KN/Prabhupada 0191 - ಕೃಷ್ಣನನ್ನು ನಿಯಂತ್ರಿಸಿ - ಅದುವೇ ವೃಂದಾವನ ಜೀವನ



Lecture on SB 6.1.52 -- Detroit, August 5, 1975

ಪ್ರಭುಪಾದ: ಕೃಷ್ಣನ ಕರುಣೆಯಿಂದ, ಗುರುವಿನ ಕರುಣೆಯಿಂದ, ಎರಡೂ... ಒಬ್ಬರ ಕರುಣೆಯನ್ನು ಪಡೆಯಲು ಪ್ರಯತ್ನಿಸಬೇಡಿ. ಗುರು ಕೃಷ್ಣ ಕೃಪಾಯ ಪಾಯ ಭಕ್ತಿ-ಲತಾ-ಬೀಜ. ಗುರುವಿನ ಕರುಣೆಯಿಂದ ಒಬ್ಬನು ಕೃಷ್ಣನನ್ನು ಪಡೆಯುತ್ತಾನೆ. ಮತ್ತು ಕೃಷ್ಣ ಸೇಯಿ ತೊಮಾರ, ಕೃಷ್ಣ ದಿತೇ ಪಾರೋ. ಗುರುವನ್ನು ಬಳಿಸಾರುವುದೆಂದರೆ ಆತನಿಂದ ಕೃಷ್ಣನನ್ನು ಪಡೆಯಲು ಬೇಡಿಕೊಳ್ಳುವುದಕೋಸ್ಕರ ಮಾತ್ರ ಎಂದರ್ಥ. ಕೃಷ್ಣ ಸೇಯಿ ತೋಮಾರ. ಏಕೆಂದರೆ ಕೃಷ್ಣನು ತನ್ನ ಭಕ್ತರ ಕೃಷ್ಣ. ಕೃಷ್ಣನೇ ಯಜಮಾನ, ಆದರೆ ಕೃಷ್ಣನನ್ನು ಯಾರು ನಿಯಂತ್ರಿಸಬಲ್ಲರು? ಅವನ ಭಕ್ತ. ಕೃಷ್ಣನು ಸರ್ವೋಚ್ಚ ನಿಯಂತ್ರಕ, ಆದರೆ ಅವನು ಭಕ್ತನಿಂದ ನಿಯಂತ್ರಿಸಲ್ಪಡುತ್ತಾನೆ. ಅಂದರೆ, ಕೃಷ್ಣನು ಭಕ್ತಿ-ವತ್ಸಲ. ಒಬ್ಬ ಹೆಸರಾಂತ ತಂದೆ, ಹೈಕೋರ್ಟ್ ನ್ಯಾಯಾಧೀಶ… ಒಂದು ಸಲ ಪ್ರಧಾನಿ ಗ್ಲಾಡ್‌ಸ್ಟೋನ್ ಅವರನ್ನು ನೋಡಲು ಯಾರೋ ಬಂದರು ಎಂಬ ಕಥೆಯಿದೆ. ಮತ್ತು ಗ್ಲಾಡ್‌ಸ್ಟೋನ್ ಅವನಿಗೆ, “ನಿರೀಕ್ಷಿಸಿ. ನಾನು ಕಾರ್ಯನಿರತನಾಗಿದ್ದೇನೆ”, ಎಂದು ಹೇಳಿದನು. ಆದ್ದರಿಂದ, ಅವನು ಗಂಟೆಗಟ್ಟಲೆ ಕಾಯುತ್ತಿದ್ದನು, ನಂತರ ಅವನಿಗೆ ಅನಿಸಿತು, “ಈ ಮಹಾಶಯ ಏನು ಮಾಡುತ್ತಿದ್ದಾನೆ?" ಎಂದು. ಒಳಗೆ ನೋಡಿದರೆ, ಗ್ಲಾಡ್ಸ್ಟೋನ್ ಕುದುರೆಯಾಗಿ ತನ್ನ ಮಗುವನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಆಡಿಸುತ್ತಿದ್ದನು. ಅವನು ಆ ಕೇಲಸದಲ್ಲಿ ನಿರತನಾಗಿದ್ದನ್ನು! ನೋಡಿದಿರ? ಪ್ರಧಾನ ಮಂತ್ರಿ, ಅವನು ಇಡೀ ಬ್ರಿಟಿಷ್ ಸಾಮ್ರಾಜ್ಯವನ್ನು ನಿಯಂತ್ರಿಸುತ್ತಿದ್ದಾನೆ ಆದರೆ ಅವನು ಮಗುವಿನ ಪ್ರೀತಿಯಿಂದ ನಿಯಂತ್ರಿಸಲ್ಪಡುತ್ತಿದ್ದಾನೆ. ಇದನ್ನು ವಾತ್ಸಲ್ಯ ಎನ್ನುತ್ತಾರೆ.

ಹಾಗೆಯೇ, ಕೃಷ್ಣನು ಸರ್ವೋಚ್ಚ ನಿಯಂತ್ರಕನಾಗಿದ್ದಾನೆ.

