KN/Prabhupada 0223 - ಇಡೀ ಮಾನವ ಸಮಾಜಕ್ಕೆ ಶಿಕ್ಷಣ ನೀಡಲು ಈ ಸಂಸ್ಥೆಯು ಇರಲೇಬೇಕು
Room Conversation with Ratan Singh Rajda M.P. "Nationalism and Cheating" -- April 15, 1977, Bombay
ಪ್ರಭುಪಾದ: ಆಕ್ಷೇಪಣೆ ಏನು?
ಶ್ರೀ ರಾಜ್ದಾ: ನನಗೆ ಯಾವುದೇ ಆಕ್ಷೇಪಣೆಯಿಲ್ಲ.
ಪ್ರಭುಪಾದ: ಭಗವದ್ಗೀತೆಯನ್ನು ಸ್ವೀಕರಿಸಲಾಗಿದೆ. ನನಗೆ ತಿಳಿದಿರುವುದೇನೆಂದರೆ ಮೊರಾರ್ಜಿಯನ್ನು ಬಂಧಿಸಲು ಹೋದಾಗ ಅವರು, "ನನ್ನ ಭಗವದ್ಗೀತೆ ಅಧ್ಯಯನವನ್ನು ಮುಗಿಸಲು ಬಿಡಿ", ಎಂದು ಹೇಳಿದರು. ನಾನು ಅದನ್ನು ಪತ್ರಿಕೆಯಲ್ಲಿ ಓದಿದೆ.
ಶ್ರೀ ರಾಜ್ದಾ: ಹೌದು, ಅವರು ಹೇಳುತ್ತಿದ್ದರು.
ಪ್ರಭುಪಾದ: ಹಾಗಾದರೆ ಅವರು... ಅವರು ಭಗವದ್ಗೀತೆಯ ಭಕ್ತ. ಇನ್ನೂ ಅನೇಕರಿದ್ದಾರೆ. ಹಾಗಾದರೆ ಈ ಬೋಧನೆಯನ್ನು ಇಡೀ ಜಗತ್ತಿಗೆ ಏಕೆ ನೀಡಬಾರದು?
ಶ್ರೀ ರಾಜ್ದಾ: ಸರ್, ಅವರು ಪ್ರತಿದಿನ ಬೆಳಿಗ್ಗೆ 3.30ಕ್ಕೆ ಎದ್ದು, ಮೊದಲು ತಮ್ಮ ಧಾರ್ಮಿಕ ಕೆಲಸಗಳು, ಭಗವದ್ಗೀತೆಯ ಅಧ್ಯಯನ, ಮತ್ತು ಇತರ ಕಾರ್ಯಗಳನ್ನು ಮಾಡುತ್ತಾರೆ. ಅದು ಎರಡು, ಮೂರು ಗಂಟೆಗಳ ಕಾಲ ನಡೆಯುತ್ತದೆ. ಏಳು ಗಂಟೆಗೆ, ಅವರು ಸ್ನಾನ ಮಾಡಿದ ನಂತರ ತಮ್ಮ ಕೋಣೆಯಿಂದ ಹೊರಬರುತ್ತಾರೆ. ನಂತರ ಅವರು ಒಬ್ಬ ನಿರ್ದಿಷ್ಟ ವ್ಯಕ್ತಿಯನ್ನು ಭೇಟಿಯಾಗುತ್ತಾರೆ...
ಪ್ರಭುಪಾದ: ನಮ್ಮ ಈ ವಿದೇಶಿ ಹುಡುಗರು ತಮ್ಮ ಈ ಭಗವದ್ಗೀತೆಯ ಅಭ್ಯಾಸವನ್ನು ಬೆಳಿಗ್ಗೆ 3.30 ರಿಂದ 9.30 ರವರೆಗೆ ಪ್ರಾರಂಭಿಸುತ್ತಾರೆ. ಅವರಿಗೆ ಬೇರೆ ಯಾವುದೇ ಕೆಲಸವಿಲ್ಲ. ನೋಡಿದಿರಾ. ನೀವು ಅಧ್ಯಯನ ಮಾಡಿದ್ದೀರಿ... ಈ ಗಿರಿರಾಜನು ಇಡೀ ದಿನ ಅಧ್ಯಯನ ಮಾಡುತ್ತಿದ್ದಾನೆ. ಅವರೆಲ್ಲರೂ ಇದರಲ್ಲೇ ತಲ್ಲೀನರು. ಬೆಳಿಗ್ಗೆ, 3.30 ರಿಂದ ಅವರು ದಣಿಯುವ ತನಕ, 9.30ರ ವರೆಗೆ, ಕೇವಲ ಭಗವದ್ಗೀತೆ ಅಧ್ಯಯನ.
