KN/Prabhupada 0134 - ನೀನು ಕೊಲ್ಲಬಾರದು, ಆದರೂ ಕೊಲ್ಲುತ್ತಿದ್ದೀಯ: Difference between revisions

(Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0134 - in all Languages Category:KN-Quotes - 1975 Category:KN-Quotes - M...")
 
(Vanibot #0005: NavigationArranger - update old navigation bars (prev/next) to reflect new neighboring items)
 
Line 7: Line 7:
<!-- END CATEGORY LIST -->
<!-- END CATEGORY LIST -->
<!-- BEGIN NAVIGATION BAR -- DO NOT EDIT OR REMOVE -->
<!-- BEGIN NAVIGATION BAR -- DO NOT EDIT OR REMOVE -->
{{1080 videos navigation - All Languages|English|Prabhupada 0133 - I Want One Student Who Follows my Instruction|0133|Prabhupada 0135 - The Age of Veda You Cannot Calculate|0135}}
{{1080 videos navigation - All Languages|Kannada|KN/Prabhupada 0133 - ನನ್ನ ಆದೇಶವನ್ನು ಅನುಸರಿಸುವ ಒಬ್ಬ ವಿದ್ಯಾರ್ಥಿಯನ್ನು ನಾನು ಬಯಸುತ್ತೇನೆ|0133|KN/Prabhupada 0135 - ವೇದದ ವಯಸ್ಸನ್ನು ನೀವು ಲೆಕ್ಕಹಾಕಲು ಸಾಧ್ಯವಿಲ್ಲ|0135}}
<!-- END NAVIGATION BAR -->
<!-- END NAVIGATION BAR -->
<!-- BEGIN ORIGINAL VANIQUOTES PAGE LINK-->
<!-- BEGIN ORIGINAL VANIQUOTES PAGE LINK-->

Latest revision as of 07:11, 25 April 2021



Morning Walk -- October 4, 1975, Mauritius

ಪ್ರಭುಪಾದ: ಕ್ರಿಶ್ಚಿಯನ್ ಪಂಡಿತರು ನನ್ನನ್ನು ಕೇಳಿದರು, "ಕ್ರಿಶ್ಚಿಯನ್ ಧರ್ಮ ಏಕೆ ಕ್ಷೀಣಿಸುತ್ತಿದೆ? ನಾವು ಏನು ಮಾಡಿದ್ದೇವೆ?" ನಾನು ಅವರಿಗೆ ಹೇಳಿದೆ, "ನೀವು ಏನು ಮಾಡಲಿಲ್ಲ?" (ನಗು)

ಚ್ಯವನ: ಹೌದು.

ಪ್ರಭುಪಾದ: ಕ್ರಿಸ್ತನ ಆದೇಶಗಳನ್ನು ನೀವು ಮೊದಲಿನಿಂದಲೂ ಉಲ್ಲಂಘಿಸಿದ್ದೀರಿ, "ನೀವು ಕೊಲ್ಲಬಾರದು", ಆದರೆ ನೀವು ಕೊಲ್ಲುತ್ತಿದ್ದೀರಿ, ಕೊಲ್ಲುವುದು ಮಾತ್ರವೇ ಮಾಡುತ್ತೀರಿ. ಹಾಗಾಗಿ, ನೀವು ಏನು ಮಾಡಿಲ್ಲ?"

ಭಕ್ತ 1: ಮನುಷ್ಯನು ಪ್ರಾಣಿಗಳ ಮೇಲೆ ಪ್ರಾಬಲ್ಯ ಸಾಧಿಸಬೇಕು ಎಂದು ಅವರು ಹೇಳುತ್ತಾರೆ. ಅವರು...

ಪ್ರಭುಪಾದ: ಆದ್ದರಿಂದ, ನೀವು ಅವುಗಳನ್ನು ಕೊಂದು ತಿನ್ನಬೇಕು. ತುಂಬಾ ಒಳ್ಳೆಯ ತರ್ಕ! "ತಂದೆ ಮಕ್ಕಳ ಮೇಲೆ ಪ್ರಾಬಲ್ಯ ಸಾಧಿಸಬೇಕು; ಆದ್ದರಿಂದ ಮಕ್ಕಳನ್ನು ಕೊಂದು ತಿನ್ನಬೇಕು." ಎಂತಾ ದೂರ್ತರು, ಆದರೆ ಇವರು ಧಾರ್ಮಿಕ ಮುಖಂಡರು ಎಂದು ಹೇಳಿಕೊಳ್ಳುತ್ತಿದ್ದಾರೆ.

ಪುಷ್ಠ ಕೃಷ್ಣ: ಪ್ರಭುಪಾದ, ಪ್ರತಿ ಕ್ಷಣವೂ ನಾವು ಕೊಲ್ಲುತ್ತಿದ್ದೇವೆ - ಉಸಿರಾಡುವಾಗ, ನಡೆಯುವಾಗ, ಮತ್ತು ಅನೇಕ ಕೆಲಸಗಳನ್ನು ಮಾಡುತ್ತಿರುವಾಗ - ಮತ್ತೆ "ನೀನು ಕೊಲ್ಲಬಾರದು" ಎಂದು ಹೇಳಿದರೆ, ಭಗವಂತ ನಮಗೆ ಅಸಾಧ್ಯವಾದ ಆದೇಶವನ್ನು ನೀಡಿಲ್ಲವೇ?

