KN/Prabhupada 0128 - ನಾನು ಎಂದಿಗೂ ಸಾಯುವುದಿಲ್ಲ: Difference between revisions

(Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0128 - in all Languages Category:KN-Quotes - 1975 Category:KN-Quotes - C...")
 
(Vanibot #0005: NavigationArranger - update old navigation bars (prev/next) to reflect new neighboring items)
 
Line 8: Line 8:
<!-- END CATEGORY LIST -->
<!-- END CATEGORY LIST -->
<!-- BEGIN NAVIGATION BAR -- DO NOT EDIT OR REMOVE -->
<!-- BEGIN NAVIGATION BAR -- DO NOT EDIT OR REMOVE -->
{{1080 videos navigation - All Languages|English|Prabhupada 0127 - A Great Institution Was Lost by Whimsical Ways|0127|Prabhupada 0129 - Depend on Krsna - There Will be no Scarcity|0129}}
{{1080 videos navigation - All Languages|Kannada|KN/Prabhupada 0127 - ವಿಚಿತ್ರ ಪದ್ಧತಿಗಳಿಂದ ಒಂದು ಮಹಾನ್ ಸಂಸ್ಥೆ ಹಾಳಾಯಿತು|0127|KN/Prabhupada 0129 - ಕೃಷ್ಣನನ್ನು ಅವಲಂಬಿಸಿ - ಯಾವುದೇ ಕೊರತೆ ಇರುವುದಿಲ್ಲ|0129}}
<!-- END NAVIGATION BAR -->
<!-- END NAVIGATION BAR -->
<!-- BEGIN ORIGINAL VANIQUOTES PAGE LINK-->
<!-- BEGIN ORIGINAL VANIQUOTES PAGE LINK-->

Latest revision as of 07:10, 16 March 2021



Press Conference -- July 16, 1975, San Francisco

ವರದಿಗಾರ (2): ಯುನೈಟೆಡ್ ಸ್ಟೇಟ್ಸ್ನಲ್ಲಿ ಎಷ್ಟು ಸದಸ್ಯರಿದ್ದಾರೆ? ಎರಡು ಸಾವಿರ ಎಂದು ನನಗೆ ಹೇಳಲಾಗಿದೆ. ಸುಮಾರು ಅಷ್ಟು ಇರಬಹುದೇ?

ಪ್ರಭುಪಾದ: ಅದನ್ನು ಅವರು ಹೇಳುತ್ತಾರೆ.

ಜಯತೀರ್ಥ: ನಮ್ಮ ಪ್ರಕಟಿತ ಅಂಕಿ ಅಂಶವೆಂದರೆ ವಿಶ್ವಾದ್ಯಂತ ಸದಸ್ಯತ್ವ ಹತ್ತು ಸಾವಿರ. ಯುನೈಟೆಡ್ ಸ್ಟೇಟ್ಸ್ನಲ್ಲಿ ಅದು ಎಷ್ಟು ಎಂದು ನಿರ್ದಿಷ್ಟವಾಗಿ ಎಣಿಕೆಯಾಗಿಲ್ಲ.

ವರದಿಗಾರ (2): ನಾನು ಐದು ವರ್ಷಗಳ ಹಿಂದೆ ಈ ಚಳುವಳಿಯ ಬಗ್ಗೆ ಒಂದು ವರದಿಯನ್ನು ಮಾಡಿದ್ದೆ, ಮತ್ತು ಆ ಸಮಯದಲ್ಲಿ ಯುನೈಟೆಡ್ ಸ್ಟೇಟ್ಸ್ನಲ್ಲಿಯೂ ಸಹ ಎರಡು ಸಾವಿರ ಸದಸ್ಯರಿದ್ದರು.

ಪ್ರಭುಪಾದ: ಇದು ಹೆಚ್ಚುತ್ತಿದೆ.

ವರದಿಗಾರ (2): ಇದು ಹೆಚ್ಚುತ್ತಿದೆಯೇ?

ಪ್ರಭುಪಾದ: ಓಹ್, ಹೌದು. ಖಂಡಿತವಾಗಿ.

ಜಯತೀರ್ಥ: ವಿಶ್ವಾದ್ಯಂತದ ಸಂಖ್ಯೆ ಹತ್ತು ಸಾವಿರ ಎಂದು ನಾನು ಹೇಳಿದ್ದು.

ವರದಿಗಾರ (2): ಹೌದು, ನನಗೆ ಅರ್ಥವಾಯಿತು. ನಿಮ್ಮ ವಯಸ್ಸು ಎಷ್ಟು ಎಂದು ಹೇಳುವಿರ?

