KN/Prabhupada 0198 - ದುರಭ್ಯಾಸಗಳನ್ನು ತ್ಯಜಿಸಿ ಈ ಮಣಿಗಳೊಡನೆ ಹರೇ ಕೃಷ್ಣ ಮಂತ್ರವನ್ನು ಜಪಿಸಿ



Temple Press Conference -- August 5, 1971, London

ಸಂದರ್ಶಕಿ: ನೀವು ಈಗ ಪ್ರಪಂಚದಾದ್ಯಂತ ಎಷ್ಟು ಅನುಯಾಯಿಗಳನ್ನು ಹೊಂದಿದ್ದೀರಿ ಅಥವಾ ನೀವು ಲೆಕ್ಕ ಹಾಕಲು ಸಾಧ್ಯವಿಲ್ಲವೇ...?

ಪ್ರಭುಪಾದ: ಅಂದರೆ, ಯಾವುದೇ ನಿಜವಾದ ವಿಷಯಕ್ಕೆ ಅನುಯಾಯಿಗಳು ಬಹಳ ಕಡಿಮೆ ಇರಬಹುದು ಮತ್ತು ಯಾವುದೇ ಅಸಂಗತ ವಿಷಯಕ್ಕೆ ಅನುಯಾಯಿಗಳು ಹೆಚ್ಚಿರಬಹುದು.

ಸಂದರ್ಶಕಿ: ಎಷ್ಟು... ಅಂದರೆ ದೀಕ್ಷೆಪಡೆದ ಅನುಯಾಯಿಗಳು…

ಪ್ರಭುಪಾದ: ನಮ್ಮಲ್ಲಿ ಸುಮಾರು ಮೂರು ಸಾವಿರವಿದ್ದಾರೆ.

ಸಂದರ್ಶಕಿ: ಮತ್ತು ಇದು ಅವಿರತವಾಗಿ ಬೆಳೆಯುತ್ತಿದೆಯೇ?

ಪ್ರಭುಪಾದ: ಹೌದು, ಇದು ತುಂಬಾ ನಿಧಾನವಾಗಿ ಬೆಳೆಯುತ್ತಿದೆ. ಏಕೆಂದರೆ ನಮ್ಮಲ್ಲಿ ಹಲವು ನಿರ್ಬಂಧಗಳಿವೆ. ಜನರು ಯಾವುದೇ ನಿರ್ಬಂಧವನ್ನು ಇಷ್ಟಪಡುವುದಿಲ್ಲ.

ಸಂದರ್ಶಕಿ: ಹೌದು. ಅನುಯಾಯಿಗಳು ಎಲ್ಲಿ ಹೆಚ್ಚಾಗಿದ್ದಾರೆ? ಅಮೇರಿಕಾದಲ್ಲಿಯೆ?

ಪ್ರಭುಪಾದ: ಅಮೇರಿಕ, ಯುರೋಪ್‌, ಕೆನಡಾ, ಜಪಾನ್‌, ಮತ್ತು ಆಸ್ಟ್ರೇಲಿಯಾದಲ್ಲಿ. ಮತ್ತು ಭಾರತದಲ್ಲಿ ಈ ಧರ್ಮಪಂಥದ ಕೋಟ್ಯಾಂತರ ಅನುಯಾಯಿಗಳಿದ್ದಾರೆ. ಭಾರತವನ್ನು ಹೊರತುಪಡಿಸಿ, ಇತರ ದೇಶಗಳಲ್ಲಿ ಅವು ಕಡಿಮೆ ಪ್ರಮಾಣದಲ್ಲಿವೆ. ಆದರೆ ಭಾರತದಲ್ಲಿ ಕೋಟ್ಯಾಂತರ ಮಂದಿ ಇದ್ದಾರೆ.

ಸಂದರ್ಶಕ: ನಿಮ್ಮ ಆಂದೋಲನವು ದೇವರನ್ನು ತಿಳಿದುಕೊಳ್ಳುವ ಏಕೈಕ ಮಾರ್ಗವೆಂದು ನೀವು ಭಾವಿಸುತ್ತೀರಾ?

ಪ್ರಭುಪಾದ: ಏನು?

ಭಕ್ತ: ಈ ಆಂದೋಲನವು ದೇವರನ್ನು ತಿಳಿದುಕೊಳ್ಳುವ ಏಕೈಕ ಮಾರ್ಗವೆಂದು ನೀವು ಭಾವಿಸುತ್ತೀರಾ?

ಪ್ರಭುಪಾದ: ಹೌದು.

ಸಂದರ್ಶಕ: ನಿಮಗೆ ಆ ಭರವಸೆ ಹೇಗೆ ಬಂತು?

