KN/Prabhupada 0174 - ಪ್ರತಿಯೊಂದು ಜೀವಿಯೂ ಭಗವಂತನ ಮಗು



Lecture on SB 1.8.26 -- Los Angeles, April 18, 1973

ಆದ್ದರಿಂದ, ಪ್ರತಿಯೊಂದು ಜೀವಿಯೂ ಭಗವಂತನ ಮಗು. ಭಗವಂತನೆ ಪರಮ ಪಿತಾ. ಕೃಷ್ಣ ಹೇಳುತ್ತಾನೆ: "ಅಹಂ ಬೀಜ-ಪ್ರದಃ ಪಿತಾ. "ನಾನು ಎಲ್ಲಾ ಜೀವಿಗಳ ಮೂಲನಾದ ತಂದೆ." ಸರ್ವ-ಯೋನಿಷು ಕೌಂತೇಯ (ಭ.ಗೀ 14.4). "ಅವರು ಯಾವುದೇ ರೂಪದಲ್ಲಿ ಬದುಕುತ್ತಿದ್ದರೂ, ಅವರೆಲ್ಲರೂ ಜೀವಿಗಳು, ಅವರು ನನ್ನ ಮಕ್ಕಳು." ಅದೇ ಸತ್ಯ. ನಾವೆಲ್ಲರೂ ಜೀವಿಗಳು, ನಾವು ಭಗವಂತನ ಮಕ್ಕಳು. ಆದರೆ ನಾವು ಅದನ್ನು ಮರೆತಿದ್ದೇವೆ. ಆದ್ದರಿಂದ, ನಾವು ಹೋರಾಡುತ್ತಿದ್ದೇವೆ. ಒಂದು ಒಳ್ಳೆಯ ಕುಟುಂಬದಲ್ಲಿರುವಂತೆ: "ತಂದೆ ನಮಗೆ ಆಹಾರವನ್ನು ನೀಡುತ್ತಿದ್ದಾನೆ. ಹಾಗಾದರೆ ನಾವು ಸಹೋದರರು, ನಾವೇಕೆ ಹೋರಾಡಬೇಕು?” ಅದೇ ರೀತಿ ನಾವು ದೈವಪ್ರಜ್ಞೆಯುಳ್ಳವರಾದರೆ, ನಾವು ಕೃಷ್ಣನ ಪ್ರಜ್ಞೆಯುಳ್ಳವರಾದರೆ, ಈ ಹೋರಾಟವು ಕೊನೆಗೊಳ್ಳುತ್ತದೆ. "ನಾನು ಅಮೆರಿಕನ್, ನಾನು ಭಾರತೀಯ, ನಾನು ರಷ್ಯನ್, ನಾನು ಚೈನೀಸ್. ಈ ಎಲ್ಲಾ ಅಸಂಬದ್ಧ ವಿಷಯಗಳು ಕೊನೆಗೊಳ್ಳುತ್ತವೆ. ಕೃಷ್ಣ ಪ್ರಜ್ಞೆ ಆಂದೋಲನೆ ಉತ್ತಮವಾಗಿದೆ. ಜನರು ಕೃಷ್ಣನ ಪ್ರಜ್ಞೆ ಪಡೆದ ತಕ್ಷಣ, ಈ ಹೋರಾಟ, ಈ ರಾಜಕೀಯ ಹೋರಾಟ, ರಾಷ್ಟ್ರೀಯ ಹೋರಾಟಗಳು ತಕ್ಷಣವೇ ಕೊನೆಗೊಳ್ಳುತ್ತವೆ. ಏಕೆಂದರೆ ಎಲ್ಲವೂ ದೇವರಿಗೆ ಸೇರಿದ್ದು ಎಂಬ ವಾಸ್ತವ ಪ್ರಜ್ಞೆ ಅವರಲ್ಲಿ ಉಂಟಾಗುತ್ತದೆ. ಮತ್ತು ಆ ಕುಟುಂಬದ ಒಂದು ಮಗುವು, ತಂದೆಯಿಂದ ಲಾಭಗಳನ್ನು ಪಡೆಯುವ ಹಕ್ಕನ್ನು ಹೊಂದಿದೆ. ಅದೇ ರೀತಿ ಪ್ರತಿಯೊಬ್ಬರೂ ಭಗವಂತನ ಭಾಗಾಂಶವಾಗಿದ್ದರೆ, ಪ್ರತಿಯೊಬ್ಬರೂ ಭಗವಂತನ ಮಕ್ಕಳಾಗಿದ್ದರೆ, ಪ್ರತಿಯೊಬ್ಬರೂ ತಂದೆಯ ಆಸ್ತಿಯನ್ನು ಬಳಸುವ ಹಕ್ಕನ್ನು ಹೊಂದಿದ್ದಾರೆ. ಆದ್ದರಿಂದ, ಈ ಹಕ್ಕು ಮನುಷ್ಯರಿಗೆ ಮಾತ್ರ ಸೇರಿದಲ್ಲ. ಭಗವದ್ಗೀತೆಯ ಪ್ರಕಾರ ಈ ಹಕ್ಕು ಎಲ್ಲಾ ಜೀವಿಗಳಿಗೂ ಸೇರಿದೆ. ಅದು ಜೀವಿಯೋ, ಪ್ರಾಣಿಯೋ, ಮರಗಳೋ, ಪಕ್ಷಿಗಳೋ, ಮೃಗವೋ, ಅಥವಾ ಕೀಟವೋ ಎಂಬುದು ಮುಖ್ಯವಲ್ಲ. ಅದೇ ಕೃಷ್ಣ ಪ್ರಜ್ಞೆ. ನನ್ನ ಸಹೋದರ ಒಳ್ಳೆಯವನು, ನಾನು ಒಳ್ಳೆಯವನು, ಆದರೆ ಉಳಿದವರೆಲ್ಲರು ಕೆಟ್ಟವರು ಎಂದು ನಾವು ಭಾವಿಸುವುದಿಲ್ಲ. ಈ ರೀತಿಯ ಸಂಕುಚಿತ, ದುರ್ಬಲ ಪ್ರಜ್ಞೆಯನ್ನು ನಾವು ದ್ವೇಷಿಸುತ್ತೇವೆ, ನಾವು ಅದನ್ನು ಹೊರಹಾಕುತ್ತೇವೆ. ನಾವು ಆಲೋಚಿಸುವುದು: ಪಂಡಿತಾಃ ಸಮ-ದರ್ಶನ (ಭ.ಗೀ 5.18). ಭಗವದ್ಗೀತೆಯಲ್ಲಿ ನೀವು ನೋಡಬಹುದು.

