KN/Prabhupada 0130 - ಕೃಷ್ಣನು ಅನೇಕ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ



Lecture on BG 4.5 -- Bombay, March 25, 1974

ಕೃಷ್ಣನು ಅನೇಕ ಅವತಾರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ, ಕೃಷ್ಣನ ಸ್ಥಾನ ಏನೆಂದು ತಿಳಿಯಲು ಪ್ರಯತ್ನಿಸಿ. ಅವನು ಎಲ್ಲರ ಹೃದಯದಲ್ಲಿ ಪರಮಾತ್ಮನಾಗಿ ನೆಲೆಸಿದ್ದಾನೆ. ಈಶ್ವರಃ ಸರ್ವ ಭೂತಾನಾಮ್ ಹೃದ್-ದೇಶೇ ಅರ್ಜುನ ತಿಷ್ಠತಿ (ಭ.ಗೀ 18.61). ಮತ್ತು ಅವನು ಎಲ್ಲರಿಗೂ ನಿರ್ದೇಶನ ನೀಡುತ್ತಿದ್ದಾನೆ. ಮತ್ತು ಅನಿಯಮಿತ, ಅಸಂಖ್ಯಾತ ಜೀವರಾಶಿಗಳಿವೆ. ಆದ್ದರಿಂದ, ಅವನು ಅನೇಕ ಜೀವರಾಶಿಗಳಿಗೆ ವಿಭಿನ್ನ ರೀತಿಯಲ್ಲಿ ಆದೇಶಗಳನ್ನು ನೀಡಬೇಕಾಗಿದೆ. ಅವನು ಎಷ್ಟು ಕಾರ್ಯನಿರತನಾಗಿದ್ದಾನೆ ಎಂದು ಊಹಿಸಲು ಪ್ರಯತ್ನಿಸಿ. ಆದರೂ, ಅವನ ಸ್ಥಾನವು ಒಂದೇ ಆಗಿರುತ್ತದೆ. ಗೊಲೋಕ ಏವ ನಿವಸತಿ ಅಖಿಲತ್ಮಾ-ಭೂತಃ (ಬ್ರಹ್ಮ.ಸಂ 5.37). ಗೊಲೋಕ ಏವ ನಿವಸತಿ. ಕೃಷ್ಣ ಇನ್ನೂ ತನ್ನದೇ ಆದ ಮೂಲ ಸ್ಥಳವಾದ ಗೊಲೋಕ ವೃಂದಾವನದಲ್ಲಿದ್ದಾನೆ, ಮತ್ತು ಅವನು ಶ್ರೀಮತಿ ರಾಧರಾಣಿಯ ಸಂಗದಲ್ಲಿ ಆನಂದಿಸುತ್ತಿದ್ದಾನೆ. ಆ ವ್ಯವಹಾರ... ಇದು ಮಾಯವಾದ ತತ್ವಶಾಸ್ತ್ರವಲ್ಲ. ಅವನು ಅನೇಕ ಜೀವರಾಶಿಗಳ ಹೃದಯಗಳಲ್ಲಿ ತನ್ನನ್ನು ತಾನೇ ವಿಸ್ತರಿಸಿಕೊಂಡಿದ್ದಾನೆ ಅಂದರೆ ಅವನು ತನ್ನ ವಾಸಸ್ಥಾನದಲ್ಲಿ ರಿಕ್ತನಾಗಿದ್ದಾನೆಂದು ಇದರ ಅರ್ಥವಲ್ಲ. ಇಲ್ಲ. ಅವನು ಅಲ್ಲೇ ಇದ್ದಾನೆ. ಅದೇ ಕೃಷ್ಣ. ಪೂರ್ಣಸ್ಯ ಪೂರ್ಣಮ್ ಆದಾಯ ಪೂರ್ಣಮ್ ಏವಾವಸಿಷ್ಯತೇ (ಈಶೋ.ಪ್ರಾರ್ಥನೆ). ಇದು ವೈದಿಕ ಮಾಹಿತಿ.

