KN/Prabhupada 0214 - ನಾವು ಭಕ್ತರಾಗಿರುವವರೆಗೆ ಈ ಚಳುವಳಿಯನ್ನು ತೀವ್ರವಾಗಿ ಮುನ್ನಡೆಸಬಹುದು



Room Conversation 1 -- July 6, 1976, Washington, D.C.

ಪ್ರಭುಪಾದ: ಭಾರತದಲ್ಲಿ ನಮಗೆ ತುಂಬಾ ಭೂಮಿ ನೀಡಲಾಗಿದೆ. ಆದರೆ ಅದನ್ನು ನಿರ್ವಹಿಸಲು ಜನರಿಲ್ಲ.

ಸ್ವರೂಪ ದಾಮೋದರ: ನನಗೆ ಮಣಿಪುರದಿಂದ ಒಂದು ಪತ್ರವೂ ಬಂದಿತು. ಆಜೀವ ಸದಸ್ಯರಾದ ಕುಲವಿದ ಸಿಂಗ್, ಯುವಜನರು ಈಗ ಧಾರ್ಮಿಕ ಚಿಂತನೆಯನ್ನು ತ್ಯಜಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಆದ್ದರಿಂದ, ಅವರು ಒಂದು ರೀತಿಯ ಶಾಲೆಯನ್ನು ಸ್ಥಾಪಿಸಲು ಬಯಸಿದರು...

ಪ್ರಭುಪಾದ: ಅದು (ಅಸ್ಪಷ್ಟ) ವಿವೇಕಾನಂದರಿಂದ ಮಾಡಲ್ಪಟ್ಟಿದೆ, ಯತೋ ಮತ ತತೋ ಪಥ, (?) ತುಂಬಾ ಕೆಟ್ಟದು.

ಸ್ವರೂಪ ದಾಮೋದರ: ಹೌದು. ಆದ್ದರಿಂದ ತಕ್ಷಣ... ಅವರು ಇಸ್ಕಾನ್ ಶಾಖೆಯನ್ನು ಪ್ರಾರಂಭಿಸಲು ಬಯಸಿದ್ದರು, ಮತ್ತು ಅವರು...

ಪ್ರಭುಪಾದ: ಅದು ಕಷ್ಟವಲ್ಲ ಎನಿಸುತ್ತದೆ. ಮಣಿಪುರ...

ಸ್ವರೂಪ ದಾಮೋದರ: ಅದು ತುಂಬಾ ಸುಲಭ, ಏಕೆಂದರೆ...

ಪ್ರಭುಪಾದ: ...ವೈಷ್ಣವ. ಆದ್ದರಿಂದ, ಅವರು ಅರ್ಥಮಾಡಿಕೊಂಡರೆ, ಅದು ತುಂಬಾ ಒಳ್ಳೆಯದು.

ಸ್ವರೂಪ ದಾಮೋದರ: ಎಲ್ಲರೂ, ಸರ್ಕಾರವೂ ಭಾಗವಹಿಸುತ್ತದೆ. ಆದ್ದರಿಂದ, ಅವರು ನನಗೆ ಒಂದು ಪತ್ರ ಬರೆದು ನಮಗೆ ಒಳ್ಳೆಯ ಭೂಮಿಯನ್ನು ನೀಡಬಹುದು ಎಂದು ಹೇಳಿದರು ಮತ್ತು...

ಪ್ರಭುಪಾದ: ಓಹ್ ಹೌದು. ಗೋವಿಂದಾಜೀಯ ದೇವಸ್ಥಾನ?

ಸ್ವರೂಪ ದಾಮೋದರ: ಗೋವಿಂದಾಜೀಯ ದೇವಸ್ಥಾನವನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿದೆ. ನಾನು ಅವರೊಂದಿಗೆ ಮಾತನಾಡಿದೆ, ನಾನು ಪತ್ರ ಬರೆದೆ...

ಪ್ರಭುಪಾದ: ಸರ್ಕಾರ ನಿರ್ವಹಿಸಲು ಸಾಧ್ಯವಿಲ್ಲ.

ಸ್ವರೂಪ ದಾಮೋದರ: ಅವರು ಸರಿಯಾಗಿ ನಿರ್ವಹಿಸುತ್ತಿಲ್ಲ.

