KN/Prabhupada 0132 - ವರ್ಗರಹಿತ ಸಮಾಜವು ನಿಷ್ಪ್ರಯೋಜಕ: Difference between revisions
(Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0132 - in all Languages Category:KN-Quotes - 1974 Category:KN-Quotes - L...") |
(Vanibot #0005: NavigationArranger - update old navigation bars (prev/next) to reflect new neighboring items) |
||
Line 8: | Line 8: | ||
<!-- END CATEGORY LIST --> | <!-- END CATEGORY LIST --> | ||
<!-- BEGIN NAVIGATION BAR -- DO NOT EDIT OR REMOVE --> | <!-- BEGIN NAVIGATION BAR -- DO NOT EDIT OR REMOVE --> | ||
{{1080 videos navigation - All Languages| | {{1080 videos navigation - All Languages|Kannada|KN/Prabhupada 0131 - ತಂದೆಗೆ ಶರಣಾಗುವುದು ಬಹಳ ಸಹಜ|0131|KN/Prabhupada 0133 - ನನ್ನ ಆದೇಶವನ್ನು ಅನುಸರಿಸುವ ಒಬ್ಬ ವಿದ್ಯಾರ್ಥಿಯನ್ನು ನಾನು ಬಯಸುತ್ತೇನೆ|0133}} | ||
<!-- END NAVIGATION BAR --> | <!-- END NAVIGATION BAR --> | ||
<!-- BEGIN ORIGINAL VANIQUOTES PAGE LINK--> | <!-- BEGIN ORIGINAL VANIQUOTES PAGE LINK--> |
Latest revision as of 07:10, 10 May 2021
Lecture on BG 7.1 -- Hyderabad, April 27, 1974
ಆದ್ದರಿಂದ, ಭಗವದ್ಗೀತೆಯಲ್ಲಿ ನಾವು ಮಾನವ ಸಮಸ್ಯೆಗಳ ಎಲ್ಲಾ ಪರಿಹಾರಗಳನ್ನು ಕಾಣಬಹುದು, ಎಲ್ಲಾ ಪರಿಹಾರಗಳನ್ನು. ಚಾತುರ್-ವರ್ಣ್ಯಂ ಮಯಾ ಶೃಷ್ಟಂ ಗುಣ-ಕರ್ಮ-ವಿಭಾಗಶಃ (ಭ.ಗೀ 4.13). ನೀವು ಇಡೀ ಮಾನವ ಸಮಾಜವನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸದಿದ್ದರೆ - ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಮತ್ತು ಶೂದ್ರ… ನೀವು ವಿಭಜಿಸಬೇಕು. ‘ವರ್ಗರಹಿತ ಸಮಾಜ’ ಎಂದು ಹೇಳಲು ಸಾಧ್ಯವಿಲ್ಲ. ಅದು ನಿಷ್ಪ್ರಯೋಜಕ ಸಮಾಜ. ವರ್ಗರಹಿತ ಸಮಾಜ ಎಂದರೆ ನಿಷ್ಪ್ರಯೋಜಕ ಸಮಾಜ. ‘ಇದು ಮಾನವ ನಾಗರಿಕತೆ’, ಎಂದು ತೋರಿಸಲು ಬುದ್ಧಿವಂತ ಉನ್ನತ ದರ್ಜೆಯ, ಆದರ್ಶ ವ್ಯಕ್ತಿಗಳ ವರ್ಗವಿರಬೇಕು. ಅವರೇ ಬ್ರಾಹ್ಮಣರು. ಚಾತುರ್-ವರ್ಣ್ಯಂ ಮಯಾ ಶೃಷ್ಟಂ ಗುಣ-ಕರ್ಮ-ವಿಭಾಗಶಃ (ಭ.