KN/Prabhupada 0185 - ನಾವು ಈ ಅಲೌಕಿಕ ಪರಸ್ಪರ ಕ್ರಿಯೆಗಳಿಂದ ವಿಚಲಿತರಾಗಬಾರದು
Lecture on SB 3.26.35-36 -- Bombay, January 12, 1975
ವ್ಯವಸ್ಥೆಯಲ್ಲಿ ಸಿಲುಕಿಕೊಳ್ಳಬೇಡಿ. ನೀವು ಪರಮಾತ್ಮನ ಸಾಕ್ಷಾತ್ಕಾರದತ್ತ ಪ್ರಗತಿ ಸಾಧಿಸಬೇಕಾದರೆ ವ್ಯವಸ್ಥೆಯ ಅಗತ್ಯವಿದೆ. ಆದರೆ ಪರಮಾತ್ಮನ ಸಾಕ್ಷಾತ್ಕಾರದ ವಿಷಯದಲ್ಲಿ ಪ್ರಗತಿ ಸಾಧಿಸದೆ ನೀವು ಕೇವಲ ಒಂದು ವ್ಯವಸ್ಥೆಯನ್ನು ಅನುಸರಿಸಿದರೆ ಶ್ರೀಮದ್-ಭಾಗವತಂ ಪ್ರಕಾರ, ಮತ್ತು ವೇದಗಳ ಪ್ರಕಾರ, ಅದು ಕೇವಲ ಒಲವಿನ ಶ್ರಮವಾಗಿದೆ. ಅದಕ್ಕೆ ಯಾವ ಬೆಲೆಯೂ ಇಲ್ಲ. ಆದ್ದರಿಂದ, ಭಾಗವತಂ ಹೇಳುತ್ತದೆ, "ಅದು ಪ್ರಥಮ ದರ್ಜೆಯ ಧರ್ಮಪದ್ಧತಿ." ನೀವು ಅದನ್ನು ಹಿಂದೂ ಅಥವಾ ಮುಸ್ಲಿಂ ಅಥವಾ ಕ್ರಿಶ್ಚಿಯನ್ ಅಥವಾ ಬೌದ್ಧ ಎಂದು ಕರೆದರೂ ಪರವಾಗಿಲ್ಲ. "ಅಧೋಕ್ಷಜನ ಸಾಕ್ಷಾತ್ಕಾರದಲ್ಲಿ ಪ್ರಗತಿ ಸಾಧಿಸಲು ನಿಮಗೆ ಸಹಾಯ ಮಾಡುದೇ ಪ್ರಥಮ ದರ್ಜೆಯ ಧರ್ಮವಾಗಿದೆ.” ಅಧೋಕ್ಷಜ, ಕೃಷ್ಣನ ಮತ್ತೊಂದು ಹೆಸರು. ಅಧೋಕ್ಷಜ ಎಂದರೆ ನೀವು ಕೇವಲ ಮಾನಸಿಕ ಊಹಾಪೋಹಗಳಿಂದ ಅಥವಾ ಅನುಭವಗಮ್ಯ ಜ್ಞಾನದಿಂದ ಅರ್ಥಮಾಡಿಕೊಳ್ಳಲು ಸಾಧ್ಯವಾಗದ ವಿಷಯ. ಅದನ್ನು ಅಧೋಕ್ಷಜ ಎಂದು ಕರೆಯಲಾಗುತ್ತದೆ. ಅಧಃ-ಕೃತಂ ಅಕ್ಷಜಂ, ಇಂದ್ರಿಯ-ಜ್ಞಾನಂ ಯತ್ರ.
