KN/Prabhupada 0211 - ಶ್ರೀ ಚೈತನ್ಯ ಮಹಾಪ್ರಭುಗಳ ಆಶಯವನ್ನು ಸ್ಥಾಪಿಸುವುದು ನಮ್ಮ ಧ್ಯೇಯವಾಗಿದೆ
Lecture on CC Adi-lila 1.4 -- Mayapur, March 28, 1975
ಶ್ರೀ ಚೈತನ್ಯ ಮಹಾಪ್ರಭುಗಳ ಕರುಣೆಯನ್ನು ಪಡೆಯದೆ ನೀವು ಕೃಷ್ಣ ಪ್ರಜ್ಞೆಯನ್ನು ಪಡೆಯಲು ಸಾಧ್ಯವಿಲ್ಲ. ಮತ್ತು ಶ್ರೀ ಚೈತನ್ಯ ಮಹಾಪ್ರಭುಗಳ ಮೂಲಕ ಹೋಗುವುದು ಎಂದರೆ ಆರು ಗೋಸ್ವಾಮಿಗಳ ಮೂಲಕ ಹೋಗುವುದು. ಇದು ಪರಂಪರಾ ವ್ಯವಸ್ಥೆ. ಆದ್ದರಿಂದ, ನರೋತ್ತಮ ದಾಸ ಠಾಕೂರರು ಹೇಳುತ್ತಾರೆ,
- ಏ ಛಯ್ ಗೋಸಾಯಿ ಜಾರ್-ತಾರ್ ಮುಯಿ ದಾಸ್
- ತಾ-ಸಬಾರ ಪದ-ರೇಣು ಮೋರ ಪಂಚ-ಗ್ರಾಸ್
ಇದು ಪರಂಪರಾ ವ್ಯವಸ್ಥೆ. ಇದನ್ನು ಮೀರಲು ಸಾಧ್ಯವಿಲ್ಲ. ನೀವು ಪರಂಪರಾ ವ್ಯವಸ್ಥೆಯ ಮೂಲಕವೇ ಹೋಗಬೇಕು. ನೀವು ನಿಮ್ಮ ಆಧ್ಯಾತ್ಮಿಕ ಗುರುಗಳ ಮೂಲಕ ಗೋಸ್ವಾಮಿಗಳ ಬಳಿ ಸಾರಬೇಕು, ಮತ್ತು ಗೋಸ್ವಾಮಿಗಳ ಮೂಲಕ ಶ್ರೀ ಚೈತನ್ಯ ಮಹಾಪ್ರಭುಗಳ ಬಳಿ ಸಾರಬೇಕು, ಮತ್ತು ಶ್ರೀ ಚೈತನ್ಯ ಮಹಾಪ್ರಭುಗಳ ಮೂಲಕ ನೀವು ಕೃಷ್ಣನನ್ನು ಸಮೀಪಿಸಬೇಕು. ಇದುವೇ ದಾರಿ. ಆದ್ದರಿಂದ, ನರೋತ್ತಮ ದಾಸ ಠಾಕೂರರು ಹೇಳಿದರು: ಏ ಛೇ ಗೋಸಾಯಿ ಜಾರ್-ತಾರ್ ಮುಯಿ ದಾಸ್. ನಾವು ಸೇವಕರ ಸೇವಕರು. ಅದೇ ಚೈತನ್ಯ ಮಹಾಪ್ರಭುಗಳ ಆದೇಶ: ಗೋಪಿ-ಭರ್ತುಃ ಪದ-ಕಮಲಯೋರ್ ದಾಸ-ದಾಸಾನುದಾಸಃ (ಚೈ.ಚ ಮಧ್ಯ 13.80). ನೀವು ಸೇವಕರ ಸೇವಕರಾದಷ್ಟೂ ಪರಿಪೂರ್ಣರಾಗಿರುತ್ತೀರಿ. ಮತ್ತು ನೀವು ಇದ್ದಕ್ಕಿದ್ದಂತೆ ಪ್ರಭುವಾಗಲು ಬಯಸಿದರೆ ನರಕಕ್ಕೆ ಹೋಗುತ್ತೀರಿ. ಅಷ್ಟೇ. ಹಾಗೆ ಮಾಡಬೇಡಿ. ಇದು ಶ್ರೀ ಚೈತನ್ಯ ಮಹಾಪ್ರಭು ಅವರ ಬೋಧನೆ. ನೀವು ಸೇವಕನ, ಸೇವಕನ, ಸೇವಕನಾದವನ ಮೂಲಕ ಹೋದರೆ ನೀವು ಮುಂದುವರೆಯುತ್ತೀರಿ. ಮತ್ತು ನೀವು ಈಗ ಪ್ರಭು ಎಂದು ಭಾವಿಸಿದರೆ ನರಕಕ್ಕೆ ಹೋಗುತ್ತೀರಿ. ಇದು ಪ್ರಕ್ರಿಯೆ. ದಾಸ-ದಾಸಾನುದಾಸಃ. ಇದು ಚೈತನ್ಯ ಮಹಾಪ್ರಭುಳ ಹೇಳಿಕೆ. ಆದ್ದರಿಂದ ಸೇವಕನ, ಸೇವಕನ, ಸೇವಕನ ನೂರನೆ ಮಟ್ಟದ ಸೇವಕನಾದರೆ ಅವನು ಮುಂದುವರಿದಿದ್ದಾನೆ ಎಂದರ್ಥ. ಅವನು ಮುಂದುವರಿದಿದ್ದಾನೆ. ಮತ್ತು ನೇರವಾಗಿ ಪ್ರಭುವಾಗುವವನು ನರಕದಲ್ಲಿದ್ದಾನೆ.
