KN/Prabhupada 0200 - ಸಣ್ಣ ತಪ್ಪು ಇಡೀ ಯೋಜನೆಯನ್ನು ಹಾಳು ಮಾಡುತ್ತದೆ



Lecture on CC Adi-lila 1.11 -- Mayapur, April 4, 1975

ಆದ್ದರಿಂದ, ಇಡೀ ವೈದಿಕ ವ್ಯವಸ್ಥೆಯು ಅಂತಿಮವಾಗಿ ಜನನ, ಮರಣ, ವೃದ್ಧಾಪ್ಯ, ಮತ್ತು ರೋಗಗಳ ಈ ಪ್ರಕ್ರಿಯೆಯಿಂದ ರಕ್ಷಿಸಲ್ಪಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಬಹಳ ಹಿಂದೆಯೇ, ಒಬ್ಬ ರಾಕ್ಷಸನು ತೊಂದರೆ ನೀಡುತ್ತಿದ್ದನು ಎಂದು ವಿಶ್ವಾಮಿತ್ರ ಮುನಿಯು ಮಹಾರಾಜ ದಶರಥನ ಬಳಿಗೆ ಬಂದು ರಾಮ-ಲಕ್ಷ್ಮಣರನ್ನು ಕಾಡಿಗೆ ಕರೆದುಕೊಂಡು ಹೋಗುವಂತೆ ಬೇಡಿಕೊಂಡರು... ವಿಶ್ವಾಮಿತ್ರರೇ ಕೊಲ್ಲಬಹುದು, ಆದರೆ ಕೊಲ್ಲುವುದು ಕ್ಷತ್ರಿಯರ ವ್ಯವಹಾರವು. ಇದು ವೈದಿಕ ನಾಗರಿಕತೆ. ಇದು ಬ್ರಾಹ್ಮಣರ ವ್ಯವಹಾರವಲ್ಲ. ಆದ್ದರಿಂದ, ವಿಶ್ವಾಮಿತ್ರ ಮುನಿಯು ಮಹಾರಾಜ ದಶರಥನಿಂದ ಪಡೆದ ಮೊದಲ ಸ್ವಾಗತವು ಹೀಗಿತ್ತು: ಐಹಿಷ್ಠಂ ಯತ್ ಪುನರ್ಜನ್ಮ-ಜಯಾಯ. “ನೀವು ಮಹಾನ್ ಋಷಿಗಳು, ಸಂತರು, ನೀವು ಸಮಾಜವನ್ನು ತ್ಯಜಿಸಿದ್ದೀರಿ. ನೀವು ಕಾಡಿನಲ್ಲಿ ಏಕಾಂಗಿಯಾಗಿ ವಾಸಿಸುತ್ತಿದ್ದೀರಿ. ಯಾವ ಉದ್ದೇಶದಿಂದ? ಅದು ಪುನರ್ಜನ್ಮ-ಜಯಾಯ, ಹುಟ್ಟಿನ ಪುನರಾವರ್ತನೆಯನ್ನು ಜಯಿಸುವುದು.” ಇದುವೇ ಉದ್ದೇಶ. ಅಂತೆಯೇ, ನಮ್ಮ ಈ ಕೃಷ್ಣ ಪ್ರಜ್ಞೆಯ ಆಂದೋಲನವು ಅದೇ ಉದ್ದೇಶಕ್ಕಾಗಿರುವುದು, ಪುನರ್ಜನ್ಮ-ಜಯಾಯ, ಹುಟ್ಟು ಮತ್ತು ಸಾವಿನ ಪುನರಾವರ್ತನೆಯನ್ನು ಜಯಿಸುವುದು. ನೀವು ಇದನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು. ಸಣ್ಣ ತಪ್ಪು ಇಡೀ ಯೋಜನೆಯನ್ನು ಹಾಳು ಮಾಡುತ್ತದೆ, ಸಣ್ಣ ತಪ್ಪು. ಪ್ರಕೃತಿ ತುಂಬಾ ಪ್ರಬಲವಾಗಿದೆ. ದೈವೀ ಹಿ ಈಶಾ ಗುಣಮಯಿ ಮಮ ಮಾಯಾ ದುರತ್ಯಯಾ (ಭ.