ಜಯತೀರ್ಥ: ಅವರು ನಿಮ್ಮಗೆ ವಯಸ್ಸು ಎಷ್ಟು ಎಂದು ಕೇಳುತ್ತಿದ್ದಾರೆ, ಶ್ರೀಲ ಪ್ರಭುಪಾದ.

ಪ್ರಭುಪಾದ: ಒಂದು ತಿಂಗಳ ನಂತರ ನನಗೆ ಎಂಭತ್ತು.

ವರದಿಗಾರ (2): ಎಂಭತ್ತು?

ಪ್ರಭುಪಾದ: ಎಂಭತ್ತು ವರ್ಷ.

ವರದಿಗಾರ (2): ಏನಾಗಬಹುದು...

ಪ್ರಭುಪಾದ: ನಾನು ಜನಿಸಿದ್ದು 1896ರಲ್ಲಿ, ಈಗ ನೀವು ಲೆಕ್ಕ ಹಾಕಬಹುದು.

ವರದಿಗಾರ (2): ನೀವು ದೇಹತ್ಯಾಗ ಮಾಡಿದನಂತರ ಯುನೈಟೆಡ್ ಸ್ಟೇಟ್ಸ್ನಲ್ಲಿ ಆಂದೋಲನವು ಏನಾಗುತ್ತದೆ?

ಪ್ರಭುಪಾದ: ನಾನು ಎಂದಿಗೂ ಸಾಯುವುದಿಲ್ಲ.

ಭಕ್ತರು: ಜಯ! ಹರಿ ಬೋಲ್! (ನಗು)

ಪ್ರಭುಪಾದ: ನನ್ನ ಪುಸ್ತಕಗಳಲ್ಲಿ ನಾನು ಬದುಕುತ್ತೇನೆ, ಮತ್ತು ನೀವು ಅದನ್ನು ಬಳಸಿಕೊಳ್ಳುತ್ತೀರಿ.

ವರದಿಗಾರ (2): ನೀವು ಒಬ್ಬ ಉತ್ತರಾಧಿಕಾರಿಗೆ ತರಬೇತಿ ನೀಡುತ್ತಿದ್ದೀರಾ?

ಪ್ರಭುಪಾದ: ಹೌದು, ನನ್ನಗೆ ಗುರು ಮಹಾರಾಜರಿದ್ದಾರೆ. ನನ್ನ ಗುರು ಮಹಾರಾಜರ ಫೋಟೋ ಎಲ್ಲಿದೆ? ಅದು... ಇಲ್ಲಿದೆ.

ವರದಿಗಾರ (2): ಹರೇ ಕೃಷ್ಣ ಆಂದೋಲನ ಸಾಮಾಜಿಕ ಪ್ರತಿಭಟನೆಯಲ್ಲಿ ಏಕೆ ತೊಡಗುವುದಿಲ್ಲ?

ಪ್ರಭುಪಾದ: ನಾವು ಅತ್ಯುತ್ತಮ ಸಮಾಜ ಸೇವಕರು. ಜನರು ಮೂರ್ಖರು ಮತ್ತು ಧೂರ್ತರು. ನಾವು ಅವರಿಗೆ ದೇವರ ಪ್ರಜ್ಞೆಯ ಉತ್ತಮ ವಿಚಾರವನ್ನು ಕಲಿಸುತ್ತಿದ್ದೇವೆ. ನಾವು ಅತ್ಯುತ್ತಮ ಸಮಾಜ ಸೇವಕರು. ನಾವು ಎಲ್ಲಾ ಅಪರಾಧಗಳನ್ನು ನಿಲ್ಲಿಸುತ್ತೇವೆ. ನಿಮ್ಮ ಸಾಮಾಜ ಸೇವೆ ಏನು? ಹಿಪ್ಪಿಗಳು ಮತ್ತು ಅಪರಾಧಿಗಳನ್ನು ಉತ್ಪಾದಿಸುವುದು. ಅದು ಸಮಾಜ ಸೇವೆಯಲ್ಲ. ಸಮಾಜ ಸೇವೆ ಎಂದರೆ ಜನರು ತುಂಬಾ ಶಾಂತಿಯುತ, ವಿವೇಕಯುತ, ಬುದ್ಧಿವಂತ, ದೇವರ ಪ್ರಜ್ಞೆಯಿರುವ, ಪ್ರಥಮ ದರ್ಜೆಯ ಮನುಷ್ಯರಾಗಬೇಕು. ಅದೇ ಸಮಾಜ ಸೇವೆ. ನೀವು ಕೆಲವು ನಾಲ್ಕನೇ ದರ್ಜೆಯ, ಐದನೇ ದರ್ಜೆಯ, ಹತ್ತನೇ ದರ್ಜೆಯ ಮನುಷ್ಯರನ್ನು ಉತ್ಪಾದಿಸಿದರೆ ಅದು ಸಮಾಜ ಸೇವೆ ಹೇಗೆ ಆಗುತ್ತದೆ? ನಾವು ಉತ್ತಮ ದರ್ಜೆಯ ಮನುಷ್ಯರನ್ನು ಉತ್ಪಾದಿಸುತ್ತಿದ್ದೇವೆ. ನೋಡಿ. ಇಲ್ಲಿ ಪ್ರಥಮ ದರ್ಜೆಯ ವ್ಯಕ್ತಿಗಳು. ಅವರಿಗೆ ಯಾವುದೇ ಕೆಟ್ಟ ಅಭ್ಯಾಸವಿಲ್ಲ - ಅಕ್ರಮ ಮೈಥುನ, ಮಾದಕತೆ, ಮಾಂಸ ಸೇವನೆ, ಅಥವಾ ಜೂಜಾಟ. ಅವರೆಲ್ಲರೂ ಯುವಕರು. ಅವರು ಈ ಎಲ್ಲ ವಿಷಯಗಳಿಗೆ ವ್ಯಸನಿಯಾಗುವುದಿಲ್ಲ. ಇದೇ ಸಮಾಜ ಸೇವೆ.

