KN/Prabhupada 0067 - ಗೋಸ್ವಾಮೀಗಳು ಕೇವಲ ಎರಡು ತಾಸು ನಿದ್ರಿಸುತ್ತಿದ್ದರು
Lecture on SB 1.16.26-30 -- Hawaii, January 23, 1974
ಈ ಕೃಷ್ಣ ಪಜ್ಞೆ ಚಳುವಳಿ ಇಷ್ಟು ಮುಂದುವರಿಯುತ್ತಿದೆ ಎಂದರೆ ಅದು ಶ್ರೀ ಚೈತನ್ಯ ಮಹಾಪ್ರಭುರವರ ಉದಾರ ಅನುಕಂಪ, ಈ ಕಲಿಯುಗದಲ್ಲಿ ನರಳುತ್ತಿರುವ ದೀನರಿಗೋಸ್ಕರ. ಅನ್ಯಥ, ಕೃಷ್ಣ ಪ್ರಜ್ಞಾವಂತನಾಗುವುದು ಬಹಳ ಸುಲಭದ ಕೆಲಸವಲ್ಲ. ಅದು ಸುಲಭವಲ್ಲ. ಆದ್ದರಿಂದ ಯಾರಿಗೆ ಶ್ರೀ ಚೈತನ್ಯ ಮಹಾಪ್ರಭುರವರ ಅನುಗ್ರಹದಿಂದ ಕೃಷ್ಣ ಪ್ರಜ್ಞಾವಂತರಾಗಲು ಅವಕಾಶ ಸಿಗುತ್ತಿದೆಯೋ ಅವರು ಈ ಅವಕಾಶವನ್ನು ಕಳೆದುಕೊಳ್ಳಬಾರದು. ಅದು ಆತ್ಮಘಾತಕವಾಗುತ್ತದೆ. ಪತನಕ್ಕೆ ಗುರಿಯಾಗ ಬೇಡ. ಅದು ಬಹಳ ಸುಲಭ. ಕೇವಲ ಹರೇ ಕೃಷ್ಣ ಮಂತ್ರವನ್ನು ಜಪಿಸುತ್ತ… ಯಾವಾಗಲು ಅಲ್ಲ, ಇಪ್ಪತ್ತನಾಲ್ಕು ತಾಸಲ್ಲ. ಶ್ರೀ ಚೈತನ್ಯ ಮಹಾಪ್ರಭುಗಳು, ಕೀರ್ತನೀಯಾದ್ ಸದಾ ಹರಿಃ (ಚೈ.ಚ ಆದಿ 17.31), ಪ್ರತಿಕ್ಷಣ ಜಪಿಸಲು ಹೇಳುತ್ತಾರೆ. ಅದು ತತ್ವವೆಂದರೆ. ಆದರೆ ನಾವು ವಿಪರೀತವಾಗಿ ಕಲಿಯುಗದ ಪ್ರಭಾವಕ್ಕೆ ಒಳಗಾಗಿರುವದರಿಂದ ಅದನ್ನು ಮಾಡಲಾಗುವುದಿಲ್ಲ. ಆದ್ದರಿಂದ ಕನಿಷ್ಠ ಹದಿನಾರು ಸುತ್ತು ಜಪಮಾಡಬೇಕು. ಇದನ್ನು ಬಿಡಬೇಡಿ. ಇದನ್ನು ಬಿಡಬೇಡಿ. ಏನು ತೊಂದರೆ, ಹದಿನಾರು ಸುತ್ತಿಗೆ? ಹೆಚ್ಚೆಂದರೆ ಎರಡು ತಾಸು ಬೇಕಾಗಬಹುದು. ನಿಮ್ಮ ಹತ್ತಿರ ಇಪ್ಪತ್ತನಾಲ್ಕು ತಾಸಿದೆ. ನೀವು ನಿದ್ರಿಸಬೇಕೆ? ಸರಿ ನಿದ್ರಿಸಿ, ಹತ್ತು ತಾಸು ನಿದ್ರಿಸಿ. ಅದು ಸರಿಯಲ್ಲ. ಆರು ತಾಸಿಗಿಂತ ಹೆಚ್ಚು ನಿದ್ರಿಸಬೇಡಿ. ಅದರೆ ಅವರಿಗೆ ನಿದ್ರಿಸಬೇಕೆಂದು ಆಸೆ. ಇಪ್ಪತ್ತನಾಲ್ಕು ತಾಸು ನಿದ್ರಿಸಬೇಕೆಂದು ಆಸೆ. ಅದೇ ಕಲಿಯುಗದಲ್ಲಿರುವ ಬಯಕೆ. ಆದರೆ, ಇಲ್ಲ. ಆಗ ನಿಮ್ಮ ಸಮಯ ವ್ಯರ್ಥ ಮಾಡುತ್ತಿರುವಿರಿ. ತಿನ್ನುವುದು, ನಿದ್ರೆ, ಮೈಥುನ, ಹಾಗು ರಕ್ಷಿಸಿಕೊಳ್ಳುವುದನ್ನು ಕಡಿಮೆಮಾಡಿ. ಅದು ಶೂನ್ಯವಾದಾಗ, ಅದೇ ಪರಿಪೂರ್ಣತೆ.
