KN/Prabhupada 0118 - ಬೋಧಿಸುವುದು ತುಂಬಾ ಕಷ್ಟದ ವಿಷಯವಲ್ಲ
Lecture on SB 1.5.8-9 -- New Vrindaban, May 24, 1969
ಕೃಷ್ಣ, ಅಥವಾ ಭಗವಂತನಿಗೆ, ಶರಣಾಗುವವನು ತುಂಬಾ ಅದೃಷ್ಟಶಾಲಿ. ಬಹೂನಾಂ ಜನ್ಮನಾಮ್ ಅಂತೇ ಜ್ಞಾನವಾನ್ ಮಾಂ ಪ್ರಪದ್ಯತೇ (ಭ.ಗೀ 7.19). ಶರಣಾಗುವವನು ಸಾಮಾನ್ಯ ಮನುಷ್ಯನಲ್ಲ. ಅವನು ಎಲ್ಲ ವಿದ್ವಾಂಸರು, ಎಲ್ಲ ದಾರ್ಶನಿಕರು, ಎಲ್ಲ ಯೋಗಿಗಳು, ಎಲ್ಲ ಕರ್ಮೀಗಳಿಗಿಂತ ಶ್ರೇಷ್ಠನಾದವನು. ಶರಣಾಗುವವನು ಒಬ್ಬ ಅಗ್ರಗಣ್ಯ ಮನುಷ್ಯ. ಆದ್ದರಿಂದ ಇದು ತುಂಬಾ ಗೌಪ್ಯವಾಗಿರುತ್ತದೆ. ಆದ್ದರಿಂದ ಭಗವದ್ಗೀತೆಯನ್ನು ಯಥಾರೂಪವಾಗಿ ಪ್ರಸ್ತುತಪಡಿಸುವ ನಮ್ಮ ಬೋಧನೆ, ಕೃಷ್ಣಪ್ರಜ್ಞೆ ಚಳುವಳಿ, ಕೃಷ್ಣ, ಅಥವಾ ಭಗವಂತನಿಗೆ ಹೇಗೆ ಶರಣಾಗಬೇಕೆಂದು ಜನರಿಗೆ ಕಲಿಸುವ ಪ್ರಕ್ರಿಯೆಯಾಗಿದೆ. ಅಷ್ಟೇ. ಆದ್ದರಿಂದ ಕೃಷ್ಣ ಇದು ಗೌಪ್ಯವಾಗಿದೆ ಎಂದು ಹೇಳುತ್ತಾನೆ... ಯಾರೂ ಸ್ವೀಕರಿಸುವುದಿಲ್ಲ. ಆದರೆ ತೊಂದರೆಯನ್ನು ತೆಗೆದುಕೊಳ್ಳುವವನು, "ದಯವಿಟ್ಟು, ಶರಣಾಗು...” ಆದ್ದರಿಂದ ಬೋಧಿಸಲು ಹೋದಾಗ, ಬೋಧಕರು ಕೆಲವೊಮ್ಮೆ ಆಕ್ರಮಣಕ್ಕೆ ಒಳಗಾಗುತ್ತಾರೆ. ನಿತ್ಯಾನಂದ ಪ್ರಭು ಅವರನ್ನು ಜಗಾಯಿ-ಮಾಧಾಯಿ ಆಕ್ರಮಣ ಮಾಡಿದಂತೆಯೇ. ಮತ್ತು ಪ್ರಭು ಯೇಸು ಕ್ರಿಸ್ತನನ್ನು ಶಿಲುಬೆಗೇರಿಸಿದಾಗ, ಕೊಲ್ಲಲ್ಪಟ್ಟಾಗ... ಆದ್ದರಿಂದ ಬೋಧಕರಿಗೆ ಅಪಾಯವಿದೆ. ಆದ್ದರಿಂದ ಕೃಷ್ಣ ಹೇಳುತ್ತಾನೆ, "ಈ ಭಗವದ್ಗೀತೆಯನ್ನು ಬೋಧಿಸುವುದರಲ್ಲಿ ನಿರತರಾಗಿರುವ ಈ ಕ್ಷೇತ್ರಕಾರ್ಯಕರ್ತರು ಅವರು ನನಗೆ ತುಂಬಾ ಪ್ರಿಯರು. ನನಗೆ ತುಂಬಾ ತುಂಬಾ ಪ್ರಿಯರು.” ನ ಚ ತಸ್ಮಾನ್ ಮನುಷ್ಯೇಷು ಕಶ್ಚಿನ್ ಮೇ ಪ್ರಿಯ-ಕೃತ್ತಮಃ (ಭ.ಗೀ 18.69). "ಜನರಿಗೆ ಈ ಗೌಪ್ಯ ಸತ್ಯವನ್ನು ಬೋಧಿಸುವ ವ್ಯಕ್ತಿಗಿಂತ ನನಗೆ ಹೆಚ್ಚು ಪ್ರೀಯರು ಯಾರೂ ಇಲ್ಲ.”
