KN/Prabhupada 0151 - ನಾವು ಆಚಾರ್ಯರಿಂದ ಕಲಿಯಬೇಕು



Lecture on SB 7.6.1 -- Madras, January 2, 1976

ಹಾಗಾಗಿ, ನಾವು ವಿವಿಧ ಯೋಜನೆಗಳನ್ನು ರೂಪಿಸುತ್ತಿದ್ದೇವೆ ಆದರೆ ಅವು ಯಶಸ್ವಿಯಾಗುವುದಿಲ್ಲ. ಕಳೆದ ರಾತ್ರಿ ನಾನು ವಿವರಿಸಿದೆ, ನಾವು ಸ್ವತಂತ್ರವಾಗಿ ಯೋಚಿಸುತ್ತಿದ್ದೇವೆ ಮತ್ತು ನಾವು ಸಂತೋಷವಾಗಿರಲು ಸ್ವತಂತ್ರವಾಗಿ ಅನೇಕ ವಿಷಯಗಳನ್ನು ಯೋಜಿಸುತ್ತಿದ್ದೇವೆ. ಇದು ಸಾಧ್ಯವಿಲ್ಲ. ಅಸಾಧ್ಯ. ಅದು ಮಾಯೆಯ ಭ್ರಮೆಯ ಪ್ರಭಾವ. ದೈವೀ ಹಿ ಏಷಾ ಗುಣ-ಮಯೀ ಮಮ ಮಾಯಾ ದುರತ್ಯಯಾ. ನೀವು ಮೀರಲು ಸಾಧ್ಯವಿಲ್ಲ. ಹಾಗಾದರೆ ಅಂತಿಮ ಪರಿಹಾರವೇನು? ಮಾಮ್ ಏವ ಯೇ ಪ್ರಪದ್ಯಂತೇ ಮಾಯಾಂ ಏತಾಂ ತರಂತಿ ತೇ (ಭ.ಗೀ 7.14). ನಾವು ಕೃಷ್ಣನಿಗೆ ಶರಣಾದರೆ, ನಾವು ನಮ್ಮ ಮೂಲ ಸ್ಥಾನವನ್ನು ಪುನರುಜ್ಜೀವನಗೊಳಿಸುತ್ತೇವೆ. ಅದೇನೆಂದರೆ... ಕೃಷ್ಣ ಪ್ರಜ್ಞೆ ಎಂದರೆ ಎಷ್ಟೋ ವಿಷಯಗಳನ್ನು ಪ್ರಜ್ಞೆಯಲ್ಲಿ ಇಟ್ಟುಕೊಳ್ಳುವ ಬದಲು... ಅವೆಲ್ಲವೂ ಕಲುಷಿತ ಪ್ರಜ್ಞೆ. ನಿಜ... ನಮಲ್ಲಿ ಪ್ರಜ್ಞೆ ಇದೆ, ಅದು ಸತ್ಯ, ಆದರೆ ನಮ್ಮ ಪ್ರಜ್ಞೆ ಕಲುಷಿತವಾಗಿದೆ. ಆದ್ದರಿಂದ, ನಾವು ಪ್ರಜ್ಞೆಯನ್ನು ಶುದ್ಧೀಕರಿಸಬೇಕು. ಪ್ರಜ್ಞೆಯನ್ನು ಶುದ್ಧೀಕರಿಸುವುದೇ ಭಕ್ತಿ. ಭಕ್ತಿ, ನಾರದ ಪಂಚರಾತ್ರದಲ್ಲಿ ನೀಡಲಾದ ವ್ಯಾಖ್ಯಾನ... ರೂಪ ಗೋಸ್ವಾಮಿ ಹೇಳುತ್ತಾರೆ,

ಅನ್ಯಾಭಿಲಾಷಿತಾ-ಶೂನ್ಯಂ
ಜ್ಞಾನ-ಕರ್ಮಾದಿ-ಅನಾವೃತಮ್:
ಆನುಕೂಲ್ಯೇನ ಕೃಷ್ಣಾನು
ಶಿಲಾನಂ ಭಕ್ತಿರ್ ಉತ್ತಮ
(ಭ.ರ.ಸಿಂ. 1.1.11)

