KN/Prabhupada 0207 - ಬೇಜವಾಬ್ದಾರಿಯಿಂದ ಬದುಕಬೇಡಿ



Lecture on SB 6.1.16 -- Denver, June 29, 1975

ನಾವು ಶುದ್ಧೀಕರಣದ ಪ್ರಕ್ರಿಯೆಯನ್ನು ಚರ್ಚಿಸುತ್ತಿದ್ದೇವೆ. ಪ್ರಾಯಶ್ಚಿತ್ತ ಮತ್ತು ತಪಸ್ಸು ಎಂದು ವಿವಿಧ ವಿಧಾನಗಳನ್ನು ವಿವರಿಸಲಾಗಿದೆ. ನಾವು ಚರ್ಚಿಸಿದ್ದೇವೆ. ತದನಂತರ ಕೇವಲಯಾ ಭಕ್ತ. ಭಕ್ತಿಯು ಕರ್ಮ, ಜ್ಞಾನ, ಯೋಗ, ಎಲ್ಲವನ್ನೂ ಒಳಗೊಂಡಿದೆ. ತಪಸ್ಸು ಮತ್ತು ಇತರ ವಿಧಾನಗಳಿಂದ ಸಾಧ್ಯತೆಯಿದೆ ಎಂದು ವಿಶೇಷವಾಗಿ ಶಿಫಾರಸು ಮಾಡಲಾಗಿದೆ, ಆದರೆ ಅದು ಯಶಸ್ವಿಯಾಗದಿರಬಹುದು. ಆದರೆ ನಾವು ಭಕ್ತಿ ಸೇವೆಯ ಈ ಪ್ರಕ್ರಿಯೆಯನ್ನು ಅಳವಡಿಸಿಕೊಂಡರೆ ಖಚಿತವಾಗಿ ಸಾಧ್ಯವಾಗುತ್ತದೆ. ಆದ್ದರಿಂದ, ಈ ಶುದ್ಧೀಕರಣ ಪ್ರಕ್ರಿಯೆಯು ನಿವೃತ್ತಿ-ಮಾರ್ಗ ಎಂದರ್ಥ. ಪ್ರವೃತ್ತಿ-ಮಾರ್ಗ ಎಂದರೆ ನಾವು ಎಲ್ಲಿಗೆ ಹೋಗುತ್ತಿದ್ದೇವೆ, ಧಾವಿಸುತ್ತಿದ್ದೇವೆ - ನಾವು ಎಲ್ಲವನ್ನೂ ಮಾಡುತ್ತಿದ್ದೇವೆ, ಮನಬಂದಂತೆ ನಡೆಯುತ್ತಿದ್ದೇವೆ - ಅದನ್ನು ಪ್ರವೃತ್ತಿ-ಮಾರ್ಗ ಎನ್ನಲಾಗುತ್ತದೆ. ಜನರು ಸಾಮಾನ್ಯವಾಗಿ ಪ್ರವೃತ್ತಿ-ಮಾರ್ಗದಲ್ಲಿ ತೊಡಗಿದ್ದಾರೆ. ಅದರಲ್ಲೂ ಈ ಯುಗದಲ್ಲಿ ಮುಂದೆ ಏನಾಗಬಹುದು ಎಂಬುದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ಆದ್ದರಿಂದ ಅವರು, "ಸಾವಿನ ನಂತರ ಜೀವನವಿಲ್ಲ. ನಾವು ಈ ಜೀವನವನ್ನು ಆದಷ್ಟು ಆನಂದಿಸೋಣ. ಸಾವಿನ ನಂತರ ಏನಾಗಬಹುದು ಎಂಬುದನ್ನು ಚಿಂತಿಸುವುದು ಬೇಡ", ಎಂದು ಸಮಾಧಾನ ಪಡುತ್ತಾರೆ. ಮೊದಲನೆಯದಾಗಿ, ಅವರು ಮುಂದಿನ ಜನ್ಮದವಿದೆ ಎಂದು ನಂಬಲು ನಿರಾಕರಿಸುತ್ತಾರೆ. ಮತ್ತು ಮುಂದಿನ ಜನ್ಮವಿದ್ದರೂ, ಬೆಕ್ಕುಗಳು ಮತ್ತು ನಾಯಿಗಳಾಗಿ ಹುಟ್ಟಬಹುದಾದರೂ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಇದು ಆಧುನಿಕ ಯುಗದ ಅನುಭವ, ಬೇಜವಾಬ್ದಾರಿ ಜೀವನ.