ಗೀ 4.13). ಜನರು ಆದರ್ಶ ಪುರುಷರನ್ನು ನೋಡದಿದ್ದರೆ, ಅವರು ಹೇಗೆ ಅನುಸರಿಸುತ್ತಾರೆ? ಯದ್ ಯದ್ ಆಚರತಿ ಶ್ರೇಷ್ಠಃ, ಲೋಕಾಸ್ ತದ್ ಅನುವರ್ತತೇ (ಭ.ಗೀ 3.21). ಬ್ರಾಹ್ಮಣನನ್ನು ದೇಹದ ಮೆದುಳಿಗೆ ಹೋಲಿಸಲಾಗುತ್ತದೆ. ಮೆದುಳು ಇಲ್ಲದಿದ್ದರೆ, ಈ ಕೈ ಕಾಲುಗಳ ಉಪಯೋಗವೇನು? ಒಬ್ಬನ ಮೆದುಳಿನಲ್ಲಿ ತೊಂದರೆ ಇದ್ದರೆ, ಹುಚ್ಚ, ಅವನು ಏನನ್ನೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಪ್ರಸ್ತುತ, ಇಡೀ ಮಾನವ ಸಮಾಜದಲ್ಲಿ ಬ್ರಾಹ್ಮಣ ಗುಣವುಳ್ಳ ವ್ಯಕ್ತಿಗಳ ಕೊರತೆಯಿದೆ… ಬ್ರಾಹ್ಮಣ ಎಂಬುವನು ಕೇವಲ ಭಾರತ ಅಥವಾ ಹಿಂದೂಗಳಿಗೆ ಮಾತ್ರ ಬೇಕಾದವನಲ್ಲ. ಇಡೀ ಮಾನವ ಸಮಾಜಕ್ಕೆ ಬೇಕಾದವನು. ಚಾತುರ್-ವರ್ಣ್ಯಂ ಮಯಾ ಶೃಷ್ಟಂ ಗುಣ-ಕರ್ಮ-ವಿಭಾಗಶಃ (ಭ.ಗೀ 4.13) ಎಂಬುದು ಭಾರತಕ್ಕೆ, ಅಥವಾ ಹಿಂದೂಗಳಿಗೆ, ಅಥವಾ ಒಂದು ವರ್ಗದ ಜನರಿಗಾಗಿ ಮಾತ್ರ ಎಂದು ಕೃಷ್ಣ ಎಂದಿಗೂ ಹೇಳುವುದಿಲ್ಲ. ಜನರು ಅನುಸರಿಸಲು, ಇಡೀ ಮಾನವ ಸಮಾಜಕ್ಕೆ ಬಹಳ ಆದರ್ಶವಂತ ಬೌದ್ಧಿಕ ಮನುಷ್ಯನು ಇರಬೇಕು. ಮೆದುಳು, ಸಮಾಜದ ಮೆದುಳು. ಇದೇ ಭಗವದ್ಗೀತೆಯ ಬೋಧನೆಗಳು. "ನಾವು ಮೆದುಳು ಇಲ್ಲದೆ ಇರಬಹುದು", ಎಂದು ನೀವು ಹೇಳಲು ಸಾಧ್ಯವಿಲ್ಲ. ನಿಮ್ಮ ದೇಹದಿಂದ ಮೆದುಳು ಕತ್ತರಿಸಲ್ಪಟ್ಟರೆ, ನಿಮ್ಮ ತಲೆ ಕತ್ತರಿಸಲ್ಪಟ್ಟರೆ, ನಿಮ್ಮ ಕಥೆ ಮುಗಿಯಿತು. ಮೆದುಳು ಇಲ್ಲದಿದ್ದರೆ, ಕೈ ಕಾಲುಗಳು ಏನು ಮಾಡುತ್ತವೆ? ಆದ್ದರಿಂದ, ಪ್ರಸ್ತುತ ಕಾಲದಲ್ಲಿ ಸಮಾಜದಲ್ಲಿ ಮೆದುಳಿನ ಕೊರತೆ ಇದೆ. ಆದ್ದರಿಂದ, ಇದು ಅಸ್ತವ್ಯಸ್ತವಾದ ಸ್ಥಿತಿಯಲ್ಲಿದೆ. ಆದ್ದರಿಂದ ಭಗವದ್ಗೀತೆಯಲ್ಲಿ ಹೇಳಿರುವಂತೆ ಅವಶ್ಯಕತೆಯಿದೆ. ಮಾನವ ಸಮಾಜ, ಇಡೀ ಮಾನವ ನಾಗರಿಕತೆಯನ್ನು ಈ ರೀತಿ ಸುಧಾರಿಸಬೇಕು, ಬೌದ್ಧಿಕ ವರ್ಗದ ಜನರಿದ್ದಾರೆ, ಸ್ವಾಭಾವಿಕವಾಗಿ. ಜನರಲ್ಲಿ ಪ್ರಥಮ ದರ್ಜೆ ಬೌದ್ಧಿಕ ವರ್ಗ, ಎರಡನೇ ದರ್ಜೆಯ ಬುದ್ಧಿಜೀವಿ, ತೃತೀಯ ದರ್ಜೆ, ನಾಲ್ಕನೇ ದರ್ಜೆ, ಹೀಗೆ ಜನರಿದ್ದಾರೆ. ಆದ್ದರಿಂದ, ಪ್ರಥಮ ದರ್ಜೆಯ ಬುದ್ಧಿಜೀವಿಗಳು, ಅವರು ಬ್ರಾಹ್ಮಣ ಅರ್ಹತೆಯುಳ್ಳ ಬ್ರಾಹ್ಮಣರಾಗಿರಬೇಕು, ಮತ್ತು ಅವರು ಕೃಷ್ಣ ಪ್ರಜ್ಞಾವಂತರಾಗಿರಬೇಕು. ಮತ್ತು ಅವರು ಕೃಷ್ಣ ಪ್ರಜ್ಞಾವಂತರಾಗಿರಬೇಕು. ಆಗ ಅವರು ಇಡೀ ಸಮಾಜವನ್ನು ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ಮಾಡಬಹುದು, ಮತ್ತು ಆಗ ಯಾವುದೇ ಸಮಸ್ಯೆ ಇರುವುದಿಲ್ಲ. ಇದೇ ಕೃಷ್ಣ ಪ್ರಜ್ಞೆ ಚಳುವಳಿ.
