KN/Prabhupada 0182 - ನಿಮ್ಮನ್ನು ತೊಳೆದ ಸ್ಥಿತಿಯಲ್ಲಿ ಇರಿಸಿಕೊಳ್ಳಿ



Lecture on SB 2.3.15 -- Los Angeles, June 1, 1972

ಒಂದು ಲಾಭವೆಂದರೆ, ಕೃಷ್ಣನ ಬಗ್ಗೆ ಕೇಳುವುದರಿಂದ, ಅವನು ಕ್ರಮೇಣ ಪಾಪರಹಿತನಾಗುತ್ತಾನೆ, ಕೇವಲ ಕೇಳುವುದರಿಂದ. ನಾವು ಪಾಪಿಗಳಾಗದ ಹೊರತು, ನಾವು ಭೌತಿಕ ಜಗತ್ತಿಗೆ ಬರುವುದಿಲ್ಲ. ಆದ್ದರಿಂದ, ನಾವು ಮನೆಗೆ ಹಿಂದಿರುಗುವ ಮೊದಲು, ಭಗವಂತನ ಬಳಿಗೆ ಹಿಂತಿರುಗುವ ಮೊದಲು, ಪಾಪರಹಿತರಾಗಬೇಕು. ಏಕೆಂದರೆ ಭಗವಂತ ರಾಜ್ಯ... ಭಗವಂತ ಪರಿಶುದ್ಧ, ಅವನ ರಾಜ್ಯ ಪರಿಶುದ್ಧ. ಯಾವುದೇ ಅಶುದ್ಧ ಜೀವಿ ಅಲ್ಲಿಗೆ ಪ್ರವೇಶಿಸಲು ಸಾಧ್ಯವಿಲ್ಲ. ಆದ್ದರಿಂದ, ನಾವು ಪರಿಶುದ್ಧರಾಗಬೇಕು. ಇದನ್ನು ಭಗವದ್ಗೀತೆಯಲ್ಲಿಯೂ ಹೇಳಲಾಗಿದೆ. ‘ಯೇಷಾಂ ಅಂತ-ಗತಂ ಪಾಪಂ’ (ಭ.ಗೀ 7.28). "ತನ್ನ ಜೀವನದ ಎಲ್ಲಾ ಪಾಪದ ಪ್ರತಿಕ್ರಿಯೆಗಳಿಂದ ಸಂಪೂರ್ಣವಾಗಿ ಮುಕ್ತನಾದವನು, ‘ಯೇಷಾಂ ತ್ವ ಅಂತ-ಗತಂ ಪಾಪಂ ಜನಾನಾಂ ಪುಣ್ಯ-ಕರ್ಮಣಾಂ’ (ಭ.ಗೀ 7.28), ಮತ್ತು ಯಾವಾಗಲೂ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿರುತ್ತಾನೆ, ಇನ್ನು ಮುಂದೆ ಪಾಪದ ಚಟುವಟಿಕೆಗಳಿಲ್ಲ...” ಆದ್ದರಿಂದ, ಈ ಕೃಷ್ಣ ಪ್ರಜ್ಞೆಯ ಚಲುವಳಿಯು ಒಮ್ಮೆ ಅವನಿಗೆ ಎಲ್ಲಾ ಪಾಪ ಚಟುವಟಿಕೆಗಳನ್ನು ಅಳಿಸಿಹಾಕಲು ಮತ್ತು ತನ್ನನ್ನು ಉಳಿಸಿಕೊಳ್ಳಲು ಅವಕಾಶ ನೀಡಿದೆ: ಅನೈತಿಕ ಕಾಮಜೀವನ, ಮಾಂಸಸೇವನೆ, ಮದ್ಯಪಾನ, ಹಾಗು ಜೂಜಾಟ ನಿಷೇದ. ನಾವು ಈ ನಿಯಮಗಳನ್ನು ಅನುಸರಿಸಿದರೆ, ದೀಕ್ಷೆಯ ನಂತರ, ನನ್ನ ಎಲ್ಲಾ ಪಾಪಗಳು ತೊಳೆದುಹೋಗುತ್ತವೆ. ಮತ್ತು ನಾನು ಆ ತೊಳೆದ ಸ್ಥಿತಿಯಲ್ಲಿ ನನ್ನನ್ನು ಇರಿಸಿಕೊಂಡರೆ, ಮತ್ತೆ ಪಾಪಿಯಾಗುವ ಪ್ರಶ್ನೆ ಎಲ್ಲಿದೆ?