ಅನರ್ಪಿತ-ಚರೀಂ ಚಿರಾತ್ (ಚೈ.ಚ ಆದಿ 1.4). ನಾವು ಯಾವಾಗಲೂ ಶ್ರೀಲ ರೂಪ ಗೋಸ್ವಾಮಿಯ ಆದೇಶವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಆದ್ದರಿಂದ, ನಾವು ಪ್ರಾರ್ಥಿಸುತ್ತೇವೆ: ಶ್ರೀ-ಚೈತನ್ಯ-ಮನೋ-'ಭಿಷ್ಟಂ ಸ್ಥಾಪಿತಂ ಯೇನ ಭೂ-ತಲೇ. ಶ್ರೀ ಚೈತನ್ಯ ಮಹಾಪ್ರಭುಗಳ ಬಯಕೆಯನ್ನು ಸ್ಥಾಪಿಸುವುದು ನಮ್ಮ ಧ್ಯೇಯ. ಅದು ನಮ್ಮ ಕೆಲಸ. ಶ್ರೀ-ಚೈತನ್ಯ-ಮನೋ-'ಭಿಷ್ಟಂ ಸ್ಥಾಪಿತಂ ಯೇನ ಭೂ-ತಲೇ. ಶ್ರೀಲ ರೂಪ ಗೋಸ್ವಾಮಿ ಅದನ್ನು ಮಾಡಿದರು. ಅವರು ನಮಗೆ ಹಲವಾರು ಪುಸ್ತಕಗಳನ್ನು ನೀಡಿದ್ದಾರೆ, ವಿಶೇಷವಾಗಿ ಭಕ್ತಿ-ರಸಾಮೃತ-ಸಿಂಧು. ಇದನ್ನು ನಾವು ಇಂಗ್ಲಿಷ್‌ಗೆ ‘ನೆಕ್ಟಾರ್ ಆಫ್ ಡಿವೋಷನ್’ ಎಂದು ಅನುವಾದಿಸಿದ್ದೇವೆ, ಭಕ್ತಿ ಸೇವೆಯ ವಿಜ್ಞಾನವನ್ನು ಅರ್ಥಮಾಡಿಕೊಳ್ಳಲು. ಭಕ್ತನಾಗುವುದು ಹೇಗೆ ಎಂದು ತಿಳಿಸುವುದು ಶ್ರೀಲ ರೂಪ ಗೋಸ್ವಾಮಿಯ ಶ್ರೇಷ್ಠ ಕೊಡುಗೆಯಾಗಿದೆ. ಭಕ್ತನಾಗುವುದು ಹೇಗೆ. ಇದು ಭಾವನೆಯಲ್ಲ; ಇದು ವಿಜ್ಞಾನ. ಈ ಕೃಷ್ಣ ಪ್ರಜ್ಞೆ ಚಳುವಳಿಯೇ ಒಂದು ದೊಡ್ಡ ವಿಜ್ಞಾನ. ಯದ್ ವಿಜ್ಞಾನ-ಸಮನ್ವಿತಮ್. ಜ್ಞಾನಂ ಮೇ ಪರಮಂ ಗುಹ್ಯಂ ಯದ್ ವಿಜ್ಞಾನ-ಸಮನ್ವಿತಮ್ (ಶ್ರೀ.ಭಾ 2.9.31). ಇದು ಭಾವನೆಯಲ್ಲ. ನೀವು ಅದನ್ನು ಭಾವನೆ ಎಂದು ತೆಗೆದುಕೊಂಡರೆ, ನೀವು ಗೊಂದಲವನ್ನು ಸೃಷ್ಟಿಸುತ್ತೀರಿ. ಅದುವೇ ರೂಪ ಗೋಸ್ವಾಮಿಯ ಸೂಚನೆ. ಅವರು ಹೇಳಿದರು,
- ಶ್ರುತಿ-ಸ್ಮೃತಿ-ಪುರಾಣಾದಿ-
- ಪಂಚರಾತ್ರಿಕಿ-ವಿಧಿಂ ವಿನಾ
- ಐಕಾಂತಿಕಿ ಹರೇರ್ ಭಕ್ತಿ
- ಉತ್ಪಾತಾಯೈವ ಕಲ್ಪತೇ
- [ಬ್ರಹ್ಮ.ಸಂ 1.2.101]