ನಾವು ಆ ಅಧೋಕ್ಷಜನ ಬಳಿ ಸಾರಬೇಕು. ಜ್ಞಾನದ ವಿವಿಧ ಹಂತಗಳಿವೆ: ಪ್ರತ್ಯಕ್ಷ, ಪರೋಕ್ಷ, ಅಪರೋಕ್ಷ, ಅಧೋಕ್ಷಜ, ಅಪ್ರಾಕೃತ. ಆದ್ದರಿಂದ, ನಾವು ಭೌತಿಕ ಪ್ರಕೃತಿಗಿಂತ ಅತೀಂದ್ರಿಯವಾದ ಅಪ್ರಾಕೃತವನ್ನು ಸಮೀಪಿಸಬೇಕು. ಅಧೋಕ್ಷಜವು ಜ್ಞಾನದ ಕೆಳದರ್ಜೆಯಾದ ಪ್ರತ್ಯಕ್ಷ, ಪರೋಕ್ಷಾಪರೋಕ್ಷಕ್ಕಿಂತ ಮೇಲಿದೆ. ಅವುಗಳು ಕನಿಷ್ಠ-ಅಧಿಕಾರದಲ್ಲಿವೆ.
- ಅರ್ಚಾಯಾಂ ಏವ ಹರಯೇ
- ಪೂಜಾಂ ಯಃ ಶ್ರದ್ಧಾಯೇಹತೆ
- ನ ತದ್-ಭಕ್ತೇಷು ಚಾನ್ಯೇಷು
- ಸ ಭಕ್ತಃ ಪ್ರಾಕೃತಃ ಸ್ಮೃತಃ
- (ಶ್ರೀ.ಭಾ 11.2.47)
ಪ್ರಾಕೃತ ಹಂತವು ಪ್ರತ್ಯಕ್ಷ ಜ್ಞಾನ, ನೇರ ಗ್ರಹಿಕೆ, ಮತ್ತು ಪಾರಂಪರ್ಯವಾಗಿ ಪಡೆದ ಜ್ಞಾನವು. ಪ್ರತ್ಯಕ್ಷ, ಪರೋಕ್ಷ, ನಂತರ ಅಪರೋಕ್ಷ, ಆತ್ಮಸಾಕ್ಷಾತ್ಕಾರ, ನಂತರ ಅಧೋಕ್ಷಜ, ಅಪ್ರಾಕೃತ. ಆದ್ದರಿಂದ, ಕೃಷ್ಣಪ್ರಜ್ಞೆಯು ಅಪ್ರಾಕೃತ ಜ್ಞಾನವು. ಅಪ್ರಾಕೃತ ಜ್ಞಾನವು ಕೃಷ್ಣನನ್ನು ತಿಳಿದುಕೊಳ್ಳುವ ಅತ್ಯುನ್ನತ ನೆಲೆ. ಆದ್ದರಿಂದ, ಎಲ್ಲಿಯವರೆಗೆ ನಾವು ಅಧೋಕ್ಷಜ ಜ್ಞಾನಕ್ಕೆ ಅನುಗುಣವಾಗಿರುತ್ತೇವೋ ಅದು ನಮಗೆ ನಿಯಂತ್ರಕ ತತ್ವಗಳಾಗಿರುತ್ತದೆ. ನಾವು ನಿಯಂತ್ರಕ ತತ್ವಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಅಪ್ರಾಕೃತ ಜ್ಞಾನವು ಪರಮಹಂಸರಿಗಾಗಿ. ಅದನ್ನು ‘ರಾಗಭಕ್ತಿ’ ಎನ್ನಲಾಗುತ್ತದೆ. ಪ್ರತ್ಯಕ್ಷ ಮತ್ತು ಪರೋಕ್ಷ ನೆಲೆಗಳನ್ನು ‘ವಿಧಿ-ಭಕ್ತಿ’ ಎನ್ನಲಾಗುತ್ತದೆ. ರಾಗ-ಭಕ್ತಿಯ ನೆಲೆಯನ್ನು ತಲುಪುವುದು ನಮ್ಮ ಗುರಿಯಾಗಿದ್ದರೂ ಸಹ ವಿಧಿ-ಭಕ್ತಿಯಿಲ್ಲದೆ ನಾವು ರಾಗ-ಭಕ್ತಿಯ ನೆಲೆಯನ್ನು ತಲುಪಲು ಅಸಾಧ್ಯ. ವೃಂದಾವನದಲ್ಲಿ ಭಕ್ತರ ಹೆಜ್ಜೆಗುರುತುಗಳನ್ನು ಅನುಸರಿಸಿ ರಾಗಾನುಗಾ, ರಾಗ-ಭಕ್ತಿಯನ್ನು ಕಾರ್ಯಗತಗೊಳಿಸಲಾಗುತ್ತದೆ. ಅದನ್ನು ರಾಗಭಕ್ತಿ ಎಂದು ಕರೆಯಲಾಗುತ್ತದೆ. ಅವರು ಕೃಷ್ಣನ ವೈಯಕ್ತಿಕ ಸಹವರ್ತಿಗಳು. ಆದರೆ ನಾವು ನೇರವಾಗಿ ಕೃಷ್ಣನ ವೈಯಕ್ತಿಕ ಸಹವರ್ತಿಯಾಗಬಾರದು, ಕೃಷ್ಣನ ಶಾಶ್ವತ ಸಹವರ್ತಿಗಳ ಹೆಜ್ಜೆಗುರುತುಗಳನ್ನು ಅನುಸರಿಸಿ ರಾಗಭಕ್ತಿಯ ಹಂತಕ್ಕೆ ಬರಬಹುದು. ಅದನ್ನು ‘ಪರಾಭಕ್ತಿ’ ಎಂದು ಕರೆಯಲಾಗುತ್ತದೆ. ಆ ಪರಾಭಕ್ತಿಯ ಅಗತ್ಯವಿದೆ.