ಶ್ರೀ ರಾಜ್ದಾ: ಅದ್ಭುತ.
ಪ್ರಭುಪಾದ: ಮತ್ತು ನಮ್ಮಲ್ಲಿ ಹಲವು ವಸ್ತುವಿಷಯಗಳಿವೆ. ನಾವು ಈ ಒಂದು ಸಾಲಿನಲ್ಲಿ ಚರ್ಚಿಸಿದರೆ, ತಥಾ ದೇಹಾಂತರ-ಪ್ರಾಪ್ತಿಃ (ಭ.ಗೀ 2.13), ಅದನ್ನು ಅರ್ಥಮಾಡಿಕೊಳ್ಳಲು ದಿನಗಳು ಬೇಕಾಗುತ್ತದೆ.
ಶ್ರೀ ರಾಜ್ದಾ: ನಿಜ.
ಪ್ರಭುಪಾದ: ಈಗ, ತಥಾ ದೇಹಾಂತರ-ಪ್ರಾಪ್ತಿಃ ಮತ್ತು ನ ಹನ್ಯತೇ ಹನ್ಯಮಾನೇ ಶರೀರೇ (ಭ.ಗೀ 2.20), ಸತ್ಯವಾದರೆ ಅದಕ್ಕಾಗಿ ನಾವು ಏನು ಮಾಡುತ್ತಿದ್ದೇವೆ? ಇದು ಭಗವದ್ಗೀತೆ. ನ ಜಾಯತೇ ನ ಮ್ರಿಯತೇ ವಾ ಕದಾಚಿನ್ ನ ಹನ್ಯತೇ ಹನ್ಯಮಾನೇ ಶರೀರೇ (ಭ.ಗೀ 2.20). ಹಾಗಾಗಿ ನನ್ನ ದೇಹವು ನಾಶವಾದಾಗ, ನಾನು... ಮನೆಯಿಂದ ಮನೆಗೆ ಹೋಗಿ ಪುಸ್ತಕಗಳನ್ನು ಮಾರಾಟ ಮಾಡುತ್ತಾ ಹಣವನ್ನು ಕಳುಹಿಸುತ್ತಿದ್ದೇನೆ. ನಾವು ನಮ್ಮ ಧ್ಯೇಯವನ್ನು ಮುನ್ನಡೆಸುತ್ತಿದ್ದೇವೆ. ನನಗೆ ಸರ್ಕಾರದಿಂದಾಗಲಿ ಅಥವಾ ಸಾರ್ವಜನಿಕರಿಂದಾಗಲಿ ಯಾವುದೇ ಸಹಾಯ ಸಿಗುತ್ತಿಲ್ಲ. ಮತ್ತು ನಾನು ಎಷ್ಟು ವಿದೇಶಿ ವಿನಿಮಯವನ್ನು ತರುತ್ತಿದ್ದೇನೆ ಎಂಬುದರ ದಾಖಲೆ ಬ್ಯಾಂಕ್ ಆಫ್ ಅಮೇರಿಕಾದಲ್ಲಿದೆ. ಈ ದುರ್ಬಲ ಆರೋಗ್ಯದಲ್ಲೂ ಸಹ ನಾನು ರಾತ್ರಿಯಲ್ಲಿ ಕನಿಷ್ಠ ನಾಲ್ಕು ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದೇನೆ. ಮತ್ತು ಅವರು ನನಗೆ ಸಹಾಯ ಮಾಡುತ್ತಿದ್ದಾರೆ. ಹಾಗಾದರೆ ಇದು ನಮ್ಮ ವೈಯಕ್ತಿಕ ಪ್ರಯತ್ನ. ಇಲ್ಲಿಗೆ ಏಕೆ ಬರಬಾರದು? ನೀವು ನಿಜವಾಗಿಯೂ ಭಗವದ್ಗೀತೆಯ ನಿಷ್ಠಾವಂತ ವಿದ್ಯಾರ್ಥಿಯಾಗಿದ್ದರೆ, ನೀವೇಕೆ ಸಹಕರಿಸಬಾರದು? ಮತ್ತು ಹರಾವ್ ಅಭಕ್ತಸ್ಯ ಕುತೋ ಮಹದ್-ಗುಣ ಮನೋರಥೇನಾಸತಿ ಧಾವತೋ (ಶ್ರೀ.