KN/Prabhupada 0026 - ಮೊಟ್ಟ ಮೊದಲಾಗಿ ನಿಮ್ಮನ್ನು ಕೃಷ್ಣನಿರುವ ಬ್ರಹ್ಮಾಂಡಕ್ಕೆ ವರ್ಗಾಯಿಸಲಾಗುತ್ತದೆ
Morning Walk -- October 5, 1975, Mauritius
ಭಾರತೀಯ: ಸ್ವಾಮೀಜಿ, ನಾವು ಯಾವ ರೀತಿ ಕೆಲಸ ಮಾಡುತ್ತೇವೋ ಆ ರೀತಿ ಜನ್ಮವನ್ನು ಪಡೆಯುತ್ತೇವೆ ಎಂದು ಹೇಳಿದೆ. ಹಾಗಾದರೆ, ನಾವು ಏನನ್ನಾದರೂ ಮಾಡಿದ್ದರೆ ಭಗವಂತನ ನಿಯಮದ ಪ್ರಕಾರ ಜನ್ಮವನ್ನು ತಳೆಯಬೇಕು.
ಪ್ರಭುಪಾದರು: ನೀವು ಜನ್ಮವನ್ನು ತಳೆಯಲೇ ಬೇಕು. ಅದು ಸತ್ಯ. ಅದನ್ನು ತಪ್ಪಿಸಲು ಸಾಧ್ಯವಿಲ್ಲ. ನೀವು ಮಾಡಿದ ಕೆಲಸದ ಪ್ರಕಾರ ನೀವು ಜನ್ಮವನ್ನು ತಳೆಯಬೇಕು.
ಭಾರತೀಯ: ಹಾಗಾದರೆ... ಇದರ ಅರ್ಥ ನೀವು ಏನನ್ನು ಬರೆದಿದ್ದೀರೋ... ಅದನ್ನು ಅನುಭವಿಸಬೇಕು. ಹೌದಲ್ಲವೇ? ಹಾಗಾದರೆ ನಿಮ್ಮ ಪ್ರಕಾರ...
ಪ್ರಭುಪಾದರು: ಒಂದು ವೇಳೆ, ನಿಮ್ಮ ಈ ಅಂಗಿಯು ಹರಿದು ಹೋದರೆ ನೀವು ಹೊಸ ಅಂಗಿಯನ್ನು ಖರೀದಿಸಬೇಕು. ಆ ಹೊಸ ಅಂಗಿಯನ್ನು ನೀವು ನಿಮ್ಮಲ್ಲಿರುವ ಹಣದಿಂದ ಖರೀದಿಸಬೇಕು. ನಿಮ್ಮಲ್ಲಿ ಸಾಕಷ್ಟು ಹಣ ಇದ್ದರೆ, ನೀವು ಉತ್ತಮ ಗುಣಮಟ್ಟದ ಅಂಗಿಯನ್ನು ಖರೀದಿಸಬಹುದು. ಇಲ್ಲದೇ ಹೋದರೆ ಕಳಪೆ ಗುಣಮಟ್ಟದ ಅಂಗಿಯನ್ನು ಪಡೆಯುತ್ತೀರಿ.
ಭಾರತೀಯ: ನಾನು ಏನು ಹೇಳುತ್ತಿದ್ದೇನೆಂದರೆ, ಸ್ವಾಮೀಜಿ, ನರಕವು ಸಹ ಈ ಪ್ರಪಂಚದಲ್ಲಿಯೇ ಇದೆ. ನಾವು ನಮ್ಮ ಸಾಲವನ್ನು ಎಲ್ಲಿ ತೀರಿಸಬಹುದು?
ಪ್ರಭುಪಾದರು: ಹ್ಮ್
ಭಾರತೀಯ: ಪಾಪ ಅಥವಾ ಪಾಪದ ಋಣ. ಇದನ್ನು ನಾವು ಎಲ್ಲಿ ತಿರಿಸಬಹುದು? ನರಕದಲ್ಲಿ ಸಾಧ್ಯವಿಲ್ಲ...
ಪ್ರಭುಪಾದರು: ನರಕವು ನಿಮ್ಮ ಶಿಕ್ಷೆಗಾಗಿ ಇರುವ ಸ್ಥಳ.
ಭಾರತೀಯ: ಹಾಗಾದರೆ ಇದು ಭೂಮಿಯ ಮೇಲೆಯೇ ಇದೆ.
ಪ್ರಭುಪಾದರು: ಭೂಮಿಯಲ್ಲಿ ಏಕೆ?
ಭಾರತೀಯ: ಭೂಗ್ರಹದಲ್ಲಿ ಅಲ್ಲವೇ?
ಪ್ರಭುಪಾದರು: ಇಲ್ಲ. ಅದು...
ಭಾರತೀಯ: ಯಾವ ಗ್ರಹದಲ್ಲಿಯಾದರೂ ಇರಬಹುದೆ?
ಪ್ರಭುಪಾದರು: ಸಾವಿರಾರು ಮೈಲಿ ದೂರದಲ್ಲಿ ಇರಬಹುದು.
