KN/Prabhupada 0167 - ದೈವಕೃತ ಕಾನೂನುಗಳಲ್ಲಿ ದೋಷವಿರಲಾರದು



Lecture on SB 6.1.8-13 -- New York, July 24, 1971

ಮಾನವಕೃತ ಕಾನೂನು… ಕೊಲ್ಲಲ್ಪಟ್ಟ ವ್ಯಕ್ತಿಯನ್ನು ಪರಿಗಣಿಸುತ್ತಿದ್ದಾರೆ. ಅಷ್ಟಲ್ಲದೆ, ಕೊಲೆಗಾರನನ್ನು ಕೊಲ್ಲಬೇಕು ಎನ್ನುತ್ತಾರೆ. ಪ್ರಾಣಿಯ ಬಗ್ಗೆ ಏಕೆ ಹಾಗಿಲ್ಲ? ಪ್ರಾಣಿ ಕೂಡ ಒಂದು ಜೀವಿ. ಮನುಷ್ಯನೂ ಸಹ ಜೀವಿ. ಆದ್ದರಿಂದ, ಒಬ್ಬ ಮನುಷ್ಯನು ಇನ್ನೊಬ್ಬ ಮನುಷ್ಯನನ್ನು ಕೊಂದರೆ ಕೊಲೆಗಾರನನ್ನು ಕೊಲ್ಲಬೇಕು ಎಂದು ಕಾನೂನು ಇದ್ದರೆ, ಮನುಷ್ಯನು ಒಂದು ಪ್ರಾಣಿಯನ್ನು ಕೊಂದರೆ ಅವನನ್ನೂ ಏಕೆ ಕೊಲ್ಲಬಾರದು? ಇದಕ್ಕೆ ಕಾರಣವೇನು? ಇದು ಮಾನವಕೃತ ಕಾನೂನು, ದೋಷಪೂರಿತವಾಗಿದೆ. ಆದರೆ ದೈವಕೃತ ಕಾನೂನುಗಳಲ್ಲಿ ದೋಷವಿರಲಾರದು. ದೈವಕೃತ ಕಾನೂನು ಎಂದರೆ, ‘ನೀವು ಒಂದು ಪ್ರಾಣಿಯನ್ನು ಕೊಂದರೆ, ನೀವು ಮನುಷ್ಯನನ್ನು ಕೊಲ್ಲುವಷ್ಟೇ ಶಿಕ್ಷೆಗೆ ಗುರಿಯಾಗುತ್ತೀರಿ’. ಅದೇ ಭಗವಂತನ ಕಾನೂನು. ನೀವು ಮನುಷ್ಯನನ್ನು ಕೊಂದಾಗ ಮಾತ್ರ ಶಿಕ್ಷಾರ್ಹರು, ಆದರೆ ಪ್ರಾಣಿಯನ್ನು ಕೊಂದಾಗ ಶಿಕ್ಷಾರ್ಹರಲ್ಲ ಎಂಬುದು ಸುಳ್ಳುಕಾರಣ. ಇದು ಅಸಹಜ ಆಲೋಚನೆ. ಇದೊಂದು ಪರಿಪೂರ್ಣ ಕಾನೂನು ಅಲ್ಲ. ಪರಿಪೂರ್ಣ ಕಾನೂನು. ಆದುದರಿಂದ, ಕರ್ತನಾದ ಯೇಸು ಕ್ರಿಸ್ತನು ದಶಾಜ್ಞೆಗಳಲ್ಲಿ ಹೀಗೆ ಹೇಳುತ್ತಾರು: "ನೀನು ಕೊಲ್ಲಬಾರದು." ಅದು ಪರಿಪೂರ್ಣ ಕಾನೂನು. "ನಾನು ಮನುಷ್ಯನನ್ನು ಕೊಲ್ಲುವುದಿಲ್ಲ, ಆದರೆ ಪ್ರಾಣಿಗಳನ್ನು ಕೊಲ್ಲುತ್ತೇನೆ", ಎಂದು ನೀವು ತಾರತಮ್ಯ ಮಾಡಬಾರದು. ಇದು ತನಗೆ ತಾನೇ ಮೋಸ ಮಾಡಿಕೊಂಡಂತೆ. ಭಗವಂತನ ಕಾನೂನುಗಳು ಕ್ಷಮಿಸುವುದಿಲ್ಲ.