ಪ್ರಭುಪಾದ: ಇಲ್ಲ. ತಿಳಿದು ತಿಳಿದು ನೀವು ಮಾಡಬಾರದು. ನೀವು ತಿಳಿಯದೆ ಮಾಡಿದರೆ ಅದನ್ನು ಕ್ಷಮಿಸಲಾಗುತ್ತದೆ. (ವಿರಾಮ)... ನ ಪುನಾರ್ ಬದ್ಧಯತೇ. (?). ಆಹ್ಲಾದಿನಿ ಶಕ್ತಿ, ಇದು ಆನಂದ ಶಕ್ತಿ. ಕೃಷ್ಣನಿಗೆ ಆನಂದ ಶಕ್ತಿಯಿಂದ ನೋವಾಗಿವುದಿಲ್ಲ. ಆದರೆ ಇದು ನೋವಿನಿಂದ ಕೂಡಿದೆ. ಬದ್ಧಾತ್ಮಗಳಾದಂತಹ ನಮಗೆ ಇದು ಸಂಕಟಕರ. ಈ ಗೋಲ್ಡನ್ ಮೂನ್ (ಮದ್ಯ ಅಂಗಡಿಯ ಹೆಸರೇ?), ಎಲ್ಲರೂ ಆನಂದಕ್ಕಾಗಿ ಅಲ್ಲಿಗೆ ಬರುತ್ತಾರೆ, ಆದರೆ ಅವನು ಪಾಪ ಕಾರ್ಯಗಳಲ್ಲಿ ಸಿಕ್ಕಿಕೊಳ್ಳುತ್ತಿದ್ದಾನೆ. ಆದ್ದರಿಂದ, ಇದು ಆನಂದವಲ್ಲ. ಇದು ಅವನಿಗೆ ನೋವನ್ನು ಕೊಡುತ್ತದೆ. ಅನೇಕ ಪರಿಣಾಮಗಳು. ಲೈಂಗಿಕ ಜೀವನ, ಅದು ಕಾನೂನುಬಾಹಿರವಲ್ಲದಿದ್ದರೂ ಬಹಳಷ್ಟು ಸಂಕಟಕರ ಪರಿಣಾಮಗಳನ್ನು ಬೀರುತ್ತದೆ. ನೀವು ಮಕ್ಕಳನ್ನು ನೋಡಿಕೊಳ್ಳಬೇಕು. ನೀವು ಮಕ್ಕಳನ್ನು ಹೊಂದಬೇಕು. ಅದು ಸಂಕಟಕರ. ಹೆರಿಗೆಗೆ ಆಸ್ಪತ್ರೆಗೆ ಹಣ ಕಟ್ಟಬೇಕು, ನಂತರ ಶಿಕ್ಷಣ, ನಂತರ ವೈದ್ಯರ ಬಿಲ್ಲು - ಎಷ್ಟೋ ಸಂಕಟಗಳು. ಆದ್ದರಿಂದ, ಈ ಆನಂದ, ಮೈಥುನದ ಆನಂದವನ್ನು ಅನೇಕ ನೋವಿನ ಸಂಗತಿಗಳು ಹಿಂಬಾಲಿಸುತ್ತದೆ. ತಾಪ-ಕರೀ. ಅದೇ ಆನಂದ ಶಕ್ತಿ ಕಡಿಮೆ ಪ್ರಮಾಣದಲ್ಲಿ ಜೀವಿಗಳಲ್ಲಿ ಇರುತ್ತದೆ, ಮತ್ತು ಅವರು ಅದನ್ನು ಬಳಸಿದ ತಕ್ಷಣ, ಅದು ಸಂಕಟವಾಗುತ್ತದೆ. ಆದರೆ ಆಧ್ಯಾತ್ಮಿಕ ಲೋಕದಲ್ಲಿ, ಅದೇ ಆನಂದ ಶಕ್ತಿ, ಕೃಷ್ಣ ಗೋಪಿಯರೊಡನೆ ನರ್ತಿಸುತ್ತಿರುವುದು, ಅದು ನೋವಿಸುವುದಿಲ್ಲ. ಅದು ಆನಂದದಾಯಕ. (ವಿರಾಮ)… ವ್ಯಕ್ತಿ, ಅವನು ಒಳ್ಳೆಯ ಆಹಾರ ಪದಾರ್ಥವನ್ನು ತಿಂದರೆ ಅದು ಸಂಕಟಕರ. ಒಬ್ಬ ರೋಗಿ, ಅವನು ತಿಂದರೆ...

ಚ್ಯವನ: ಅವನು ಇನ್ನಷ್ಟು ರೋಗಗ್ರಸ್ತನಾಗುತ್ತಾನೆ.

ಪ್ರಭುಪಾದ: ಇನ್ನಷ್ಟು ರೋಗಗ್ರಸ್ತನಾಗುತ್ತಾನೆ. ಆದ್ದರಿಂದ, ಈ ಜೀವನ ತಪಸ್ಸಿಗಾಗಿ, ಸ್ವೀಕರಿಸುವುದಕ್ಕಾಗಿ ಅಲ್ಲ - ಸ್ವಯಂಪ್ರೇರಣೆಯಿಂದ ತಿರಸ್ಕರಿಸಲು. ಅದು ಓಳ್ಳೆಯದು.