KN/Prabhupada 0141 - ತಾಯಿ ಹಾಲನ್ನು ನೀಡುತ್ತಾಳೆ ಆದರೆ ನೀನು ತಾಯಿಯನ್ನು ಕೊಲ್ಲುತ್ತಿ: Difference between revisions

(Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0141 - in all Languages Category:KN-Quotes - 1976 Category:KN-Quotes - C...")
 
(Vanibot #0005: NavigationArranger - update old navigation bars (prev/next) to reflect new neighboring items)
 
Line 8: Line 8:
<!-- END CATEGORY LIST -->
<!-- END CATEGORY LIST -->
<!-- BEGIN NAVIGATION BAR -- DO NOT EDIT OR REMOVE -->
<!-- BEGIN NAVIGATION BAR -- DO NOT EDIT OR REMOVE -->
{{1080 videos navigation - All Languages|English|Prabhupada 0140 - One Path is Pious; One Path is Nonpious - No Third Path|0140|Prabhupada 0142 - Stop this Slaughtering Process of Material Nature|0142}}
{{1080 videos navigation - All Languages|Kannada|KN/Prabhupada 0140 - ಒಂದು ಮಾರ್ಗವು ಧಾರ್ಮಿಕವಾಗಿದೆ; ಒಂದು ಮಾರ್ಗವು ಅಧಾರ್ಮಿಕವಾಗಿದೆ - ಮೂರನೆಯ ಮಾರ್ಗವಿಲ್ಲ|0140|KN/Prabhupada 0142 - ಭೌತಿಕ ಪ್ರಕೃತಿಯ ಈ ವಧಿಸುವ ಪ್ರಕ್ರಿಯೆಯನ್ನು ನಿಲ್ಲಿಸಿ|0142}}
<!-- END NAVIGATION BAR -->
<!-- END NAVIGATION BAR -->
<!-- BEGIN ORIGINAL VANIQUOTES PAGE LINK-->
<!-- BEGIN ORIGINAL VANIQUOTES PAGE LINK-->

Latest revision as of 07:10, 10 September 2021



Garden Conversation -- June 14, 1976, Detroit

ಜಯಾದ್ವೈತ: ಕಾಲೇಜಿನ ಕಾರ್ಯಕ್ರಮಗಳಲ್ಲಿ, ವರ್ಣಾಶ್ರಮ-ಧರ್ಮವನ್ನು ಕುರಿತು ನಾನು ಮತ್ತು ಸತ್ಸ್ವರೂಪ ಮಹರಾಜ ಬಹಳಷ್ಟು ಉಪನ್ಯಾಸಗಳನ್ನು ನೀಡುತ್ತಿದ್ದೇವೆ. ಅವರು ಯಾವಾಗಲೂ ಹಿಂದೂಗಳ ಜಾತಿ ಪದ್ಧತಿಯ ಬಗ್ಗೆ ಏನನ್ನಾದರು ಕೇಳಲು ಬಯಸುತ್ತಾರೆ. ಅದಕೋಸ್ಕರ ಅವರು ನಮ್ಮನ್ನು ಆಹ್ವಾನಿಸುತ್ತಾರೆ. ಆಗ ನಾವು ವರ್ಣಾಶ್ರಮ-ಧರ್ಮದ ಬಗ್ಗೆ ಮಾತನಾಡುತ್ತೇವೆ. ಅದನ್ನು ಸೋಲಿಸಲು ಅವರಲ್ಲಿ ಯಾವುದೇ ಉಪಾಯವಿಲ್ಲ. ಅವರು ಯಾವಾಗಲೂ ದುರ್ಬಲ ವಾದವನ್ನು ಮಾಡುತ್ತಾರೆ, ಆದರೆ ಅವರಲ್ಲಿ ಯಾವುದೇ ಉತ್ತಮ ವ್ಯವಸ್ಥೆಯಿಲ್ಲ.

ಪ್ರಭುಪಾದ: ಅವರ ವಾದವೇನು?