ಏಕೆಂದರೆ ಇವು ದೈಹಿಕ ಅವಶ್ಯಕತೆಗಳು. ತಿನ್ನುವುದು, ನಿದ್ರೆ, ಮೈಥುನ, ಹಾಗು ರಕ್ಷಣೆ - ಇವು ದೈಹಿಕ ಅವಶ್ಯಕತೆಗಳು. ಆದರೆ ನಾನು ಈ ದೇಹವಲ್ಲ. ದೇಹಿನೋ’ಸ್ಮಿನ್ ಯಥಾ ದೇಹೇ ಕೌಮಾರಂ… (ಭ.ಗೀ 2.13). ಆದ್ದರಿಂದ ಅದರ ಸಾಕ್ಷಾತ್ಕಾರವಾಗಲು ಸಮಯ ತಗೆದುಕೊಳ್ಳುತ್ತದೆ. ಆದರೆ ನಾವು ನಿಜವಾಗಿಯು ಕೃಷ್ಣ ಪ್ರಜ್ಞೆಯಲ್ಲಿ ಮುನ್ನಡೆಯುತ್ತಿದ್ದರೆ, ನಮಗೆ ನಮ್ಮ ಕರ್ತವ್ಯದ ಬಗ್ಗೆ ಅರಿವಿರಬೇಕು. ಆರು ತಾಸು ನಿದ್ರಿಸಬೇಕು. ಅತ್ಯಧಿಕವೆಂದರೆ ಎಂಟು ತಾಸು. ಅತ್ಯಧಿಕ, ಯಾರಿಗೆ ನಿಗ್ರಹಿಸಲಾಗುವುದಲ್ಲವೋ ಅವರಿಗೆ. ಆದರೆ ಹತ್ತು ತಾಸು, ಹನ್ನೆರೆಡು ತಾಸು, ಹದಿನೈದು ತಾಸಲ್ಲ. ಮತ್ತೆ ಉಪಯೋಗವೇನು…? ಒಬ್ಬ ಉನ್ನತ ಭಕ್ತನನ್ನು ನೋಡಲು ಯಾರೋ ಹೋದನು. ನೋಡಿದರೆ ಒಂಬತ್ತು ಗಂಟೆಗೆಲ್ಲ ಅವನು ನಿದ್ರಿಸುತ್ತಿದ್ದನು. ಅವನು ಉನ್ನತ ಭಕ್ತನೆ? ಹೌದಾ? ಅಂದರೆ ಏನು…? ಅವನೆಂತ ಭಕ್ತ? ಭಕ್ತನು ಮುಂಜಾನೆ ನಾಲ್ಕು ಗಂಟೆಗೆ ಎದ್ದೇಳಬೇಕು. ಐದು ಗಂಟೆ ಹೊತ್ತಿಗೆ, ಸ್ನಾನವನ್ನು ಹಾಗು ಬೇರೆಲ್ಲ ಕೆಲಸಗಳನ್ನು ಮುಗಿಸಬೇಕು. ನಂತರ ಜಪವನ್ನು ಮಾಡುತ್ತಾನೆ ಹಾಗು ಬೇರೆ ಎಷ್ಟೋ… ಇಪ್ಪತ್ತನಾಲ್ಕು ತಾಸು ಕೆಲಸಗಳಲ್ಲಿ ತೊಡಗಿರಬೇಕು, ಆದ್ದರಿಂದ ನಿದ್ರಿಸುವುದು ಅಷ್ಟು ಒಳೆಯದಲ್ಲ. ಗೋಸ್ವಾಮೀಗಳು ಕೇವಲ ಎರಡು ತಾಸು ಮಾತ್ರ ನಿದ್ರಿಸುವರು. ನಾನು ರಾತ್ರಿ ಪುಸ್ತಕ ಕೂಡ ಬರೆಯುವೆ, ನಿದ್ರಿಸುವೆ, ಆದರೆ ಮೂರು ತಾಸಿಗಿಂತ ಜಾಸ್ತಿ ಅಲ್ಲ. ಆದರೆ ಕೆಲವೊಮ್ಮೆ ಸ್ವಲ್ಪ ಜಾಸ್ತಿ ನಿದ್ರಿಸುತ್ತೇನೆ. ಆ ತರಹವಲ್ಲ… ನಾನು ಗೋಸ್ವಾಮೀಗಳನ್ನು ಅನುಕರಿಸುತ್ತಿಲ್ಲ. ಅದು ಸಾಧ್ಯವಲ್ಲ. ಆದರೆ ಪ್ರತಿಯೊಬ್ಬರು ಆದಷ್ಟು ಅದನ್ನು ತಪ್ಪಿಸಲು ಪ್ರಯತ್ನಿಸಬೇಕು. ಹಾಗು ನಿದ್ರೆ ಹೇಗೆ ತಪ್ಪಿಸಬಹುದೆಂದರೆ, ಕಡಿಮೆ ತಿನ್ನುವುದರಿಂದ. ಆಗ ನಮಗೆ ತಪ್ಪಿಸಲು