ನಮಗೆ ಭೌತಿಕ ಅನುಭವವಿದೆ. ನಮ್ಮಲ್ಲಿ ಒಂದು ರೂಪಾಯಿ (16 ಆಣೆ) ಇದ್ದರೆ, ಮತ್ತು ಅದರಿಂದ ಒಂದಾಣೆ ತೆಗೆದರೆ, ಆಗ 15ಆಣೆ ಉಳಿಯುತ್ತದೆ. ಎರಡಾಣೆ ತೆಗೆದರೆ, ಆಗ 14ಆಣೆ ಉಳಿಯುತ್ತದೆ. 16ಆಣೆ ತೆಗೆದರೆ, ಆಗ ಶೂನ್ಯವಾಗುತ್ತದೆ. ಆದರೆ ಕೃಷ್ಣನು ಹಾಗಲ್ಲ. ಅನಿಯಮಿತ ರೂಪಗಳಲ್ಲಿ ಅವನು ತನ್ನನು ವಿಸ್ತರಿಸಿಕೊಳ್ಳಬಹುದು. ಆದರೂ ಮೂಲ ಕೃಷ್ಣನು ಇರುತ್ತಾನೆ. ಅದೇ ಕೃಷ್ಣನೆಂದರೆ. ನಮಗೆ ತಿಳಿದಿದೆ: ಒಂದ್ದರಿಂದ ಒಂದನ್ನು ಕಳೆದರೆ ಅದು ಶೂನ್ಯವಾಗುತ್ತದೆ. ಆದರೆ, ಆಧ್ಯಾತ್ಮಿಕ ಜಗತ್ತಿನಲ್ಲಿ… ಅದನ್ನೇ ಪರಿಪೂರ್ಣ ಎನ್ನುತ್ತಾರೆ. ಒಂದನ್ನು ಕಳೆದರೆ, ದಶಲಕ್ಷ ಸಾರಿ ಒಂದನ್ನು ಕಳೆದರೆ, ಆಗಲೂ ಕೂಡ, ಆ ಮೂಲವಾದ ಒಂದು, ಒಂದಾಗಿಯೇ ಉಳಿಯುತ್ತದೆ. ಅವನೇ ಕೃಷ್ಣ. ಅದ್ವೈತಮ್ ಅಚ್ಯುತಮ್ ಅನಾದಿಮ್ ಅನಂತ-ರೂಪಮ್ (ಬ್ರಹ್ಮ.ಸಂ 5.33).

ಅಂತಃ ಕೃಷ್ಣನನ್ನು ವೇದೇಷು, ಅಂದರೆ ಕೇವಲ ವೈದಿಕ ವಾಙ್ಮಯದ ಅಧ್ಯಯನದಿಂದ, ಅರ್ಥಮಾಡಿಕೊಳ್ಳಲ್ಲು ಸಾಧ್ಯವಿಲ್ಲ. ವೇದಗಳು ಎಂದರೆ, ವೇದಾಂತವೆಂದರೆ, ಕೃಷ್ಣನನ್ನು ಅರಿತುಕೊಳ್ಳುವುದು. ವೇದೈಶ್ ಚ ಸರ್ವೈರ್ ಅಹಮ್ ಏವ ವೇದ್ಯಃ (ಭ.ಗೀ 15.15). ಆದರೆ ದುರದೃಷ್ಟವಶಾತ್, ನಾವು ಕೃಷ್ಣ ಅಥವಾ ಅವನ ಭಕ್ತನ ಆಶ್ರಯವನ್ನು ತೆಗೆದುಕೊಳ್ಳದ ಕಾರಣ, ವೇದಗಳ ಉದ್ದೇಶವೇನು ಎಂದು ನಮಗೆ ಅರ್ಥವಾಗುವುದಿಲ್ಲ. ಅದನ್ನು ಏಳನೇ ಅಧ್ಯಾಯದಲ್ಲಿ ವಿವರಿಸಲಾಗಿದೆ. ಮಯ್ ಆಸಕ್ತ-ಮನಃ ಪಾರ್ಥ.... ಮಯ್ ಆಸಕ್ತ-ಮನಃ ಪಾರ್ಥ ಯೋಗಂ ಯುಜನ್ ಮದ್- ಆಶ್ರಯಃ. ಮದ್-ಆಶ್ರಯಃ ಅಸಂಶಯಂ ಸಮಗ್ರಂ ಮಾಂ ಯಥಾ ಜ್ಞಾಸ್ಯಸಿ ತತ್ ಶೃಣು (ಭ.ಗೀ 7.1). ನೀವು ಕೃಷ್ಣನನ್ನು ‘ಅಸಂಶಯಂ‘ ಆಗಿ, ಆಂದರೆ ಯಾವುದೇ ಸಂಶಯವಿಲ್ಲದೆ, ಮತ್ತು ಸಮಗ್ರಮ್, ಅಂದರೆ ಸಂಪೂರ್ಣವಾಗಿ, ಅರ್ಥಮಾಡಿಕೊಳ್ಳಲು ಬಯಸಿದರೆ, ನೀವು ಈ ಯೋಗ ಪದ್ಧತಿಯನ್ನು ಅಭ್ಯಾಸ ಮಾಡಬೇಕು.

