುದು ಎ೦ದರೆ ದೇವರಿಗೆ ಶರಣಾಗುವುದು ಏಕೆ೦ದರೆ ಅವರು ದೇವರ ಪ್ರತಿನಿಧಿ. ಆದರೆ ನೀವು ಪ್ರಶ್ನೆಗಳನ್ನು ಕೇಳುವ ಅವಕಾಶ ಇದೆ, ಸಮಯ ವ್ಯರ್ಥ ಮಾಡಲು ಅಲ್ಲ, ತಿಳುವಳಿಕೆ ಪಡೆಯಲು. ಇದ್ದನೆ ಪ್ರರಿಪ್ರಶ್ನ ಏನುತ್ತಾರೆ. ಇದು ಪ್ರಕ್ರಿಯೆ. ಆದ್ದರಿ೦ದ, ಎಲ್ಲವು ಲಭ್ಯವಿದೆ. ನಾವು ಕೇವಲ ಅದನ್ನು ಸ್ವೀಕರಿಸಬೇಕು. ಆದರೆ ನಾವು ಈ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳದೆ, ಮಾದಕತೆಯಿ೦ದ, ಊಹೆಗಳಿಂದ, ಮತ್ತು ಎಲ್ಲಾ ಅವಿವೇಕದ ಚಟುವಟಿಕೆಗಳಿ೦ದ ನಮ್ಮ ಸಮಯವನ್ನು ವ್ಯರ್ಥ ಮಾಡಿದರೆ, ಓ! ಅದು ಎ೦ದೂ ಸಾದ್ಯವಿಲ್ಲ. ನೀವು ದೇವರು ಏನೆ೦ದು ಅರ್ಥ ಮಾಡಿಕೊಳ್ಳಲು ಎ೦ದಿಗೂ ಸಾಧ್ಯವಿಲ್ಲ. ಏಕೆ೦ದರೆ ದೇವತೆಗಳಿ೦ದಲು ಮತ್ತು ಮಹಾ ಋಷಿಗಳಿ೦ದಲು ಸಹ ದೇವರನ್ನು ಅರ್ಥಮಾಡಿಕೊಳಲು ಸಾಧ್ಯವಿಲ್ಲ. ಏನು ನಮ್ಮ ಈ ಪುಟ್ಟ ಪ್ರಯತ್ನಗಳು?
ಆದ್ದರಿ೦ದ, ಇದೇ ಪ್ರಕ್ರಿಯೆಗಳು. ನೀವು ಅದ್ದನ್ನು ಅನುಸರಿಸಿದರೆ, ಅಸಂಮೂಢಃ. ಒ೦ದು ವೇಳೆ ನೀವು ತತ್ವಗಳನ್ನು ಅನುಸರಿಸಿದರೆ, ನಿಧಾನವಾಗಿ ಆದರೆ ಖಚಿತವಾಗಿ, ಅಸಂಮೂಢಃ, ನಿಸ್ಸಂಶಯವಾಗಿ, ನೀವು ಮಾಡಿದರೆ... ಅದು... ಪ್ರತ್ಯಕ್ಷವಗಮಮ್ ಧರ್ಮ್ಯಮ್. ನೀವು ಅನುಸರಿಸಿದರೆ, "ಹೌದು, ನಾನು ಏನೋ ಪಡೆಯುತ್ತಿದ್ದೇನೆ", ಎಂದು ನಿಮಗೆ ಅರ್ಥವಾಗುತ್ತದೆ. ನೀವು ಕುರುಡು ಎಂದಲ್ಲ, ನೀವು ಕುರುಡಾಗಿ ಅನುಸರಿಸಬೇಕು ಎಂದಲ್ಲ. ನೀವು ತತ್ವಗಳನ್ನು ಅನುಸರಿಸಿದರೆ ನಿಮ್ಮಗೆ ಅರ್ಥವಾಗುತ್ತದೆ.
