KN/Prabhupada 0159 - ಕಷ್ಟಪಟ್ಟು ದುಡಿಯುವುದು ಹೇಗೆಂದು ಜನರಿಗೆ ತಿಳಿಸಲು ದೊಡ್ಡ ಯೋಜನೆಗಳು



Lecture on SB 5.5.15 -- Vrndavana, November 3, 1976

ಕಲ್ಕತ್ತ, ಬಾಂಬೆ, ಲಂಡನ್, ಮತ್ತು ನ್ಯೂಯಾರ್ಕ್ ಮುಂತಾದ ದೊಡ್ಡ ನಗರಗಳಲ್ಲಿ ಎಲ್ಲರೂ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ದೊಡ್ಡ ನಗರಗಳಲ್ಲಿ ಒಬ್ಬರು ತಮ್ಮ ಆಹಾರವನ್ನು ಪಡೆಯುವುದು ಸುಲಭವಲ್ಲ. ಇಲ್ಲ. ಎಲ್ಲರೂ ಕೆಲಸ ಮಾಡಬೇಕು. ಮತ್ತು ಎಲ್ಲರೂ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಒಂದೇ ಹಂತದ ಸ್ಥಾನದಲ್ಲಿದ್ದಾರೆ ಎಂದು ನೀವು ಭಾವಿಸುತ್ತೀರಾ? ಇಲ್ಲ. ಅದು ಸಾಧ್ಯವಿಲ್ಲ. ವಿಧಿ. ವಿಧಿ. ಒಬ್ಬನು ಮನುಷ್ಯ ಹಗಲು ರಾತ್ರಿ ಕಷ್ಟಪಟ್ಟು ಇಪ್ಪತ್ನಾಲ್ಕು ಗಂಟೆ ದುಡಿಯುತ್ತಿದ್ದಾನೆ; ಅವನಿಗೆ ಕೇವಲ ಎರಡು ಚಪಾತಿಗಳು ಸಿಗುತ್ತದೆ. ಅಷ್ಟೆ. ಬಾಂಬೆಯಲ್ಲಿ ನೋಡಿದ್ದೇವೆ. ಹಗಲು ಹೊತ್ತಿನಲ್ಲಿಯೂ ಸೀಮೆಎಣ್ಣೆ ದೀಪವನ್ನು ಉರಿಸಬೇಕಾದಂತಹ ಕೊಳೆತ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಅಂತಹ ಸ್ಥಳದಲ್ಲಿ, ಕೊಳಕು ಪರಿಸ್ಥಿತಿಯಲ್ಲಿ ಅವರು ವಾಸಿಸುತ್ತಿದ್ದಾರೆ. ಬೊಂಬಾಯಿಯಲ್ಲಿ ಎಲ್ಲರೂ ತುಂಬಾ ಐಷಾರಾಮಿಯಾಗಿ ಬದುಕುತ್ತಿದ್ದಾರೆ ಎಂದರ್ಥವೇ? ಇಲ್ಲ.ಅದೇ ರೀತಿ, ಪ್ರತಿ ನಗರದಲ್ಲೂ ಸಹ ಹೀಗೆ. ಅದು ಸಾಧ್ಯವಿಲ್ಲ. ಕೇವಲ ಕಷ್ಟಪಟ್ಟು ಕೆಲಸ ಮಾಡುವ ಮೂಲಕ ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಸಾಧ್ಯವಿಲ್ಲ. ಆದ್ದರಿಂದ, ನಮ್ಮ ಶಕ್ತಿಯನ್ನು ಉಪಯೋಗಿಸಬೇಕಾಗಿರುವುದು… ಮಲ್-ಲೋಕ-ಕಾಮೋ ಮದ್-ಅನುಗ್ರಹಾರ್ಥಃ. ಕೃಷ್ಣನನ್ನು ಮೆಚ್ಚಿಸುವುದರಲ್ಲಿ ಶಕ್ತಿಯನ್ನು ಬಳಸಿಕೊಳ್ಳಬೇಕು. ಅದನ್ನು ಮಾಡಬೇಕು. ಆ ಉದ್ದೇಶಕ್ಕಾಗಿ ಶಕ್ತಿಯನ್ನು ಬಳಸಿಕೊಳ್ಳಬೇಕೆ ಹೊರತು, "ನಾನು ಸಂತೋಷ ಪಡುತ್ತೇನೆ. ನಾನು ಇದನ್ನು ಮಾಡುತ್ತೇನೆ, ಅದನ್ನು ಮಾಡುತ್ತೇನೆ, ಹೀಗೆ ಹಣ ಸಂಪಾದಿಸುತ್ತೇನೆ. ನಾನು..." ಎಂಬ ಸುಳ್ಳು ಭರವಸೆಗಾಗಿ ಶಕ್ತಿಯನ್ನು ವ್ಯರ್ಥ ಮಾಡಬಾರದು.

