KN/Prabhupada 0199 - ಧೂರ್ತ ತಥಾಕಥಿತ ವ್ಯಾಖ್ಯಾನಕಾರರು ಕೃಷ್ಣನನ್ನು ತ್ಯಜಿಸಲು ಬಯಸುತ್ತಾರೆ
Lecture on BG 13.8-12 -- Bombay, September 30, 1973
ತತ್ತ್ವಶಾಸ್ತ್ರವಿಲ್ಲದ ಯಾವುದೇ ತಿಳುವಳಿಕೆ, ಅದು ಕೇವಲ ಭಾವನೆ. ಮತ್ತು ಧಾರ್ಮಿಕ ಪರಿಕಲ್ಪನೆಯಿಲ್ಲದ ತತ್ವಶಾಸ್ತ್ರವು ಮಾನಸಿಕ ಊಹೆಯಾಗಿದೆ. ಈ ಎರಡು ವಿಷಯಗಳು ನಡೆಯುತ್ತಿವೆ, ಸಂಯೋಜನೆಯಿಲ್ಲದೆ. ಪ್ರಪಂಚದಾದ್ಯಂತ ಅನೇಕ ತಥಾಕತಥಿತ ಧಾರ್ಮಿಕ ವ್ಯವಸ್ಥೆಗಳಿವೆ, ಆದರೆ ಯಾವುದೇ ತತ್ವಶಾಸ್ತ್ರವಿಲ್ಲ. ಅದರಿಂದಾಗಿ, ಈ ತಥಾಕತಥಿತ ಧಾರ್ಮಿಕ ವ್ಯವಸ್ಥೆಗಳು ಆಧುನಿಕ ವಿದ್ಯಾವಂತ ವ್ಯಕ್ತಿಗಳಿಗೆ ಇಷ್ಟವಾಗುವುದಿಲ್ಲ. ಅವರು ಕ್ರಿಶ್ಚಿಯನ್, ಮುಸ್ಲಿಂ, ಮತ್ತು ಹಿಂದೂ ಧರ್ಮವನ್ನು ತ್ಯಜಿಸುತ್ತಿದ್ದಾರೆ. ಅವರು ಕೇವಲ ಔಪಚಾರಿಕತೆಗಳು ಮತ್ತು ಆಚರಣೆಗಳನ್ನು ಇಷ್ಟಪಡುವುದಿಲ್ಲ. ಅವರು ತತ್ವಶಾಸ್ತ್ರದ ಆಧಾರದ ಮೇಲೆ ಎಲ್ಲವನ್ನೂ ತಿಳಿದುಕೊಳ್ಳಲು ಬಯಸುತ್ತಾರೆ. ಅದುವೇ ಭಗವದ್ಗೀತೆ.
ಭಗವದ್ಗೀತೆಯು ಈ ವ್ಯವಸ್ಥೆ, ಅಂದರೆ ಕೃಷ್ಣ-ಭಕ್ತಿಯ ತತ್ವಶಾಸ್ತ್ರದ ಮೇಲೆ ಆಧಾರಿತವಾಗಿದೆ. ಭಗವದ್ಗೀತೆ ಎಂದರೆ ಕೃಷ್ಣ-ಭಕ್ತಿ, ಕೃಷ್ಣನ ಆರಾಧನೆ, ಕೃಷ್ಣ ಪ್ರಜ್ಞೆ. ಅದೇ ಭಗವದ್ಗೀತೆ. ಭಗವದ್ಗೀತೆಯ ಬೋಧನೆ: ಮನ್-ಮನಾ ಭವ ಮದ್-ಭಕ್ತೋ ಮದ್-ಯಾಜೀ ಮಾಮ್ ನಮಸ್ಕುರು (ಭ.ಗೀ 18.65). ಇದು ಭಗವದ್ಗೀತೆ. "ಯಾವಾಗಲೂ ನನ್ನನ್ನು ಸ್ಮರಿಸು." ಕೃಷ್ಣ ಪ್ರಜ್ಞೆ; ಶುದ್ಧ ಮತ್ತು ಸರಳ. ಮನ್-ಮನಾ ಭವ ಮದ್-ಭಕ್ತೋ ಮದ್-ಯಾಜೀ ಮಾಂ ನಮಸ್ಕುರು (ಭ.ಗೀ 18.65). ಎಲ್ಲೆಡೆ ಕೃಷ್ಣನು ತನ್ನ ವ್ಯಕ್ತಿತ್ವವನ್ನು ಒತ್ತಿಹೇಳಿದ್ದಾನೆ. ಅಹಮ್ ಆದಿರ್ ಹಿ ದೇವಾನಾಮ್ (ಭ.ಗೀ 10.2). "ನಾನು ಎಲ್ಲಾ ದೇವತೆಗಳ ಮೂಲ." ಮತ್ತಃ ಪರತರಂ ನಾನ್ಯತ್ ಕಿಂಚಿದ್ ಅಸ್ತಿ ಧನಂಜಯ (ಭ.ಗೀ 7.7).
