KN/Prabhupada 0205 - "ಈ ಜನರು ಸ್ವೀಕರಿಸುತ್ತಾರೆ", ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ



Morning Walk -- May 20, 1975, Melbourne

ಪ್ರಭುಪಾದ: ಅವನು ಕೃಷ್ಣ ಪ್ರಜ್ಞೆಯುಳ್ಳವನಾದ್ದನೆ ಎಂದು ನೀವು ನೋಡಬೇಕಿಲ್ಲ. ಕೃಷ್ಣ ಪ್ರಜ್ಞೆಯುಳ್ಳವನಾಗುವುದು ಅಷ್ಟು ಸುಲಭವಲ್ಲ. ಇದು ಅಷ್ಟು ಸುಲಭವಲ್ಲ. ಅದು ಅನೇಕ, ಅನೇಕ ಜನ್ಮಗಳ ನಂತರ ಸಾಧ್ಯವಾಗುತ್ತದೆ, ಬಹುನಾಮ್ ಜನ್ಮನಾಮ್ ಅಂತೇ (ಭ.ಗೀ 7.19). ಆದರೆ ನಿಮ್ಮ ಕರ್ತವ್ಯವನ್ನು ನೀವು ಮಾಡಬೇಕು. ಹೋಗಿ ಉಪದೇಶಿಸಿ. ಯಾರೇ ದೇಖ, ತಾರೆ ಕಹ 'ಕೃಷ್ಣ'-ಉಪದೇಶ (ಚೈ.ಚ ಮಧ್ಯ 7.128). ನಿನ್ನ ಕರ್ತವ್ಯ ಮುಗಿಯಿತು. ಸಹಜವಾಗಿ, ನೀವು ಅವನನ್ನು ಮಾರ್ಪಡಿಸಲು ಪ್ರಯತ್ನಿಸುತ್ತೀರಿ. ಅವನು ಮಾರ್ಪಡದಿದ್ದರ, ಅದು ನಿಮ್ಮ ಕರ್ತವ್ಯದ ವಿಚಲನವಲ್ಲ. ನೀವು ಸುಮ್ಮನೆ ಹೋಗಿ ಮಾತನಾಡಬೇಕು. ನಾನು ನಿಮ್ಮ ದೇಶಕ್ಕೆ ಬಂದಾಗ, ನಾನು ಎಂದಿಗೂ ಯಶಸ್ಸನ್ನು ನಿರೀಕ್ಷಿಸಿರಲಿಲ್ಲ. ನನಗೆ ತಿಳಿದಿತ್ತು, ನಾನು ‘ಅಕ್ರಮ ಸಂಭೋಗ ಬೇಡ, ಮಾಂಸ ತಿನ್ನಬಾರದು’ ಎಂದು ಹೇಳಿದ ತಕ್ಷಣ ಅವರು ನನ್ನನ್ನು ತಿರಸ್ಕರಿಸುತ್ತಾರೆ ಎಂದು. (ನಗು) ಹಾಗಾಗಿ ನಾನು ಆಶಾವಾದಿಯಾಗಿರಲಿಲ್ಲ.

ಭಕ್ತ (1): ಅವರು ತುಂಬಾ ಭೌತವಾದಿಗಳು.

ಪ್ರಭುಪಾದ: ಹೌದು. ಆದರೆ ನೀವು ನನ್ನನ್ನು ಒಪ್ಪಿಕೊಂಡದ್ದು ನಿಮ್ಮ ದಯೆ. ಆದರೆ ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ. "ಈ ಜನರು ಸ್ವೀಕರಿಸುತ್ತಾರೆ", ಎಂದು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ. ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ.

ಹರಿ-ಶೌರಿ: ಆದ್ದರಿಂದ, ನಾವು ಕೇವಲ ಕೃಷ್ಣನನ್ನು ಅವಲಂಬಿಸಿದ್ದರೆ...

ಪ್ರಭುಪಾದ: ಹೌದು, ಅದು ನಮ್ಮ ಏಕೈಕ ವ್ಯವಹಾರವಾಗಿದೆ.

ಹರಿ-ಶೌರಿ: ಮತ್ತು ನಾವು ಫಲಿತಾಂಶಗಳನ್ನು ನೋಡಿದರೆ, ನಂತರ...

ಪ್ರಭುಪಾದ: ಮತ್ತು ಆಧ್ಯಾತ್ಮಿಕ ಗುರುಗಳು ಆದೇಶಿಸಿದಂತೆ ನಾವು ನಮ್ಮ ಕರ್ತವ್ಯವನ್ನು ಮಾಡಬೇಕು. ಗುರು-ಕೃಷ್ಣ-ಕೃಪಾಯ (ಚೈ.ಚ ಮಧ್ಯ 19.151). ಆಗ ನೀವು ಆಧ್ಯಾತ್ಮಿಕ ಗುರುಗಳಿಂದ ಮತ್ತು ಕೃಷ್ಣನಿಂದ, ಇಬ್ಬರಿಂದಲೂ ಅನುಗ್ರಹ ಪಡೆಯುತ್ತೀರಿ. ಅದುವೇ ಯಶಸ್ಸು.