ಕುಂಬಾರನ ಕಥೆಯಂತೆ. ಕುಂಬಾರನು ಯೋಜಿಸುತ್ತಿದ್ದಾನೆ. ಅವನ ಹತ್ತಿರ ಕೆಲವು ಮಡಿಕೆಗಳಿದ್ದವು. ಅವನು ಯೋಜಿಸುತ್ತಿದ್ದಾನೆ, "ಈಗ ನನ್ನ ಬಳಿ ಈ ನಾಲ್ಕು ಮಡಕೆಗಳಿವೆ. ಇದನ್ನು ಮಾರಾಟ ಮಾಡುತ್ತೇನೆ.ಅವುಗಳನ್ನು ಮಾರುತ್ತೇನೆ. ಸ್ವಲ್ಪ ಲಾಭವನ್ನು ಸಿಗುತ್ತದೆ. ಆಗ ಹತ್ತು ಮಡಕೆಗಳನ್ನು ಮಾಡುತ್ತೇನೆ. ಆ ಹತ್ತು ಮಡಕೆಗಳನ್ನು ಮಾರುತ್ತೇನೆ. ಮತ್ತಷ್ಟು ಲಾಭ ಸಿಗುತ್ತದೆ. ಆಗ ಇಪ್ಪತ್ತು ಮಡಕೆಗಳು ಮತ್ತು ನಂತರ ಮೂವತ್ತು ಮಡಕೆಗಳು, ನಲವತ್ತು ಮಡಕೆಗಳು ಸಿಗುತ್ತವೆ. ಈ ರೀತಿಯಲ್ಲಿ ನಾನು ಕೋಟ್ಯಾಧಿಪತಿ ಆಗುತ್ತೇನೆ.ಆಗ ನಾನು ಮದುವೆಯಾಗುತ್ತೇನೆ ಮತ್ತು ನಾನು ನನ್ನ ಹೆಂಡತಿಯನ್ನು ಎಲ್ಲಾ ರೀತಿಯಲ್ಲಿ ನಿಯಂತ್ರಿಸುತ್ತೇನೆ.ಮತ್ತು ಅವಳು ಅವಿಧೇಯಳಾದ್ದರೆ, ಆಗ ನಾನು ಅವಳನ್ನು ಹೀಗೆ ಒದೆಯುತ್ತೇನೆ." ಹಾಗೆ ಒದೆಯುವಾಗ ಮಡಕೆಗಳಿಗೆ ಒದ್ದು ಎಲ್ಲ ಮಡಕೆಗಳು ಒಡೆದು ಹೋದವು. (ನಗು) ಆದ್ದರಿಂದ, ಅವನ ಕನಸು ಹಾಳಾಯಿತು. ನೋಡಿದಿರ? ಅಂತೆಯೇ, ನಾವು ಸುಮ್ಮನೆ ಕನಸು ಕಾಣುತ್ತಿದ್ದೇವೆ. ಕೆಲವು ಮಡಕೆಗಳೊಂದಿಗೆ ನಾವು ಸುಮ್ಮನೆ ಕನಸು ಕಾಣುತ್ತೇವೆ, "ಈ ಮಡಕೆಗಳು ಹಲವಾರು ಮಡಕೆಗಳಾಗಿ, ಇನ್ನಷ್ಟು ಹೆಚ್ಚು ಮಡಕೆಗಳಾಗುತ್ತವೆ,” ಎಂದು. ಆದರೆ ಮುಗಿಯಿತು. ಕಲ್ಪನೆಯಲ್ಲಿರಬೇಡಿ, ಯೋಜನೆ ಮಾಡಿ. ಅದೇನೆಂದರೆ... ಗುರುವು, ಆಧ್ಯಾತ್ಮಿಕ ಗುರುವು, ಮತ್ತು ಸರ್ಕಾರವು "ಈ ಧೂರ್ತರು ಯೋಜನೆ ಮಾಡದಿರಬಹುದು.