- ಅಹಂ ಸರ್ವಸ್ಯ ಪ್ರಭವೋ
- ಮತ್ತಃ ಸರ್ವಂ ಪ್ರವರ್ತತೇ
- ಇತಿ ಮತ್ವಾ ಭಜಂತೇ ಮಾಂ
- ಬುಧಾ ಭಾವ-ಸಮನ್ವಿತಾಃ
- (ಭ.ಗೀ 10.8)
ಎಲ್ಲವೂ ಇದೆ.
ಆದ್ದರಿಂದ, ಸರ್ವ ಧರ್ಮಾನ್ ಪರಿತ್ಯಜ್ಯ ಮಾಮ್ ಏಕಮ್ (ಭ.ಗೀ 18.66), ಮಾಮ್, ಅಹಮ್, "ನಾನು." ಆದ್ದರಿಂದ, ಪ್ರತಿ ಪದ್ಯದಲ್ಲೂ, ಪ್ರತಿ ಅಧ್ಯಾಯದಲ್ಲೂ, ಕೃಷ್ಣನಿದ್ದಾನೆ. ಮಯಿ ಆಸಕ್ತ-ಮನಃ ಪಾರ್ಥ ಯೋಗಂ ಯುಂಜನ್ ಮದ್-ಆಶ್ರಯಃ (ಭ.ಗೀ 7.1). ಮಯಿ ಆಸಕ್ತ, "ನನ್ನಲ್ಲಿ ಆಸಕ್ತನಾಗಿರುವವನು," ಆಸಕ್ತ-ಮನಃ, "ನನ್ನಲ್ಲಿ ಆಸಕ್ತವಾಗಿರುವ ಮನಸ್ಸು, ಅದೇ ಯೋಗ." ಯೋಗಿನಾಮ್ ಅಪಿ ಸರ್ವೇಷಾಂ ಮದ್-ಗತೇನಾಂತರಾತ್ಮನ. ಮದ್-ಗತ, ಮತ್ತೆ ಮತ್ (ಭ.ಗೀ 6.47). ಮದ್-ಗತೇನಾಂತರಾತ್ಮನ, ಶ್ರದ್ಧವಾನ್ ಭಜತೇ ಯೋ ಮಾಂ ಸ ಮೇ ಯುಕ್ತತಮೋ ಮತಃ. ಆದ್ದರಿಂದ, ಪ್ರತಿಯೊಂದರಲ್ಲೂ ಕೃಷ್ಣ ಎಂದು ಒತ್ತಿ ಹೇಳಲಾಗಿದೆ. ಆದರೆ ಧೂರ್ತ ವ್ಯಾಖ್ಯಾನಕಾರರು ಕೃಷ್ಣನನ್ನು ತ್ಯಜಿಸಿಲು ಬಯಸುತ್ತಾರೆ.
ಈ ದುಷ್ಟತನವು ಭಾರತದಲ್ಲಿ ಹಾವಳಿಯನ್ನು ಉಂಟುಮಾಡಿದೆ. ಈ ಧೂರ್ತ ತಥಾಕಥಿತ ವ್ಯಾಖ್ಯಾನಕಾರರು ಕೃಷ್ಣನನ್ನು ತ್ಯಜಿಸಲು ಬಯಸುತ್ತಾರೆ. ಆದ್ದರಿಂದ, ಈ ಕೃಷ್ಣ ಪ್ರಜ್ಞೆಯ ಆಂದೋಲನವು ಈ ದುಷ್ಟರಿಗೆ ಒಂದು ಸವಾಲಾಗಿದೆ. "ನೀವು ಕೃಷ್ಣನಿಲ್ಲದೆ ಕೃಷ್ಣನನ್ನು ತಯಾರಿಸಲು ಬಯಸುತ್ತೀರಿ. ಇದು ಅಸಂಬದ್ಧ", ಎಂಬ ಸವಾಲು.