ಪ್ರಭುಪಾದ: ಅಧಿಕಾರಿಗಳಿಂದ, ಭಗವಂತನಿಂದ, ಕೃಷ್ಣ. ಕೃಷ್ಣ ಹೇಳುತ್ತಾನೆ, ಸರ್ವ-ಧರ್ಮಾನ್ ಪರಿತ್ಯಜ್ಯ ಮಾಮ್ ಏಕಂ ಶರಣಾಂ ವ್ರಜ (ಭ.ಗೀ 18.66).

ಸಂದರ್ಶಕ: ಬೇರೆ ಯಾರಾದರು ಭಗವಂತ ಅವನಿಗೆ ಬೇರೆಯೇ ಹೇಳಿದ್ದಾನೆ ಎಂದು ಹೇಳಿದರೆ ನೀವು ಅವನನ್ನು ಸಮಾನವಾಗಿ ನಂಬುತ್ತೀರಾ?

ಶ್ಯಾಮಸುಂದರ: ನಾವು ಇತರ ಧಾರ್ಮಿಕ ಪ್ರಕ್ರಿಯೆಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದಲ್ಲ.

ಪ್ರಭುಪಾದ: ಇಲ್ಲ, ನಾವು ಇತರ ಪ್ರಕ್ರಿಯೆಗಳನ್ನು ನಂಬುತ್ತೇವೆ. ಮೆಟ್ಟಿಲುಗಳಿದ್ದಂತೆ. ನೀವು ಅತಿ ಎತ್ತರದ ಮಹಡಿಗೆ ಹೋಗಲು ಬಯಸಿದರೆ, ನೀವು ಮೆಟ್ಟಿಲುಗಳ ಮೂಲಕ ಹೋಗಿ. ಅವರಲ್ಲಿ ಕೆಲವರು ಐವತ್ತು ಮೆಟ್ಟಿಲುಗಳನ್ನು ಹತ್ತಿದ್ದಾರೆ, ಕೆಲವರು ನೂರು ಮೆಟ್ಟಿಲುಗಳನ್ನು ಹತ್ತಿದ್ದಾರೆ. ಆದರೆ ಅಲ್ಲಿ ಸೇರಲು ಉಳಿದಿರುವ ಮೆಟ್ಟಿಲುಗಳು 1,000 ಮೆಟ್ಟಿಲು.

ಸಂದರ್ಶಕ: ಹಾಗಾದರೆ ನೀವು ಸಾವಿರವನ್ನು ತಲುಪಿದ್ದೀರಾ?

ಪ್ರಭುಪಾದ: ಹೌದು.

ಸಂದರ್ಶಕಿ: ಈ ಬೆಳಿಗ್ಗೆ, ನಮ್ಮಲ್ಲಿ ಯಾರಾದರು ಅನುಯಾಯಿಗಳಾಗಲು ಬಯಸಿದರೆ ನಾವು ಏನು ಕೊಡಬೇಕು ಅಥವಾ ಬಿಟ್ಟುಕೊಡಬೇಕು?

ಪ್ರಭುಪಾದ: ಮೊದಲನೆಯದಾಗಿ ಅಕ್ರಮ ಲೈಂಗಿಕ ಜೀವನವನ್ನು ತ್ಯಜಿಸಬೇಕು.

ಸಂದರ್ಶಕಿ: ಅದು ಎಲ್ಲಾ ಲೈಂಗಿಕ ಜೀವನವನ್ನು ಒಳಗೊಂಡಿರುತ್ತದೆಯೇ ಅಥವಾ...?

ಪ್ರಭುಪಾದ: ಹಹ್?

ಸಂದರ್ಶಕಿ: ಅಕ್ರಮ ಎಂದರೇನು?

ಪ್ರಭುಪಾದ: ಅಕ್ರಮ ಲೈಂಗಿಕತೆ (ಅದು) ಮದುವೆಯಿಲ್ಲದೆ, ಯಾವುದೇ ಸಂಬಂಧವಿಲ್ಲದೆ, ಲೈಂಗಿಕ ಜೀವನ, ಅದು ಅಕ್ರಮ ಲೈಂಗಿಕ ಜೀವನ.

ಸಂದರ್ಶಕಿ: ಅಂದರೆ ಮದುವೆಯಲ್ಲಿ ಲೈಂಗಿಕತೆಯನ್ನು ಅನುಮತಿಸಲಾಗಿದೆ, ಅದಿಲ್ಲದೆ ಇಲ್ಲ.