ಭಾ 5.18.12). ಕಾನೂನಿನ ಮೂಲಕ ನೀವು ಸಾರ್ವಜನಿಕರನ್ನು ಪ್ರಾಮಾಣಿಕರಾಗಿಸಲು ಸಾಧ್ಯವಿಲ್ಲ. ಅದು ಸಾಧ್ಯವಿಲ್ಲ. ಅದನ್ನು ಮರೆತುಬಿಡಿ. ಅಸಾಧ್ಯ. ಹರಾವ್ ಅಭಕ್ತಸ್ಯ ಕುತೋ.... ಯಸ್ಯಾಸ್ತಿ ಭಕ್ತಿರ್ ಭಗವತಿ ಅಕಿಂಚನಾ ಸರ್ವೈಃ... ಒಬ್ಬನು ಭಗವಂತನ ಭಕ್ತನಾದರೆ, ಅವನಲ್ಲಿ ಎಲ್ಲಾ ಒಳ್ಳೆಯ ಗುಣಗಳಿರುತ್ತವೆ. ಮತ್ತು ಹರಾವ್ ಅಭಕ್ತಸ್ಯ ಕುತೋ ಮಹದ್... ಅವನು ಅಭಕ್ತನಾದರೆ... ಈಗ ಬಹಳ ವಿಷಯಗಳು ನಡೆಯುತ್ತಿದ್ದು, ಪ್ರಖ್ಯಾತ ನಾಯಕರ ಖಂಡನೆಯಾಗುತ್ತಿದೆ. ಇಂದಿನ ಪತ್ರಿಕೆಯನ್ನು ಓದಿದೆ. "ಇವನು, ಅವನು ತಿರಸ್ಕರಿಸಲ್ಪಟ್ಟಿದ್ದಾನೆ." ಏಕೆ? ಹರಾವ್ ಅಭಕ್ತಸ್ಯ ಕುತೋ. ಅವನು ಭಕ್ತನಲ್ಲದಿದ್ದರೆ ದೊಡ್ಡ ನಾಯಕನಾಗುವುದರಿಂದ ಏನು ಪ್ರಯೋಜನ? (ಹಿಂದಿ) ನೀವು ತುಂಬಾ ಬುದ್ಧಿವಂತರು, ಯುವಕರು, ನಿಮಗೆ ಈ ವಿಚಾರಗಳನ್ನು ತಿಳಿಸಲು ಪ್ರಯತ್ನಿಸುತ್ತಿದ್ದೇನೆ. ನೀವು ಈ ವಿಚಾರಗಳಿಗೆ ಆಕಾರವನ್ನು ನೀಡಲು ಸಾಧ್ಯವಾದರೆ... ಅದು ಈಗಾಗಲೇ ಇದೆ. ಇದು ರಹಸ್ಯವಲ್ಲ. ಇಡೀ ಮಾನವ ಸಮಾಜಕ್ಕೆ ಶಿಕ್ಷಣ ನೀಡಲು ಈ ಸಂಸ್ಥೆಯು ಇರಲೇಬೇಕು ಎಂದು ನಾವು ಗಂಭೀರವಾಗಿ ಪರಿಗಣಿಸಬೇಕು. ಬಹಳ ಕಡಿಮೆ ಸಂಖ್ಯೆ ಇದ್ದರೂ ಪರವಾಗಿಲ್ಲ. ಅದು ಮುಖ್ಯವಲ್ಲ. ಆದರೆ ಆದರ್ಶವಿರಬೇಕು.