KN/Prabhupada 0155 - ಪ್ರತಿಯೋಬ್ಬರೂ ಭಗವಂತನಾಗಲು ಪ್ರಯತ್ನಿಸುತ್ತಿದ್ದಾರೆ



Lecture on SB 7.6.5 -- Toronto, June 21, 1976

ಈಗ ನಾವು ಭಗವದ್ಗೀತೆಯಿಂದ ಮೂರು ಪದಗಳನ್ನು ಕಂಡುಕೊಂಡಿದ್ದೇವೆ. ಸನಾತನಃ, ಶಾಶ್ವತ, ಅಲ್ಲಿ ಬಳಸಲಾಗಿದೆ. ಮೊದಲನೆಯದು ಈ ಜೀವ, ಈ ಜೀವಿಗಳು, ಅವುಗಳನ್ನು ಸನಾತನಃ ಎಂದು ವಿವರಿಸಲಾಗಿದೆ. ಮಮೈವಾಂಶೋ ಜೀವ-ಭೂತಃ ಜೀವ-ಲೋಕೇ ಸನಾತನಃ (ಭ.ಗೀ 15.7). ನಾವು ಜೀವಿಗಳು, ಸನಾತನಃ. ಮಾಯೆಯ ಪ್ರಭಾವದಿಂದ ನಾವು ಜೀವ-ಭೂತಃ ಆಗಿದ್ದೇವೆ ಎಂದಲ್ಲ. ನಾವು ಮಾಯೆಯ ಪ್ರಭಾವಕ್ಕೆ ಒಳಗಾಗಿದ್ದೇವೆ, ಆದ್ದರಿಂದ ನಾವು ಜೀವ-ಭೂತಃ. ವಾಸ್ತವವಾಗಿ ನಾವು ಸನಾತನರು. ಸನಾತನ ಎಂದರೆ ಶಾಶ್ವತ. ನಿತ್ಯೋ ಶಾಶ್ವತ. ಜೀವಾತ್ಮವನ್ನು ಹೀಗೆ ವರ್ಣಿಸಲಾಗಿದೆ: ನಿತ್ಯೋ ಶಾಶ್ವತೋ ಯಂ ನ ಹನ್ಯತೇ ಹನ್ಯಮಾನೇ ಶರೀರೇ (ಭ.ಗೀ 2.20). ಅದು ಸನಾತನ. ನಾವು ಎಷ್ಟು ಬುದ್ಧಿಹೀನರೆಂದರೆ, ನಾವು ಶಾಶ್ವತ, ಸನಾತನ, ನಮಗೆ ಹುಟ್ಟು ಮತ್ತು ಸಾವಿಲ್ಲ, ಆದರೂ ನಾವು ಏಕೆ ಈ ಜನನ ಮತ್ತು ಮರಣದ ಕ್ಲೇಶಕ್ಕೆ ಸಿಲುಕಿದ್ದೇವೆ ಎಂದು ಯೋಚಿಸುವುದಿಲ್ಲ? ಇದನ್ನು ಬ್ರಹ್ಮ-ಜಿಜ್ಞಾಸ ಎನ್ನುತ್ತಾರೆ. ಆದರೆ ನಾವು ವಿದ್ಯಾವಂತರಲ್ಲ. ಆದರೆ ನಾವು ವಿದ್ಯಾವಂತರಾಗಿರಬೇಕು. ಕನಿಷ್ಠ ನಾವು ಈ ಬೋಧನೆಯ ಲಾಭವನ್ನು ಪಡೆದುಕೊಳ್ಳಬೇಕು. ನಾವು ಸನಾತನರು. ಭಗವದ್ಗೀತೆಯಲ್ಲಿ ಇನ್ನೊಂದು ಪ್ರಪಂಚದ ಉಲ್ಲೇಖವಿದೆ: ಪರಸ್ ತಸ್ಮಾತ್ ತು ಭಾವೋ 'ನ್ಯೋ 'ವ್ಯಕ್ತೋ 'ವ್ಯಕ್ತಾತ್ ಸನಾತನಃ (ಭ.ಗೀ 8.20). 'ವ್ಯಕ್ತೋ 'ವ್ಯಕ್ತಾತ್ ಸನಾತನಃ. ಈ ಭೌತಿಕ ಪ್ರಪಂಚವು ಪ್ರಕಟವಾಗಿದೆ, ಮತ್ತು ಒಟ್ಟು ಭೌತಿಕ ಶಕ್ತಿಯಾದ ಮಹತ್-ತತ್ತ್ವ ಇದರ ಆಧಾರವಾಗಿದೆ. ಆದರೆ ಆತ್ಮ ಪ್ರಕಟವಾಗಿಲ್ಲ. ಆದ್ದರಿಂದ, ವ್ಯಕ್ತೋ 'ವ್ಯಕ್ತಾತ್. ಇದರಾಚೆಗೆ ಇನ್ನೊಂದು ಸ್ವಭಾವವಿದೆ, ಆಧ್ಯಾತ್ಮಿಕ ಸ್ವಭಾವ, ಸನಾತನ. ಅದನ್ನೇ ಸನಾತನ ಎನ್ನುತ್ತಾರೆ. ಪರಸ್ ತಸ್ಮಾತ್ ತು ಭಾವೋ 'ನ್ಯೋ 'ವ್ಯಕ್ತೋ 'ವ್ಯಕ್ತಾತ್ ಸನಾತನಃ (ಭ.ಗೀ 8.20). ಮತ್ತು ಜೀವ-ಭೂತಃ-ಸನಾತನ. ಮತ್ತು ಹನ್ನೊಂದನೇ ಅಧ್ಯಾಯದಲ್ಲಿ, ಅರ್ಜುನನು ಕೃಷ್ಣನನ್ನು 'ಸನಾತನ' ಎಂದು ವರ್ಣಿಸುತ್ತಾನೆ. ಆದ್ದರಿಂದ, ಮೂರು ಸನಾತನಗಳಿವೆ. ಮೂರು ಸನಾತನ.

