KN/Prabhupada 0057 - ಹೃದಯವನ್ನು ಪರಿಶುದ್ದಗೊಳಿಸುವುದು: Difference between revisions

(Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0057 - in all Languages Category:KN-Quotes - 1970 Category:KN-Quotes - L...")
 
(Vanibot #0023: VideoLocalizer - changed YouTube player to show hard-coded subtitles version)
 
Line 7: Line 7:
[[Category:KN-Quotes - in India]]
[[Category:KN-Quotes - in India]]
<!-- END CATEGORY LIST -->
<!-- END CATEGORY LIST -->
<!-- BEGIN NAVIGATION BAR -- TO CHANGE TO YOUR OWN LANGUAGE BELOW SEE THE PARAMETERS OR VIDEO -->
<!-- BEGIN NAVIGATION BAR -- DO NOT EDIT OR REMOVE -->
<!-- BEGIN NAVIGATION BAR -- DO NOT EDIT OR REMOVE -->
{{1080 videos navigation - All Languages|English|Prabhupada 0056 - Twelve Authorities Mentioned in the Sastras|0056|Prabhupada 0058 - Spiritual Body Means Eternal Life|0058}}
{{1080 videos navigation - All Languages|Kannada|KN/Prabhupada 0056 - ಶಾಸ್ತ್ರಗಳಲ್ಲಿ ಹನ್ನೆರಡು ಆಚಾರ್ಯರ ಉಲ್ಲೇಖವಿದೆ|0056|KN/Prabhupada 0058 - ಆಧ್ಯಾತ್ಮಿಕ ದೇಹವೆಂದರೆ ಶಾಶ್ವತ ಜೀವನ|0058}}
<!-- END NAVIGATION BAR -->
<!-- END NAVIGATION BAR -->
<!-- END NAVIGATION BAR -->
<!-- BEGIN ORIGINAL VANIQUOTES PAGE LINK-->
<!-- BEGIN ORIGINAL VANIQUOTES PAGE LINK-->
Line 20: Line 18:


<!-- BEGIN VIDEO LINK -->
<!-- BEGIN VIDEO LINK -->
{{youtube_right|9aN3jwycQEs|ಹೃದಯವನ್ನು ಪರಿಶುದ್ಧಗೊಳಿಸುವುದು<br />- Prabhupāda 0057}}
{{youtube_right|A0edM3anoTA|ಹೃದಯವನ್ನು ಪರಿಶುದ್ಧಗೊಳಿಸುವುದು<br />- Prabhupāda 0057}}
<!-- END VIDEO LINK -->
<!-- END VIDEO LINK -->



Latest revision as of 21:23, 3 February 2021



Lecture on SB 6.1.34-39 -- Surat, December 19, 1970

ರೇವತೀನಂದನ: ನಾವು ಸದಾ ಹರೇ ಕೃಷ್ಣ ಜಪವನ್ನು ಪ್ರೋತ್ಸಹಿಸುತ್ತೇವೆ, ಅಲ್ಲವೇ?