ಭಕ್ತದಾಸ: ಶ್ರೀಲ ಪ್ರಭುಪಾದ, ಹರೇ ಕೃಷ್ಣ ಚಳುವಳಿಯ ರಾಜಕೀಯ ಪ್ರಭಾವ ಏನೆಂದು ತಿಳಿಯಲು ಅವರು ಬಯಸುತ್ತಾರೆ.

ಪ್ರಭುಪಾದ: ಹರೇ ಕೃಷ್ಣ ಆಂದೋಲನವನ್ನು ಸ್ವೀಕರಿಸಿದರೆ ಎಲ್ಲವೂ ಸಂಸ್ಕರಿಸಲ್ಪಡುತದೆ. ಯಸ್ಯಾಸ್ತಿ ಭಕ್ತಿರ್ ಭಗವತಿ ಅಕಿಂಚನಾ ಸರ್ವೈರ್ ಗುಣೈಸ್ ತತ್ರ ಸಮಾಸತೇ ಸುರಾಃ (ಶ್ರೀ.ಭಾ 5.18.12). ಈ ದೇವರ ಪ್ರಜ್ಞೆ ಹರಡಿದರೆ, ಎಲ್ಲರೂ ಅದ್ಭುತವಾಗಿ ಅರ್ಹರಾಗುತ್ತಾರೆ. ಮತ್ತು ದೇವರ ಪ್ರಜ್ಞೆ ಇಲ್ಲದೆ, ನಾವು ಬೆಳಿಗ್ಗೆ ಚರ್ಚಿಸುತ್ತಿದ್ದಂತೆ, ನಾಮಮಾತ್ರಕ್ಕೆ ಶಿಕ್ಷಣ ಎನಿಸಿಕೊಳ್ಳುವ ಅದರಲ್ಲಿ ಯಾವುದೇ ಮೌಲ್ಯವಿಲ್ಲ. ಅವರು ಸುಮ್ಮನೆ ಮಾತನಾಡುತ್ತಿದ್ದಾರೆ. ನಾವು ಮಾತನಾಡುತ್ತಿದ್ದ ವಿಷಯ ಯಾವುದು?

ಬಾಹುಲಾಶ್ವ: ಇಂದು ಬೆಳಿಗ್ಗೆ, ಮನಃಶಾಸ್ತ್ರ.

ಪ್ರಭುಪಾದ: ಇದರ ಪರಿಣಾಮವಾಗಿ ವಿದ್ಯಾರ್ಥಿಗಳು ನಿರಾಶೆಯಿಂದ ಗೋಪುರದಿಂದ ಕೆಳಗೆ ಬೀಳುತ್ತಿದ್ದಾರೆ. ಮತ್ತು ಅದನ್ನು ಗಾಜಿನಿಂದ ರಕ್ಷಿಸಲಾಗುತ್ತಿದೆ.