ನಾವೆಲ್ಲರೂ ಸನಾತನರು. ಸನಾತನ-ಧಾಮವಿದೆ, ಕೃಷ್ಣನು ಸನಾತನ, ಮತ್ತು ನಾವೂ ಸಹ ಸನಾತನ. ಆದ್ದರಿಂದ, ಅವುಗಳನ್ನು ಒಟ್ಟಿಗೆ ಸೇರಿಸಿದಾಗ, ಅದನ್ನು ಸನಾತನ-ಧರ್ಮ ಎಂದು ಕರೆಯಲಾಗುತ್ತದೆ. ಅವರಿಗೆ ಸನಾತನ ಎಂದರೇನು ಎಂದು ತಿಳಿದಿಲ್ಲ. ನಾನು ಒಂದು ನಿರ್ದಿಷ್ಟ ರೀತಿಯಲ್ಲಿ ಉಡುಪನ್ನು ಧರಿಸಿದರೆ ಮತ್ತು ಒಂದು ನಿರ್ದಿಷ್ಟ ಸಮುದಾಯದಲ್ಲಿ ಜನಿಸಿದರೆ, ನಾನು ಸನಾತನ-ಧರ್ಮನಾಗುತ್ತೇನೆ ಎಂದು ಅವರು ಭಾವಿಸುತ್ತಾರೆ. ಇಲ್ಲ. ಎಲ್ಲರೂ ಸನಾತನ-ಧರ್ಮಿಯಾಗಬಹುದು. ಆದರೆ ಸನಾತನದ ಅರ್ಥವೇನೆಂದು ಅವರಿಗೆ ತಿಳಿದಿಲ್ಲ. ಪ್ರತಿಯೊಂದು ಜೀವಿಯೂ ಸನಾತನ. ಮತ್ತು ಭಗವಾನ್ ಶ್ರೀ ಕೃಷ್ಣನು ಸನಾತನ. ಮತ್ತು ನಾವು ಒಟ್ಟಿಗೆ ಭೇಟಿಯಾಗುವ ಸ್ಥಳವಿದೆ - ಅದು ಸನಾತನ ಧಾಮ. ಸನಾತನ ಧಾಮ, ಸನಾತನ-ಭಕ್ತಿ, ಸನಾತನ-ಧರ್ಮ. ಅದನ್ನು ಕಾರ್ಯಗತಗೊಳಿಸಿದಾಗ, ಅದನ್ನು ಸನಾತನ-ಧರ್ಮ ಎಂದು ಕರೆಯಲಾಗುತ್ತದೆ. ಹಾಗಾದರೆ ಆ ಸನಾತನ-ಧರ್ಮ ಯಾವುದು? ನಾನು ಆ ಸನಾತನ-ಧಾಮಕ್ಕೆ ಹಿಂತಿರುಗುತ್ತೇನೆ ಮತ್ತು ಅಲ್ಲಿ ದೇವರು, ಸನಾತನ, ಮತ್ತು ನಾನೂ ಸನಾತನ ಎಂದು ಭಾವಿಸೋಣ. ಹಾಗಾದರೆ ನಮ್ಮ ಸನಾತನ ಚಟುವಟಿಕೆಗಳು ಯಾವುವು? ನಾನು ಸನಾತನ-ಧಾಮಕ್ಕೆ ಹೋದಾಗ ನಾನು ದೇವರಾಗುತ್ತೇನೆ ಎಂದರ್ಥವೇ? ಇಲ್ಲ ನೀವು ದೇವರಾಗುವುದಿಲ್ಲ. ಏಕೆಂದರೆ ದೇವರು ಒಬ್ಬನೇ. ಅವನು ಪರಮ ಪ್ರಭು, ಯಜಮಾನ, ಮತ್ತು ನಾವು ಸೇವಕರು. ಚೈತನ್ಯ ಮಹಾಪ್ರಭು: ಜೀವೇರ ಸ್ವರೂಪ ಹಯ ನಿತ್ಯ ಕೃಷ್ಣ ದಾಸ (ಚೈ.