ಗೀ 7.14). ತುಂಬಾ ಬಲಶಾಲಿ. ಆದ್ದರಿಂದ, ನೀವು ಎಲ್ಲಾ ಹುಡುಗರು ಮತ್ತು ಹುಡುಗಿಯರು, ಅಮೆರಿಕದಿಂದ ಬಂದವರು, ನಾನು ನಿಮಗೆ ತುಂಬಾ ಕೃತಜ್ಞನಾಗಿದ್ದೇನೆ. ಆದರೆ ಗಾಂಭೀರ್ಯವನ್ನು ತೊರಯಬೇಡಿ. ತುಂಬಾ ಗಂಭೀರವಾಗಿರಿ. ಮತ್ತು ಇನ್ನೊಂದು ವಿಷಯ, ವಿಶೇಷವಾಗಿ ಅಮೆರಿಕನ್ನರಿಗೆ ವಿನಂತಿಸುತ್ತೇನೆ. ಅಮೆರಿಕವು ಜಗತ್ತನ್ನು ಉಳಿಸಲು ಉತ್ತಮ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ, ನೀವು ನಿಮ್ಮ ದೇಶದಲ್ಲಿ ಬಹಳ ಚೆನ್ನಾಗಿ ಬೋಧಿಸಿದರೆ... ಅವರೆಲ್ಲರೂ ಆಸಕ್ತಿ ವಹಿಸುವುದಿಲ್ಲ. ಆದರೆ ನಿಮ್ಮ ದೇಶದಲ್ಲಿ ಪುರುಷರ ಒಂದು ವರ್ಗವನ್ನು ನೀವು ಕೃಷ್ಣ ಪ್ರಜ್ಞಾವಂತರಾಗಿ ಮಾಡಿದರೆ ಅದು ಇಡೀ ಜಗತ್ತಿಗೆ ಹೆಚ್ಚು ಪ್ರಯೋಜನಕಾರಿಯಾಗುತ್ತದೆ. ಆದರೆ ಗುರಿ ಒಂದೇ, ಪುನರ್ಜನ್ಮ-ಜಯಾಯ: ಈ ಜನನ, ಮರಣ, ಮತ್ತು ವೃದ್ಧಾಪ್ಯದ ಪ್ರಕ್ರಿಯೆಯ ಮೇಲೆ ಜಯ ಸಾಧಿಸುವುದು. ಇದು ಕಾಲ್ಪನಿಕವಲ್ಲ; ಇದು ಸತ್ಯ. ಜನರು ಗಂಭೀರವಾಗಿಲ್ಲ. ಆದರೆ ನೀವು ನಿಮ್ಮ ಜನರಿಗೆ ಕಲಿಸಬಹುದು. ಇಲ್ಲದಿದ್ದರೆ, ಇಡೀ ಮಾನವ ಸಮಾಜ ಅಪಾಯದಲ್ಲಿದೆ. ಅವರು ಪ್ರಾಣಿಗಳಂತೆ, ಯಾವುದೂ ಇಲ್ಲದೆ... ವಿಶೇಷವಾಗಿ ಈ ಕಮ್ಯುನಿಸ್ಟ್ ಚಳುವಳಿ ತುಂಬಾ ಅಪಾಯಕಾರಿ, ದೊಡ್ಡ ಪ್ರಾಣಿಗಳನ್ನು ತಯಾರಿಸುವುದು. ಅವರು ಈಗಾಗಲೇ ಪ್ರಾಣಿಗಳು, ಮತ್ತು ಈ ಚಳುವಳಿ ದೊಡ್ಡ ಪ್ರಾಣಿಗಳನ್ನು ತಯಾರಿಸುತ್ತಿದೆ.