ಆದ್ದರಿಂದ, ಕಷ್ಣಪ್ರಜ್ಞಾವಂತನಾಗುವುದು ಹೇಗೆ ಎಂದು ಕೃಷ್ಣನು ಇಲ್ಲಿ ತಿಳಿಸುತ್ತಾನೆ. ಅದು ಬ್ರಾಹ್ಮಣರಿಗೆ ಅಥವಾ ಜ್ಞಾನವಂತ ವರ್ಗಕ್ಕೆ. ಅದನ್ನು ಕೃಷ್ಣ ವಿವರಿಸುತ್ತಿದ್ದಾನೆ. ಏನದು? ಮಯ್ ಆಸಕ್ತ-ಮನಾಃ, "ಮನಸ್ಸನ್ನು ನನ್ನ ಮೇಲೆ, ಕೃಷ್ಣನ ಮೇಲೆ, ಕೇಂದ್ರೀಕರಿಸಬೇಕು." ಇದು ಪ್ರಾರಂಭ. ಒಂದಲ್ಲ ಇನ್ನೊಂದು ರೀತಿಯಲ್ಲಿ ನಾವು... ನಮ್ಮ ಮನಸ್ಸು ಬೇರೆ ವಿಷಯಗಳಿಗೆ ಆಸಕ್ತವಾಗಿರುತ್ತದೆ. ಮನಸ್ಸನ್ನು ಬೇರ್ಪಡಿಸಲು ಸಾಧ್ಯವಿಲ್ಲ. ನಮಗೆ ಹಲವು ಆಸೆಗಳಿವೆ. ಆದ್ದರಿಂದ ಮನಸ್ಸಿನ ವ್ಯವಹಾರ - ಮೋಹಗೊಳ್ಳುವುದು. ಆದ್ದರಿಂದ, ನಾನು ಏನನ್ನಾದರು ಸ್ವೀಕರಿಸುತ್ತೇನೆ, ಏನನ್ನಾದರು ತಿರಸ್ಕರಿಸುತ್ತೇನೆ. ಇದೇ ಮನಸ್ಸಿನ ವ್ಯವಹಾರ. ಹಾಗಾಗಿ, ನೀವು ಶೂನ್ಯವಾಗಲು ಸಾಧ್ಯವಿಲ್ಲ, ನೀವು ಆಸೆರಹಿತರಾಗಲು ಸಾಧ್ಯವಿಲ್ಲ. ಅದು ಸಾಧ್ಯವಿಲ್ಲ. ನಮ್ಮ ಪ್ರಕ್ರಿಯೆ... "ನೀವು ಆಸೆರಹಿತರಾಗಿ", ಎಂದು ಇತರರು ಹೇಳುತ್ತಾರೆ. ಅದು ಮೂರ್ಖತನ. ಯಾರಾದರು ಆಸೆರಹಿತರಾಗಬಹುದೆ? ಅದು ಸಾಧ್ಯವಿಲ್ಲ. ನಾನು ಆಸೆರಹಿತನಾದರೆ, ನಾನು ಶವದಂತೆ. ಸತ್ತ ಮನುಷ್ಯನಿಗೆ ಮಾತ್ರ ಆಸೆ ಇರುವುದಿಲ್ಲ. ಆದ್ದರಿಂದ, ಅದು ಸಾಧ್ಯವಿಲ್ಲ. ನಾವು ಆಸೆಗಳನ್ನು ಶುದ್ಧೀಕರಿಸಬೇಕು. ಅದರ ಅಗತ್ಯವಿದೆ. ಆಸೆಗಳನ್ನು ಶುದ್ಧೀಕರಿಸಿ. ಸರ್ವೋಪಾಧಿ-ವಿನಿರ್ಮುಕ್ತಂ ತತ್-ಪರತ್ವೇನ ನಿರ್ಮಲಂ (ಚೈ.ಚ ಮಧ್ಯ 19.170). ಇದನ್ನು ಶುದ್ಧೀಕರಣ ಎಂದು ಕರೆಯಲಾಗುತ್ತದೆ. ನಿರ್ಮಲಂ. ತತ್-ಪರತ್ವೇನ. ತತ್-ಪರತ್ವೇನ ಎಂದರೆ ದೇವರ ಪ್ರಜ್ಞೆ, ಕೃಷ್ಣ ಪ್ರಜ್ಞೆ, ಆಗ ಆಸೆಗಳು ಶುದ್ಧವಾಗುತ್ತವೆ.