ನೀವು ಸರಿಯಾದ ಪೋಷಕ ಆಹಾರವನ್ನು ತಿ೦ದರೆ ನಿಮ್ಮಗೆ ನಿಮ್ಮ ಶಕ್ತಿಯು ಹೆಚ್ಚಾದ ಮತ್ತು ನಿಮ್ಮ ಹಸಿವು ಇ೦ಗಿದ ತೃಪ್ತಿಯ ಅನುಭವವಾಗುತ್ತದೆ. ನೀವು ಯಾರನ್ನು ಕೇಳಬೇಕಿಲ್ಲ. ನಿಮ್ಮಗೆ ಅನುಭವವಾಗುತ್ತದೆ. ಅದೇ ರೀತಿ ನೀವು ಸರಿಯಾದ ಮಾರ್ಗದಲ್ಲಿ ನಡೆದು, ತತ್ವಗಳನ್ನು ಅನುಸರಿಸಿದರೆ "ಹೌದು, ನಾನು ಪ್ರಗತಿ ಸಾಧಿಸುತ್ತಿದ್ದೇನೆ", ಎಂದು ನಿಮ್ಮಗೇ ಅರಿವಾಗುತ್ತದೆ. ಪ್ರತ್ಯಕ್ಷ... ಒ೦ಬತ್ತನೆ ಅಧ್ಯಾಯದಲ್ಲಿ ಭಗವಂತನು ಹೇಳಿದ್ದಾನೆ, "ಪ್ರತ್ಯಕ್ಷಾವಗಮಮ್ ಧರ್ಮ್ಯಮ್ ಸುಸುಖಂ.
ಅದು ಬಹಳ ಸುಲಭ. ಮತ್ತು ನೀವು ಸಂತೋಷದಿಂದ ಮಾಡಬಹುದು. ಇದರ ಕಾರ್ಯವಿಧಾನವೇನು? ನಾವು ಹರೇ ಕೃಷ್ಣ ಜಪಿಸುತ್ತೇವೆ, ಕೃಷ್ಣ ಪ್ರಸಾದ ತಿನ್ನುತ್ತೇವೆ, ಭಗವದ್ಗೀತ ತತ್ವಶಾಸ್ತ ಅಧ್ಯಯನ ಮಾಡುವುದು, ಮತ್ತು ಒಳ್ಳೆಯ ಸಂಗೀತವನ್ನು ಕೇಳುವುದು. ಇದು ಬಹಳ ಕಷ್ಟವೇ? ಇದು ಬಹಳ ಕಷ್ಟವಾ? ಅಲ್ಲ. ಈ ಪ್ರಕ್ರಿಯೆಯಿಂದ ನೀವು ಆಗುತ್ತೀರ ಅಸಮ್ಮೂಢಃ. ಯಾರೂ ನಿಮ್ಮನು ಮೋಸ ಮಾಡಲಾರರು. ಆದರೆ ನೀವು ಮೋಸ ಹೋಗಬೇಕೆಂದುಕೊಂಡರೆ ಅನೇಕ ಮೋಸಗಾರರು ಇದ್ದರೆ. ಆದ್ದರಿಂದ, ಮೋಸಗಾರರನ್ನು ಮತ್ತು ಮೋಸಹೋಗುವ ಸಮಾಜವನ್ನು ತಯಾರಿಸಬೇಡಿ. ಹೇಗೆ ವೈದಿಕ ಸಾಹಿತ್ಯದಲ್ಲಿ ಸೂಚಿಸಿರುವುದೋ, ಯಾವುದು ಕೃಷ್ಣ ಶಿಫಾರಸು ಮಾಡಿದ ಮಾರ್ಗವೋ, ಕೇವಲ ಆ ಪರಂಪರೆಯ ವಿಧಾನವನ್ನು ಅನುಸರಿಸಿ. ಇದ್ದನು ಅಧಿಕೃತ ಮೂಲದಿಂದ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ ಹಾಗು ಇದ್ದನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.
ಆಗ ಅಸಂಮೂಢಃ ಸ ಮರ್ತ್ಯೇಶು ಎಂದರೆ... ಮರ್ತ್ಯ ಎಂದರೆ ಯಾರು ಸಾಯಲು ಅರ್ಹರಾಗಿರುತ್ತಾರೋ ಅವರು. ಯಾರದು? ಈ ಬದ್ಧ ಆತ್ಮಗಳು, ಬ್ರಹ್ಮನಿಂದ ಶುರುವಾಗಿ ಮುಖ್ಯವಲ್ಲದ ಇರುವೆವರೆಗು ಎಲ್ಲರೂ ಮರ್ತ್ಯ. ಮರ್ತ್ಯ ಎ೦ದರೆ ಅವರಿಗೆ ಸಾಯುವ ಸಮಯ ನಿಗದಿತವಾಗಿದೆ ಎ೦ದು. ಆದ್ದರಿಂದ, ಮರ್ತ್ಯೇಶು. ಸಾಯುವ ಮನುಶ್ಯರ ನಡುವೆ ಅವರು ಅತ್ಯಂತ ಬುದ್ಧಿವಂತರಾಗುತ್ತಾರೆ. ಅಸಮ್ಮೂಢಃ ಸ ಮರ್ತ್ಯೇಶು. ಏಕೆ? ಸರ್ವ ಪಾಪೈಃ ಪ್ರಮುಚ್ಯತೆ. ಅವರು ಎಲ್ಲ ರೀತಿಯ ಪಾಪಗಳ ಪ್ರತಿಕ್ರಿಯಿಂದ ಮುಕ್ತರಾಗಿದ್ದಾರೆ.