ಹಾಗಾಗಿ, ಈ ಕಮ್ಯುನಿಸ್ಟ್ ಚಳವಳಿಯ ವಿರುದ್ಧ ಅಮೆರಿಕ ಸ್ವಲ್ಪ ಗಂಭೀರವಾಗಿರುವುದರಿಂದ ನಾನು ಅಮೆರಿಕದೊಂದಿಗೆ ಮಾತನಾಡುತ್ತಿದ್ದೇನೆ. ಮತ್ತು ಇದನ್ನು ಎದುರಿಸಬಹುದು ಏಕೆಂದರೆ ಪ್ರಕ್ರಿಯೆಯು ಬಹಳ ಸಮಯದಿಂದ ಲಭ್ಯವಿದೆ. ದೇವ ಅಸುರ, ದೇವಾಸುರ, ದೇವತೆಗಳು ಮತ್ತು ರಾಕ್ಷಸರ ನಡುವಿನ ಹೋರಾಟ. ಅಂದರೆ ಇದು ಅಂತಹ ಹೋರಾಟವೇ, ‘ಕಮ್ಯುನಿಸ್ಟರು ಮತ್ತು ಬಂಡವಾಳಶಾಹಿಗಳು’ ಎಂಬ ವಿಭಿನ್ನ ಹೆಸರಿನಲ್ಲಿದೆ ಅಷ್ಟೆ. ಆದರೆ ಬಂಡವಾಳಶಾಹಿಗಳೂ ಕೂಡ ಶೇಕಡಾ ಎಂಬತ್ತು, ತೊಂಬತ್ತು ಪ್ರತಿಶತ ರಾಕ್ಷಸರು. ಹೌದು. ಏಕೆಂದರೆ ಅವರಿಗೆ ದೇವರ ವಿಜ್ಞಾನ ಗೊತ್ತಿಲ್ಲ. ಅದು ರಾಕ್ಷಸ ತತ್ವ. ಆದ್ದರಿಂದ, ಅವರನ್ನು ಕೃಷ್ಣಪ್ರಜ್ಞಾವಂತರಾಗಿ ಮಾಡಲು, ತಮ್ಮ ರಾಕ್ಷಸ ತತ್ವಗಳನ್ನು ತಿದ್ದಿಕೊಳ್ಳಲು ನಿಮ್ಮ ದೇಶದಲ್ಲಿ ಉತ್ತಮ ಅವಕಾಶವಿದೆ. ತದನಂತರ ಅವರು ಇತರ ರಾಕ್ಷಸರೊಂದಿಗೆ ವೀರಾವೇಶವಾಗಿ ಹೋರಾಡಲು ಸಮರ್ಥರಾಗುತ್ತಾರೆ. ಏಕೆಂದರೆ ನಾವು ‘ದೇವ’ ಎಂದಾದರೆ... ದೇವ ಎಂದರೆ ವೈಷ್ಣವ. ವಿಷ್ಣು-ಭಕ್ತೋ ಭವೇದ್ ದೇವಾ ಆಸುರಸ್ ತದ್-ವಿಪರ್ಯಯಃ. ಭಗವಾನ್ ವಿಷ್ಣುವಿನ ಭಕ್ತರು, ಅವರನ್ನು ದೇವಾ ಅಥವಾ ದೇವತೆಗಳೆಂದು ಕರೆಯಲಾಗುತ್ತದೆ. ಮತ್ತು ಅವರ ವಿರೋಧಿಗಳನ್ನು... ವಿರೋಧಿಗಳೂ ಸಹ ಒಬ್ಬ ದೇವರನ್ನು ಪೂಜಿಸುತ್ತಾರೆ. ರಾಕ್ಷಸರು ವಿಶೇಷವಾಗಿ ಶಿವನನ್ನು ಪೂಜಿಸುತ್ತಾರೆ. ಉದಾಹರಣೆಗೆ ರಾವಣ... ನಾವು ಅನಗತ್ಯವಾಗಿ ಆರೋಪ ಮಾಡುತ್ತಿಲ್ಲ. ರಾವಣನು