ಚ ಮಧ್ಯ 20.108-109). ಆದ್ದರಿಂದ ಇಲ್ಲಿ ನಾವು ಪ್ರತಿಯೊಬ್ಬರೂ, ನಾವು ಕೃಷ್ಣನಾಗುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದೇವೆ. ಆದರೆ ನಾವು ಸನಾತನ-ಧಾಮಕ್ಕೆ ಹಿಂದಿರುಗಿದಾಗ — ನಮಗೆ ಅರ್ಹತೆಯಿಲ್ಲದಿದ್ದರೆ ಅಲ್ಲಿಗೆ ಹೋಗಲು ಸಾಧ್ಯವಿಲ್ಲ — ಅಲ್ಲಿ ನಾವು ಶಾಶ್ವತವಾಗಿ ಭಗವಂತನ ಸೇವೆಯಲ್ಲಿ ತೊಡಗುತ್ತೇವೆ. ಅದು ಸನಾತನ-ಧರ್ಮ.

ಆದ್ದರಿಂದ, ನೀವು ಅದನ್ನು ಅಭ್ಯಾಸ ಮಾಡಿ. ಸನಾತನ-ಧರ್ಮ ಎಂದರೆ ಈ ಭಕ್ತಿ-ಯೋಗ. ಏಕೆಂದರೆ ನಾವು ಮರೆತಿದ್ದೇವೆ. ಎಲ್ಲರೂ ದೇವರಾಗಲು ಪ್ರಯತ್ನಿಸುತ್ತಿದ್ದಾರೆ. ಈಗ ದೇವರ ಸೇವಕನಾಗುವುದು ಹೇಗೆ ಎಂಬುದನ್ನು ಇಲ್ಲಿ ಅಭ್ಯಾಸ ಮಾಡಿ. ಮತ್ತು ನೀವು ಅರ್ಹರಾಗಿದ್ದರೆ, ವಾಸ್ತವಿಕವಾಗಿ, ಈಗ ನೀವು… ದೇವರ ಸೇವಕರಾಗಿದ್ದೀರಿ ಎಂಬುದರಲ್ಲಿ ಸಂದೇಹವಿಲ್ಲ, ಅದೇ ಭಕ್ತಿ-ಮಾರ್ಗ. ಚೈತನ್ಯ ಮಹಾಪ್ರಭು ಹೇಳಿದಂತೆ, ಗೋಪಿ-ಭರ್ತುರ್ ಪದ-ಕಮಲಯೋರ್ ದಾಸ-ದಾಸ-ದಾಸ-ದಾಸನುದಾಸಃ. ನೀವು ಭಗವಂತನ ಸೇವಕನ ಸೇವಕನ ಸೇವಕನ ಸೇವಕನಾಗಲು ಪರಿಣಿತನಾದಾಗ — ಹೀಗೆ ನೂರು ಬಾರಿ ಕೆಳಗೆ, ಸೇವಕ — ಆಗ ನೀವು ಪರಿಪೂರ್ಣರಾಗುತ್ತೀರಿ. (ಚೈ.ಚ ಮಧ್ಯ 13.80). ಆದರೆ ಇಲ್ಲಿ ಎಲ್ಲರೂ ಪರಮಾತ್ಮನಾಗಲು ಪ್ರಯತ್ನಿಸುತ್ತಿದ್ದಾರೆ. ಕೆಲವರು "ಸೋ 'ಹಂ," "ಅಹಂ ಬ್ರಹ್ಮಾಸ್ಮಿ" ಎಂಬುವ ಪದಗಳನ್ನು ದುರುಪಯೋಗಪಡಿಸಿಕೊಂಡು ‘ನಾನೇ ಪರಮಪ್ರಭು’ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಹಾಗಲ್ಲ. ಇವು ವೈದಿಕ ಪದಗಳು, ಆದರೆ 'ಹಮ್ ಎಂದರೆ "ನಾನು ದೇವರು" ಎಂದಲ್ಲ. ಸೋ'ಹಮ್ ಎಂದರೆ "ನಾನು ಕೂಡ ಅದೇ ಗುಣ." ಏಕೆಂದರೆ ಮಮೈವಾಂಶೋ ಜೀವ ಭೂತಃ (ಭ.