ಆದ್ದರಿಂದ ನಾವು ಕೃಷ್ಣನನ್ನು ಮೆಚ್ಚಿಸಲು ಬಯಸಿದರೆ, ನಾವು ಈ ಅಪಾಯವನ್ನು ತೆಗೆದುಕೊಳ್ಳಬೇಕಾಗುತ್ತದೆ. ಕೃಷ್ಣ, ಗುರು. ನನ್ನ ಆಧ್ಯಾತ್ಮಿಕ ಗುರುವು ಈ ಅಪಾಯವನ್ನು ತೆಗೆದುಕೊಂಡರು, ಉಪದೇಶಿಸಿಸುವ ಕೆಲಸವನ್ನು, ಮತ್ತು ಆ ಉಪದೇಶದ ಕೆಲಸವನ್ನು ಮಾಡಲು ಅವರು ನಮ್ಮನ್ನು ಪ್ರೇರೇಪಿಸಿದನು. ಹಾಗೆಯೇ ಈ ಉಪದೇಶದ ಕೆಲಸವನ್ನು ತೆಗೆದುಕೊಳ್ಳುವಂತೆ ನಾವು ನಿಮ್ಮನ್ನು ಕೋರುತ್ತಿದ್ದೇವೆ. ಆದ್ದರಿಂದ ನಾವು ಈ ಉಪದೇಶದ ಕೆಲಸ, ನಾನು ಹೇಳುವುದೆನೆಂದರೆ, ಕಳಪೆಯಾಗಿ ಮಡಿದರೂ... ಕಳಪೆಯಾಗಿ - ಅದು ಕಳಪೆಯಲ್ಲ, ಆದರೆ ನಾನು ಹೆಚ್ಚು ವಿದ್ಯಾವಂತನಲ್ಲ ಎಂದು ಭಾವಿಸೋಣ… ಈ ಹುಡುಗನಂತೆಯೇ. ನಾನು ಅವನನ್ನು ಉಪದೇಶದ ಕೆಲಸಕ್ಕೆ ಕಳುಹಿಸಿದರೆ, ಅವನು ಈಗ ಹೆಚ್ಚು ವಿದ್ಯಾವಂತನಲ್ಲ. ಅವನು ದಾರ್ಶನಿಕನಲ್ಲ. ಅವನು ವಿದ್ವಾಂಸನಲ್ಲ. ಆದರೆ ಅವನೂ ಬೋಧಿಸಬಹುದು. ಅವನೂ ಬೋಧಿಸಬಹುದು. ಏಕೆಂದರೆ ನಮ್ಮ ಉಪದೇಶವು ತುಂಬಾ ಕಷ್ಟದ ವಿಷಯವಲ್ಲ. ನಾವು ಮನೆ ಮನೆಗೆ ಹೋಗಿ, "ಸ್ವಾಮಿಗಳೇ, ನೀವು ಹರೇ ಕೃಷ್ಣ ಜಪಿಸಿರಿ,” ಎಂದು ಬೇಡಿಕೊಳ್ಳಬೇಕು. ಅವನು ಸ್ವಲ್ಪ ಹೆಚ್ಚು ತಿಳಿದವನಾಗಿದ್ದರೆ, "ದಯವಿಟ್ಟು ಚೈತನ್ಯ ಮಹಾಪ್ರಭುಗಳ ಬೋಧನೆಗಳನ್ನು ಓದಲು ಪ್ರಯತ್ನಿಸಿ. ಇದು ತುಂಬಾ ಚೆನ್ನಾಗಿದೆ. ನಿಮಗೆ ಲಾಭವಾಗುತ್ತದೆ”, ಎಂದು ಹೇಳಬಹುದು. ಈ ಮೂರು ನಾಲ್ಕು ಪದಗಳು ನಿಮ್ಮನ್ನು ಬೋಧಕರನ್ನಾಗಿ ಮಾಡುತ್ತದೆ. ಇದು ತುಂಬಾ ಕಷ್ಟದ ಕೆಲಸವೇ? (ನಗು) ನೀವು ತುಂಬಾ ಕಲಿತವರು, ಉತ್ತಮ ವಿದ್ವಾಂಸರು, ಅಥವ ಉತ್ತಮ ದಾರ್ಶನಿಕರು ಅಲ್ಲ. ನೀವು ಕೇವಲ ಹೇಳಿ... ಮನೆ ಮನೆಗೆ ಹೋಗಿ: "ಸ್ವಾಮಿಗಳೇ, ನೀವು ತುಂಬಾ ಕಲಿತ ಮನುಷ್ಯ. ಸದ್ಯಕ್ಕೆ, ನೀವು ನಿಮ್ಮ ಕಲಿಕೆಯನ್ನು ನಿಲ್ಲಿಸಿ. ಕೇವಲ ಹರೇ ಕೃಷ್ಣ ಜಪಿಸಿ."