ಈಶ್ವರಃ ಪರಮಃ ಕೃಷ್ಣಃ
ಸತ್-ಚಿತ್-ಆನಂದ-ವಿಗ್ರಹಃ
ಅನಾದಿರ್ ಆದಿರ್ ಗೋವಿಂದಃ
ಸರ್ವ-ಕಾರಣ-ಕಾರಣಂ
(ಬ್ರ.ಸಂ 5.1)

ಅವನು ಸರ್ವೋಚ್ಚ ನಿಯಂತ್ರಕ, ಆದರೆ ಅವನು ತನ್ನ ಭಕ್ತೆಯಾದ ಶ್ರೀಮತಿ ರಾಧಾರಾಣಿಯಿಂದ ನಿಯಂತ್ರಿಸಲ್ಪಡುತ್ತಾನೆ. ಅವನು ನಿಯಂತ್ರಿಸಲ್ಪಡುತ್ತಾನೆ. ಆದುದರಿಂದ, ಇವರ ನಡುವಿನ ಲೀಲೆಗಳೇನು ಎಂಬುದು ಸುಲಭವಾಗಿ ಅರ್ಥವಾಗುವುದಿಲ್ಲ... ಆದರೆ ಕೃಷ್ಣನು ತನ್ನ ಭಕ್ತನಿಂದ ನಿಯಂತ್ರಿಸಲ್ಪಡಲು ಮನಃಪೂರ್ವಕವಾಗಿ ಒಪ್ಪುತ್ತಾನೆ. ಅದು ಕೃಷ್ಣನ ಸ್ವಭಾವ. ತಾಯಿ ಯಶೋದೆಯಂತೆ. ತಾಯಿ ಯಶೋಧೆಯು ಕೃಷ್ಣನನ್ನು ನಿಯಂತ್ರಿಸುತ್ತಿದ್ದಾಳೆ, ಅವನನ್ನು ಬಂಧಿಸುತ್ತಿದ್ದಾಳೆ: “ನೀನು ತುಂಬಾ ತುಂಟನೇ? ನಾನು ನಿನ್ನನ್ನು ಬಂಧಿಸುತ್ತೇನೆ.” ತಾಯಿ ಯಶೋದೆಯ ಬಳಿ ಒಂದು ಕೋಲು ಇದೆ, ಮತ್ತು ಕೃಷ್ಣ ಅಳುತ್ತಿದ್ದಾನೆ. ಕೃಷ್ಣ ಅಳುತ್ತಿದ್ದಾನೆ. ಈ ವಿಷಯಗಳನ್ನು ನೀವು ಅಧ್ಯಯನ ಮಾಡುತ್ತೀರಿ. ಶ್ರೀಮದ್-ಭಾಗವತದಲ್ಲಿ, ಕುಂತಿಯ ಪ್ರಾರ್ಥನೆಯಲ್ಲಿ, "ನನ್ನ ಪ್ರಿಯ ಕೃಷ್ಣ, ನೀನು ಪರಮಪ್ರಭುವು. ಆದರೆ ತಾಯಿ ಯಶೋದೆಯ ಕೋಲನ್ನು ನೋಡಿ ನೀನು ಅಳುತ್ತಿರುವ ಆ ದೃಶ್ಯವನ್ನು ನಾನು ನೋಡಲು ಬಯಸುತ್ತೇನೆ”, ಎಂದು ಅವಳು ಕೀರ್ತಿಸುತ್ತಾಳೆ. ಆದ್ದರಿಂದ, ಕೃಷ್ಣನು ಎಷ್ಟು ಭಕ್ತ-ವತ್ಸಲನಾಗಿದ್ದಾನೆಂದರೆ ಆತನು ಪರಮೇಶ್ವರನಾಗಿದ್ದರೂ ಅವನ ತಾಯಿ ಯಶೋದೆಯಂತಹ ಭಕ್ತೆ, ರಾಧಾರಾಣಿಯಂತಹ ಭಕ್ತೆ, ಗೋಪಿಯರಂತಹ ಭಕ್ತರು, ಗೋಪಾಲಕರಂತಹ ಭಕ್ತರು ಕೃಷ್ಣನನ್ನು ನಿಯಂತ್ರಿಸಬಹುದು. ಅದುವೇ ವೃಂದಾವನ ಜೀವನ.

ಆದ್ದರಿಂದ, ಈ ಕೃಷ್ಣ ಪ್ರಜ್ಞೆಯ ಆಂದೋಲನವು ನಿಮ್ಮನ್ನು ಅಲ್ಲಿಗೆ ಕರೆದೊಯ್ಯಲು ಪ್ರಯತ್ನಿಸುತ್ತಿದೆ. ಮೂರ್ಖ ಜನರು ದಾರಿ ತಪ್ಪುತ್ತಿದ್ದಾರೆ. ಈ ಕೃಷ್ಣ ಪ್ರಜ್ಞೆಯ ಆಂದೋಲನದ ಮೌಲ್ಯ ಏನೆಂದು ಅವರಿಗೆ ತಿಳಿದಿಲ್ಲ. ಭಕ್ತರು ಮಾನವ ಸಮಾಜಕ್ಕೆ ಅತ್ಯುನ್ನತ ಲಾಭ, ಸ್ಥಾನವನ್ನು ನೀಡಲು ಪ್ರಯತ್ನಿಸುತ್ತಿದ್ದಾರೆ. ಅವರು ಭಗವಂತನೊಂದಿಗೆ ಒಂದಾಗಲು ಬಯಸುವುದಿಲ್ಲ, ಆದರೆ ಅವರು ನಿಮಗೆ ದೇವರನ್ನು ನಿಯಂತ್ರಿಸುವ ಹಕ್ಕನ್ನು ನೀಡುತ್ತಿದ್ದಾರೆ. ಇದುವೇ ಕೃಷ್ಣ ಪ್ರಜ್ಞೆ ಚಳುವಳಿ.

ತುಂಬ ಧನ್ಯವಾದಗಳು.

ಭಕ್ತರು: ಜಯ! (ಅಂತ್ಯ)