KN/Prabhupada 0133 - ನನ್ನ ಆದೇಶವನ್ನು ಅನುಸರಿಸುವ ಒಬ್ಬ ವಿದ್ಯಾರ್ಥಿಯನ್ನು ನಾನು ಬಯಸುತ್ತೇನೆ



Arrival Lecture -- San Francisco, July 15, 1975

ನಾನು ಪ್ರಪಂಚದಾದ್ಯಂತ ಅದ್ಭುತ ಕಾರ್ಯಗಳನ್ನು ಮಾಡಿದ್ದೇನೆ ಎಂಬ ಕೀರ್ತಿಯನ್ನು ಜನರು ಕೆಲವೊಮ್ಮೆ, ನನಗೆ ಕೊಡುತ್ತಾರೆ. ಆದರೆ ನಾನು ಅದ್ಭುತವಾದ ಮನುಷ್ಯನೇ ಎಂದು ನನಗೆ ಗೊತ್ತಿಲ್ಲ. ಆದರೆ ನನಗೆ ಒಂದು ವಿಷಯ ಮಾತ್ರ ಗೊತ್ತು, ಕೃಷ್ಣ ಮಾತನಾಡಿದ್ದನ್ನು ನಾನು ಮಾತನಾಡುತ್ತಿದ್ದೇನೆ. ಅಷ್ಟೇ. ನಾನು ಯಾವುದೇ ಸೇರ್ಪಡೆ, ಬದಲಾವಣೆ ಮಾಡುತ್ತಿಲ್ಲ. ಆದ್ದರಿಂದ, ನಾನು ಭಗವದ್ಗೀತೆಯನ್ನು ಯಥಾರೂಪ ನೀಡುತ್ತಿದ್ದೇನೆ. ನಾನು ಸ್ಬವೀಕರಿಸಬಹುದಾದ ಗಣ್ಯತೆ ಎಂದರೆ, ನಾನು ಯಾವುದೇ ಅಸಂಬದ್ಧ ಸೇರ್ಪಡೆ ಅಥವಾ ಬದಲಾವಣೆಯನ್ನು ಮಾಡುವುದಿಲ್ಲ. ಮತ್ತು ಅದು ಯಶಸ್ವಿಯಾಗಿದೆ ಎಂದು ನಾನು ಪ್ರಾಯೇಣ ಗಮನಿಸುತ್ತಿದ್ದೇನೆ. ನಾನು ಈ ಅನೇಕ ಯುರೋಪಿಯನ್ನರು ಮತ್ತು ಅಮೆರಿಕನ್ನರಿಗೆ ಲಂಚ ನೀಡಿಲ್ಲ. ನಾನೊಬ್ಬ ಬಡ ಭಾರತೀಯ. ನಾನು ನಲವತ್ತು ರೂಪಾಯಿಗಳೊಂದಿಗೆ ಅಮೆರಿಕಕ್ಕೆ ಬಂದೆ, ಆದರೆ ಈಗ ನನ್ನ ಬಳಿ ನಲವತ್ತು ಕೋಟಿ ಇದೆ. ಇದರಲ್ಲಿ ಯಾವುದೇ ಮಾಯಮಾಟವಿಲ್ಲ. ಪಕಕ್ಕೆ: ನೀನು ಹಿಂದೆ ಹೋಗು. ನೀನು ನಿದ್ರಿಸುತ್ತಿರುವೆ. ಇದುವೇ ರಹಸ್ಯ. ನೀವು ಪ್ರಾಮಾಣಿಕವಾಗಿ ಗುರುಗಳಾಗಲು ಬಯಸಿದರೆ... ನೀವು ಮೋಸ ಮಾಡಲು ಬಯಸಿದರೆ, ಅದು ಬೇರೆ ವಿಷಯ. ತುಂಬಾ ಮೋಸಗಾರರು ಇದ್ದಾರೆ. ಜನರು ಕೂಡ ಮೋಸ ಹೋಗಬೇಕೆಂದು ಬಯಸುತ್ತಾರೆ. “ನೀವು ನನ್ನ ಶಿಷ್ಯರಾಗಲು ಬಯಸಿದರೆ, ನೀವು ನಾಲ್ಕು ವಿಷಯಗಳನ್ನು ತ್ಯಜಿಸಬೇಕಾಗುತ್ತದೆ: ಅನೈತಿಕ ಕಾಮಜೀವನ, ಮದ್ಯಪಾನ (ಧೂಮಪಾನ ಮತ್ತು ಚಹಾ ಕುಡಿಯುವುದನ್ನು ಸೇರಿಸಿ), ಮಾಂಸ ಸೇವನೆ, ಹಾಗು ಜೂಜಾಟ," ಎಂದು ನಾನು ಹೇಳುತ್ತಲೆ ಅವರು ನನ್ನನ್ನು ಟೀಕಿಸುತ್ತಾರೆ, "ಸ್ವಾಮೀಜೀ ತುಂಬ ಸಂಪ್ರದಾಯವಾದಿ" ಎಂದು. ಆದರೆ ನಾನು, "ನೀವು ಇಷ್ಟಪಡುವ ಯಾವುದೇ ಅಸಂಬದ್ಧವಾದ ಕಾರ್ಯವನ್ನು ನೀವು ಮಾಡಬಹುದು. ನೀವು ಈ ಮಂತ್ರವನ್ನು ಸ್ವೀಕರಿಸಿ ನನಗೆ $125 ನೀಡಿ," ಎಂದು ಹೇಳಿದರೆ ಆಗ ಅದು ಅವರಿಗೆ ಇಷ್ಟವಾಗುತ್ತದೆ. ಏಕೆಂದರೆ ಅಮೆರಿಕಾದಲ್ಲಿ $125 ಏನೂ ದೊಡ್ಡ ಮೊತ್ತವಲ್ಲ. ಯಾರೆ ಆಗಲಿ ತಕ್ಷಣ ಪಾವತಿಸುತ್ತಾರೆ. ನಾನು ಹಾಗೆ ಮೋಸ ಮಾಡಿದ್ದರೆ ಕೆಲವು ದಶಲಕ್ಷ ಡಾಲರ್ಗಳನ್ನು ಸಂಗ್ರಹಿಸುತ್ತಿದ್ದೆ. ಆದರೆ ನಾನು ಅದನ್ನು ಬಯಸುವುದಿಲ್ಲ. ನನ್ನ ಆದೇಶವನ್ನು ಅನುಸರಿಸುವ ಒಬ್ಬ ವಿದ್ಯಾರ್ಥಿಯನ್ನು ನಾನು ಬಯಸುತ್ತೇನೆ. ನನಗೆ ದಶಲಕ್ಷಾಂತರ ಬೇಡ. ಏಕಶ್ ಚಂದ್ರಸ್‌ ತಮೋ ಹಂತಿ ನಾ ಚ ತಾರ-ಸಹಸ್ರಸಃ. ಆಕಾಶದಲ್ಲಿ ಒಂದು ಚಂದ್ರನಿದ್ದರೆ, ಪ್ರಕಾಶಕ್ಕೆ ಅದು ಸಾಕು. ದಶಲಕ್ಷಾಂತರ ನಕ್ಷತ್ರಗಳ ಅಗತ್ಯವಿಲ್ಲ. ಕನಿಷ್ಠ ಒಬ್ಬ ಶಿಷ್ಯನಾದರೂ ಶುದ್ಧ ಭಕ್ತನಾಗಿ ಮಾರ್ಪಟ್ಟಿದ್ದಾನೆ ಎಂದು ನಾನು ನೋಡ ಬಯಸುತ್ತೇನೆ. ಖಂಡಿತ, ನಾನು ಅನೇಕ ಪ್ರಾಮಾಣಿಕ ಮತ್ತು ಶುದ್ಧ ಭಕ್ತರನ್ನು ಪಡೆದಿದ್ದೇನೆ. ಅದು ನನ್ನ ಅದೃಷ್ಟ. ಆದರೆ ಒಬ್ಬನೇ ಒಬ್ಬ ಸಿಕ್ಕಿದರೂ ಕೂಡ ತ್ರಪ್ತಿ ಪಡುತ್ತಿದೆ. ಕೋಟ್ಯಾಂತರ ನಕ್ಷತ್ರಗಳ ಅವಶ್ಯಕತೆ ಇಲ್ಲ.