ಭಾರತೀಯ: ನರಕವು ಒಂದೇ ಸ್ಥಳದಲ್ಲಿ ಇದೆಯೆ ಅಥವಾ ವಿವಿಧ ಸ್ಥಳಗಳಿವೆಯೆ? ನೀವೇನು ಹೇಳುತ್ತೀರಿ ಸ್ವಾಮೀಜಿ?
ಪ್ರಭುಪಾದರು: ಹೌದು ಹೌದು, ಅಲ್ಲಿ ಬೇರೆ ಬೇರೆ ಗ್ರಹಗಳಿವೆ.
ಭಾರತೀಯ: ಈ ಭೂಮಿಯಲ್ಲಿಯೆ ಬಹಳಷ್ಟು ಜನ ಕಷ್ಟಪಡುತ್ತಿದ್ದಾರೆ.
ಪ್ರಭುಪಾದರು: ಅವರಿಗೆ ಮೊದಲು ನರಕದಲ್ಲಿ ತರಬೇತಿ ನೀಡಲಾಗುವುದು, ನಂತರ ಅವರು ಇಲ್ಲಿಗೆ ಬಂದು ಅದೇ ರೀತಿಯ ಜೀವನ ನಡೆಸುತ್ತಾರೆ.
ಭಾರತೀಯ: ಜೀವಾತ್ಮನು ಈ ದೇಹದಿಂದ ಹೊರಗೆ ಬಂದಾಗ ಅದು ನರಕಕ್ಕೆ ಹೋಗುತ್ತದೆಯೆ ಅಥವಾ...
ಪ್ರಭುಪಾದರು: ನರಕ ಲೋಕ.
ಭಾರತೀಯ: ...ಅದು ತಕ್ಷಣ ಇನ್ನೊಂದು ಜನ್ಮ ತಳೆಯುತ್ತದೆಯೆ?
ಪ್ರಭುಪಾದರು: ಹೌದು, ಪಾಪಿಗಳಾದವರು ತಕ್ಷಣ ಜನ್ಮ ತಳೆಯುವುದಿಲ್ಲ. ಮೊದಲು ಅವರಿಗೆ ನರಕ ಲೋಕದಲ್ಲಿ ಕಷ್ಟಪಡುವುದು ಹೇಗೆ ಎಂಬುದರ ಬಗ್ಗೆ ತರಬೇತಿಯನ್ನು ನೀಡಲಾಗುವುದು. ಮುಂದಿನ ಜನ್ಮದ ಜೀವನಕ್ಕೆ ಹೊಂದಿಕೊಂಡ ನಂತರ ಹುಟ್ಟುತ್ತಾರೆ ಮತ್ತು ಕಷ್ಟಪಡುತ್ತಾರೆ. ನೀವು ಐ.ಎ.ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಂತೆ. ನಂತರ ನೀವು ಒಬ್ಬ ಸಹಾಯಕ ಮ್ಯಾಜಿಸ್ಟ್ರೇಟ್ ಆಗಿ, ಕೆಲಸವನ್ನು ಕಲಿಯುತ್ತೀರಿ. ನಂತರ ನಿಮ್ಮನ್ನು ಮ್ಯಾಜಿಸ್ಟ್ರೇಟ್ ಆಗಿ ನೇಮಕ ಮಾಡುತ್ತಾರೆ. ನೀವು ಮರಳಿ ಭಗವಂತನ ಧಾಮಕ್ಕೆ ಹೋಗಲು ಅರ್ಹರಾದರೂ ಸಹ, ನಿಮ್ಮನ್ನು ಮೊದಲು ಕೃಷ್ಣನು ಈಗ ಇರುವ ಲೋಕಕ್ಕೆ ಕಳುಹಿಸಲಾಗುವುದು ಮತ್ತು ನೀವು ಅಲ್ಲಿಗೆ ಹೊಂದಿಕೊಳ್ಳುತ್ತೀರಿ. ನಂತರ ನೀವು ನಿಜವಾದ ವೃಂದಾವನಕ್ಕೆ ಹೋಗುತ್ತೀರಿ.
ಭಾರತೀಯ: ಹಾಗಾದರೆ, ನಮ್ಮ ಮರಣದ ನಂತರ...
ಪ್ರಭುಪಾದರು: ಭಗವಂತನ ಪ್ರತಿಯೊಂದು ವ್ಯವಸ್ಥೆಯೂ ಪರಿಪೂರ್ಣ. ಪೂರ್ಣಂ. ಪೂರ್ಣಂ ಅದಃ ಪೂರ್ಣಂ ಇದಂ ಪೂರ್ಣಾತ್ ಪೂರ್ಣಂ... (Īśopaniṣad, ಈಶೋಪನಿಷತ್) ಭಗವಂತನಿಂದ ಏನು ಸೃಷ್ಟಿಸಲ್ಪಟ್ಟಿದೆಯೋ, ಅದು ಪರಿಪೂರ್ಣ.