KN/Prabhupada 0153 - ಸಾಹಿತ್ಯಿಕ ಕೊಡುಗೆಯಿಂದ, ಒಬ್ಬರ ಬುದ್ಧಿವಂತಿಕೆಯನ್ನು ಪರೀಕ್ಷಿಸಲಾಗುತ್ತದೆ



Interview with Newsweek -- July 14, 1976, New York

ಸಂದರ್ಶಕಿ: ನೀವು ಪ್ರಸ್ತಾಪಿಸಿದ ಮೂರು ಕಾರ್ಯಗಳು - ತಿನ್ನುವುದು, ಮಲಗುವುದು, ಮತ್ತು ಲೈಂಗಿಕತೆ - ಇದರಲ್ಲಿ ಪ್ರತಿಯೊಂದನ್ನು ವಿವರಿಸುತ್ತೀರಾ? ಮತ್ತು ನಿರ್ದಿಷ್ಟವಾಗಿ ಈ ಮಾರ್ಗದಲ್ಲಿ ಆಧ್ಯಾತ್ಮಿಕ ಜ್ಞಾನೋದಯವನ್ನು ಬಯಸುವ ಜನರಿಗೆ ಅವರ ಜೀವನದಲ್ಲಿ ಸಹಾಯ ಮಾಡಲು ನೀವು ಯಾವ ನಿಯಮಗಳು ಅಥವಾ ಸುಳಿವುಗಳನ್ನು ನೀಡುತ್ತೀರಿ ಎಂದು ನನಗೆ ತಿಳಿಸಿ.

ಪ್ರಭುಪಾದ: ಹೌದು. ಹೌದು, ಅದು ನಮ್ಮ ಪುಸ್ತಕಗಳು. ಅದು ನಮ್ಮ ಪುಸ್ತಕಗಳು. ಅರ್ಥಮಾಡಿಕೊಳ್ಳಲು ನಮಲ್ಲಿ ಸಾಕಷ್ಟು ವಿಷಯವಿದೆ. ಇದು ನಿಮಗೆ ಒಂದು ನಿಮಿಷದಲ್ಲಿ ಅರ್ಥವಾಗುವ ವಿಷಯವಲ್ಲ.

ಸಂದರ್ಶಕಿ: ನೀವು ತುಂಬಾ ಕಡಿಮೆ ನಿದ್ರೆ ಮಾಡುತ್ತೀರಿ ಎಂದು ನನಗೆ ತಿಳಿಯಬಂತು. ನೀವು ರಾತ್ರಿಯಲ್ಲಿ ಮೂರರಿಂದ ನಾಲ್ಕು ಗಂಟೆಗಳ ಕಾಲ ಮಲಗುತ್ತೀರಿ. ಆಧ್ಯಾತ್ಮಿಕ ಸಾಕ್ಷಾತ್ಕಾರಗೊಂಡ ಯಾವುದೇ ವ್ಯಕ್ತಿಯೂ ಇದನ್ನು ಅರಿತುಕೊಳ್ಳುತ್ತಾನೆ ಎಂದು ನೀವು ಭಾವಿಸುತ್ತೀರಾ?

ಪ್ರಭುಪಾದ: ಹೌದು, ನಾವು ಗೋಸ್ವಾಮಿಗಳ ನಡವಳಿಕೆಯಿಂದ ನೋಡುತ್ತೇವೆ. ಅವರು ಯಾವುದೇ ಭೌತಿಕ ಅಗತ್ಯಗಳನ್ನು ಹೊಂದಿರಲಿಲ್ಲ. ಈ ತಿನ್ನುವುದು, ನಿದ್ರೆ, ಮೈಥುನ, ಮತ್ತು ರಕ್ಷಣೆ, ಅವರಿಗೆ ಇವುಗಳ ಜೊತೆ ಸಂಬಂಧವಿರಲಿಲ್ಲ. ಅವರು ಕೇವಲ ಕೃಷ್ಣನ ವ್ಯವಹಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಸಂದರ್ಶಕಿ: ಯಾವುದರಲ್ಲಿ ತೊಡಗಿದ್ದಾರೆ...?

