KN/Prabhupada 0019 - ನೀವು ಏನು ಕೇಳಿಸಿಕೊಳ್ಳುತ್ತಿರೋ ಅದನ್ನು ಬೇರೆಯವರಿಗೆ ಹೇಳಬೇಕು



Jagannatha Deities Installation Srimad-Bhagavatam 1.2.13-14 -- San Francisco, March 23, 1967

ನಿಮ್ಮಗೆ ನನ್ನನ್ನು ತಿಳಿಯಬೇಕಾದರೆ ಅಥವಾ ನನ್ನ ಬಗ್ಗೆ ಏನಾದರು ತಿಳಿಯಬೇಕಾದರೆ, ನೀವು ಒಬ್ಬ ಸ್ನೇಹಿತನನ್ನು ಕೇಳಬಹುದು, "ಓ, ಸ್ವಾಮೀಜಿ ಎಂಥವರು?" ಅವನು ಏನೋ ಹೇಳಬಹುದು; ಇತರರೂ ಏನೋ ಹೇಳಬಹುದು. ಆದರೆ ನಾನೇ ನನ್ನ ಬಗ್ಗೆ, "ಇದು ನನ್ನ ಸ್ಥಿತಿ. ನಾನು ಇಂತವನು", ಎಂದು ವಿವರಿಸಿದಾಗ ಅದು ಪರಿಪೂರ್ಣ. ಅದು ಪರಿಪೂರ್ಣ. ಆದ್ದರಿಂದ, ನೀವು ಪರಾತ್ಪರ ದೇವೋತ್ತಮ ಪರಮಪುರುಷನ ಬಗ್ಗೆ ತಿಳಿಯಬೇಕಾದರೆ, ನೀವು ಉಹಿಸುವುದರಿಂದ ಅಥವಾ ಧ್ಯಾನಿಸುವುದರಿಂದ ಸಾಧ್ಯವಿಲ್ಲ. ಇದು ಸಾಧ್ಯವಿಲ್ಲ, ಏಕೆಂದರೆ ನಮ್ಮ ಇಂದ್ರಿಯಗಳು ಅಪೂರ್ಣ. ಹಾಗಾದರೆ ಏನು ಇದಕ್ಕೆ ಮಾರ್ಗ? ಕೇವಲ ಅವನಿಂದ ಕೇಳಿರಿ. ಅವನು ಅನುಗ್ರಹಿಸಿ ಭಗವದ್ಗೀತೆಯನ್ನು ಹೇಳಲು ಬಂದಿದ್ದಾನೆ. ಶ್ರೋತವ್ಯಃ: "ಕೇವಲ ಕೇಳಲು ಪ್ರಯತ್ನಿಸಿ." ಶ್ರೋತವ್ಯಃ ಮತ್ತು ಕೀರ್ತಿತವ್ಯಸ್ ಚ (ಶ್ರೀ.ಭಾ 2.1.5). ನೀವು ಕೃಷ್ಣ ಪ್ರಜ್ಞೆಯ ಉಪನ್ಯಾಸದಲ್ಲಿ ಕೇವಲ ಮತ್ತೆ ಮತ್ತೆ ಕೇಳಿ, ಹೊರಗೆ ಹೋದಕೂಡಲೆ ಮರೆತುಹೋದರೆ, ಓ, ಅದು ಒಳ್ಳಯದಲ್ಲ. ಅದು ನಿಮ್ಮನು ಉದ್ಧರಿಸುವುದಿಲ್ಲ. ಹಾಗಾದರೆ ಏನು ಮಾಡಬೇಕು? ಕೀರ್ತಿತವ್ಯಸ್ ಚ: ನೀವು ಏನು ಕೇಳಿತೀರೊ, ಅದನ್ನು ಬೇರೊಬ್ಬರಿಗೆ ಹೇಳಬೇಕು." ಇದು ಪರಿಪೂರ್ಣತೆ.

ಆದ್ದರಿಂದ, ನಾವು "ಮರಳಿ ಭಗವದ್ಧಾಮಕ್ಕೆ"ಯನ್ನು ಸ್ಥಾಪಿಸಿದ್ದೇವೆ. ವಿಧ್ಯಾರ್ಥಿಗಳಿಗೆ ಅವಕಾಶ ಕೊಡಲಾಗಿದೆ, ಅವರು ಏನು ಕೇಳುತ್ತಾರೊ ಆದರ ಬಗ್ಗೆ ವಿವೇಚಿಸಿ ಅದ್ದನು ಬರೆಯಬೇಕು. ಕೀರ್ತಿತವ್ಯಸ್ ಚ. ಕೇವಲ ಕೇಳುವುದು ಅಲ್ಲ. "ಒ, ನಾನು ಲಕ್ಷಾಂತರ ವರ್ಷಗಳಿಂದ ಕೇಳುತ್ತಿದ್ದಿನಿ, ಆದರೂ ನನಗೆ ಅರ್ಥವಾಗುತ್ತಿಲ್ಲ" - ಏಕೆಂದರೆ ನೀವು ಜಪಿಸುವುದಿಲ್ಲ, ನೀವು ಕೇಳಿದ್ದನ್ನು ಮತ್ತೆ ಪುನರಾವರ್ತಿಸುವುದಿಲ್ಲ. ನೀವು ಪುನರಾವರ್ತಿಸಬೇಕು. ಕೀರ್ತಿತವ್ಯಸ್ ಚ. ಶ್ರೋತವ್ಯಃ ಕೀರ್ತಿತವ್ಯಸ್ ಚ ಧ್ಯೇಯಃ. ಅವನನ್ನು ಸ್ಮರಿಸದ ಹೊರತು ನೀವು ಹೇಗೆ ಬರೆಯಲು ಅಥವಾ ಮಾತನಾಡಲು ಸಾಧ್ಯ? ನೀವು ಕೃಷ್ಣನ ಬಗ್ಗೆ ಕೇಳುತ್ತಿದ್ದಿರಿ; ನೀವು ಸ್ಮರಿಸಬೇಕು, ಆಗ ನೀವು ಮಾತಾಡಬಹುದು. ಆದ್ದರಿಂದ, ಶ್ರೋತವ್ಯಃ ಕೀರ್ತಿತವ್ಯಸ್ ಚ ಧ್ಯೇಯಃ. ಮತ್ತು ಪೂಜ್ಯಸ್ ಚ, ನೀವು ಪೂಜೆ ಮಾಡಬೇಕು. ಆದ್ದರಿಂದ, ಪೂಜೆ ಮಾಡಲು ನಮ್ಮಗೆ ಈ ವಿಗ್ರಹ ಬೇಕು. ನಾವು ಯೋಚಿಸಬೇಕು, ನಾವು ಮಾತನಾಡಬೇಕು, ನಾವು ಕೇಳಬೇಕು, ನಾವು ಪೂಜಿಸಬೇಕು, ಪೂಜ್ಯಸ್ ಚ... ಹಾಗಾದರೆ ಕೆಲವೊಮ್ಮೆಯೇ? ಇಲ್ಲ ನಿತ್ಯದಾ, ದಿನವು ನಿಯಮಿತವಾಗಿ. ನಿತ್ಯದಾ, ಇದೇ ಪ್ರಕ್ರಿಯೆ. ಆದ್ದರಿಂದ, ಯಾರು ಈ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುತ್ತಾನೋ, ಅವನಿಗೆ ಪರಮಸತ್ಯ ಅರ್ಥವಾಗುತ್ತದೆ. ಇದು ಶ್ರೀಮದ್ ಭಾಗವತದ ಸ್ಪಷ್ಟ ಘೋಷಣೆಯಾಗಿದೆ.