ಆದರೆ ನಮ್ಮ ಕೃಷ್ಣ ಪ್ರಜ್ಞೆಯ ಆಂದೋಲನವು ಜನರಿಗೆ "ಬೇಜವಾಬ್ದಾರಿಯಿಂದ ಬದುಕಬೇಡಿ" ಎಂದು ಕಲಿಸುತ್ತಿದೆ. ಉದಾಹರಣೆಗೆ, "ಜೀವನವಿಲ್ಲ" ಎಂದು ನೀವು ಹೇಳಬಹುದು. ಆದರೆ ನಾನು, "ಜೀವನವಿದೆ ಎಂದು ಭಾವಿಸೋಣ..." ಎಂದು ವಾದಿಸಿದರೆ, ಈಗ ಇದು ಕೂಡ ಊಹೆಯಾಗಿದೆ, ಏಕೆಂದರೆ ಅಜ್ಞಾನಿಗಳಿಗೆ ಜೀವನವಿದೆಯೇ ಅಥವಾ ಇಲ್ಲವೇ ಎಂದು ತಿಳಿದಿಲ್ಲ. ಆದ್ದರಿಂದ, ನೀವು "ಜೀವನವಿಲ್ಲ" ಎಂದು ವಾದಿಸುತ್ತಿದ್ದೀರಿ, ಆದರೆ ಜೀವನವಿದೆಯೇ ಎಂದು ನಿಮಗೆ ತಿಳಿದಿಲ್ಲ. ಅದು ನಿಮ್ಮ ಜ್ಞಾನದಲ್ಲಿಲ್ಲ. ಆದ್ದರಿಂದ, ನೀವು ಎರಡೂ ಮಾರ್ಗಗಳನ್ನು ಸ್ವೀಕರಿಸಿ ಅದರ ಬಗ್ಗೆ ಯೋಚಿಸಬೇಕು ಎಂದು ಭಾವಿಸೋಣ... ನೀವು ಜೀವನವೇ ಇಲ್ಲ ಎಂದು ಯೋಚಿಸುತ್ತಿದ್ದೀರಿ. ಈಗ, "ಜೀವನವಿದ್ದರೆ" ಎಂಬ ನನ್ನ ಪ್ರತಿಪಾದನೆಯನ್ನು ನೀವು ಏಕೆ ಸ್ವೀಕರಿಸಬಾರದು? ಏಕೆಂದರೆ ಜೀವನವಿದೆಯೇ ಎಂದು ನೀವು ಖಚಿತಪಡಿಸಿಕೊಂಡಿಲ್ಲ. ಜೀವನವಿದೆ ಎಂದು ನಾವು ಹೇಳುತ್ತೇವೆ. ನಾವು ಉದಾಹರಣೆಯನ್ನು ಹೇಳುತ್ತೇವೆ: ಈ ಮಗು ತನ್ನ ಮುಂದಿನ ಜೀವನವನ್ನು ಪಡೆದುಕೊಂಡಂತೆ. "ಮುಂದೆ ಜೀವನವಿಲ್ಲ, ಮುಂದಿನ ಜೀವನವಿಲ್ಲ", ಎಂದು ಮಗು ಹೇಳಬಹುದು. ಆದರೆ ಅದು ವಾಸ್ತವವಲ್ಲ. ವಾಸ್ತವವೆಂದರೆ, ಜೀವನವಿದೆ. ಮಗು ಈ ದೇಹವನ್ನು ಬದಲಾಯಿಸುತ್ತಾನೆ ಮತ್ತು ಹುಡುಗನಾಗುತ್ತಾನೆ. ಮತ್ತು ಹುಡುಗನು