ಆದ್ದರಿಂದ, ಪ್ರಕ್ರಿಯೆ ಇದೆ, ಮತ್ತು ಅದು ಬಹಳ ಸರಳವಾಗಿದೆ, ಮತ್ತು ಭಗವದ್ಗೀತೆಯಲ್ಲಿನ ಎಲ್ಲಾ ಆದೇಶಗಳನ್ನು ನಾವು ಅರ್ಥಮಾಡಿಕೊಂಡರೆ, ಮತ್ತು ನಾವು ಶ್ರೀಮದ್‌ ಭಾಗವತಂ ಅಧ್ಯಯನ ಮಾಡಿದರೆ... ಅಥವಾ ನೀವು ಅಧ್ಯಯನ ಮಾಡದಿದ್ದರೂ ಸಹ, ಚೈತನ್ಯ ಮಹಾಪ್ರಭು ತುಂಬಾ ಸರಳವಾದ ವಿಧಾನ ನೀಡಿದ್ದಾರೆ. ಅದನ್ನು ಶಾಸ್ತ್ರದಲ್ಲೂ ಸಹ ಶಿಫಾರಸು ಮಾಡಲಾಗಿದೆ:

ಹರೇರ್‌ ನಾಮ ಹರೇರ್‌ ನಾಮ ಹರೇರ್‌ ನಾಮೈವ ಕೇವಲಂ
ಕಲೌ ನಾಸ್ತಿ ಏವ ನಾಸ್ತಿ ಏವ ನಾಸ್ತಿ ಏವ ಗತಿರ್‌ ಅನ್ಯಥಾ
(ಚೈ.ಚ ಆದಿ 17.21)