ವಿದ್ಯೆ-ವಿನಯ-ಸಂಪನ್ನೆ
ಬ್ರಾಹ್ಮಣೇ ಗವಿ ಹಸ್ತಿನಿ
ಶುನಿ ಚೈವ ಶ್ವ-ಪಾಕೆ ಚ್ಯ
ಪಂಡಿತಾಃ ಸಮ-ದರ್ಶಿನಃ
(ಭ.ಗೀ 5.18)

ಪಂಡಿತನಾದವನು, ವಿದ್ಯಾವಂತನಾದವನು, ಪ್ರತಿಯೊಂದು ಜೀವಿಯನ್ನೂ ಸಮಾನವಾಗಿ ಕಾಣುತ್ತಾನೆ. ಆದ್ದರಿಂದ, ವೈಷ್ಣವನು ತುಂಬಾ ಸಹಾನುಭೂತಿಯುಳ್ಳವನು. ಲೋಕಾನಾಂ ಹಿತ-ಕಾರಿಣೌ. ಅವರು ನಿಜವಾಗಿಯೂ ಮನುಷ್ಯನಿಗೆ ಪ್ರಯೋಜನಕಾರಿ ಕೆಲಸವನ್ನು ಮಾಡುತ್ತಾರೆ. ಅವರು, ಈ ಎಲ್ಲಾ ಜೀವಿಗಳನ್ನು ದೇವರ ಭಾಗಾಂಶವಾಗಿ ಕಾಣುತ್ತಾರೆ, ಮತ್ತು ನಿಜವಾಗಿಯೂ ಹಾಗೆ ಭಾವಿಸುತ್ತಾರೆ. ಒಂದಲ್ಲ ಒಂದು ರೀತಿಯಲ್ಲಿ, ಅವರು ಈ ಭೌತಿಕ ಪ್ರಪಂಚದ ಸಂಪರ್ಕಕ್ಕೆ ಬಂದ್ದಿದ್ದಾರೆ, ಮತ್ತು ಅವರ ವಿಭಿನ್ನ ಕರ್ಮಗಳಿಗೆ ತಕ್ಕಂತೆ ಅವರು ವಿಭಿನ್ನ ರೀತಿಯ ದೇಹಗಳನ್ನು ಪಡೆದುಕೊಂಡಿದ್ದಾರೆ. ಆದ್ದರಿಂದ, ಪಂಡಿತ, ವಿದ್ಯಾವಂತರಿಗೆ, ಈ ರೀತಿಯ ಯಾವುದೇ ತಾರತಮ್ಯವಿಲ್ಲ: "ಇದೊಂದು ಪ್ರಾಣಿ, ಇದನ್ನು ಕಸಾಯಿಖಾನೆಗೆ ಕಳುಹಿಸಬೇಕು, ಮತ್ತು ಇವನು ಮನುಷ್ಯ, ಇವನು ಅದನ್ನು ತಿನ್ನುಬೇಕು." ಇಲ್ಲ. ನಿಜವಾಗಿಯೂ ಕೃಷ್ಣ ಪ್ರಜ್ಞೆಯುಳ್ಳ ವ್ಯಕ್ತಿ ಎಲ್ಲರಿಗೂ ದಯೆ ತೋರುತ್ತಾನೆ. ಪ್ರಾಣಿಗಳನ್ನು ಏಕೆ ಕೊಲ್ಲಬೇಕು? ಆದ್ದರಿಂದ, ನಮ್ಮ ಸಿದ್ಧಾಂತ ಮಾಂಸಾಹಾರವನ್ನು ತ್ಯಜಿಸುವುದು. ಮಾಂಸಾಹಾರ ಸೇವನೆ ನಿಷೇಧ. ನಿಮಗೆ ಅನುಮತಿಯಿಲ್ಲ. ಆದರೆ ಅವರು ನಮ್ಮ ಮಾತನ್ನು ಕೇಳುವುದಿಲ್ಲ. "ಓಹ್, ಇದೇನು ಮೂರ್ಖತ್ವ? ಇದು ನಮ್ಮ ಆಹಾರ. ನಾನ್ಯಾಕೆ ತಿನ್ನಬಾರದು?" ಏಕೆಂದರೆ ಎಧಮಾನ-ಮದಃ (ಶ್ರೀ.ಭಾ 1.8.26). ಅವನು ಅಮಲೇರಿದ ಧೂರ್ತ. ಅವನು ಸತ್ಯವನ್ನು ಕೇಳುವುದಿಲ್ಲ.