ರಾಮೇಶ್ವರ: ಕೃಷ್ಣನ ವ್ಯವಹಾರ ಅಥವಾ ದೇವರ ಸೇವೆ.

ಬಲಿ-ಮರ್ದನ: ಅವರು ಹಿಂದಿನ ಆಧ್ಯಾತ್ಮಿಕ ಗುರುಗಳ ಉದಾಹರಣೆಯಂತೆ ನಡೆದು ತೋರಿಸುತ್ತಿದ್ದಾರೆ.

ಸಂದರ್ಶಕಿ: ಸರಿ, ನನಗೆ ಏನು ಕುತೂಹಲವೆಂದರೆ ಅವರು ಏಕೆ... ಮೂರ್ನಾಲ್ಕು ಗಂಟೆಗಳ ಕಾಲ ಮಲಗಲು ಅಗತ್ಯವಾದ ಅವಧಿ ಎಂದು ಅವರು ಕಂಡುಕೊಂಡಿದ್ದಾರೆಯೇ?

ಬಲಿ-ಮರ್ದನ: ಅಂದರೆ, ಏಕೆ ನೀವು ಮೂರರಿಂದ ನಾಲ್ಕು ಗಂಟೆಗಳು ಮಾತ್ರ ಮಲಗುವುದು ಎಂದು ಅವಳು ಕೇಳುತ್ತಿದ್ದಾಳೆ. ನೀವು ಆ ಮಟ್ಟವನ್ನು ಹೇಗೆ ತಲುಪಿದ್ದೀರಿ?

ಪ್ರಭುಪಾದ: ಅದು ಕೃತಕವಾಗಿ ಅಲ್ಲ. ನೀವು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿದರೆ, ಭೌತಿಕ ಚಟುವಟಿಕೆಗಳಿಂದ ಮುಕ್ತರಾಗುತ್ತೀರಿ. ಅದುವೇ ಪರೀಕ್ಷೆ.

ಸಂದರ್ಶಕಿ: ಆದ್ದರಿಂದ ನೀವು ಅಲ್ಲಿಗೆ ತಲುಪಿದ್ದೀರಿ...

ಪ್ರಭುಪಾದ: ಇಲ್ಲ, ನಾನು ನನ್ನ ಬಗ್ಗೆ ಮಾತನಾಡುತ್ತಿಲ್ಲ, ಆದರೆ ಅದುವೇ ಪರೀಕ್ಷೆ. ಭಕ್ತಿಃ ಪರೇಶಾನುಭಾವೋ ವಿರಕ್ತಿರ್ ಅನ್ಯತ್ರ ಸ್ಯಾತ್ (ಶ್ರೀ.ಭಾ 11.2.42). ನೀವು ಭಕ್ತಿಯಲ್ಲಿ, ಆಧ್ಯಾತ್ಮಿಕ ಜೀವನದಲ್ಲಿ ಮುನ್ನಡೆದರೆ, ನೀವು ಭೌತಿಕ ಜೀವನದಲ್ಲಿ ನಿರಾಸಕ್ತಿ ಹೊಂದುತ್ತೀರಿ.

ಸಂದರ್ಶಕಿ: ಪ್ರಪಂಚದ ವಿವಿಧ ಜನರ ನಡುವೆ ವ್ಯತ್ಯಾಸವಿದೆ ಎಂದು ನೀವು ಭಾವಿಸುತ್ತೀರಾ? ಬೇರೆ ರೀತಿಯಲ್ಲಿ ಹೇಳುವುದಾದರೆ, ಯುರೋಪಿಯನ್ನರಿಗೆ ಹೋಲಿಸಿದರೆ ಭಾರತೀಯರು ಕೃಷ್ಣ ಪ್ರಜ್ಞೆಗೆ ಹೆಚ್ಚು ಒಲವನ್ನು ಹೊಂದಿದ್ದಾರೆ ಅಥವಾ ಹೆಚ್ಚು ಬದ್ದರಾಗಿರುತ್ತಾರೆ ಎಂದು ನೀವು ಭಾವಿಸುತ್ತೀರಾ?