ಪ್ರಭುಪಾದ: ಅದು ಪ್ರಾಣಿಗಳ ಲೈಂಗಿಕ ಜೀವನ. ಪ್ರಾಣಿಗಳಂತೆ, ಅವಗಳಿಗೆ ಯಾವುದೇ ಸಂಬಂಧವಿಲ್ಲವಾದರು ಕೇವಲ ಲೈಂಗಿಕ ಜೀವನವಿದೆ. ಆದರೆ ಮಾನವ ಸಮಾಜದಲ್ಲಿ ನಿರ್ಬಂಧವಿದೆ. ಎಲ್ಲಾ ದೇಶಗಳಲ್ಲಿಯೂ, ಪ್ರತಿ ಧರ್ಮದಲೂ ಮದುವೆಯ ವ್ಯವಸ್ಥೆಯಿದೆ. ಆದ್ದರಿಂದ, ಮದುವೆಯಿಲ್ಲದ ಲೈಂಗಿಕ ಜೀವನವು ಅಕ್ರಮ ಲೈಂಗಿಕ ಜೀವನವು.

ಸಂದರ್ಶಕಿ: ಆದರೆ ಮದುವೆಯೊಳಗೆ ಲೈಂಗಿಕತೆಯನ್ನು ಅನುಮತಿಸಲಾಗಿದೆ.

ಪ್ರಭುಪಾದ: ಹೌದು, ಅದು...

ಸಂದರ್ಶಕಿ: ಮತ್ತು ಇನ್ನೇನು ತ್ಯಜಿಸಬೇಕು...

ಪ್ರಭುಪಾದ: ಒಬ್ಬನು ಎಲ್ಲಾ ರೀತಿಯ ಅಮಲು ಪದಾರ್ಥಗಳನ್ನು ತ್ಯಜಿಸಬೇಕು.

ಸಂದರ್ಶಕಿ: ಮಾದಕ ವಸ್ತುತಗಳು ಮತ್ತು ಮದ್ಯಪಾನಗಳೆ?

ಪ್ರಭುಪಾದ: ಅಮಲೇರಿಸುವ ಯಾವುದೇ ರೀತಿಯ ಮಾದಕ ವಸ್ತು.

ಶ್ಯಾಮಸುಂದರ: ಚಹಾ ಮತ್ತು…

ಪ್ರಭುಪಾದ: ಚಹಾ ಮತ್ತು ಸಿಗರೇಟ್ ಕೂಡ. ಅವುಗಳೂ ಅಮಲು ಪದಾರ್ಥಗಳೆ.

ಸಂದರ್ಶಕಿ: ಸಾರಾಯಿ, ಗಾಂಜಾ, ಚಹಾವನ್ನು ಒಳಗೊಂಡಂತೆ. ಇನ್ನೇನು?

ಪ್ರಭುಪಾದ: ಹೌದು. ಮಾಂಸಾಹಾರವನ್ನು ತ್ಯಜಿಸಬೇಕು. ಎಲ್ಲಾ ರೀತಿಯ ಮಾಂಸ. ಮಾಂಸ, ಮೊಟ್ಟೆ, ಮೀನು, ಇತ್ಯಾದಿ. ಮತ್ತು ಒಬ್ಬರು ಜೂಜಾಟವನ್ನು ತ್ಯಜಿಸಬೇಕು.

ಸಂದರ್ಶಕಿ: ಒಬ್ಬನು ತನ್ನ ಕುಟುಂಬವನ್ನು ತೊರೆಯಬೇಕೇ? ಎಲ್ಲರೂ ದೇವಸ್ಥಾನದಲ್ಲಿ ವಾಸಿಸುತ್ತಾರೆ ಎಂದು ನಾನು ಭಾವಿಸುತ್ತೇನೆ, ಅಲ್ಲವೇ?

ಪ್ರಭುಪಾದ: ಓಹ್, ಹೌದು. ಒಬ್ಬನು ಈ ಎಲ್ಲಾ ಪಾಪಕಾರ್ಯಗಳನ್ನು ತ್ಯಜಿಸದ ಹೊರತು ದೀಕ್ಷೆ ಪಡೆಯಲು ಸಾಧ್ಯವಿಲ್ಲ.

ಸಂದರ್ಶಕಿ: ಹಾಗಾದರೆ ಒಬ್ಬನು ತನ್ನ ಕುಟುಂಬವನ್ನು ಸಹ ತ್ಯಜಿಸಬೇಕೇ?

ಪ್ರಭುಪಾದ: ಕುಟುಂಬ?

ಸಂದರ್ಶಕಿ: ಒಂದು..., ಹೌದು.