ಜಯಾದ್ವೈತ: ಅಂದರೆ, ಇದರಲ್ಲಿ ಯಾವುದೇ ಸಾಮಾಜಿಕ ಚಲನಶೀಲತೆ ಇಲ್ಲ ಎಂದು ವಾದಿಸುತ್ತಾರೆ, ಏಕೆಂದರೆ ಅವರೆಲ್ಲರೂ ಹುಟ್ಟಿನಿಂದಲೇ ಜಾತಿ ನಿರ್ಣಯವಾಗುತ್ತದೆ ಎಂಬ ದೈಹಿಕ ಪರಿಕಲ್ಪನೆಯನ್ನು ಹೊಂದಿದ್ದಾರೆ.

ಪ್ರಭುಪಾದ: ಇಲ್ಲ, ಅದು ಸತ್ಯವಲ್ಲ.

ಜಯಾದ್ವೈತ: ಇಲ್ಲ.

ಪ್ರಭುಪಾದ: ಅರ್ಹತೆ.

ಜಯಾದ್ವೈತ: ನಾವು ನಿಜವಾದ ವಿಷಯವನ್ನು ಮುಂದಿಟ್ಟಾಗ ಅವರು ಮೌನವಾಗಿ ಕುಳಿತಿರುತ್ತಾರೆ, ಯಾವುದೇ ವಾದವಿಲ್ಲ. ತದನಂತರ, ನಾವು ಅವರ ವ್ಯವಸ್ಥೆಯನ್ನು ಪ್ರಶ್ನಿಸುತ್ತೇವೆ, "ನಿಮ್ಮ ಸಮಾಜದ ಉದ್ದೇಶವೇನು? ಅದರ ಗುರಿಯೇನು?" ಅವರಲ್ಲಿ ಉತ್ತರವಿಲ್ಲ.

ಪ್ರಭುಪಾದ: ಕೆಲಸದ ವಿಭಜನೆಯಿಲ್ಲದಿದ್ದರೆ, ಯಾವುದನ್ನೂ ಪರಿಪೂರ್ಣವಾಗಿ ಮಾಡಲು ಸಾಧ್ಯವಿಲ್ಲ. ಸಹಜವಾಗಿ ದೇಹದಲ್ಲಿ ವಿಭಾಗಗಳಿವೆ - ತಲೆ, ತೋಳುಗಳು, ಹೊಟ್ಟೆ, ಮತ್ತು ಕಾಲುಗಳು. ಅದೇ ರೀತಿ, ಸಾಮಾಜಿಕ ದೇಹದಲ್ಲಿಯೂ ಸಹ ತಲೆಗಳು, ಬುದ್ಧಿವಂತ ವ್ಯಕ್ತಿಗಳ ವರ್ಗ, ಅಂದರೆ ಬ್ರಾಹ್ಮಣರು ಇರಬೇಕು. ಆಗ ಎಲ್ಲವೂ ಸರಾಗವಾಗಿ ನಡೆಯುತ್ತದೆ. ಆದರೆ, ಈ ಕಾಲದಲ್ಲಿ, ಯಾವುದೇ ಬುದ್ಧಿವಂತ ವ್ಯಕ್ತಿಗಳ ವರ್ಗವಿಲ್ಲ. ಎಲ್ಲಾ ಕಾರ್ಮಿಕರು, ಶ್ರಮಿಕ ವರ್ಗ, ನಾಲ್ಕನೇ ವರ್ಗ. ಪ್ರಥಮ ದರ್ಜೆ, ದ್ವಿತೀಯ ದರ್ಜೆ ಇಲ್ಲ. ಆದ್ದರಿಂದ, ಸಮಾಜವು ಅಸ್ತವ್ಯಸ್ತ ಸ್ಥಿತಿಯಲ್ಲಿದೆ. ಮೆದುಳು ಇಲ್ಲ.