ಪ್ರಭುಪಾದ: ಅವರಿಗೆ ಸಾಧ್ಯವಿಲ್ಲ. ಯಾವುದೇ ವಿಷಯ, ವಿಶೇಷವಾಗಿ ಭಾರತದಲ್ಲಿ, ಸರ್ಕಾರಕ್ಕೆ ಹೋದ ತಕ್ಷಣ ಅದು ಹಾಳಾಗುತ್ತದೆ. ಸರ್ಕಾರ ಎಂದರೆ ಕಳ್ಳರು ಮತ್ತು ದರೋಡೆಕೋರರು ಎಲ್ಲರು. ಅವರು ಹೇಗೆ ನಿರ್ವಹಿಸುತ್ತಾರೆ? ಅವರು ಪಡೆದದ್ದನ್ನು ನುಂಗುತ್ತಾರೆ. ಸರ್ಕಾರ ಎಂದರೆ... ಅವರು ನಿರ್ವಹಿಸಲು ಸಾಧ್ಯವಿಲ್ಲ, ಅವರು ಭಕ್ತರಲ್ಲ. ಅದು ಭಕ್ತರ ಕೈಯಲ್ಲಿರಬೇಕು. ಆದ್ದರಿಂದ, (ಅಸ್ಪಷ್ಟ), ಹಣ ಪಡೆಯುವ ವ್ಯಕ್ತಿ, ಅವರಿಗೆ ಸ್ವಲ್ಪ ಹಣ ಬೇಕು, ಅಷ್ಟೆ. ಅವರು ದೇವಾಲಯವನ್ನು ಹೇಗೆ ನಿರ್ವಹಿಸುತ್ತಾರೆ? ಅದು ಅಸಾಧ್ಯ.

ಸ್ವರೂಪ ದಾಮೋದರ: ಇದು ರಾಜಕೀಯ ಸಮಸ್ಯೆಯಾಗುತ್ತದೆ.

ಪ್ರಭುಪಾದ: ಅಷ್ಟೇ.

ಸ್ವರೂಪ ದಾಮೋದರ: ಅದು ರಾಜಕೀಯದಲ್ಲಿ ಸಿಲುಕಿಕೊಳ್ಳುತ್ತದೆ. ಆರಾಧನೆಗೆ ಯಾವುದೇ ಸಂಬಂಧವಿರುವುದಿಲ್ಲ.

ಪ್ರಭುಪಾದ: ಸರ್ಕಾರವು ಭಕ್ತನ ಕೈಗೆ ಕೊಡಬೇಕು. ನಾವು ಮಾನ್ಯತೆ ಪಡೆದ ಭಕ್ತರು, ಇಸ್ಕಾನ್. ಅವರು ನಿಜವಾಗಿಯೂ ನಿರ್ವಹಣೆ ಬಯಸಿದರೆ... ನಾವು ಭಕ್ತರಾಗಿ ಹಲವಾರು ಕೇಂದ್ರಗಳನ್ನು ನಿರ್ವಹಿಸುತ್ತಿದ್ದೇವೆ. ಹಣ ಪಡೆಯುವ ವ್ಯಕ್ತಿಗಳಿಂದ ಈ ಎಲ್ಲಾ ವಿಷಯಗಳನ್ನು ನಿರ್ವಹಿಸಲು ಸಾಧ್ಯವಿಲ್ಲ. ಅದು ಸಾಧ್ಯವಿಲ್ಲ.

ಭಕ್ತ (2): ಇಲ್ಲ.

ಪ್ರಭುಪಾದ: ಅವರು ಮಾಡುವುದಿಲ್ಲ. ನಾವು ಭಕ್ತರಾಗಿರುವವರೆಗೆ ಈ ಚಳುವಳಿಯನ್ನು ತೀವ್ರವಾಗಿ ಮುಂದುವರಿಸಬಹುದು ಅನ್ಯಥಾ ಅದು ಕೊನೆಗೊಳ್ಳುತ್ತದೆ. ಇದನ್ನು ಯಾವುದೇ ಹೊರಗಿನವರು ನಡೆಸಲು ಸಾಧ್ಯವಿಲ್ಲ. ಇಲ್ಲ. ಭಕ್ತರು ಮಾತ್ರ. ಇದೇ ರಹಸ್ಯ.

ಭಕ್ತ (2): ನೀವು ಭಕ್ತನಿಗೆ ಹಣ ಕೊಡಲು ಸಾಧ್ಯವಿಲ್ಲ.

ಪ್ರಭುಪಾದ: ಎಹ್?

ಭಕ್ತ (2): ನೀವು ಭಕ್ತನನ್ನು ಖರೀದಿಸಲು ಸಾಧ್ಯವಿಲ್ಲ.

ಪ್ರಭುಪಾದ: ಅದು ಸಾಧ್ಯವಿಲ್ಲ.

ಭಕ್ತ (2): ನೆಲ ಗುಡಿಸಲು ನೀವು ಯಾರನ್ನಾದರೂ ಖರೀದಿಸಬಹುದು, ಆದರೆ ನೀವು ಒಬ್ಬ ಪ್ರಚಾರಕನನ್ನು ಖರೀದಿಸಲು ಸಾಧ್ಯವಿಲ್ಲ.

ಪ್ರಭುಪಾದ: ಇಲ್ಲ, ಅದು ಸಾಧ್ಯವಿಲ್ಲ. ನಾವು ಭಕ್ತರಾಗಿ ಉಳಿಯುವವರೆಗೆ ನಮ್ಮ ಚಳುವಳಿ ಯಾವುದೇ ಅಡಚಣೆಗಳಿಲ್ಲದೆ ಮುಂದುವರಿಯುತ್ತದೆ.

ಭಕ್ತ (2): ಭಕ್ತರು ಜಗತ್ತನ್ನು ಸ್ವಾಧೀನಪಡಿಸಿಕೊಳ್ಳಬೇಕು.

