KN/Prabhupada 0115 - ಕೃಷ್ಣನ ಸಂದೇಶವನ್ನು ತಿಳಿಸುವುದು ಮಾತ್ರವೇ ನನ್ನ ಕೆಲಸ



Lecture -- Los Angeles, July 11, 1971

ಆದ್ದರಿಂದ, ನನಗೆ ತುಂಬಾ ಸಂತೋಷವಾಗಿದೆ. ಈ ಹುಡುಗರು ದಯೆಯಿಂದ ನನಗೆ ಸಹಾಯ ಮಾಡುತ್ತಿದ್ದಾರೆ, ಕೃಷ್ಣ ಪ್ರಜ್ಞೆ ಆಂದೋಲನವನ್ನು ಹರಡಲು, ಮತ್ತು ಕೃಷ್ಣ ಅವರನ್ನು ಆಶೀರ್ವದಿಸುತ್ತಾನೆ. ನಾನು ತುಂಬಾ ಅತ್ಯಲ್ಪ. ನನಗೆ ಯಾವುದೇ ಸಾಮರ್ಥ್ಯವಿಲ್ಲ. ನನ್ನ ವ್ಯವಹಾರವು ಕೃಷ್ಣನ ಸಂದೇಶವನ್ನು ತಲುಪಿಸುವುದು ಮಾತ್ರ. ಅಂಚೆ ಜವಾನನಂತೆಯೇ: ಪತ್ರವನ್ನು ತಲುಪಿಸುವುದು ಅವನ ಕೆಲಸ. ಪತ್ರದಲ್ಲಿರುವ ವಿಷಯಕ್ಕೆ ಅವನು ಜವಾಬ್ದಾರನಾಗಿರುವುದಿಲ್ಲ. ಪ್ರತಿಕ್ರಿಯೆ... ಒಂದು ಪತ್ರವನ್ನು ಓದಿದ ನಂತರ ವಿಳಾಸದಾರನಿಗೆ ಏನಾದರೂ ಅನಿಸಬಹುದು, ಆದರೆ ಅದು ಜವಾನನ ಜವಾಬ್ದಾರಿಯಲ್ಲ. ಅದೇ ರೀತಿ, ನನ್ನ ಜವಾಬ್ದಾರಿಯೆಂದರೆ, ಗುರು-ಶಿಷ್ಯ ಪರಂಪರೆಯ ಮೂಲಕ, ನನ್ನ ಆಧ್ಯಾತ್ಮಿಕ ಗುರುವಿನಿಂದ ನಾನು ಪಡೆದದ್ದು. ನಾನು ಅದೇ ವಿಷಯವನ್ನು ಪ್ರಸ್ತುತಪಡಿಸುತ್ತಿದ್ದೇನೆ, ಆದರೆ ಯಾವುದೇ ಕಲಬೆರಕೆ ಇಲ್ಲದೆ. ಅದೇ ನನ್ನ ವ್ಯವಹಾರ. ಅದೇ ನನ್ನ ಜವಾಬ್ದಾರಿ. ನಾನು ವಿಷಯಗಳನ್ನು ಯಥಾರ್ಥವಾಗಿ ಪ್ರಸ್ತುತಪಡಿಸಬೇಕು, ಕೃಷ್ಣನು ಪ್ರಸ್ತುತಪಡಿಸಿದಂತೆ, ಅರ್ಜುನನು ಪ್ರಸ್ತುತಪಡಿಸಿದಂತೆ, ನಮ್ಮ ಆಚಾರ್ಯರು ಪ್ರಸ್ತುತಪಡಿಸಿದಂತೆ, ಚೈತನ್ಯ ಮಹಾಪ್ರಭು, ಮತ್ತು ಕೊನೆಗೆ ನನ್ನ ಆಧ್ಯಾತ್ಮಿಕ ಗುರು ಭಕ್ತಿಸಿದ್ದಾಂತ ಸರಸ್ವತೀ ಗೋಸ್ವಾಮಿ ಮಹಾರಾಜರು ಪ್ರಸ್ತುತಪಡಿಸಿದಂತೆ. ಆದ್ದರಿಂದ, ಅದೇ ರೀತಿ, ನೀವು ಅದೇ ಮನೋಭಾವನೆಯಿಂದ ಕೃಷ್ಣ ಪ್ರಜ್ಞೆಯ ಆಂದೋಲನವನ್ನು ಸ್ವೀಕರಿಸಿದರೆ, ಮತ್ತು ನೀವು ಇತರ ಜನರಿಗೆ, ನಿಮ್ಮ ಇತರ ದೇಶವಾಸಿಗಳಿಗೆ ವಿತರಿಸಿದರೆ, ಖಂಡಿತವಾಗಿಯೂ ಅದು ಪರಿಣಾಮಕಾರಿಯಾಗಿರುತ್ತದೆ, ಏಕೆಂದರೆ ಯಾವುದೇ ಕಲಬೆರಕೆ ಇಲ್ಲ. ಯಾವುದೇ ಕಪಟ ಇಲ್ಲ. ಯಾವುದೇ ಮೋಸ ಇಲ್ಲ. ಅದು ಶುದ್ಧ ಆಧ್ಯಾತ್ಮಿಕ ಪ್ರಜ್ಞೆ. ಅದನ್ನು ಅಭ್ಯಾಸ ಮಾಡಿ, ಮತ್ತು ವಿತರಿಸಿ. ನಿಮ್ಮ ಜೀವನವು ವೈಭವಯುತವಾಗಿರುತ್ತದೆ.