ಸಾಧ್ಯ. ತಿನ್ನುವುದು, ನಿದ್ರೆ. ತಿಂದನಂತರ ನಿದ್ರೆ. ಆದ್ದರಿಂದ ಹೆಚ್ಚು ತಿಂದರೆ, ಹೆಚ್ಚು ನಿದ್ರೆ. ಕಡಿಮೆ ತಿಂದರೆ ಕಡಿಮೆ ನಿದ್ರೆ. ತಿನ್ನುವುದು, ನಿದ್ರೆ, ಮೈಥುನ. ಮೈಥನವನ್ನು ದೂರವಿಡಬೇಕು. ಅದೊಂದು ಪ್ರಧಾನ ನಿರ್ಬಂಧ. ಕಾಮ ಜೀವನವನ್ನು ಆದಷ್ಟು ಕಡಿಮೆಯಾಗಿಡಬೇಕು. ಆದ್ದರಿಂದ ನಮಗೆ ನಿರ್ಬಂಧವಿದೆ, ‘ಅನೈತಿಕ ಮೈಥುನವಿಲ್ಲ.’ ಕಾಮ ಜೀವನ, “ಅದರಲ್ಲಿ ತೊಡಗಕೂಡದು”, ಎಂದು ನಾವು ಹೇಳುವುದಿಲ್ಲ. ಯಾರಿಗೂ ಹಾಗಿರಲಾಗುವುದಿಲ್ಲ. ಆದ್ದರಿಂದ ಕಾಮ ಜೀವನವೆಂದರೆ ವಿವಾಹಿತ ಜೀವನ, ಸ್ವಲ್ಪ ರಿಯಾಯಿತಿ. ಒಂದು ಪರವಾನಗಿ, “ಸರಿ, ನೀನು ಈ ಪರವಾನಗಿಯನ್ನು ತೆಗೆದುಕೊ.” ಆದರೆ ಅನೈತಿಕ ಮೈಥುನವಿಲ್ಲ. ಆಗ ನೀನು ಏನೂ ಮಾಡಲಾಗುವುದಿಲ್ಲ.
ಆದ್ದರಿಂದ ತಿನ್ನುವುದು, ನಿದ್ರೆ, ಮೈಥುನ, ಮತ್ತು ರಕ್ಷಣೆ. ರಕ್ಷಣೆ. ನಾವು ಹಲವಾರು ರೀತಿಯಲ್ಲಿ ರಕ್ಷಿಸಿಕೊಳ್ಳುತಿದ್ದೇವೆ, ಆದರೂ ಕೂಡ ಯುದ್ದ ನಡೆಯುತ್ತಿದೆ, ಮತ್ತು ಐಹಿಕ ಪ್ರಕೃತಿಯ ತೀವ್ರದಾಳಿಯು… ನಿಮ್ಮ ದೇಶ ಚೆನ್ನಾಗಿ ರಕ್ಷಿಸಿಕೊಳ್ಳುತ್ತಿದೆ, ಆದರೆ ಈಗ ಇಂದನತೈಲವನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ನೀವು ರಕ್ಷಿಸಲಾಗುತ್ತಿಲ್ಲ. ಹಾಗೆಯೇ, ಯಾವ ಕ್ಷಣದಲ್ಲಾದರು ನಿಮ್ಮಿಂದ ಎಲ್ಲವನ್ನೂ ಕಿತ್ತುಕೊಳ್ಳಬಹುದು. ಆದ್ದರಿಂದ ರಕ್ಷಣೆಗೆ ಕೃಷ್ಣನ ಮೇಲೆ ಅವಲಂಭಿಸಬೇಕು. ಅವಶ್ಯ ರಕ್ಷಿಬೇ ಕೃಷ್ಣ. ಇದನ್ನೇ ಶರಣಾಗತಿ ಎನ್ನುತ್ತಾರೆ. ಶರಣಾಗತಿ ಎಂದರೆ… ಕೃಷ್ಣನು ಹೇಳುತ್ತಾನೆ, “ನನಗೆ ಶರಾಣಾಗತನಾಗು”, ಸರ್ವ ಧರ್ಮಾನ್ ಪರಿತ್ಯಜ್ಯ (ಭ.ಗೀ 18.66). ನಮ್ಮ ನಂಬಿಕೆ ಏನಾಗಿರಬೇಕೆಂದರೆ, “ಕೃಷ್ಣನು ಶರಣಾಗತನಾಗು ಎನ್ನುತ್ತಿದ್ದಾನೆ. ನಾನು ಶರಣಾಗತನಾಗುವೆ. ಅವನು ನನ್ನನ್ನು ಅಪಾಯದಿಂದ ರಕ್ಷಿಸುತ್ತಾನೆ. “ ಅದುವೇ ಶರಣಾಗತಿಯೆಂದರೆ.