- ಬ್ರಹ್ಮಭೂತಃ ಪ್ರಸನ್ನಾತ್ಮ
- ನ ಶೋಚತಿ ನಾ ಕಾಂಕ್ಷತಿ
- ಸಮಃ ಸರ್ವೇಷು ಭೂತೇಷು
- ಮದ್-ಭಕ್ತಿಂ ಲಭತೇ ಪರಾಂ
- (ಭ.ಗೀ 18.54)
ಆದ್ದರಿಂದ, ಈ ಕೃಷ್ಣಪ್ರಜ್ಞೆಯ ಚಳುವಳಿಯು ನಮ್ಮನ್ನು ಕ್ರಮೇಣ ರಾಗ-ಭಕ್ತಿ ಅಥವಾ ಪರಾ-ಭಕ್ತಿಯ ಹಂತಕ್ಕೆ ಬೆಳೆಸುತ್ತದೆ. ಆಗ ಜೀವನ ಯಶಸ್ವಿಯಾಗುತ್ತದೆ. ಈ ರೀತಿಯಾಗಿ ನಾವು ಈ ಅಲೌಕಿಕ ಪರಸ್ಪರ ಕ್ರಿಯೆಗಳಿಂದ ವಿಚಲಿತರಾಗಬಾರದು. ಇಲ್ಲಿ ಹೇಳಿರುವಂತೆ, ಮೃದುತ್ವಂ ಕಠಿನತ್ವಂ ಚ ಶೈತ್ಯಂ ಉಷ್ಣತ್ವಂ ಏವ ಚ (ಶ್ರೀ.ಭಾ 3.26.36). ಈ ವಿಷಯಗಳಿಂದ ನಾವು ವಿಚಲಿತರಾಗಿದ್ದೇವೆ. ನಾವು ನೆಲದ ಮೇಲೆ ಮಲಗಿದ್ದೇವೆ ಎಂದು ಭಾವಿಸೋಣ. ಇದು ಕಠಿನತ್ವಂ, ತುಂಬಾ ಕಷ್ಟವಾದ್ದದು. ಆದರೆ ನಮಗೆ ಒಂದು ಕುಶನ್ ಅಥವಾ ಉತ್ತಮ ಹಾಸಿಗೆಯನ್ನು ನೀಡಿದರೆ, ಅದು ಮೃದುತ್ವಂ. ಅಂತೆಯೇ, ಶೀತೋಂಷ್ಣ. ನೀರು, ಕೆಲವೊಮ್ಮೆ ತುಂಬಾ ಶಿಥಿಲವಾಗಿರುತ್ತದೆ, ತಣ್ಣಗಿರುತ್ತದೆ, ಮತ್ತು ಕೆಲವೊಮ್ಮೆ ತುಂಬಾ ಬಿಸಿಯಾಗಿರುತ್ತದೆ. ನೀರು ಒಂದೇ; ಆದರೆ ಅಲೌಕಿಕ ವ್ಯವಸ್ಥೆಯ ಬದಲಾವಣೆಯ ಪ್ರಕಾರ ಅದು ವಿಭಿನ್ನ ಸ್ಥಾನದಲ್ಲಿ ವಿಭಿನ್ನ ಸ್ಥಿತಿಯಲ್ಲಿದೆ. ಚರ್ಮದ ಸ್ಪರ್ಶದಿಂದ ನಮಗೆ ನೋವು ಮತ್ತು ಸಂತೋಷದ ಅನುಭೂತಿಯಾಗುತ್ತದೆ. ಚರ್ಮದ ಸ್ಪರ್ಶ. ಆದ್ದರಿಂದ, "ನಾನು ಈ ದೇಹವಲ್ಲ", ಎಂದು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದಕ್ಕೆ ಸಾಕ್ಷಾತ್ಕಾರದ ಅಗತ್ಯವಿದೆ, ಆತ್ಮಾನುಭೂತಿ.