ಈ ಜಗತ್ತಿನಲ್ಲಿ, ಈ ಭೌತಿಕ ಜಗತ್ತಿನಲ್ಲಿ, ತಿಳಿದೊ ತಿಳಿಯದೆಯೊ, ನಾವೆಲ್ಲರು ಯಾವಗಲು ಪಾಪ ಕೃತ್ಯಗಳನು ಮಾಡುತಿರುತ್ತೇವೆ. ಆದ್ದರಿಂದ, ನಾವು ಈ ಪ್ರತಿಕ್ರಿಯೆಯಿಂದ ಹೊರಬರಬೇಕು. ಮತ್ತು ಇದರಿಂದ ಹೇಗೆ ಹೊರಬರಬಹುದು? ಅದನ್ನು ಸಹ ಭಗವದ್ಗೀತೆಯಲ್ಲಿ ಹೇಳಿದೆ. ಯಜ್ಞಾರ್ಥಾತ್ ಕರ್ಮಣೋ ಅನ್ಯತ್ರ ಲೋಕೋ ಯಂ ಕರ್ಮಬಂಧನಃ (ಭ.ಗೀ 3.9). ನೀವು ಕೃಷ್ಣನಿಗಾಗಿ ಕಾರ್ಯ ಮಾಡಿದರೆ... ಯಜ್ಞ ಎಂದರೆ ವಿಷ್ಣು ಅಥವಾ ಕೃಷ್ಣ. ನೀವು ಕೃಷ್ಣನಿಗಾಗಿ ಮಾತ್ರ ಕಾರ್ಯ ಮಾಡಿದರೆ ಆಗ ಎಲ್ಲಾ ಪ್ರತಿಕ್ರಿಯೆಯಿಂದ ಮುಕ್ತರಾಗುವಿರಿ. ಶುಭಾಶುಭ-ಫಲೈಃ. ನಾವು ಶುಭ ಅಥವ ಅಶುಭ ಕಾರ್ಯಗಳನ್ನು ಮಾಡುತ್ತೇವೆ. ಆದರೆ ಯಾರು ಕೃಷ್ಣ ಪ್ರಜ್ಞೆಯಲ್ಲಿರುತ್ತಾರೋ ಮತ್ತು ಆ ಮಾರ್ಗದಲ್ಲಿ ನಡೆಯುತ್ತಾರೋ ಅವರಿಗೆ ಶುಭ ಅಥವಾ ಅಶುಭ ಕಾರ್ಯ ಎಂದು ಏನೂ ಇಲ್ಲ ಏಕೆಂದರೆ ಅವರು ಪರಮ ಶುಭನಾದ ಕೃಷ್ಣನ ಸಂಪರ್ಕದಲ್ಲಿದ್ದಾರೆ. ಆದ್ದರಿಂದ, ಸರ್ವಪಾಪೈಃ ಪ್ರಮುಚ್ಯತೇ. ಅವರು ಎಲ್ಲಾ ರೀತಿಯ ಪಾಪ ಕಾರ್ಯಗಳ ಪ್ರತಿಕ್ರಿಯಿಂದ ಮುಕ್ತರಾಗುತ್ತಾರೆ.
ಇದುವೇ ಪ್ರಕ್ರಿಯೆ. ಮತ್ತು ಈ ಪ್ರಕ್ರಿಯೆಯನ್ನು ಅಳವಡಿಸಿಕೊಂಡರೆ ಆಗ ನಾವು ಅಂತಿಮವಾಗಿ ಕೃಷ್ಣನ ಸಂಪರ್ಕ ಪಡೆಯಬಹುದು ಮತ್ತು ನಮ್ಮ ಜೀವನ ಯಶಸ್ವಿಯಾಗುತ್ತದೆ. ಈ ಪ್ರಕ್ರಿಯೆಯು ತುಂಬಾ ಸರಳವಾದ್ದದು, ಮತ್ತು ನಾವು, ಎಲ್ಲರೂ ಅಳವಡಿಸಿಕೊಳ್ಳಬಹುದು. ತುಂಬಾ ಧನ್ಯವಾದಗಳು.