KN/Prabhupada 0092 - ಕೃಷ್ಣನನ್ನು ತೃಪ್ತಿಪಡಿಸಲು ನಾವು ನಮ್ಮ ಇಂದ್ರಿಯಗಳನ್ನು ಪಳಗಿಸಬೇಕು



Lecture on BG 2.20-25 -- Seattle, October 14, 1968

ಈ ಭೌತಿಕ ಜಗತ್ತಿನಲ್ಲಿ ಯಾರಾದರೂ ಸರಿ, ಅವರು ಈ ಇಂದ್ರಿಯ ತೃಪ್ತಿಗೆ ಸಿಕ್ಕಿಹಾಕಿಕೊಳ್ಳುತ್ತಾರೆ. ಒಂದೋ ಉನ್ನತ ಗ್ರಹಗಳಲ್ಲಿ ಅಥವಾ ಕೆಳ ಗ್ರಹಗಳಲ್ಲಿ. ಮನುಷ್ಯನಿಗೂ ಸಹ ಪ್ರಾಣಿ ಸಾಮ್ರಾಜ್ಯದಂತೆಯೇ ಪ್ರಜ್ಞೆಯ ಪ್ರಚೋದನೆ ಇದೆ. ಮನುಷ್ಯ ಅಂದರೆ ಏನು? ನಾವು ಸುಸಂಸ್ಕೃತ ಜೀವಿ, ಆದರೆ ನಾವು ಏನು ಮಾಡುತ್ತಿದ್ದೇವೆ? ಅದೇ ಕೆಲಸಗಳು. ತಿನ್ನುವುದು, ಮಲಗುವುದು, ಮೈಥುನ. ನಾಯಿ ಮಾಡುತ್ತಿರುವಂತೆಯೇ. ಆದ್ದರಿಂದ ಭೌತಿಕ ಜಗತ್ತಿನಲ್ಲಿ ಎಲ್ಲೆಡೆಯೂ, ಉನ್ನತ ಗ್ರಹದಲ್ಲಿ ಅಥವಾ ಕೆಳಗಿನ ಗ್ರಹದಲ್ಲಿ, ಇಂದ್ರಿಯ ತೃಪ್ತಿ ಪ್ರಬಲವಾಗಿದೆ. ಆಧ್ಯಾತ್ಮಿಕ ಜಗತ್ತಿನಲ್ಲಿ ಮಾತ್ರ ಇಂದ್ರಿಯ ತೃಪ್ತಿ ಇಲ್ಲ. ಕೇವಲ ಕೃಷ್ಣನನ್ನು ತೃಪ್ತಿ ಪಡಿಸುವ ಪ್ರಯತ್ನವಿದೆ. ಅಂದರೆ... ಇಲ್ಲಿ ಪ್ರತಿಯೊಬ್ಬರೂ ಅವರ ಇಂದ್ರಿಯಗಳನ್ನು ತೃಪ್ತಿ ಪಡಿಸಲು ಪ್ರಯತ್ನಿಸುತ್ತಿದ್ದಾರೆ. ಅದು ಭೌತಿಕ ಪ್ರಪಂಚದ ನಿಯಮ. ಅದು ಭೌತಿಕ ಜೀವನ. ಎಲ್ಲಿಯವರೆಗು ನಿಮ್ಮ ಇಂದ್ರಿಯಗಳನ್ನು ತೃಪ್ತಿ ಪಡಿಸಲು ನೀವು ಪ್ರಯತ್ನಿಸುತ್ತೀರೋ, ಅದು ನಿಮ್ಮ ಭೌತಿಕ ಜೀವನವಾಗುವುತ್ತದೆ. ಮತ್ತು ಕೃಷ್ಣನ ಇಂದ್ರಿಯಗಳನ್ನು ತೃಪ್ತಿ ಪಡಿಸಲು ನಿಮ್ಮನ್ನು ನೀವು ಬದಲಾಯಿಸಕೊಂಡ ತಕ್ಷಣ, ಅದು ನಿಮ್ಮ ಆಧ್ಯಾತ್ಮಿಕ ಜೀವನ. ಇದು ತುಂಬಾ ಸರಳವಾದ ವಿಷಯ. ತೃಪ್ತಿಪಡಿಸುವ ಬದಲು... ಹೃಷೀಕೇಣ ಹೃಷೀಕೇಶ-ಸೇವನಂ (ಚೈ.ಚ ಮಧ್ಯ 19.170). ಅದು ಭಕ್ತಿ.