ಪ್ರಭುಪಾದ: ಖಂಡಿತ, ಕುಟುಂಬ. ನಾವು ಕುಟುಂಬದ ಬಗ್ಗೆ ಚಿಂತಿಸುವುದಿಲ್ಲ, ನಾವು ವೈಯಕ್ತಿಕ ವ್ಯಕ್ತಿಯ ಬಗ್ಗೆ ಕಾಳಜಿ ವಹಿಸುತ್ತೇವೆ. ಈ ಕೃಷ್ಣ ಪ್ರಜ್ಞೆಯ ಆಂದೋಲನದಲ್ಲಿ ಒಬ್ಬನು ದೀಕ್ಷೆಯನ್ನು ಪಡೆಯಬೇಕಾದರೆ ಅವನು ಈ ಎಲ್ಲಾ ಪಾಪ ಚಟುವಟಿಕೆಗಳನ್ನು ತ್ಯಜಿಸಬೇಕು.

ಸಂದರ್ಶಕಿ: ಹಾಗಾದರೆ ಕುಟುಂಬವನ್ನು ಬಿಟ್ಟುಬಿಡಬೇಕು. ಆದರೆ ಏನು...

ಶ್ಯಾಮಸುಂದರ: ಇಲ್ಲ, ಇಲ್ಲ, ನೀವು ಕುಟುಂಬವನ್ನು ಬಿಡಬೇಕಾಗಿಲ್ಲ.

ಸಂದರ್ಶಕಿ: ಆದರೆ ನಾನು ದೀಕ್ಷೆಪಡೆಯಲು ಬಯಸಿದರೆರ ನಾನು ಇಲ್ಲಿಗೆ ಬಂದು ವಾಸಿಸಬೇಕಲ್ಲವೇ?

ಶ್ಯಾಮಸುಂದರ: ಇಲ್ಲ.

ಪ್ರಭುಪಾದ: ಅಗತ್ಯವಿಲ್ಲ.

ಸಂದರ್ಶಕಿ: ಓಹ್, ನಾನು ಮನೆಯಲ್ಲಿಯೇ ಇರಬಹುದೇ?

ಪ್ರಭುಪಾದ: ಓಹ್, ಹೌದು.

ಸಂದರ್ಶಕಿ: ಕೆಲಸದ ಬಗ್ಗೆ ಏನು ಮಾಡಬೇಕು? ಒಬ್ಬನು ತನ್ನ ಕೆಲಸವನ್ನು ಬಿಟ್ಟುಬಿಡಬೇಕೇ?

ಪ್ರಭುಪಾದ: ನೀವು ಈ ಕೆಟ್ಟ ಅಭ್ಯಾಸಗಳನ್ನು ತ್ಯಜಿಸಬೇಕು ಮತ್ತು ಈ ಮಣಿಗಳನ್ನು ಉಪಯೋಗಿಸಿ ಹರೇ ಕೃಷ್ಣ ಮಂತ್ರವನ್ನು ಜಪಿಸಬೇಕು. ಅಷ್ಟೆ.

ಸಂದರ್ಶಕಿ: ನಾನು ಹಣಕಾಸಿನ ನೆರವು ನೀಡಬೇಕೇ?

ಪ್ರಭುಪಾದ: ಇಲ್ಲ, ಅದು ನಿಮ್ಮ ಇಚ್ಛೆ. ನಮಗೆ ದಾನಮಾಡಬೇಕು ಅನಿಸಿದರೆ ಸರಿ. ಇಲ್ಲದಿದ್ದರೆ, ನಮಗೆ ತೊಂದರೆ ಇಲ್ಲ.

ಸಂದರ್ಶಕಿ: ಕ್ಷಮಿಸಿ, ನನಗೆ ಅರ್ಥವಾಗಲಿಲ್ಲ.

ಪ್ರಭುಪಾದ: ಯಾರ ಆರ್ಥಿಕ ಕೊಡುಗೆಗಳ ಮೇಲು ಅವಲಂಬಿತರಾಗಲು ನಾವು ಬಯಸುವುದಿಲ್ಲ. ನಾವು ಭಗವಂತನ ಮೇಲೆ, ಕೃಷ್ಣನ ಮೇಲೆ ಅವಲಂಬಿತರಾಗಿದ್ದೇವೆ.

ಸಂದರ್ಶಕಿ: ಹಾಗೆಂದರೆ ನಾನು ಯಾವುದೇ ಹಣವನ್ನು ನೀಡಬೇಕಾಗಿಲ್ಲ.

ಪ್ರಭುಪಾದ: ಇಲ್ಲ.

ಸಂದರ್ಶಕಿ: ನಕಲಿ ಗುರುವಿನಿಂದ ನಿಜವಾದ ಗುರುವನ್ನು ಪ್ರತ್ಯೇಕಿಸುವ ಮುಖ್ಯ ವಿಷಯಗಳಲ್ಲಿ ಇದೂ ಒಂದೇ?

ಪ್ರಭುಪಾದ: ಹೌದು. ನಿಜವಾದ ಗುರು ವ್ಯಾಪಾರಸ್ಥನಲ್ಲ. (ಅಂತ್ಯ)