ಪ್ರಭುಪಾದ: ಇಲ್ಲ, ಯಾವುದೇ ಬುದ್ಧಿವಂತ ವ್ಯಕ್ತಿ ಕೃಷ್ಣ ಪ್ರಜ್ಞೆಯುಳವನಾಗಬಹುದು. ನಾನು ಈಗಾಗಲೇ ವಿವರಿಸಿದ್ದೇನೆ, ಒಬ್ಬನು ಬಹಳ ಬುದ್ಧಿವಂತನಲ್ಲದಿದ್ದರೆ ಕೃಷ್ಣ ಪ್ರಜ್ಞೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ಆದ್ದರಿಂದ, ಇದಿರುವುದು ಎಲ್ಲರಿಗೋಸ್ಕರ. ಆದರೆ ಬುದ್ಧಿವಂತಿಕೆಯ ವಿವಿಧ ಶ್ರೇಣಿಗಳಿವೆ. ಯುರೋಪ್, ಅಮೆರಿಕದಲ್ಲಿ ಅವರು ಬುದ್ಧಿವಂತರು, ಆದರೆ ಅವರ ಬುದ್ಧಿವಂತಿಕೆಯನ್ನು ಭೌತಿಕ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುತ್ತದೆ. ಆದರೆ ಭಾರತದಲ್ಲಿ ಅವರ ಬುದ್ಧಿವಂತಿಕೆಯನ್ನು ಆಧ್ಯಾತ್ಮಿಕ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಆದ್ದರಿಂದ, ನೀವು ಉನ್ನತ ಆಧ್ಯಾತ್ಮಿಕ ಗುಣಮಟ್ಟದ ಜೀವನ, ಪುಸ್ತಕಗಳು, ಮತ್ತು ಸಾಹಿತ್ಯನ್ನು ಕಾಣುತ್ತೀರಿ. ವ್ಯಾಸದೇವರಂತೆ. ವ್ಯಾಸದೇವರೂ ಕೂಡ ಗೃಹಸ್ಥ ಜೀವನದಲ್ಲಿದ್ದರು, ಕಾಡಿನಲ್ಲಿ ವಾಸಿಸುತ್ತಿದ್ದರೂ ಸಹ ಸಾಹಿತ್ಯಕ್ಕೆ ಅವರ ಕೊಡುಗೆಯನ್ನು ನೋಡಿ. ಯಾರೂ ಕನಸು ಕೂಡ ಕಾಣಲು ಸಾಧ್ಯವಿಲ್ಲ. ಆದ್ದರಿಂದ, ಸಾಹಿತ್ಯಿಕ ಕೊಡುಗೆಯಿಂದ ಒಬ್ಬರ ಬುದ್ಧಿವಂತಿಕೆಯನ್ನು ಪರೀಕ್ಷಿಸಲಾಗುತ್ತದೆ. ಭೌತಿಕ ಪ್ರಪಂಚದ ಎಲ್ಲಾ ಮಹಾನ್ ಪುರುಷರು, ವಿಜ್ಞಾನಿಗಳು, ತತ್ವಜ್ಞಾನಿಗಳು, ತಂತ್ರಜ್ಞರು ಸಹ, ಅವರು ತಮ್ಮ ಸಾಹಿತ್ಯ ಕೃತಿಗಳ ಮೂಲಕ ಗುರುತಿಸಲ್ಪಡುತ್ತಾರೆ, ಅವರ ಕೊಡುಗೆಯಿಂದ, ಅವರ ದೈತ್ಯಾಕಾರದ ದೇಹದಿಂದಲ್ಲ.