ನಿಮಗೆ ಇಂದ್ರಿಯಗಳಿವೆ. ನೀವು ತೃಪ್ತಿಪಡಿಸಬೇಕು. ನೀವು ಇಂದ್ರಿಯಗಳೊಂದಿಗೆ ತೃಪ್ತಿಪಡಿಸಬೇಕು. ಒಂದೋ ನೀವು ನಿಮ್ಮನ್ನು ತೃಪ್ತಿಪಡಿಸುತ್ತೀರಿ... ಆದರೆ ನಿಮಗೆ ಗೊತ್ತಿಲ್ಲ. ಕೃಷ್ಣನ ಇಂದ್ರಿಯಗಳನ್ನು ತೃಪ್ತಿಪಡಿಸಿದರೆ, ಅವನ ಇಂದ್ರಿಯಗಳು ತಂತಾನೆ ತೃಪ್ತಿಗೊಳ್ಳುತ್ತವೆ ಎಂದು ಬದ್ಧ ಆತ್ಮಕ್ಕೆ ತಿಳಿದಿಲ್ಲ. ಅದೇ ಉದಾಹರಣೆ. ಬೇರುಗಳಿಗೆ ನೀರು ಸುರಿಯುವಂತೆಯೇ... ಅಥವಾ ಈ ಬೆರಳುಗಳು, ನನ್ನ ದೇಹದ ಭಾಗಾಂಶ, ಹೊಟ್ಟೆಗೆ ಆಹಾರ ಪದಾರ್ಥಗಳನ್ನು ನೀಡಿದರೆ, ಬೆರಳುಗಳು ತಂತಾನೆ ತೃಪ್ತಿಗೊಳ್ಳುತ್ತವೆ. ಈ ರಹಸ್ಯ ನಾವು ತಿಳಿದುಕೊಳ್ಳುತ್ತಿಲ್ಲ. ನಮ್ಮ ಇಂದ್ರಿಯಗಳ ತೃಪ್ತಿಗೆ ಪ್ರಯತ್ನಿಸುವ ಮೂಲಕ ಸಂತೋಷವಾಗಿರಬಹುದು ಎಂದು ನಾವು ಯೋಚಿಸುತ್ತಿದ್ದೇವೆ. ಕೃಷ್ಣ ಪ್ರಜ್ಞೆ ಎಂದರೆ ನಿಮ್ಮ ಇಂದ್ರಿಯಗಳನ್ನು ತೃಪ್ತಿಪಡಿಸಲು ಪ್ರಯತ್ನಿಸದಿರಿ ಎಂದು. ನೀವು ಕೃಷ್ಣನ ಇಂದ್ರಿಯಗಳನ್ನು ತೃಪ್ತಿಪಡಿಸಲು ಪ್ರಯತ್ನಿಸುತ್ತೀರಿ; ನಿಮ್ಮ ಇಂದ್ರಿಯಗಳು ತಂತಾನೆ ತೃಪ್ತಿಗೊಳ್ಳುತ್ತವೆ. ಇದು ಕೃಷ್ಣ ಪ್ರಜ್ಞೆಯ ರಹಸ್ಯ. ಎದುರಾಳಿ ಪಕ್ಷ, ಅವರು ಯೋಚಿಸುತ್ತಿದ್ದಾರೆ, "ಓಹ್, ನಾನು ಏಕೆ ತೃಪ್ತಿಪಡಿಸಲಿ? ಇಡೀ ದಿನ ಮತ್ತು ರಾತ್ರಿ ನಾನು ಕೃಷ್ಣನಿಗಾಗಿ ಏಕೆ ಕೆಲಸ ಮಾಡಬೇಕು? ನಾನು ಕರ್ಮಗಳಿಗಾಗಿ ಪ್ರಯತ್ನಿಸುತ್ತೇನೆ." ನೀವು ಕೃಷ್ಣನಿಗಾಗಿ ಹಗಲು ರಾತ್ರಿ ಕೆಲಸ ಮಾಡುತ್ತಿರುವಂತೆಯೇ, ಅವರು ಯೋಚಿಸುತ್ತಿದ್ದಾರೆ, "ಇವರು ಎಂಥ ಮೂರ್ಖರು. ನಾವು ತುಂಬಾ ಬುದ್ಧಿವಂತರು. ನಾವು ಹಗಲು ರಾತ್ರಿ ನಮ್ಮ ಸ್ವಂತ ಇಂದ್ರಿಯ ತೃಪ್ತಿಗಾಗಿ ಕೆಲಸ ಮಾಡುತ್ತಿದ್ದೇವೆ, ಮತ್ತು ಅವರು ಕೃಷ್ಣನಿಗಾಗಿ ಏಕೆ ಕೆಲಸ ಮಾಡುತ್ತಿದ್ದಾರೆ?"

ಭೌತವಾದಿ ಮತ್ತು ಆಧ್ಯಾತ್ಮಿಕರ ನಡುವಿನ ವ್ಯತ್ಯಾಸ ಇದು. ಆಧ್ಯಾತ್ಮಿಕರ ಪ್ರಯತ್ನವೆಂದರೆ ಕೇವಲ ಕೃಷ್ಣನಿಗಾಗಿ ಯಾವುದೇ ತಡೆ ಇಲ್ಲದೆ ಹಗಲು ರಾತ್ರಿ ಶ್ರಮದಿಂದ ಕೆಲಸ ಮಾಡುವುದು. ಅದು ಆಧ್ಯಾತ್ಮಿಕ ಜೀವನ. ಮತ್ತು ಭೌತವಾದಿ ಎಂದರೆ ಅದೇ ಪ್ರಯತ್ನ, ಯಾವಾಗಲೂ ಅವರ ವೈಯಕ್ತಿಕ ಇಂದ್ರಿಯಗಳನ್ನು ತೃಪ್ತಿಪಡಿಸಲು ಪ್ರಯತ್ನಿಸುತ್ತಾರೆ. ಅದು ಭೌತಿಕ ಮತ್ತು ಆಧ್ಯಾತ್ಮಿಕದ ನಡುವೆ ಇರುವ ವ್ಯತ್ಯಾಸ. ಆದ್ದರಿಂದ ಕೃಷ್ಣ ಪ್ರಜ್ಞೆ ಆಂದೋಲನ ಎಂದರೆ ಕೃಷ್ಣನನ್ನು ತೃಪ್ತಿಪಡಿಸಲು ನಾವು ನಮ್ಮ ಇಂದ್ರಿಯಗಳನ್ನು ಪಳಗಿಸಬೇಕು. ಅಷ್ಟೇ. ಇತರ, ಹಿಂದಿನ ಹಲವು ಸಾವಿರ ಮತ್ತು ಲಕ್ಷಾಂತರ ಜನ್ಮಗಳಲ್ಲಿ, ನಾವು ನಮ್ಮ ಇಂದ್ರಿಯಗಳನ್ನು, ವೈಯಕ್ತಿಕ ಇಂದ್ರಿಯಗಳನ್ನು, ತೃಪ್ತಿಪಡಿಸಲು ಪ್ರಯತ್ನಿಸಿದ್ದೇವೆ. ಕೃಷ್ಣನ ಇಂದ್ರಿಯಗಳನ್ನು ತೃಪ್ತಿಪಡಿಸಲು ಈ ಜೀವನವನ್ನು ಸಮರ್ಪಿಸೋಣ. ಅದುವೇ ಕೃಷ್ಣ ಪ್ರಜ್ಞೆ. ಒಂದು ಜನ್ಮ. ನಾವು ಹಲವಾರು ಜನ್ಮದಲ್ಲಿ ನಮ್ಮ ಇಂದ್ರಿಯಗಳನ್ನು ತೃಪ್ತಿಪಡಿಸಲು ಪ್ರಯತ್ನಿಸಿದ್ದೇವೆ. ಈ ಜೀವನ, ಕನಿಷ್ಠ ಒಂದು ಜೀವನ, ನಾವು ಪ್ರಯತ್ನಿಸೋಣ, ಏನಾಗುತ್ತದೆ. ಆದ್ದರಿಂದ ನಾವು ಸೋತವರಲ್ಲ. ನಮ್ಮ ಇಂದ್ರಿಯಗಳನ್ನು ತೃಪ್ತಿಪಡಿಸದೆ ನಾವು ಅನಾನುಕೂಲತೆಗಳನ್ನು ಅನುಭವಿಸುತ್ತೇವೆ, ಆದರೆ ನಾವು ಸೋತವರಲ್ಲ. ಕೇವಲ ಕೃಷ್ಣನ ಇಂದ್ರಿಯಗಳನ್ನು ತೃಪ್ತಿಪಡಿಸಲು ಪ್ರಯತ್ನಿಸಿ; ಆಗ ಎಲ್ಲವು ಸರಿಯಾಗುತ್ತದೆ.