ನಾವು ವೈದಿಕ ಸಾಹಿತ್ಯವನ್ನು ಅಧ್ಯಯನ ಮಾಡಲು ಬಯಸಿದರೆ, ಅದು ತುಂಬಾ ಒಳ್ಳೆಯದು. ಅದು ದಿಟ್ಟ ಹೆಜ್ಜೆ. ನಮ್ಮಲ್ಲಿ ಈಗಾಗಲೆ ೫೦ ಪುಸ್ತಕಗಳಿವೆ. ನೀನು ಅಧ್ಯಯನ ಮಾಡು. ತತ್ವಶಾಸ್ತ್ರ, ಧರ್ಮಶಾಸ್ತ್ರ, ಹಾಗು ಸಮಾಜ ಶಾಸ್ತ್ರದಲ್ಲಿ ಪ್ರಖ್ಯಾತ ವಿದ್ವಾಂಸನಾಗು. ಶ್ರೀಮದ್‌ ಭಾಗವತದಲ್ಲಿ ಎಲ್ಲವೂ ಇದೆ, ರಾಜಕೀಯ ಕೂಡ. ಆಗ ನೀನು ಪೂರ್ಣ ಜ್ಞಾನವುಳ್ಳ ಪರಿಪೂರ್ಣ ವ್ಯಕ್ತಿಯಾಗುತ್ತಿಯ. ನಿಮಗೆ ಸಮಯವಿಲ್ಲ, ನೀವು ಅಷ್ಟೊಂದು ಉತ್ತಮ ವಿದ್ವಾಂಸರಲ್ಲ, ಮತ್ತು ಈ ಎಲ್ಲ ಪುಸ್ತಕಗಳನ್ನು ಓದಲಾಗುವುದಿಲ್ಲ ಎಂದು ನೀವು ಭಾವಿಸಿದರೆ, ಕೇವಲ ಹರೇ ಕೃಷ್ಣ ಎಂದು ಜಪಿಸಿ. ಈ ಎರಡನ್ನೂ, ಅಥವ ಎರಡರಲ್ಲಿ ಒಂದನ್ನಾದರೂ ಅನುಸರಿಸಿದರೆ, ನೀವು ಪರಿಪೂರ್ಣರಾಗುವಿರಿ. ನೀವು ಪುಸ್ತಕಗಳನ್ನು ಓದಲಾಗದಿದ್ದರೆ, ಹರೇ ಕೃಷ್ಣ ಜಪಿಸಿ. ಪರಿಪೂರ್ಣರಾಗುವಿರಿ. ಆದರೆ ನೀವು ಪುಸ್ತಕಗಳ ಅಧ್ಯಯನ ಮಾಡುತ್ತ ಹರೇ ಕೃಷ್ಣ ಜಪಿಸಿದರೆ ಅದು ಇನ್ನು ಉತ್ತಮ. ಆದರೆ ಏನೂ ನಷ್ಠವಿಲ್ಲ. ನೀವು ಪುಸ್ತಕಗಳನ್ನು ಓದಲಾಗದಿದ್ದರೂ ಹರೇ ಕೃಷ್ಣ ಮಹಾಮಂತ್ರವನ್ನು ಪಠಿಸಿದರೆ ಸಾಕು, ಯಾವುದೇ ನಷ್ಟವಿಲ್ಲ. ಯಾವುದೇ ನಷ್ಟವಿಲ್ಲ. ಆ ಜಪ ಸಾಕು. ಆದರೆ ನೀವು ಓದಿದರೆ ಎದುರಾಳಿ ಪಕ್ಷಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ. ಇದು ನಿಮ್ಮ ಬೋಧನಾ ಕಾರ್ಯದಲ್ಲಿ ಉಪಯೋಗವಾಗುತ್ತದೆ. ಏಕೆಂದರೆ ಬೋಧನಾ ಕಾರ್ಯದಲ್ಲಿ ನೀವು ಅನೇಕ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ, ನೀವು ಅನೇಕ ವಿರೋಧಿಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ, ನೀವು ಪುಸ್ತಕಗಳನ್ನು, ವೈದಿಕ ಸಾಹಿತ್ಯಗಳನ್ನು, ಓದುವ ಮೂಲಕ ನಿಮ್ಮ ನೆಲೆ ದೃಡವಾದರೆ, ನೀವು ಕೃಷ್ಣನಿಗೆ ತುಂಬಾ ಪ್ರಿಯರಾಗುತ್ತೀರಿ. ಕೃಷ್ಣ ಹೇಳುತ್ತಾನೆ:

ನ ಚ ತಸ್ಮಾತ್‌ ಮನುಷ್ಯೇಷು
ಕಶ್ಚಿತ್‌ ಮೇ ಪ್ರಿಯ-ಕೃತ್ತಮಃ
(ಭ.ಗೀ 18.69)
ಯ ಇಮಾಂ ಪರಮಂ ಗುಹ್ಯಂ
ಮದ್-ಭಕ್ತೇಷು ಅಭಿಧಾಸ್ಯತಿ
(ಭ.ಗೀ 18.68)

ಈ ಗೌಪ್ಯ ಜ್ಞಾನವನ್ನು ಬೋಧಿಸುವ ಯಾರಾದರೂ, ಸರ್ವ-ಧರ್ಮಾನ್ ಪರಿತ್ಯಜ್ಯ, ಮಾಮ್ ಏಕಂ ಶರಣಂ ವ್ರಜ (ಭ.ಗೀ 18.66), ಈ ಸಂದೇಶವನ್ನು ಜಗತ್ತಿಗೆ ಬೋಧಿಸಲು ಅವನು ಯೋಗ್ಯನಾಗಿದ್ದರೆ, ತಕ್ಷಣ ಅವನು ಸರ್ವೋಚ್ಚ ಭಗವಂತನಿಂದ ಗುರುತಿಸಲ್ಪಡುತ್ತಾನೆ.