ಈ ಧೂರ್ತರು ಸಂತೋಷವಾಗಿರಲು ಯೋಜನೆ ಮಾಡದಿರಬಹುದು", ಎಂದು ಎಚ್ಚರಿಕೆಯಿಂದ ಇರಬೇಕು. ನ ಯೋಜಯೇತ್ ಕರ್ಮಸು ಕರ್ಮ-ಮೂಢಾನ್. ಇದೇ ಕರ್ಮ-ಜಗತ್, ಈ ಜಗತ್ತು, ಈ ಭೌತಿಕ ಜಗತ್ತು. ಆದರೆ ಅವರು ಈಗಾಗಲೇ ಇದಕ್ಕೆ ಒಲವನ್ನು ಹೊಂದಿದ್ದಾರೆ, ಆದ್ದರಿಂದ ಏನು ಪ್ರಯೋಜನ?ಲೋಕೇ ವ್ಯಯಾಯಾಮಿಷ-ಮದ್ಯ-ಸೇವಾ ನಿತ್ಯಸ್ತು ಜನ್ತುಃ ಲೈಂಗಿಕ ಜೀವನದ ಹಾಗೆ. ಲೈಂಗಿಕ ಜೀವನವು ಸಹಜ. ಲೈಂಗಿಕತೆಯನ್ನು ಹೇಗೆ ಆನಂದಿಸಬೇಕು ಎಂಬುದಕ್ಕೆ ಯಾವುದೇ ವಿಶ್ವವಿದ್ಯಾಲಯದ ಶಿಕ್ಷಣದ ಅಗತ್ಯವಿಲ್ಲ. ಅವರು ಅದನ್ನು ಆನಂದಿಸುತ್ತಾರೆ. ಯಾರೂ... "ಅಳುವುದು ಹೇಗೆ ಅಥವಾ ಹೇಗೆ ನಗಬೇಕು ಅಥವಾ ಲೈಂಗಿಕ ಜೀವನವನ್ನು ಹೇಗೆ ಆನಂದಿಸಬೇಕು ಎಂದು ಯಾರಿಗೂ ಕಲಿಸಲಾಗುವುದಿಲ್ಲ." ಒಂದು ಬಂಗಾಳಿ ಗಾದೆ ಇದೆ. ಅದು ಸಹಜ. ಈ ಕರ್ಮಕ್ಕಾಗಿ ನಿಮಗೆ ಯಾವುದೇ ಶಿಕ್ಷಣದ ಅಗತ್ಯವಿಲ್ಲ. ಈಗ ಅವರು ಕಷ್ಟಪಟ್ಟು ಕೆಲಸ ಮಾಡುವುದು ಹೇಗೆ ಎಂದು ಜನರಿಗೆ ತಿಳಿಸಲು ದೊಡ್ಡ ಯೋಜನೆಗಳನ್ನು ಮಾಡುತ್ತಿದ್ದಾರೆ. ಸಮಯ ವ್ಯರ್ಥ ಮಾಡುತ್ತಿದ್ದಾರೆ. ಶಿಕ್ಷಣ ಸಂಸ್ಥೆಯು ಜನರಿಗೆ ಕೃಷ್ಣ ಪ್ರಜ್ಞಾವಂತರಾಗುವುದು ಹೇಗೆ ಎಂಬುದನ್ನು ಕಲಿಸಲು ಇರಬೇಕೆ ಹೊರತು, ಬೇರೆ ಏನೇನೋ ಆಗಲು ಅಲ್ಲ. ಅದು ಸಮಯ ವ್ಯರ್ಥ, ಏಕೆಂದರೆ ಆ ಕಾರ್ಯಕ್ರಮವು ಎಂದಿಗೂ ಯಶಸ್ವಿಯಾಗುವುದಿಲ್ಲ. ತಲ್ ಲಭ್ಯತೇ ದುಃಖವದ್ ಅನ್ಯತಃ ಸುಖಂ ಕಾಲೇನ ಸರ್ವತ್ರ ಗಭೀರ-ರಂಹಸಾ.ಪ್ರಕೃತಿಯ ನಿಯಮವು ಕಾರ್ಯನಿರ್ವಹಿಸುತ್ತಿದೆ. ಪ್ರಕೃತೇಃ ಕ್ರಿಯಮಾಣಾನಿ ಗುಣೈಃ ಕರ್ಮಾಣಿ ಸರ್ವಶಃ (ಭ.ಗೀ 3.27). ಏನಾದರೂ...