ಬಹುಲಾಶ್ವ: 60ರ ದಶಕದ ಬರ್ಕ್ಲಿ ಆವರಣದಲ್ಲಿರುವ ಬೆಲ್ ಟವರ್‌ನಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯ ಮಾಡಿಕೊಳ್ಳಲು ಆ ಗೋಪುರದಿಂದ ಜಿಗಿಯುತ್ತಿದ್ದರು. ಆದ್ದರಿಂದ ವಿದ್ಯಾರ್ಥಿಗಳು ಜಿಗಿಯುವುದನ್ನು ತಡೆಯಲು ಅವರು ಅಲ್ಲಿ ಗಾಜು ಹಾಕಿದರು. ಆದ್ದರಿಂದ ಪ್ರಭುಪಾದರು ಇದು ಅವರ ಶಿಕ್ಷಣ ಎಂದು ವಿವರಿಸುತ್ತಿದ್ದರು, ಅವರ ಶಿಕ್ಷಣವನ್ನು ಪಡೆದ ನಂತರ ಅವರು ಆತ್ಮಹತ್ಯೆಮಾಡಿಕೊಳ್ಳಲು ಜಿಗಿಯಬೇಕು. (ನಗು)

ಪ್ರಭುಪಾದ: ಇದು ಶಿಕ್ಷಣವಲ್ಲ. ವಿದ್ಯಾ ದಧಾತಿ ನಮ್ರತಾ. ವಿದ್ಯಾವಂತ ಎಂದರೆ ಅವನು ವಿನಮ್ರ, ಸೌಮ್ಯ, ಶಾಂತ, ಜ್ಞಾನಿ, ಜೀವನದಲ್ಲಿ ಜ್ಞಾನದ ಪ್ರಾಯೋಗಿಕ ಅನ್ವಯಿಕೆ, ಸಹಿಷ್ಣುತೆ, ಮನಸ್ಸಿನ ನಿಯಂತ್ರಣ, ಇಂದ್ರಿಯಗಳ ನಿಯಂತ್ರಣ. ಅದೇ ಶಿಕ್ಷಣ. ಈಗಿನ ಶಿಕ್ಷಣ ಎಂತಹದು?

ವರದಿಗಾರ (2): ನೀವು ಕಾಲೇಜು ರಚಿಸಲು ಪ್ರಯತ್ನಿಸುತ್ತಿದ್ದೀರಾ?

ಪ್ರಭುಪಾದ: ಹೌದು, ಅದು ನನ್ನ ಮುಂದಿನ ಪ್ರಯತ್ನ, ನಾವು ವರ್ಗೀಕರಣದ ಪ್ರಕಾರ ಶಿಕ್ಷಣ ನೀಡುತ್ತೇವೆ. ಪ್ರಥಮ ದರ್ಜೆ, ದ್ವಿತೀಯ ದರ್ಜೆ, ತೃತೀಯ ದರ್ಜೆ, ನಾಲ್ಕನೇ ದರ್ಜೆಯವರೆಗೆ. ತದನಂತರ ಐದನೇ ದರ್ಜೆ, ಆರನೇ ದರ್ಜೆ, ಅದು ಸಾಮಾನ್ಯವಾಗಿ ಇದ್ದೆ ಇರುತ್ತದೆ. ಆದ್ದರಿಂದ, ಸಮಾಜದಲ್ಲಿ ಕನಿಷ್ಠ ಪಕ್ಷ, ಪ್ರಥಮ ದರ್ಜೆ ಪುರುಷರು, ಪುರುಷರ ಆದರ್ಶ ವರ್ಗ ಇರಬೇಕು, ಮತ್ತು ಅವನು ಮನಸ್ಸನ್ನು ನಿಯಂತ್ರಿಸಲು, ಇಂದ್ರಿಯಗಳನ್ನು ನಿಯಂತ್ರಿಸಲು ತರಬೇತಿ ಪಡೆದವನು, ತುಂಬಾ ಸ್ವಚ್ಛ, ಸತ್ಯವಾದ, ಸಹಿಷ್ಣುತೆ, ಸರಳತೆ, ಸಂಪೂರ್ಣ ಜ್ಞಾನ, ಜೀವನದಲ್ಲಿ ಜ್ಞಾನದ ಪ್ರಾಯೋಗಿಕ ಅನ್ವಯಿಕೆ, ಮತ್ತು ದೇವರಲ್ಲಿ ಸಂಪೂರ್ಣ ನಂಬಿಕೆ ಇರುವವನು. ಅವನೇ ಪ್ರಥಮ ದರ್ಜೆಯ ಮನುಷ್ಯ.