ಆ ಯೋಗ ಯಾವುದು? ಮನ್-ಮನಾ ಭವ ಮದ್-ಭಕ್ತೋ ಮದ್-ಯಾಜಿ ಮಾಮ್ ನಮಸ್ಕುರು (ಭ.ಗೀ 18.65). ಮದ್-ಆಶ್ರಯಃ ಯೋಗಂ... ಯೋಗಂ ಯುಂಜನ್, ಮದ್-ಆಶ್ರಯಃ. ಮದ್-ಆಶ್ರಯಃ, ಈ ಪದವು ಬಹಳ ಮಹತ್ವವಾದ್ದದು. ಮತ್ ಎಂದರೆ "ನೇರವಾಗಿ ಸ್ವೀಕರಿಸಿ…" – ಅದು ಸುಲಭವಾದ ವಿಷಯವಲ್ಲ - "... ನನ್ನ ಆಶ್ರಯ, ಅಥವಾ ನನ್ನನ್ನು ಆಶ್ರಯಿಸಿದವನನ್ನು ನೀವು ಆಶ್ರಯಿಸಿ." ವಿದ್ಯುತ್ ಸಾಕೆಟ್ ಇದೆ, ಮತ್ತು ಪ್ಲಗ್ ಇದೆ. ಆ ಪ್ಲಗ್ ಅನ್ನು ವಿದ್ಯುತ್ ಸಾಕೆಟ್ನಲ್ಲಿ ಹಾಕಿದರೆ, ಆಗ ವಿದ್ಯುತ್ ಪಡೆಯುತ್ತೀರಿ. ಅಂತೆಯೇ, ಈ ಅಧ್ಯಾಯದ ಆರಂಭದಲ್ಲಿ ಹೇಳಿರುವಂತೆ, ಏವಂ ಪರಂಪರಾ-ಪ್ರಾಪ್ತಮ್ ಇಮಂ ರಾಜರ್ಷಯೋ ವಿದುಃ (ಭ.ಗೀ 4.2). ನೀವು ಪ್ಯಾರಂಪರಾ ವ್ಯವಸ್ಥೆಯ ಆಶ್ರಯ ಪಡೆದರೆ… ಅದೆ ಉದಾಹರಣೆ. ನೀವು ವಿದ್ಯತ್ ಸಾಕೆಟಿನ ಜೊತೆ ಸಂಪರ್ಕವಿರುವ ಪಲ್ಗಿನ ಆಶ್ರಯವನ್ನು ಪಡೆದರೆ ನಿಮಗೆ ತಕ್ಷಣ ವಿದ್ಯುತ್ ಶಕ್ತಿ ದೊರೆಯುತ್ತದೆ. ಅದೆ ಉದಾಹರಣೆ. ನೀವು ವಿದ್ಯತ್ ಸಾಕೆಟಿನ ಜೊತೆ ಸಂಪರ್ಕವಿರುವ ಪಲ್ಗಿನ ಆಶ್ರಯವನ್ನು ಪಡೆದರೆ ನಿಮಗೆ ತಕ್ಷಣ ವಿದ್ಯುತ್ ಶಕ್ತಿ ದೊರೆಯುತ್ತದೆ.