ಆದರೆ ಒಮ್ಮೆ ತೊಳೆದುಕೊಂಡ ನಂತರ... ನೀವು ಸ್ನಾನ ಮಾಡಿ, ಮತ್ತೆ ಧೂಳನ್ನು ನಿಮ್ಮ ದೇಹದ ಮೇಲೆ ಹಾಕಿಕೊಂಡರೆ… ಅದು ಉಪಯೋಗವಿಲ್ಲ. "ನಾನು ಮತ್ತೆ ತೊಳೆಯುತ್ತೇನೆ, ಮತ್ತೆ ಮೇಲೆ ಹಾಕಿಕೊಳ್ಳುತ್ತೇನೆ", ಎಂದು ನೀವು ಹೇಳಿದರೆ, ತೊಳೆಯುವುದರಿಂದ ಏನು ಪ್ರಯೋಜನ? ತೊಳೆಯಿರಿ. ಒಮ್ಮೆ ತೊಳೆದ ನಂತರ ನಿಮ್ಮನ್ನು ತೊಳೆದ ಸ್ಥಿತಿಯಲ್ಲಿ ಇರಿಸಿಕೊಳ್ಳಿ. ಅದು ಅಗತ್ಯ. ಆದ್ದರಿಂದ, ನೀವು ಕೃಷ್ಣನ ಬಗ್ಗೆ ಕೇಳುವ ಮೂಲಕ ಅವನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದರೆ ಅದು ಸಾಧ್ಯವಾಗುತ್ತದೆ. ಅಷ್ಟೇ. ನೀವು ಶುದ್ಧವಾಗಿ ಉಳಿಯಬೇಕು. ಅದು ಪುಣ್ಯ-ಶ್ರವಣ-ಕೀರ್ತನಃ. ನೀವು ಕೃಷ್ಣನ ಬಗ್ಗೆ ಕೇಳಿದರೆ, ಪುಣ್ಯ, ನೀವು ಯಾವಾಗಲೂ ಧರ್ಮನಿಷ್ಠ ಸ್ಥಾನದಲ್ಲಿರುತ್ತೀರಿ. ಪುಣ್ಯ-ಶ್ರವಣ-ಕೀರ್ತನಃ. ನೀವು ಜಪಿಸಿದರೆ ಅಥವಾ... ಆದ್ದರಿಂದ, ನಮ್ಮ ಸಲಹೆ ಯಾವಾಗಲೂ ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ / ಹರೇ ರಾಮ, ಹರೇ ರಾಮ, ರಾಮ, ರಾಮ, ಹರೇ ಹರೇ ಎಂದು ಜಪಿಸಬೇಕು ಎನ್ನುವುದು. ಆದ್ದರಿಂದ, ನಾವು ಮತ್ತೆ ಪಾಪಕಾರ್ಯಕ್ಕೆ ಜಾರುವ ಬಗ್ಗೆ ಜಾಗರೂಕರಾಗಿರಬೇಕು. ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು ಮತ್ತು ಪಠಣ ಪ್ರಕ್ರಿಯೆಯಲ್ಲಿ ತಮ್ಮನ್ನು ತಾವು ಇರಿಸಿಕೊಳ್ಳಬೇಕು. ಆಗ ಅವನು ಸುರಕ್ಷಿತವಾಗಿರುತ್ತಾನೆ. ಆದ್ದರಿಂದ, ಶೃಣ್ವತಾಂ ಸ್ವ-ಕಥಾಃ ಕೃಷ್ಣಃ ಪುಣ್ಯ-ಶ್ರವಣ-ಕೀರ್ತನಃ (ಶ್ರೀ.ಭಾ 1.2.17). ಮತ್ತು ಕ್ರಮೇಣ, ನೀವು ಕೃಷ್ಣನ ಬಗ್ಗೆ ಕೇಳುತ್ತಾ ಹೋದಂತೆ, ಹೃದಯದೊಳಗಿನ ಎಲ್ಲಾ ಕೊಳಕು ಶುದ್ಧವಾಗುತ್ತವೆ.