ಮಹಾ ರಾಕ್ಷಸನಾಗಿದ್ದನು, ಆದರೆ ಅವನು ಭಕ್ತನಾಗಿದ್ದನು. ಶಿವ ಭಗವಂತನನ್ನು ಪೂಜಿಸುವುದು ಎಂದರೆ ಸ್ವಲ್ಪ ಭೌತಿಕ ಲಾಭವನ್ನು ಗಳಿಸುವುದಕ್ಕಾಗಿ. ಮತ್ತು ವಿಷ್ಣುವನ್ನು ಪೂಜಿಸುವುದರಿಂದ ಕೂಡ ಭೌತಿಕ ಲಾಭವಾಗುತ್ತದೆ. ಅದು ವಿಷ್ಣು ಕೊಟ್ಟದ್ದು. ಅದು ಕರ್ಮವಲ್ಲ. ಆದರೆ ವೈಷ್ಣವ, ಅವರು ಯಾವುದೇ ಭೌತಿಕ ಲಾಭಕ್ಕಾಗಿ ಹಾತೊರೆಯುತ್ತಿಲ್ಲ. ಭೌತಿಕ ಲಾಭವು ತಂತಾನೆ ಬರುತ್ತದೆ. ಆದರೆ ಅವರು ಬಯಸುವುದಿಲ್ಲ. ಅನ್ಯಾಭಿಲಾಷಿತಾ-ಶೂನ್ಯಮ್ (ಬ್ರಹ್ಮ.ಸಂ. 1.1.11). ಭೌತಿಕ ಲಾಭವು ಅವರ ಜೀವನದ ಗುರಿಯಲ್ಲ. ಅವರ ಜೀವನದ ಗುರಿ ವಿಷ್ಣು, ಭಗವಾನ್ ವಿಷ್ಣುವನ್ನು ಹೇಗೆ ತೃಪ್ತಿಪಡಿಸುವುದು ಎಂದು. ಅವನೇ ವೈಷ್ಣವ ಎಂದರೆ. ವಿಷ್ಣುರ್ ಅಸ್ಯ ದೇವತಃ. ನ ತೇ... ಮತ್ತು ರಾಕ್ಷಸರಿಗೆ ವೈಷ್ಣವನಾಗುವುದು ಜೀವನದ ಅತ್ಯುನ್ನತ ಪರಿಪೂರ್ಣತೆ ಎಂದು ತಿಳಿದಿಲ್ಲ. ಅದು ಅವರಿಗೆ ಗೊತ್ತಿಲ್ಲ.

ಹೇಗಾದರೂ ಸರಿ, ಈ ವೈಷ್ಣವ ಧರ್ಮದ ಹಾದಿಯನ್ನು ಹಿಡಿದಿರುವ ನೀವೆಲ್ಲಾ ಯುವಕರಲ್ಲಿ ನಮ್ಮ ವಿನಂತಿ ಏನೆಂದರೆ ನಿಮ್ಮ ದೇಶದಲ್ಲಿ ಈ ಪಂಥವನ್ನು ಪ್ರಚಾರ ಮಾಡಲು ಉತ್ತಮ ಅವಕಾಶವಿದೆ. ಆದ್ದರಿಂದ, ನೀವು ಇತರ ದೇಶಗಳಲ್ಲಿ ಹೆಚ್ಚು ಯಶಸ್ವಿಯಾಗದಿದ್ದರೂ, ನಿಮ್ಮ ದೇಶದಲ್ಲಿ ನೀವು ತುಂಬಾ ಯಶಸ್ವಿಯಾಗುತ್ತೀರಿ. ಉತ್ತಮ ಸಾಮರ್ಥ್ಯವಿದೆ. ಮತ್ತು ರಾಕ್ಷಸ ತತ್ವಗಳೊಂದಿಗೆ ಹೋರಾಡಲು ನಿಮ್ಮ ಜನರನ್ನು ಬಲಪಡಿಸಲು ಪ್ರಯತ್ನಿಸಿ.

ತುಂಬಾ ಧನ್ಯವಾದಗಳು.