ಇದೇ ಪರಂಪರಾ ವ್ಯವಸ್ಥೆ. ಕೃಷ್ಣನು ಬ್ರಹ್ಮನಿಗೆ ಬೋಧಿಸಿದನು. ಬ್ರಹ್ಮ ನಾರದರಿಗೆ ಬೋಧಿಸಿದರು. ನಾರದರು ವ್ಯಾಸದೇವರಿಗೆ ಬೋಧಿಸಿದರು. ವ್ಯಾಸದೇವರು ಮದ್ವಾಚಾರ್ಯರಿಗೆ ಬೋಧಿಸಿದರು. ಮಧ್ವಾಚಾರ್ಯರು ಬಹಳ ರೀತಿಯಲ್ಲಿ ಬೋಧಿಸಿದರು. ನಂತರ ಮಾಧವೇಂದ್ರ ಪುರೀ. ಮಾಧವೇಂದ್ರ ಪುರೀಯಿಂದ ಈಶ್ವರ ಪುರೀ. ಈಶ್ವರ ಪುರೀಯಿಂದ ಚೈತನ್ಯ ಮಹಾಪ್ರಭು. ಈ ರೀತಿ ಒಂದು ಪರಂಪರಾ ಪದ್ಧತಿಯಿದೆ. ನಾಲ್ಕು ವೈಷ್ಣವ ಸಂಪ್ರದಾಯಗಳಿವೆ. ರುದ್ರ ಸಂಪ್ರದಾಯ, ಬ್ರಹ್ಮ ಸಂಪ್ರದಾಯ, ಕುಮಾರ ಸಂಪ್ರದಾಯ, ಮತ್ತು ಲಕ್ಷ್ಮಿ ಸಂಪ್ರದಾಯ ಅಂದರೆ ಶ್ರೀ ಸಂಪ್ರದಾಯ.

ಆದ್ದರಿಂದ ಸಂಪ್ರದಾಯ-ವಿಹಿನ ಯೇ ಮಂತ್ರಾಸ್ ತೇ ನಿಷ್ಫಲಾ ಮತಾಃ. ನೀವು ಕೃಷ್ಣನ ಬೋಧನೆಯನ್ನು ಸಂಪ್ರದಾಯದ ಮೂಲಕ ಸ್ವೀಕರಿಸದಿದ್ದರೆ, ಆಗ ನಿಷ್ಫಲಾ ಮತಾಃ, ನೀವು ಏನೇ ಕಲಿತ್ತಿದ್ದರು ಅದು ವ್ಯರ್ಥ. ಅದು ವ್ಯರ್ಥ. ಅದೇ ದೋಷ. ಎಷ್ಟೋ ಜನರು ಭಗವದ್ಗೀತೆಯನ್ನು ಅಧ್ಯಯನ ಮಾಡುತ್ತಿದ್ದಾರೆ, ಆದರೆ ಕೃಷ್ಣ ಎಂದರೇನು ಎಂದು ಅವರಿಗೆ ಅರ್ಥವಾಗುವುದಿಲ್ಲ. ಏಕೆಂದರೆ ಅವರು ಏವಂ ಪರಂಪರಾ ಪ್ರಾಪ್ತಮ್ (ಭ.ಗೀ 4.2) ಮುಖಾಂತರ ಸ್ವೀಕರಿಸಲಿಲ್ಲ. ಪರಂಪರಾ, ಪರಂಪರದ ಮೂಲಕ ಹೋಗದಿದ್ದರೆ… ಅದೇ ಉದಾಹರಣೆ. ವಿದ್ಯುತ್ ಸಾಕೆಟಿನ ಸಂಪರ್ಕವಿರುವ ಪ್ಲಗಿನ್ನಿಂದ ನೀವು ವಿದ್ಯುತ್ ಶಕ್ತಿ ಪಡೆಯದಿದ್ದರೆ, ನಿಮ್ಮ ಬಲ್ಬ ಮತ್ತು ತಂತಿಯ ಪ್ರಯೋಜನವೇನು? ಅದಕ್ಕೆ ಪ್ರಯೋಜನವಿಲ್ಲ.

ಆದ್ದರಿಂದ, ಕೃಷ್ಣನು ವಿಸ್ತರಿಸುತ್ತಿದ್ದಾನೆ, ಅದು ವೇದೇಷು ದುರ್ಲಬ. ನೀವು ಕೇವಲ ಶೈಕ್ಷಣಿಕ ಜ್ಞಾನವನ್ನು ಪಡೆದಿದ್ದರೆ, ಆಗ ಅದು ಸಾಧ್ಯವಾಗುವುದಿಲ್ಲ. ವೇದೇಷು ದುರ್ಲಭಂ ಅದುರ್ಲಭಂ ಆತ್ಮ-ಭಕ್ತೌ (ಬ್ರಹ್ಮ.ಸಂ 5.33) ಇದು ಬ್ರಹ್ಮ-ಸಂಹಿತದ ಹೇಳಿಕೆ.