ಆದ್ದರಿಂದ, ವಿಭಿನ್ನ ಪ್ರಾಯಶ್ಚಿತ್ತಗಳಿವೆ. ವೈದಿಕ ಕಾನೂನಿನ ಪ್ರಕಾರ, ಒಂದು ಹಸುವು ಕುತ್ತಿಗೆಗೆ ಹಗ್ಗ ಕಟಿರುವ ಕಾರಣವಾಗಿ ಸತ್ತರೆ... ಏಕೆಂದರೆ ಹಸು ಸುರಕ್ಷಿತವಾಗಿಲ್ಲ. ಕುತ್ತಿಗೆಗೆ ಹಗ್ಗ ಕಟಿರುವ ಕಾರಣವಾಗಿ ಹೇಗೋ ಅದು ಸತ್ತರೆ, ಹಸುವಿನ ಮಾಲೀಕನು ಪ್ರಾಯಶ್ಚಿತ್ತವನ್ನು ಮಾಡಬೇಕಾಗುತ್ತದೆ. ಹಗ್ಗದಿಂದ ಬಂಧಿಸಲ್ಪಟ್ಟ ಕಾರಣ ಹಸು ಸತ್ತಿದೆ ಎಂದು ಭಾವಿಸಬೇಕಾಗಿರುವುದರಿಂದ ಪ್ರಾಯಶ್ಚಿತ್ತವಿದೆ. ಹೀಗಿರುವಾಗ, ನಾವು ಸ್ವಇಚ್ಛೆಯಿಂದ ಹಸುಗಳು ಹಾಗು ಅನೇಕ ಪ್ರಾಣಿಗಳನ್ನು ಕೊಂದರೆ ಅದಕ್ಕೆ ನಾವು ಎಷ್ಟು ಜವಾಬ್ದಾರರು ಆಲೋಚಿಸಿ? ಆದ್ದರಿಂದ, ಈಗ ಯುದ್ಧವಿದೆ, ಮಾನವ ಸಮಾಜವು ಸಾಮೂಹಿಕ ಹತ್ಯಾಕಾಂಡದಲ್ಲಿ ಕೊಲ್ಲಲ್ಪಡುತ್ತದೆ- ಇದು ಪ್ರಕೃತಿಯ ಕಾನೂನು. ನೀವು ಪ್ರಾಣಿಗಳನ್ನು ಕೊಲ್ಲಲು ಮುಂದುವರಿಸುತ್ತಾ ಯುದ್ಧವನ್ನು ನಿಲ್ಲಿಸಲು ಸಾಧ್ಯವಿಲ್ಲ. ಅದು ಸಾಧ್ಯವಿಲ್ಲ.ಪ್ರಾಣಿಗಳನ್ನು ಕೊಲ್ಲುವ ಕಾರಣದಿಂದ ಅನೇಕ ಅಪಘಾತಗಳಾಗುತ್ತವೆ. ಸಗಟು ಹತ್ಯೆ. ಕೃಷ್ಣನು ಕೊಲ್ಲುವಾಗ, ಅವನು ಸಗಟು ಕೊಲ್ಲುತ್ತಾನೆ. ನಾನು ಒಂದಾದ ಮೇಲೊಂದರಂತೆ ಕೊಲ್ಲುತ್ತೇನೆ. ಆದರೆ ಕೃಷ್ಣನು ಕೊಂದಾಗ, ಅವನು ಎಲ್ಲಾ ಕೊಲೆಗಾರರನ್ನು ಒಟ್ಟುಗೂಡಿಸಿ ಕೊಲ್ಲುತ್ತಾನೆ. ಆದ್ದರಿಂದ, ಶಾಸ್ತ್ರಗಳಲ್ಲಿ ಪ್ರಾಯಶ್ಚಿತ್ತವಿದೆ. ನಿಮ್ಮ ಬೈಬಲಿನಲ್ಲಿ ಪ್ರಾಯಶ್ಚಿತ್ತ, ತಪ್ಪೊಪ್ಪಿಗೆ, ಮತ್ತು ದಂಡವನ್ನು ಪಾವತಿಸುವುದು ಇರುವಂತೆ. ಆದರೆ ಪ್ರಾಯಶ್ಚಿತ್ತವನ್ನು ಮಾಡಿದ ನಂತರ, ಜನರು ಮತ್ತೆ ಅದೇ ಪಾಪವನ್ನು ಏಕೆ ಮಾಡುತ್ತಾರೆ? ಅದನ್ನು ಅರ್ಥಮಾಡಿಕೊಳ್ಳಬೇಕು.