ಇದು ಬೇರೆ ಯಾವುದೇ ಉದ್ದೇಶವಿಲ್ಲದ ಉತ್ತಮ ದರ್ಜೆಯ ಭಕ್ತಿಯಾಗಿದೆ. ಅನ್ಯಭಿಲಾ... ಏಕೆಂದರೆ ಇಲ್ಲಿ ಭೌತಿಕ ಜಗತ್ತಿನಲ್ಲಿ, ಭೌತಿಕ ಪ್ರಕೃತಿಯ ನಿಯಂತ್ರಣದಲ್ಲಿ ಪ್ರಕೃತೇಃ ಕ್ರಿಯಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ, ಅಹಂಕಾರ-ವಿಮೂಢಾತ್ಮ ಕರ್ತಾ... (ಭ.ಗೀ 3.27). ನಾವು ಪ್ರಕೃತಿಯ, ಭೌತಿಕ ಪ್ರಕೃತಿಯ ಸಂಪೂರ್ಣ ನಿಯಂತ್ರಣದಲ್ಲಿದ್ದೇವೆ. ಆದರೆ ನಾವು ಮೂರ್ಖರಾಗಿರುವುದರಿಂದ, ನಾವು ನಮ್ಮ ಸ್ಥಾನವನ್ನು ಮರೆತಿದ್ದೇವೆ. ಅಹಂಕಾರ, ಸುಳ್ಳು ಅಹಂಕಾರ. ಇದು ಸುಳ್ಳು ಅಹಂಕಾರ: "ನಾನು ಭಾರತೀಯ," "ನಾನು ಅಮೇರಿಕನ್," "ನಾನು ಬ್ರಾಹ್ಮಣ," "ನಾನು ಕ್ಷತ್ರಿಯ." ಇದು ಸುಳ್ಳು ಅಹಂಕಾರ. ಆದ್ದರಿಂದ, ನಾರದ ಪಂಚರಾತ್ರವು ಸರ್ವೋಪಧಿ-ವಿನಿರ್ಮುಕ್ತಂ (ಚೈ.ಚ ಮಧ್ಯ 19.170) ಎಂದು ಹೇಳುತ್ತದೆ. ಈ ಎಲ್ಲಾ ಪದನಾಮಗಳಿಂದ ಮುಕ್ತನಾಗಿ, ಕಲುಷಿತಗೊಳ್ಳದೆ ಇರಬೇಕು, "ನಾನು ಭಾರತೀಯ," "ನಾನು ಅಮೇರಿಕನ್," ನಾನು ಇದು", "ನಾನು ಅದು." "ನಾನು..." ಸರ್ವೋಪಾಧಿ ವಿನಿರ್ಮುಕ್ತಂ ತತ್-ಪರತ್ವೇನ ನಿರ್ಮಲಂ. ಅವನು ಶುದ್ಧೀಕರಿಸಲ್ಪಟ್ಟಾಗ, ಯಾವುದೇ ಪದನಾಮವಿಲ್ಲದೆ, ನಿರ್ಮಲಮ್ ಆಗುತ್ತಾನೆ - "ನಾನು ಕೃಷ್ಣನ ಭಾಗಾಂಶ." ಅಹಂ ಬ್ರಹ್ಮಾಸ್ಮಿ.

ಇದೇ ಅಹಂ ಬ್ರಹ್ಮಾಸ್ಮಿ. ಕೃಷ್ಣನು ಪರಬ್ರಹ್ಮ. ಅವನನ್ನು ಶ್ರೀಮದ್‌ ಭಗವದ್ಗೀತೆಯಲ್ಲಿ ವರ್ಣಿಸಲಾಗಿದೆ. ಅರ್ಜುನ... ಪರಂ ಬ್ರಹ್ಮ ಪರಂ ಧಾಮ ಪವಿತ್ರಂ ಪರಮಂ ಭವಾನ್ ಪುರುಷಂ ಶಾಶ್ವತಂ ಆದ್ಯಂ (ಭ.ಗೀ 10.12). ‌ ಅರ್ಜುನನು ಗುರುತಿಸಿದನು, ಮತ್ತು ಹೇಳಿದನು, "ನೀನು ಎಲ್ಲಾ ಮಹಾಜನರಿಂದ ಗುರುತಿಸಲ್ಪಟ್ಟಿರುವವನು." ಪ್ರಹ್ಲಾದ ಮಹಾರಾಜರು ಮಹಾಜನರಲ್ಲಿ ಒಬ್ಬರು. ಮಹಾಜನರನ್ನು ನಾನು ವರ್ಣಿಸಿದ್ದೇನೆ. ಬ್ರಹ್ಮನು ಮಹಾಜನ, ಭಗವಂತ ಶಿವನು ಮಹಾಜನ, ಮತ್ತು ಕಪಿಲನು ಮಹಾಜನ, ಕುಮಾರ, ನಾಲ್ಕು