ಗೀ 15.7). ಜೀವವು ದೇವರ, ಕೃಷ್ಣನ ಭಾಗಾಂಶ. ಆದ್ದರಿಂದ, ಗುಣವು ಒಂದೇ ಆಗಿರುತ್ತದೆ. ನೀವು ಸಮುದ್ರದಿಂದ ಒಂದು ಹನಿ ನೀರನ್ನು ತೆಗೆದುಕೊಂಡಂತೆ. ಸಮುದ್ರದ ಸಂಪೂರ್ಣ ನೀರು ಮತ್ತು ಒಂದು ಹನಿ ನೀರಿನ ರಾಸಾಯನಿಕ ಸಂಯೋಜನೆ ಒಂದೇ. ಅದನ್ನು ಸೋ 'ಹಂ ಅಥವಾ ಬ್ರಹ್ಮಾಸ್ಮಿ' ಎನ್ನುತ್ತಾರೆ. ಈ ವೈದಿಕ ಪದಗಳನ್ನು ನಾವು ದುರುಪಯೋಗಪಡಿಸಿಕೊಂಡು "ನಾನೇ ದೇವರು. ನಾನು ದೇವರಾಗಿದ್ದೇನೆ", ಎಂದು ತಪ್ಪಾಗಿ ಭಾವಿಸುತ್ತೇವೆ. ಮತ್ತು ನೀನು ದೇವರಾಗಿದ್ದರೆ, ನೀನೇಕೆ ನಾಯಿಯಾದೆ? ದೇವರು ನಾಯಿಯಾಗುತ್ತಾನೆಯೇ? ಇಲ್ಲ. ಅದು ಸಾಧ್ಯವಿಲ್ಲ. ಏಕೆಂದರೆ ನಾವು ಸೂಕ್ಷ್ಮ ಕಣಗಳು. ಇದನ್ನು ಶಾಸ್ತ್ರದಲ್ಲಿಯೂ ಉಲ್ಲೇಖಿಸಲಾಗಿದೆ:

ಕೇಶಾಗ್ರ-ಶತ-ಭಾಗಸ್ಯ
ಶತಧಾ ಕಲ್ಪಿತಸ್ಯ ಚ
ಜೀವಃ ಭಾಗೋ ಸ ವಿಜ್ಞೇಯ
ಸ ಅನಂತ್ಯಾಯ ಕಲ್ಪತೇ
(ಚೈ.ಚ ಮಧ್ಯ 19.140)

ನಮ್ಮ ಆಧ್ಯಾತ್ಮಿಕ ಗುರುತು ನಾವು ಕೂದಲಿನ ಮೇಲ್ಭಾಗದ ಹತ್ತು ಸಾವಿರದ ಒಂದನೇ ಭಾಗ ಎಂಬುದು. ಇದು ತುಂಬಾ ಚಿಕ್ಕದು. ಅದನ್ನು ಹತ್ತು ಸಾವಿರ ಭಾಗಗಳಾಗಿ ವಿಂಗಡಿಸಿದರೆ ಅದರ ಒಂದು ಭಾಗದಷ್ಟು ನಾವು. ಅದು ನಮ್ಮ ಗುರುತು. ಮತ್ತು ಆ ಸಣ್ಣ ಗುರುತು ಈ ದೇಹದೊಳಗಿದೆ. ಹಾಗಾದರೆ ನೀವು ಅದನ್ನು ಎಲ್ಲಿ ಕಾಣುವಿರಿ? ನಿಮ್ಮ ಬಳಿ ಅಂತಹ ಯಂತ್ರವಿಲ್ಲ. ಆದ್ದರಿಂದ, ನಾವು ನಿರಾಕಾರ ಎಂದು ಹೇಳುತ್ತಾರೆ. ಇಲ್ಲ, ಆಕಾರವಿದೆ, ಆದರೆ ಅದು ತುಂಬಾ ಸೂಕ್ಷ್ಮ ಮತ್ತು ಚಿಕ್ಕದಾಗಿದೆ. ಈ ಭೌತಿಕ ಕಣ್ಣುಗಳಿಂದ ನೋಡಲು ಅಸಾಧ್ಯ. ಆದ್ದರಿಂದ ನಾವು ವೇದಗಳ ಆವೃತ್ತಿಯ ಮೂಲಕ ನೋಡಬೇಕು. ಶಾಸ್ತ್ರ ಚಕ್ಷುಷ. ಅದೇ ವೇದಾಂತ ಆವೃತ್ತಿ. ನಾವು ಶಾಸ್ತ್ರದ ಮೂಲಕ ನೋಡಬೇಕು. ಈ ಜಡ ಕಣ್ಣುಗಳಿಂದ ಅಲ್ಲ. ಅದು ಸಾಧ್ಯವಿಲ್ಲ.