ಪ್ರಭುಪಾದ: ಹೌದು, ಅದು ಜಗತ್ತಿಗೆ ಒಳ್ಳೆಯದು.

ಭಕ್ತ (2): ಹೌದು.

ಪ್ರಭುಪಾದ: ಭಕ್ತರು ಇಡೀ ಜಗತ್ತನ್ನು ನಿರ್ವಹಿಸಿದರೆ ಎಲ್ಲರೂ ಸಂತೋಷವಾಗಿರುತ್ತಾರೆ. ಅದರಲ್ಲಿ ಯಾವುದೇ ಸಂದೇಹವಿಲ್ಲ. ಕೃಷ್ಣನು ಅದನ್ನು ಬಯಸುತ್ತಾನೆ. ಪಾಂಡವರು ಸರ್ಕಾರದ ಉಸ್ತುವಾರಿ ವಹಿಸಬೇಕೆಂದು ಅವನು ಬಯಸಿದನು. ಆದ್ದರಿಂದ, ಅವನು ಯುದ್ಧದಲ್ಲಿ ಭಾಗವಹಿಸಿದನು. "ಹೌದು, ನೀನೇ ಆಗಿರಬೇಕು... ಎಲ್ಲಾ ಕೌರವರನ್ನು ಕೊಲ್ಲಬೇಕು ಮತ್ತು ಮಹಾರಾಜ ಯುಧಿಷ್ಠಿರನನ್ನು ಪ್ರತಿಷ್ಠಾಪಿಸಬೇಕು." ಅದು ಧರ್ಮ-ಸಂಸ್ಥಾಪನಾರ್ಥಾಯ. ಪರಿತ್ರಾಣಾಯ ಸಾಧುನಾಂ ವಿನಾಶಾಯ ಚ ದುಷ್ಕೃತಾಂ (ಭ.ಗೀ 4.8)). ಎಲ್ಲವೂ ತುಂಬಾ ಸುಗಮವಾಗಿ ನಡೆಯಬೇಕೆಂದು ಮತ್ತು ಜನರು ದೈವ ಪ್ರಜ್ಞೆ ಹೊಂದಬೇಕೆಂದು ಅವನು ಬಯಸುತ್ತಾನೆ. ಇದ್ದರಿಂದ ಅವರ ಜೀವನ ಯಶಸ್ವಿಯಾಗಬೇಕೆಂದು ಬಯಸುತ್ತಾನೆ. ಅದು ಕೃಷ್ಣನ ಯೋಜನೆ. "ಈ ದುಷ್ಟರು ದಾರಿತಪ್ಪಿಸುತ್ತಾರೆ. ಆದ್ದರಿಂದ... (ಅಸ್ಪಷ್ಟ) ಮಾನವ ಜೀವನವು ಹಾಳಾಗಿದೆ." ಹಾಗಾಗಿ, "ಸ್ವಾತಂತ್ರ್ಯದ ಅರ್ಥವೇನು, (ಅಸ್ಪಷ್ಟ)?" ಎಂಬುದರ ಬಗ್ಗೆ ನಾನು ಮಾತನಾಡುತ್ತಿದ್ದೆ. ಜೀವನವು ಹಾಳಾಗಿದೆ. ಮತ್ತು ಅವರು ತಮ್ಮ ಜೀವನವನ್ನು ಹಾಳುಮಾಡಿಕೊಂಡು ಮುಂದಿನ ಜನ್ಮದಲ್ಲಿ ನಾಯಿಯಾಗುತ್ತಾರೆ… ಮೆಟ್ಟಿಲುಗಳೊಂದಿಗೆ, ಈ ದೊಡ್ಡ, ದೊಡ್ಡ ಕಟ್ಟಡ ಕಟ್ಟುತ್ತಾರೆ ಅಷ್ಟೆ. ಮುಂದಿನ ಜನ್ಮದಲ್ಲಿ ನಾಯಿಯಾಗಲಿರುವ ಈ ಜನರಿಗೆ ದೊಡ್ಡ ಕಟ್ಟಡಗಳು ಏನು ಪ್ರಯೋಜನವನ್ನು ನೀಡುತ್ತವೆ? ಸೈದ್ಧಾಂತಿಕವಾಗಿ, ಈ ದೊಡ್ಡ ಕಟ್ಟಡವನ್ನು ಕಟ್ಟುವವರು ಮುಂದಿನ ಜನ್ಮದಲ್ಲಿ ಅವರು ನಾಯಿಯಾಗಲಿದ್ದಾರೆ.

ಸ್ವರೂಪ ದಾಮೋದರ: ಆದರೆ ಮುಂದಿನ ಜನ್ಮದಲ್ಲಿ ಅವರು ನಾಯಿಯಾಗುತ್ತಾರೆಂದು ಅವರಿಗೆ ತಿಳಿದಿಲ್ಲ.

ಪ್ರಭುಪಾದ: ಅದೇ ಕಷ್ಟ. ಅವರಿಗೆ ಅದು ತಿಳಿದಿಲ್ಲ. ಅದೇ ಮಾಯಾ.