ಕುಮಾರರು, ಅವರೂ ಮಹಾಜನರು ಮತ್ತು ಮನು ಕೂಡ ಒಬ್ಮ ಮಹಾಜನ. ಹಾಗೆಯೇ, ಪ್ರಹ್ಲಾದ ಮಹಾರಾಜನು ಸಹ ಮಹಾಜನ. ಜನಕ ಮಹಾರಾಜನೂ ಸಹ ಒಬ್ಬ ಮಹಾಜನ. ಹನ್ನೆರಡು ಮಹಾಜನರು. ಆದ್ದರಿಂದ ಅರ್ಜುನನು ದೃಢಪಡಿಸಿದನು "ನೀನೇ ಹೇಳುತ್ತಿರುವೆ, ನೀನೇ ಪರಮ ಪ್ರಭು ಎಂದು”, ಮತ್ತಃ ಪರತರಂ ನಾನ್ಯತ್ (ಭ.ಗೀ 7.7), "ಮತ್ತು ಭಗವದ್ಗೀತೆಯ ಚರ್ಚೆಯಿಂದ, ನಾನೂ ಸಹ ನಿನ್ನನ್ನು ಪರಬ್ರಹ್ಮನೆಂದು ಸ್ವೀಕರಿಸುತ್ತೇನೆ. ಅಷ್ಟೇ ಅಲ್ಲ, ಎಲ್ಲಾ ಮಹಾಜನರು, ಅವರೂ ಸಹ ನಿನ್ನನ್ನು ಸ್ವೀಕರಿಸುತ್ತಾರೆ. ಇತ್ತೀಚಿಗೆ ನಮ್ಮ ಕಾಲದಲ್ಲಿ ರಾಮಾನುಜಾಚಾರ್ಯರು, ಮಧ್ವಾಚಾರ್ಯರು, ಎಲ್ಲ ಆಚಾರ್ಯರುಗಳೂ ಕೂಡ ಕೃಷ್ಣನನ್ನು ಒಪ್ಪಿಕೊಳ್ಳುತ್ತಾರೆ. ಶಂಕರಾಚಾರ್ಯರೂ ಸಹ, ಅವರು ಕೃಷ್ಣನನ್ನು ಸ್ವೀಕರಿಸುತ್ತಾರೆ. ಸ ಭಗವಾನ್ ಸ್ವಯಂ ಕೃಷ್ಣಃ. ಆದ್ದರಿಂದ, ಕೃಷ್ಣನನ್ನು ಎಲ್ಲಾ ಆಚಾರ್ಯರು ದೇವೋತ್ತಮ ಪರಮ ಪುರುಷ ಎಂದು ಒಪ್ಪಿಕೊಳ್ಳುತ್ತಾರೆ.

ಆದ್ದರಿಂದ, ನಾವು ಆಚಾರ್ಯರಿಂದ ಕಲಿಯಬೇಕು, ಯಾವುದೇ ಸಾಮಾನ್ಯ ವ್ಯಕ್ತಿ ಅಥವಾ ಯಾವುದೇ ಸ್ವಯಂ-ನಿರ್ಮಿತ ಆಚಾರ್ಯರಿಂದ ಅಲ್ಲ. ಇಲ್ಲ. ಅದು ಸರಿಯಲ್ಲ. ನಮ್ಮಂತೆಯೇ... ಕೆಲವೊಮ್ಮೆ ನ್ಯಾಯಾಲಯದಲ್ಲಿ, ನಾವು ಇತರ ನ್ಯಾಯಾಲಯದಿಂದ ಕೆಲವು ತೀರ್ಪುಗಳನ್ನು ಉಲ್ಲೇಕಿಸುತ್ತೇವೆ ಮತ್ತು ಅದು ಅಧಿಕಾರಯುತವಾಗಿರುವುದರಿಂದ ಅದನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗುತ್ತದೆ. ನಾವು ತೀರ್ಪನ್ನು ತಯಾರಿಸಲು ಸಾಧ್ಯವಿಲ್ಲ. ಅಂತೆಯೇ, ಆಚಾರ್ಯೋಪಾಸನಂ, ಭಗವದ್ಗೀತೆಯಲ್ಲಿ ಇದನ್ನು ಪ್ರಧಾನವಾಗಿ ಹೇಳಲಾಗಿದೆ. ನಾವು ಆಚಾರ್ಯರ ಬಳಿಗೆ ಹೋಗಬೇಕು. ಆಚಾರ್ಯವಾನ್ ಪುರುಷೋ ವೇದ: "ಗುರು