ಪ್ರಭುಪಾದ: ಹೌದು. ಈ ಯುಗದಲ್ಲಿ ಅದೊಂದೆ ವಿಧಾನ. ಹರೇ ಕೃಷ್ಣ ಜಪಿಸುವದರಿಂದ, ಒಬ್ಬನ… ಅರಿವಿನ ಕೋಶ ತೆರೆವುಗೊಳ್ಳುತ್ತದೆ. ಹಾಗು ಅವನು ಆಗ ಆಧ್ಯಾತ್ಮಿಕ ಜ್ಞಾನವನ್ನು ಪಡೆಯಬಹುದು. ಹೃದಯವನ್ನು ಪರಿಶುದ್ಧಗೊಳಿಸದೆ ಆಧ್ಯಾತ್ಮಿಕ ಜ್ಞಾನವನ್ನು ಅರ್ಥಮಾಡಿಕೊಳ್ಳಲು ಅಥವ ಸ್ವೀಕರಿಸಲು ಸಾಧ್ಯವಿಲ್ಲ. ಈ ಎಲ್ಲ ಸುಧಾರಣೆಯ ಕ್ರಮಗಳು – ಬ್ರಹ್ಮಚಾರೀ, ಗೃಹಸ್ಥ, ವಾನಪ್ರಸ್ಥ, - ಇವೆಲ್ಲವು ಕೇವಲ ಶುದ್ಧಿಕರಣ ವಿಧಾನ. ಹಾಗು ಭಕ್ತಿಯು ಒಂದು ಶುದ್ಧಿಕರಣ ವಿಧಾನ, ವಿಧಿ-ಭಕ್ತಿ. ಮೂರ್ತಿ ಪೂಜೆಯಲ್ಲಿ ತನ್ನನು ತಾನು ತೊಡಗಿಸಿಕೊಂಡು, ಅವನೂ ಪರಿಶುದ್ಧನಾಗುತ್ತಾನೆ. ತತ್-ಪರತ್ವೆ… ಸರ್ವೋಪಾಧಿ… ಅವನು ಕೃಷ್ಣನ ಚಿರಂತನ ಸೇವಕನೆಂದು ಜ್ಞಾನೋದಯವಾದಾಗ ಅಥವ ಅರಿವು ವಿಕಸನಗೊಂಡಾಗ, ಅವನು ಪರಿಶುದ್ಧನಾಗುತ್ತಾನೆ. ಅವನು ಪರಿಶುದ್ಧನಾಗುತ್ತಾನೆ. ಸರ್ವೋಪಾಧಿ ಅಂದರೆ ಅವನು…ಸರ್ವೋಪಾಧಿ. ಅವನು ತನ್ನ ಉಪಾಧಿ, ಅವನ ಪದನಾಮವನ್ನು - - “ನಾನು ಅಮೇರಿಕನ್”, “ನಾನು ಭಾರತೀಯ”, “ನಾನು ಇದು”, “ ನಾನು ಅದು” ಎಂಬುವುದನ್ನು ವರ್ಜಿಸುತ್ತಾನೆ. ಈ ರೀತಿಯಲ್ಲಿ ನೀವು ಜೀವನದ ದೈಹಿಕ ಪರಿಕಲ್ಪನೆಯನ್ನು ಸಂಪೂರ್ಣವಾಗಿ ವರ್ಜಿಸಿದಾಗ, ಆಗ ನಿರ್ಮಲಂ. ಅವನು ನಿರ್ಮಲವಾಗುತ್ತಾನೆ, ಅಕಲ್ಮಷವಾಗುತ್ತಾನೆ. ಎಲ್ಲಿಯವರೆಗು ಜೀವನದ ಈ ಪರಿಕಲ್ಪನೆಯು ಮುಂದುವರಿಯುತ್ತದೆಯೋ – “ನಾನು ಇದು”, “ನಾನು ಅದು” – ಅವನು ಇನ್ನು… ಸ ಭಕ್ತಃ ಪ್ರಕೃತಃ ಸ್ಮೃತಃ. (ಪಕ್ಕದಲ್ಲಿ) ಸರಿಯಾಗಿ ಕುಳಿತುಕೊ, ಹಾಗಲ್ಲ. ಸ ಭಕ್ತಃ ಪ್ರಕೃತಃ ಸ್ಮೃತಃ. ಅರ್ಚಾಯಾಮ್ ಏವ ಹರಯೇ ಈ ಪ್ರಕ್ರಿಯೆಯಲ್ಲೂ, ಮೂರ್ತಿ ಪೂಜೆಯಲ್ಲಿ ತೊಡಗಿರುವಾಗ, ಅರ್ಚಾಯಾಮ್ ಹರಯೇ ಯತ್-ಪೂಜಾಮ್ ಶ್ರದ್ದಾಯೆಹತೆ, ಬಹಳ ಶ್ರದ್ಧೆ ಭಕ್ತಿಯಿಂದ ಸೇವೆ ಮಾಡುತ್ತಾನೆ ಆದರೆ ನ ತದ್-ಭಕ್ತೇಷು ಚಾನ್ಯೇಷು, ಅವನಿಗೆ ಇತರರ ಕಡೆ ಸಹಾನುಭೂತಿ ಇಲ್ಲ, ಅಥವ ಒಬ್ಬ ಭಕ್ತನ ಸ್ಥಾನವೇನೆಂದು ಅವನಿಗೆ ತಿಳಿಯದು, ಆಗ ಸ ಭಕ್ತ: ಪ್ರಕೃತಃ ಸ್ಮೃತಃ:, “ಅವನನ್ನು ಭೌತಿಕ ಭಕ್ತನೆಂದು ಕರೆಯಲಾಗುತ್ತದೆ.” ಆದ್ದರಿಂದ ನಮ್ಮನು ನಾವೆ ಭೌತಿಕ ಭಕ್ತಿಯ ಮಟ್ಟದಿಂದ ಎರಡನೇಯ ಮಟ್ಟಕ್ಕೆ ಉದ್ದರಿಸಿಕೊಳ್ಳಬೇಕು, ಅಂದರೆ ಭಕ್ತನೆಂದರೆ ಯಾರು, ಭಕ್ತನಲ್ಲದವನು ಯಾರು, ದೇವರು ಯಾರು, ನಾಸ್ತಿಕನು ಯಾರು ಎಂದು ಅರ್ಥಮಾಡಿಕೊಳ್ಳುವ ಮಟ್ಟ. ಈ ಭೇದಗಳಿವೆ. ಹಾಗು ಪರಮಹಂಸ ಮಟ್ಟದಲ್ಲಿ ಇಂತಹ ಭೇದವಿಲ್ಲ. ಎಲ್ಲರೂ ಫ್ರಭುವಿನ ಸೇವೆಯಲ್ಲಿ ತೊಡಗಿದ್ದಾರೆ ಎಂದು ಅವರು ಭಾವಿಸುತ್ತಾರೆ. ಅವರಿಗೆ ಯಾರ ಮೇಲೂ, ಯಾವುದರ ಮೇಲೂ ಅಸೂಯೆಯಿಲ್ಲ, ಆದರೆ ಅದು ಬೇರೆ ಮಟ್ಟವು. ನಾವು ನಕಲು ಮಾಡಬಾರದು, ನಕಲು ಮಾಡಲು ಪ್ರಯತ್ನಿಸಬಾರದು, ಆದರೆ ಪರಮಹಂಸ ಪರಿಪೂರ್ಣತೆಯೆ ಉನ್ನತ ಮಟ್ಟವೆಂದು ನಾವು ತಿಳಿದುಕೊಳ್ಳಬೇಕು. ಉಪನ್ಯಾಸಕರಾಗಿ ನಾವು ಗುರುತಿಸಬೇಕು… ಈ ಹುಡುಗನಿಗೆ ನಾನು ಈಗ ತಾನೆ ಹೇಳಿದ ಹಾಗೆ, “ನೀನು ಹೀಗೆ ಕುಳಿತುಕೋ” ಎಂದು. ಆದರೆ ಒಬ್ಬ ಪರಮಹಂಸ ಹಾಗೆ ಹೇಳುವುದಿಲ್ಲ. ಅವರು ನೋಡಿ, ಅಂದುಕೊಳ್ಳುತ್ತಾರೆ: “ಅವನು ಸರಿಯಾಗೇ ಇದ್ದಾನೆ.” ಅವರು ಹಾಗೆ ನೋಡುತ್ತಾರೆ. ಆದರೆ ನಾವು ಪರಮಹಂಸರನ್ನು ನಕಲು ಮಾಡಬಾರದು. ನಾವು ಉಪನ್ಯಾಸಕರು, ನಾವು ಶಿಕ್ಷಕರು, ನಾವು ಪರಮಹಂಸರನ್ನು ನಕಲು ಮಾಡಬಾರದು. ನಾವು ಸತ್ಯವಾದ ಮೂಲವನ್ನು, ಸರಿಯಾದ ಹಾದಿಯನ್ನು ತಿಳಿಸಬೇಕು.

