KN/Prabhupada 0179 - ನಾವು ಕೃಷ್ಣನಿಗಾಗಿ ಕೆಲಸಮಾಡಬೇಕು



Lecture on SB 1.16.6 -- Los Angeles, January 3, 1974

ಈ ಮಾಯಾವಾದಿ ತತ್ವಜ್ಞಾನಿಗಳು, ಅವರ ಜ್ಞಾನದಿಂದ, ಊಹಾಪೋಹದಿಂದ ಬಹಳ ಎತ್ತರಕ್ಕೆ ಹೋಗಬಹುದು, ಆದರೆ ಅವರು ಮತ್ತೆ ಅಧಃಪತನಕ್ಕೆ ಒಳಗಾಗುತ್ತಾರೆ. ಏಕೆ? ಅನಾದೃತ-ಯುಷ್ಮದ್-ಅಂಘ್ರಯಃ (ಶ್ರೀ.ಭಾ 10.2.32): "ಅವರು ನಿಮ್ಮ ಪಾದದ ಕಮಲದ ಆಶ್ರಯವನ್ನು ಪಡೆಯಲು ಸಾಧ್ಯವಾಗದ ಕಾರಣ, ಅವರು ಅಧಃಪತನಕ್ಕೆ ಒಳಗಾಗುತ್ತಾರೆ.” ಅದು ಸುರಕ್ಷಿತವಲ್ಲ. ಏಕೆಂದರೆ ಮನುಷ್ಯ ಯಾವುದೇ ಚಟುವಟಿಕೆಯಿಲ್ಲದೆ, ಯಾವುದೇ ಆಸೆಯಿಲ್ಲದೆ ಇರಲು ಸಾಧ್ಯವಿಲ್ಲ. ಅದು ಸಾಧ್ಯವಿಲ್ಲ. ಮನುಷ್ಯ, ಪ್ರಾಣಿ, ಕೀಟ, ಎಲ್ಲವೂ ಏನಾದರೂ ಮಾಡುತ್ತಿರಬೇಕು. ನನಗೆ ನೈಜ ಅನುಭವವಿದೆ. ನನ್ನ ಒಬ್ಬ ಮಗ..., ನಾನು ಯುವಕನಾಗಿದ್ದಾಗ, ಅವನು ತುಂಬಾ ಹಠಮಾರಿಯಾಗಿದ್ದನು. ಹಾಗಾಗಿ ಕೆಲವೊಮ್ಮೆ ನಾವು ಅವನನ್ನು ಕಪಾಟಿನ ಮೇಲೆ ಕೂರಿಸುತ್ತಿದ್ದೆವು. ಅವನಿಗೆ ಇಳಿಯಲು ಸಾಧ್ಯವಾಗುತ್ತಿರಲಿಲ್ಲ. ಅವನ ಚಟುವಟಿಕೆಗಳು ಕಪಾಟಿನ ಮೇಲೆ ನಿಂತುಹೋಯಿತು ಎಂದು ತುಂಬಾ ಬೇಸರಪಟ್ಟನು. ಆದ್ದರಿಂದ, ನೀವು ಚಟುವಟಿಕೆಯನ್ನು ನಿಲ್ಲಿಸಲು ಸಾಧ್ಯವಿಲ್ಲ. ಅದು ಸಾಧ್ಯವಿಲ್ಲ. ನೀವು ಅದಕ್ಕಿಂತಲೂ ಉತ್ತಮವಾದ ಚಟುವಟಿಕೆಯನ್ನು ನೀಡಬೇಕು. ಆಗ ಬೇರೆ ಚಟುವಟಿಕೆಗಳನ್ನು ನಿಲ್ಲಿಸುತ್ತಾರೆ. ಪರಂ ದೃಷ್ಟ್ವಾ ನಿವರ್ತತೆ (ಭ.ಗೀ 2.59).

ಈ ಕೃಷ್ಣ ಪ್ರಜ್ಞೆಯ ಆಂದೋಲನವು ಇರುವುದು ನಿಮಗೆ ಉತ್ತಮ ಚಟುವಟಿಕೆಯನ್ನು ನೀಡಲು. ಆದ್ದರಿಂದ, ನೀವು ಕೀಳು ಚಟುವಟಿಕೆಗಳನ್ನು ತ್ಯಜಿಸಬಹುದು. ಇಲ್ಲದಿದ್ದರೆ, ಕೇವಲ ನಿರಾಕರಣೆಯಿಂದ ಅದು ಸಾಧ್ಯವಿಲ್ಲ. ನಾವು ಕೆಲಸ ಮಾಡಬೇಕು. ನಾವು ಕೃಷ್ಣನಿಗಾಗಿ ಕೆಲಸ ಮಾಡಬೇಕು. ನಾವು ಕೃಷ್ಣನ ದೇವಸ್ಥಾನಕ್ಕೆ ಹೋಗುತ್ತೇವೆ, ಕೃಷ್ಣನ ಪುಸ್ತಕಗಳನ್ನು ಮಾರಾಟ ಮಾಡಲು ಹೋಗುತ್ತೇವೆ, ಅಥವಾ ಕೆಲವು ಕೃಷ್ಣ ಭಕ್ತರನ್ನು ಭೇಟಿಯಾಗುತ್ತೇವೆ. ಅದು ಒಳ್ಳೆಯದು. ಆದರೆ ನೀವು ಕೆಲಸವನ್ನು ನಿಲ್ಲಿಸಲು ಸಾಧ್ಯವಿಲ್ಲ. ಅದು ಸಾಧ್ಯವಿಲ್ಲ. ಆಗ ನಿಮ್ಮ ನಿಷ್ಕ್ರಿಯ ಮೆದುಳಲ್ಲಿ ರಾಕ್ಷಸ ಪ್ರವೃತ್ತಿ ಪ್ರಬಲವಾಗುತ್ತದೆ. ಹೌದು. ಅದು ನಿಮ್ಮ ಅಧಃಪತನಕ್ಕೆ ಕಾರಣವಾಗುತ್ತದೆ. "ಆ ಮಹಿಳೆಯನ್ನು ಹೇಗೆ ಒಲಿಸಿಕೊಳ್ಳುವುದು? ಆ ಪುರುಷನನ್ನು ಹೇಗೆ ಒಲಿಸಿಕೊಳ್ಳುವುದು?" ನೀವು ಕೃಷ್ಣ ಸೇವೆಯನ್ನು ಮಾಡುವುದನ್ನು ನಿಲ್ಲಿಸಿದರೆ, ಇಂದ್ರಿಯ ತೃಪ್ತಿಗಾಗಿ ಮತ್ತೆ ಕೆಲಸ ಮಾಡಬೇಕಾಗುತ್ತದೆ. ಅಷ್ಟೇ. ಹಾಗೆಯೇ, ನೀವು ಯಾವುದೇ ಇಂದ್ರಯ ತೃಪ್ತಿಯನ್ನು ಪಡೆಯಿರಿ, ನೀವು ಅದನ್ನು ನಿಲ್ಲಿಸಲು ಸಾಧ್ಯವಿಲ್ಲ, ಆದರೆ ನೀವು ಅದನ್ನು ಕೃಷ್ಣನ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಅದೇ ಕೃಷ್ಣ ಪ್ರಜ್ಞೆ ಎಂದರೆ.