ಪರಂಪರೆಯಲ್ಲಿ ಆಚಾರ್ಯರನ್ನು ಸ್ವೀಕರಿಸಿದವನು ವಿಷಯಗಳನ್ನು ತಿಳಿದಿದ್ದಾನೆ." ಆದ್ದರಿಂದ, ಎಲ್ಲಾ ಆಚಾರ್ಯರು, ಅವರು ದೇವೋತ್ತಮ ಪರಮಪುರುಷನಾದ ಕೃಷ್ಣನನ್ನು ಸ್ವೀಕರಿಸುತ್ತಾರೆ. ನಾರದರು, ಅವರು ವ್ಯಾಸದೇವರನು ಒಪ್ಪಿಕೊಳ್ಳುತ್ತಾರೆ, ಮತ್ತು ಯಾರು ವೈಯಕ್ತಿಕವಾಗಿ ಕೃಷ್ಣನಿಂದ ಭಗವದ್ಗೀತೆಯನ್ನು ಕೇಳಿದನೋ ಆ ಅರ್ಜುನನೂ ಸಹ ಒಪ್ಪಿಕೊಳ್ಳುತ್ತಾನೆ. ಮತ್ತು ಭಗವಾನ್ ಬ್ರಹ್ಮ. ನಿನ್ನೆ ಯಾರೋ "ದ್ವಾಪರಯುಗದ ಪೂರ್ವ ಕೃಷ್ಣನ ಹೆಸರು ಇತ್ತೇ?", ಎಂದು ಪ್ರಶ್ನಿಸಿದರು. ಇತ್ತು. ಶಾಸ್ತ್ರಗಳಲ್ಲಿ ಕೃಷ್ಣನಿದ್ದಾನೆ. ವೇದಗಳಲ್ಲಿ, ಅಥರ್ವ ವೇದ ಮತ್ತು ಇತರವುಗಳಲ್ಲಿ ಕೃಷ್ಣನ ಹೆಸರಿದೆ. ಮತ್ತು ಭಗವಾನ್ ಬ್ರಹ್ಮ ವಿರಚಿತ ಬ್ರಹ್ಮ-ಸಂಹಿತದಲ್ಲಿ ಅದನ್ನು ಸ್ಪಷ್ಟವಾಗಿ ವಿವರಿಸಲಾಗಿದೆ, ಈಶ್ವರಃ ಪರಮಃ ಕೃಷ್ಣಃ ಸತ್-ಚಿತ್-ಆನಂದ-ವಿಗ್ರಹಃ (ಬ್ರಹ್ಮ.ಸಂ. 5.1), ಅನಾದಿರ್ ಆದಿಃ. ಅನಾದಿರ್ ಆದಿರ್ ಗೋವಿಂದಃ ಸರ್ವ-ಕಾರಣ-ಕಾರಣಮ್ (ಬ್ರಹ್ಮ.ಸಂ. 5.1). ಮತ್ತು ಕೃಷ್ಣನು ಹೇಳುತ್ತಾನೆ, ಮತ್ತಃ ಪರತರಂ ನಾನ್ಯತ್ ಕಿಂಚಿದ್ ಅಸ್ತಿ ಧನಂಜಯ (ಭ.ಗೀ 7.7). ಅಹಂ ಸರ್ವಸ್ಯ ಪ್ರಭವೋ (ಭ.ಗೀ 10.8). ಸರ್ವಸ್ಯ ಎಂದರೆ ಎಲ್ಲಾ ದೇವತೆಗಳು, ಎಲ್ಲಾ ಜೀವಿಗಳು, ಎಲ್ಲವನ್ನೂ ಒಳಗೊಂಡಂತೆ. ಮತ್ತು ವೇದಾಂತವು ಹೇಳುತ್ತದೆ, ಜನ್ಮಾದಿ ಅಸ್ಯ ಯತಃ (ಶ್ರೀ.ಭಾ 1.1.1). ಆದ್ದರಿಂದ, ಭಗವಂತ ಬ್ರಹ್ಮ ಹೇಳುತ್ತಾನೆ, "ಕೃಷ್ಣನು ಪರಿಪೂರ್ಣ ಪರಮ ಪುರುಷ, ಈಶ್ವರಃ ಪರಮಂ." ಬ್ರಹ್ಮನು ವೈದಿಕ ಜ್ಞಾನದ ವಿತರಕರಾಗಿದ್ದಾನೆ, ಮತ್ತು ಕೃಷ್ಣನೂ ಸಹ ಹೇಳುತ್ತಾನೆ ವೇದೈಶ್ಚ ಸರ್ವೈರ್ ಅಹಮ್ ಏವ ವೇದ್ಯಮ್ (ಭ.ಗೀ 15.15). ಇದು ಅಂತಿಮ ಗುರಿಯಾಗಿದೆ.