ರೇವತೀನಂದನ: ಫ್ರಭುಪಾದರೆ, ನೀವು ಪರಮಹಂಸ ಮಟ್ಟಕ್ಕಿಂತ ಉನ್ನತ ಸ್ಥಾನದಲ್ಲಿದ್ದಿರಿ.

ಪ್ರಭುಪಾದ: ನಾನು ನಿಮ್ಮಗಿಂತ ಕೆಳಮಟ್ಟದವನು. ನಾನು ನಿಮ್ಮಗಿಂತ ಕೆಳಮಟ್ಟದವನು.

ರೇವತೀನಂದನ: ನೀವು ಎಷ್ಟು ಸುಂದರ. ನೀವು ಪರಮಹಂಸ ಆದರೂ ನಮಗೆ ಬೋಧಿಸುತ್ತಿರುವಿರಿ.

ಫ್ರಭುಪಾದ: ಇಲ್ಲ, ನಾನು ನಿಮಗಿಂತ ಕೆಳಮಟ್ಟದವನು. ನಾನು ಎಲ್ಲಾ ಪ್ರಾಣಿಗಳಿಗಿಂತಲು ಕೀಳು. ನಾನು ಕೇವಲ ನನ್ನ ಆಧ್ಯಾತ್ಮ ಗುರುವಿನ ಆದೇಶವನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತಿದ್ದೇನೆ. ಅಷ್ಟೆ. ಅದುವೇ ನಮ್ಮೆಲ್ಲರ ಕಾರ್ಯವಾಗಿರಬೇಕು. ಆದಷ್ಟು ಪ್ರಯತ್ನಿಸಿ. ಉತ್ತಮ ಆದೇಶವನ್ನು ಕಾರ್ಯಗತಗೊಳಿಸಲು ಆದಷ್ಟು ಪ್ರಯತ್ನಿಸಿ. ಪ್ರಗತಿಗೆ ಇದೇ ಅತಿ ಸುರಕ್ಷಿತವಾದ ದಾರಿ. ಒಬ್ಬನು ಅತಿ ಕೆಳಮಟ್ಟದಲ್ಲಿರಬಹುದು, ಆದರೆ ಅವನಿಗೆ ವಹಿಸಿದ ಕರ್ತವ್ಯವನ್ನು ನಿರ್ವಹಿಸಲು ಪ್ರಯತ್ನಿಸಿದರೆ ಅವನು ಪರಿಪೂರ್ಣನಾದವನು. ಅವನು ಅತಿ ಕೆಳಮಟ್ಟದಲ್ಲಿರ ಬಹುದು, ಆದರೆ ಅವನಿಗೆ ಒಪ್ಪಿಸಿದ ಕರ್ತವ್ಯವನ್ನು ನಿರ್ವಹಿಸಲು ಪ್ರಯತ್ನಿಸುತ್ತಿರುವುದರಿಂದ ಅವನು ಪರಿಪೂರ್ಣನಾದವನು. ಅದುವೇ ಸರಿಯಾದ ಪರಿಗಣನೆ.