ಕೊಳಕು ವಿಷಯಗಳು ಏನೆಂದರೆ, "ನಾನು ಭೌತಿಕ ದೇಹ; ನಾನು ಅಮೆರಿಕನ್; ನಾನು ಭಾರತೀಯ; ನಾನು ಹಿಂದೂ; ನಾನು ಮುಸ್ಲಿಂ; ನಾನು ಇದು; ನಾನು ಅದು." ಇವೆಲ್ಲವೂ ಆತ್ಮದ ವಿವಿಧ ರೀತಿಯ ಹೊದಿಕೆಗಳಾಗಿವೆ. ಮುಕ್ತ ಆತ್ಮವು, "ನಾನು ದೇವರ ನಿತ್ಯ ಸೇವಕ", ಎಂಬ ಪೂರ್ಣ ಪ್ರಜ್ಞೆಯನ್ನು ಹೊಂದಿದೆ. ಅಷ್ಟೇ. ಒಬ್ಬರಿಗೆ ಬೇರೆ ಯಾವುದೇ ಗುರುತು ಇಲ್ಲ. ಅದನ್ನು ಮುಕ್ತಿ ಎಂದು ಕರೆಯಲಾಗುತ್ತದೆ. "ನಾನು ಕೃಷ್ಣನ, ಭಗವಂತನ, ಶಾಶ್ವತ ಸೇವಕ, ಮತ್ತು ಅವನ ಸೇವೆ ಮಾಡುವುದೇ ನನ್ನ ಏಕೈಕ ಕೆಲಸ", ಎಂದು ಒಬ್ಬನು ಅರ್ಥಮಾಡಿಕೊಂಡಾಗ ಅದನ್ನು ಮುಕ್ತಿ ಎಂದು ಕರೆಯಲಾಗುತ್ತದೆ. ಮುಕ್ತಿ ಎಂದರೆ ನಿಮಗೆ ಇನ್ನೂ ಎರಡು ಕೈಗಳು, ಇನ್ನೂ ಎರಡು ಕಾಲುಗಳು ಇರುತ್ತವೆ ಎಂದರ್ಥವಲ್ಲ. ಇಲ್ಲ. ಅದೇ ವಸ್ತು, ಆದರೆ ಅದು ಶುದ್ಧೀಕರಿಸಲಾಗಿದೆ. ಒಬ್ಬ ಮನುಷ್ಯನು ಜ್ವರದಿಂದ ಬಳಲುತ್ತಿರುವಂತೆ. ರೋಗಲಕ್ಷಣಗಳು ತುಂಬಾ ಇದ್ದರೂ, ಜ್ವರ ಇಲ್ಲದ ತಕ್ಷಣ ಎಲ್ಲಾ ರೋಗಲಕ್ಷಣಗಳು ಮಾಯವಾಗುತ್ತವೆ. ಆದ್ದರಿಂದ, ಈ ಭೌತಿಕ ಜಗತ್ತಿನಲ್ಲಿ ನಮ್ಮ ಈ ಜ್ವರವು ಇಂದ್ರಿಯ ಸಂತೃಪ್ತಿ. ಇಂದ್ರಿಯ ಸಂತೃಪ್ತಿ. ಇದು ಜ್ವರ. ಆದ್ದರಿಂದ, ನಾವು ಕೃಷ್ಣ ಪ್ರಜ್ಞೆಯಲ್ಲಿ ತೊಡಗಿದಾಗ, ಈ ಇಂದ್ರಿಯ ಸಂತೃಪ್ತಿಯ ವ್ಯವಹಾರವು ಕೊನೆಗೊಳ್ಳುತ್ತದೆ. ಅದೇ ವ್ಯತ್ಯಾಸ. ನೀವು ಕೃಷ್ಣ ಪ್ರಜ್ಞೆಯಲ್ಲಿ ಹೇಗೆ ಮುಂದುವರಿದಿದ್ದೀರಿ ಎಂಬುದರ ಪರೀಕ್ಷೆ ಇದು.