ಆದುದರಿಂದ, ನಮ್ಮ ವೈದಿಕ ನಾಗರೀಕತೆ ಎಂದರೆ ಜನರು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಎಂಬ ತಮ್ಮ ಸ್ಥಾನಗಳಲ್ಲಿ ತೃಪ್ತರಾಗಿರುತ್ತಾರೆ. ಭಗವಂತನ ಕೃಪೆಯಿಂದ ಏನು ಸಿಕ್ಕರೂ ಸಂತೃಪ್ತನಾಗುತ್ತಿದ. ಕೃಷ್ಣನ ಅನುಗ್ರಹವನ್ನು ಪಡೆಯಲು ಅರ್ಹರಾಗಲು ನಿಜವಾದ ಶಕ್ತಿಯನ್ನು ಬಳಸಲಾಗುತ್ತಿತ್ತು.ಅದು ಮುಖ್ಯ, ಕೃಷ್ಣನಿಗೆ ಹೇಗೆ ಶರಣಾಗಬೇಕು ಎಂಬುದನ್ನು ಕಲಿಯುವುದು. ನಂತರ ಅಹಂ ತ್ವಾಂ ಸರ್ವ ಪಾಪೇಭ್ಯೋ ಮೋಕ್ಷಯಿಷ್ಯಾಮಿ (ಭ.ಗೀ 18.66). ಅದು ಅಂತ್ಯವಾಗಿತ್ತು. ಭಾರತದಲ್ಲಿ ನಾವು ಅದನ್ನು ಕಾಣುವುದಿಲ್ಲ... ಮಹಾನ್ ಸಾಧುಗಳು, ಋಷಿಗಳು, ಅವರು ಅನೇಕ ಪುಸ್ತಕಗಳನ್ನು ಬರೆದರು, ಆದರೆ ಕುಟೀರದಲ್ಲಿ ವಾಸಿಸುತ್ತಿದ್ದರು. ಕೇವಲ ರಾಜರು, ಕ್ಷತ್ರಿಯರು, ಅವರು ಆಳ್ವಿಕೆ ನಡೆಸಬೇಕಾಗಿರುವುದರಿಂದ ಅವರು ದೊಡ್ಡ ಅರಮನೆಗಳನ್ನು ನಿರ್ಮಿಸುತ್ತಿದ್ದರು. ಬೇರೆ ಯಾರು ಅಲ್ಲ. ಅವರು ತುಂಬಾ ಸರಳ ಜೀವನ, ಸರಳ ಜೀವನ ನಡೆಸುತ್ತಿದ್ದರು. ತಥಾಕಥಿತ ಆರ್ಥಿಕ ಅಭಿವೃದ್ಧಿ, ಗಗನಚುಂಬಿ ಕಟ್ಟಡ, ಸುರಂಗಮಾರ್ಗ ಇತ್ಯಾದಿಗಳಿಗೆ ಸಮಯವನ್ನು ವ್ಯರ್ಥ ಮಾಡಬೇಡಿ. ಇದು ವೈದಿಕ ನಾಗರಿಕತೆಯಾಗಿರಲಿಲ್ಲ. ಇದು ಅಸುರರ ನಾಗರಿಕತೆಯಾಗಿದೆ.