ನಾವು ಆಧ್ಯಾತ್ಮಿಕ ಪ್ರಜ್ಞೆಯಲ್ಲಿ ಹೆಚ್ಚು ಮುಂದುವರಿದಂತೆ, ನಾವು ‘ಆತ್ಮಸ್ಥಾ’ ದಲ್ಲಿ ಹೆಚ್ಚು ನೆಲೆಗೊಳ್ಳುತ್ತೇವೆ. ಅದನ್ನು ಸ್ಥಿತ-ಪ್ರಜ್ಞಾ ಎಂದು ಕರೆಯಲಾಗುತ್ತದೆ. ಆಗ ನಾವು ವಿಚಲಿತರಾಗುವುದಿಲ್ಲ. ನಾವು ಈ ಬದ್ಧ ಅಥವಾ ಅಲೌಕಿಕ ರೂಪಾಂತರದಿಂದ ವಿಚಲಿತರಾಗದಂತೆ ಅಭ್ಯಾಸ ಮಾಡಬೇಕು. ಮಾಡಲೇಬೇಕು. ನಾವು ಆತ್ಮರಾದ ಕಾರಣ, ಅಹಂ ಬ್ರಹ್ಮಾಸ್ಮಿ, ಈ ಭೌತಿಕ ವ್ಯವಸ್ಥೆಗೆ ಸೇರಿದವರಲ್ಲ. ಆದರೆ ನಾವು ಇದಕ್ಕೆ ಒಗ್ಗಿಕೊಂಡಿರುವುದರಿಂದ ಅಭ್ಯಾಸದ ಮೂಲಕ ಆಧ್ಯಾತ್ಮಿಕ ಸ್ಥಿತಿಗೆ ಬರಬೇಕು. ಮತ್ತು ಅಭ್ಯಾಸದ ಸಮಯದಲ್ಲಿ ಅದಕ್ಕೆ ಸಹಿಷ್ಣುತೆಯ ಅಗತ್ಯವಿದೆ. ಅದನ್ನು ಭಜನೆ, ಸಾಧನೆ, ಅಥವಾ ತಪಸ್ಯ, ವ್ರತ, ಹಾಗು ಸಹಿಷ್ಣುತೆ ಎಂದು ಕರೆಯಲಾಗುತ್ತದೆ. ನಾವು ಅಲ್ಲದ, ಬೇರೆ ಭೌತಿಕ ವಸ್ತುಗಳೊಂದಿಗೆ ಹೇಗೋ ಗುರುತಿಸಿಕೊಂಡಿದ್ದು, ಪುನಃ ಅಭ್ಯಾಸದ ಮೂಲಕ ಆಧ್ಯಾತ್ಮಿಕ ನೆಲೆಯನ್ನು ತಲುಪುವ ಈ ಸಹಿಷ್ಣುತೆಯನ್ನು ತಪಸ್ಯ ಎಂದು ಕರೆಯಲಾಗುತ್ತದೆ. ಇದು ತಪಸ್ಸಿನ ಅರ್ಥ. ತಪಃ ಎಂದರೆ ನೋವು, ಸ್ವಯಂಪ್ರೇರಣೆಯಿಂದ ಸ್ವಲ್ಪ ನೋವನ್ನು ಸ್ವೀಕರಿಸುವುದು.