ಈ ದೇಹವನ್ನು ಬದಲಾಯಿಸುತ್ತಾನೆ; ಅವನು ಯುವಕನಾಗುತ್ತಾನೆ. ಅದು ಸತ್ಯ. ಆದರೆ ಕೇವಲ ಹಠಮಾರಿತನದಿಂದ ನೀವು ಜೀವನವಿಲ್ಲ ಎಂದು ಹೇಳಬಹುದು. ಆದರೆ ಈ ವಾದವನ್ನೂ ಸ್ವೀಕರಿಸಿ: ಜೀವನವಿದ್ದರೆ, ನೀವು ಎಷ್ಟು ಬೇಜವಾಬ್ದಾರಿಯಿಂದ ನಿಮ್ಮ ಭವಿಷ್ಯದ ಜೀವನವನ್ನು ಕತ್ತಲೆಯಾಗಿಸುತ್ತಿದ್ದೀರಿ? ಅದೇ ಉದಾಹರಣೆ: ಒಂದು ಮಗು ಶಾಲೆಗೆ ಹೋಗದಿದ್ದರೆ, ಶಿಕ್ಷಣವನ್ನು ಪಡೆಯದಿದ್ದರೆ, ಅವನು "ಈ ಜೀವನಕ್ಕಿಂತ ಬೇರೆ ಜೀವನವಿಲ್ಲ, ನಾನು ದಿನವಿಡೀ ಆಡುತ್ತೇನೆ, ನಾನು ಶಾಲೆಗೆ ಏಕೆ ಹೋಗಬೇಕು?" ಎಂದು ಹೇಳಬಹುದು. ಆದರೆ ಜೀವನವಿದೆ. ಅವನು ಶಿಕ್ಷಣವನ್ನು ಪಡೆಯದಿದ್ದರೆ ಮುಂದೆ ಜೀವನದಲ್ಲಿ ಯುವಕನಾದ್ದಾಗ ಅವನಿಗೆ ಉತ್ತಮ ಸ್ಥಾನ ದೊರಕದಿದ್ದರೆ ಅವನು ಬಳಲುತ್ತಾನೆ. ಇದು ಬೇಜವಾಬ್ದಾರಿ ಜೀವನ.

ಆದ್ದರಿಂದ, ನಾವು ಮುಂದಿನ ಜೀವನವನ್ನು ಪಡೆಯುವ ಮೊದಲು, ಎಲ್ಲಾ ಪಾಪಪೂರ್ಣ ಜೀವನದಿಂದ ಮುಕ್ತರಾಗಬೇಕು. ಇಲ್ಲದಿದ್ದರೆ ನಮಗೆ ಉತ್ತಮ ಜೀವನ ಸಿಗುವುದಿಲ್ಲ. ವಿಶೇಷವಾಗಿ ಮರಳಿ ಭಗವದ್ಧಾಮಕ್ಕೆ ಹಿಂತಿರುಗ ಬೇಕಾದರೆ, ಒಬ್ಬನು ತನ್ನ ಪಾಪ ಜೀವನದ ಫಲಿತಾಂಶವನ್ನು ಈ ಜನ್ಮದಲ್ಲಿ ಮುಗಿಸಬೇಕು. ಭಗವದ್ಗೀತೆಯಲ್ಲಿ ನೀವು ಕಾಣುವಿರಿ,

ಯೇಷಾಂ ತ್ವ ಅಂತ-ಗತಂ ಪಾಪಂ
ಜನಾನಾಂ ಪುಣ್ಯ-ಕರ್ಮಣಾಂ
ತೇ ದ್ವಂದ್ವ-ಮೋಹ-ನಿರ್ಮುಕ್ತಾ
ಭಜಂತೇ ಮಾಮ್ ದೃಢ-ವ್ರತಾಃ