ಆದ್ದರಿಂದ, ನಾವು ಆಸೆರಹಿತವಾಗುವ ಸ್ಥಿತಿಗೆ ಬರುವುದಲ್ಲ, ಶುದ್ಧೀಕರಿಸಿದ ಬಯಕೆಗಳ ಹಂತಕ್ಕೆ ಬರಬೇಕು. ಅದು ಬೇಕಾಗಿದೆ. ಆದ್ದರಿಂದ, ಇಲ್ಲಿ ಹೇಳಲಾಗಿದೆ, ಮಯ್ ಆಸಕ್ತ-ಮನಾಃ ನಿಮ್ಮ ಮನಸ್ಸನ್ನು ಆಸೆರಹಿತ ಮಾಡಲು ಸಾಧ್ಯವಿಲ್ಲ, ಆದರೆ ನೀವು ನಿಮ್ಮ ಮನಸ್ಸನ್ನು ನನ್ನ ಮೇಲೆ ಕೇಂದ್ರೀಕರಿಸಿ." ಅದರ ಅಗತ್ಯವಿದೆ. ಮಯ್ ಆಸಕ್ತ - ಮನಾಃ ಪಾರ್ಥ. ಇದೇ ಯೋಗ ಪದ್ಧತಿ. ಇದನ್ನು ಭಕ್ತಿ-ಯೋಗ ಎಂದು ಕರೆಯಲಾಗುತ್ತದೆ, ಮತ್ತು ಇದನ್ನು ಪ್ರಥಮ ದರ್ಜೆಯ ಯೋಗ ಎನುತ್ತಾರೆ. ಅದನ್ನು ಭಗವದ್ಗೀತೆಯಲ್ಲಿ ವಿವರಿಸಲಾಗಿದೆ, ಯೋಗಿನಾಮ್ ಅಪಿ ಸರ್ವೇಷಾಂ ಮದ್-ಗತೇನಾಂತರ್-ಆತ್ಮನಾ (ಭ.ಗೀ 6.47). ಯೋಗಿ, ಪ್ರಥಮ ದರ್ಜೆಯ ಯೋಗಿ, ಯೋಗಿನಾಮ್ ಅಪಿ ಸರ್ವೇಷಾಂ... ವಿವಿಧ ರೀತಿಯ ಯೋಗ ವ್ಯವಸ್ಥೆಗಳಿವೆ, ಆದರೆ ಈ ಭಕ್ತಿ-ಯೋಗವನ್ನು ಸ್ವೀಕರಿಸಿದ ವ್ಯಕ್ತಿ, ಅವನು ಯಾವಾಗಲೂ ನನ್ನ ಬಗ್ಗೆ ಯೋಚಿಸುತ್ತಿರುತ್ತಾನೆ. ಈ ಹುಡುಗರು ಮತ್ತು ಹುಡುಗಿಯರಂತೆ. ಅವರಿಗೆ ಎಲ್ಲಾ ಸಮಯದಲ್ಲು ಕೃಷ್ಣನ ಧ್ಯಾನಮಾಡಲು ಕಲಿಸುತ್ತೇವೆ, "ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ / ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ." ಆದ್ದರಿಂದ ನೀವು ಭಗವದ್ಗೀತೆಯನ್ನು ಓದಿ, ಹರೇ ಕೃಷ್ಣ ಎಂದು ಜಪಿಸಿದರೆ, ತಕ್ಷಣ ನೀವು ಕೃಷ್ಣನಲ್ಲಿ ಆಸಕ್ತರಾಗುವ ಇಡೀ ವಿಜ್ಞಾನವನ್ನು ಕಲಿಯುತ್ತೀರಿ. ಇದನ್ನು ಮಯ್ ಆಸಕ್ತ-ಮನಾಃ ಎನುತ್ತಾರೆ. ಮಯ್ ಆಸಕ್ತ-ಮನಾಃ ಪಾರ್ಥ ಯೋಗಂ ಯುಂಜನ್, ಯೋಗಾಭ್ಯಾಸ ಮಾಡಲು... ಇದೇ ಭಕ್ತಿ ಯೋಗ. ಮದ್-ಆಶ್ರಯಃ. ಮದ್-ಆಶ್ರಯಃ ಎಂದರೆ "ನನ್ನ ನಿರ್ದೇಶನದಲ್ಲಿ", ಅಥವ "ನನ್ನ ರಕ್ಷಣೆಯಲ್ಲಿ" ಎಂದರ್ಥ. ಆಶ್ರಯ.