(ಭ.ಗೀ 7.28)

ಕೃಷ್ಣನ ನಿಷ್ಠಾವಂತ ಭಕ್ತನಾಗಲು, ಕೃಷ್ಣನ ಪರಿಪೂರ್ಣ ಭಕ್ತನಾಗಲು, ಒಬ್ಬನು ಪಾಪ ಜೀವನದ ಎಲ್ಲಾ ಪ್ರತಿಕ್ರಿಯೆಗಳಿಂದ ಮುಕ್ತನಾಗಬೇಕು ಎಂದರ್ಥ. ಯೇಷಾಂ ತ್ವ ಅಂತ-ಗತಂ ಪಾಪಂ. ಇನ್ನು ಮುಂದೆ ಯಾವುದೇ ಪಾಪ ಕಾರ್ಯಗಳನ್ನು ಮಾಡಬಾರದು. ಮತ್ತು ಅವನು ತನ್ನ ಹಿಂದಿನ ಜನ್ಮದಲ್ಲಿ ಮಾಡಿದ ಎಲ್ಲಾ ಪಾಪ ಕಾರ್ಯಗಳನ್ನು ಸಹ ಶೂನ್ಯಗೊಳಿಸಲಾಗುತ್ತದೆ. ಅದೂ ಶೂನ್ಯಗೊಳಿಸಲಾಗುತ್ತದೆ. ಮುಂದೆ ಯಾವ ಪ್ರತಿಕ್ರಿಯೆಯೂ ಇಲ್ಲ. ಯೇಷಾಂ ತ್ವ ಅಂತ-ಗತಂ ಪಾಪಂ ಜನಾನಾಂ ಪುಣ್ಯ-ಕರ್ಮಣಾಂ. ಜನರು ಪಾಪ ಕಾರ್ಯಗಳಲ್ಲಿ ಅಥವಾ ಪುಣ್ಯ ಕಾರ್ಯಗಳಲ್ಲಿ ತೊಡಗಿರುತ್ತಾರೆ. ಆದುದರಿಂದ, ಯಾರು ತಮ್ಮ ಹಿಂದಿನ ಪಾಪಕಾರ್ಯಗಳ ಫಲಿತ ಕರ್ಮವನ್ನು ಶೂನ್ಯಗೊಳಿಸುವುದಲ್ಲದೆ ಪ್ರಸ್ತುತ ಕ್ಷಣದಲ್ಲಿಯೂ ಕೇವಲ ಪುಣ್ಯ ಕಾರ್ಯಗಳಲ್ಲಿ ನಿರತರಾಗಿರುತ್ತಾರೋ, ಅಂತಹ ವ್ಯಕ್ತಿ, ಯೇಷಾಂ ತ್ವ ಅಂತ-ಗತಂ ಪಾಪಂ ಜನಾನಾಂ ಪುಣ್ಯ-ಕರ್ಮಣಾಂ ತೇ ದ್ವಂದ್ವ-ಮೋಹ-ನಿರ್ಮುಕ್ತಾ, ಯಾವುದೇ ಹಿಂಜರಿಕೆಯಿಲ್ಲದೆ, ಯಾವುದೇ ಸಂದೇಹವಿಲ್ಲದೆ, ಭಜಂತೇ ಮಾಮ್ ದೃಢ-ವ್ರತಾಃ. ಅದೇನೆಂದರೆ, ಯಾರೇ ಆಗಲಿ ಕೃಷ್ಣನ ಸೇವೆಯಲ್ಲಿ ದೃಢ ನಿಶ್ಚಯ ಮತ್ತು ಭಕ್ತಿಯಿಂದ ನಿರತರಾಗಿರುವನೋ, ಅವನು ಈಗ ಪಾಪಕರ್ಮಗಳ ಎಲ್ಲಾ ಪ್ರತಿಕ್ರಿಯೆಗಳಿಂದ ಮುಕ್ತನಾಗಿದ್ದಾನೆ ಎಂದು ತಿಳಿಯಬೇಕು.