ಜಯಾದ್ವೈತ: ಅವರ ಏಕೈಕ ಆಕ್ಷೇಪವೆಂದರೆ, ನಾವು ಬ್ರಹ್ಮಚಾರಿ, ಗೃಹಸ್ಥ, ವಾನಪ್ರಸ್ಥ, ಮತ್ತು ಸಂನ್ಯಾಸದ ವಿಚಾರವನ್ನು ಮಂಡಿಸಿದಾಗ, ಅವರು ತಕ್ಷಣ ವಿರೋಧಿಸುತ್ತಾರೆ, ಏಕೆಂದರೆ ನಾವು ಇಂದ್ರಿಯ ತೃಪ್ತಿಗೆ ವಿರುದ್ಧವಾಗಿದ್ದೇವೆ ಎಂದು ಅವರು ಅರ್ಥಮಾಡಿಕೊಂಡಿದ್ದಾರೆ.

ಪ್ರಭುಪಾದ: ಹೌದು. ಇಂದ್ರಿಯ ತೃಪ್ತಿಯು ಮೃಗಗಳ ನಾಗರಿಕತೆ. ಮತ್ತು ಇಂದ್ರಿಯ ನಿಯಂತ್ರಣವು ಮಾನವ ನಾಗರಿಕತೆ... ಇಂದ್ರಿಯ ತೃಪ್ತಿಯು ಮಾನವ ಸಮಾಜಕ್ಕೆ ಸೂಕ್ತವಲ್ಲ. ಇಂದ್ರಿಯ ತೃಪ್ತಿಯು ಮಾನವ ನಾಗರೀಕತೆಯಲ್ಲ. ಇಲ್ಲ. ಇದು ಅವರಿಗೆ ಗೊತ್ತಿಲ್ಲ. ಅವರ ಕೇಂದ್ರ ಬಿಂದುವು ಇಂದ್ರಿಯ ತೃಪ್ತಿ. ಅದೇ ದೊಡ್ದ ಕೊರತೆ. ಅವರು ಮೃಗಗಳ ನಾಗರಿಕತೆಯನ್ನು ಮಾನವ ನಾಗರೀಕತೆಯಾಗಿ ನಡೆಸುತ್ತಿದ್ದಾರೆ. ಅದೆ ನ್ಯೂನತೆ. ಇಂದ್ರಿಯ ತೃಪ್ತಿಯು ಮೃಗಗಳ ನಾಗರಿಕತೆ. ಮತ್ತು ವಾಸ್ತವವಾಗಿ ಅವರು ಮೃಗಗಳೆ. ಅವರು ತಮ್ಮ ಮಗುವನ್ನು ಕೊಲ್ಲಲು ಸಾಧ್ಯವಾದರೆ ಅವರು ಮೃಗಗಳೆ. ಬೆಕ್ಕುಗಳು, ನಾಯಿಗಳಂತೆ, ಅವರು ತಮ್ಮ ಮಗುವನ್ನು ಕೊಲ್ಲುತ್ತಾರೆ. ಏನದು? ಅದು ಮೃಗ. ಮಗುವನ್ನು ಸಾಮಾನು ಲಾಕರಿನಲ್ಲಿ ಮುಚ್ಚಿಡಲಾಗಿತ್ತು ಎಂದು ಯಾರೋ ಹೇಳುತ್ತಿದ್ದರು, ಏನದು?

ಹರಿ-ಶೌರಿ: ಸಾಮಾನು ಲಾಕರ್‌ಗಳು. ತ್ರಿವಿಕ್ರಮ ಮಹರಾಜ, ಜಪಾನ್‌ನಲ್ಲಿ. ಅವರು ಎರಡು ಲಕ್ಷಕ್ಕೂ ಹೆಚ್ಚು ಎಂದು ಹೇಳಿದರು, ಉಹ್, ಇಪ್ಪತ್ತು ಸಾವಿರ ಶಿಶುಗಳನ್ನು ಸಾಮಾನು ಲಾಕರುಗಳಲ್ಲಿ ತೊರೆದು ಹೋಗುತ್ತಾರೆ.

ಪ್ರಭುಪಾದ: ಬಸ್ ನಿಲ್ದಾಣ? ರೈಲು ನಿಲ್ದಾಣ? ಸಾಮಾನಿನಲ್ಲಿ ತೊರೆದು ಬಿಡುವುದು. ಬಿಟ್ಟು ಬೀಗ ಹಾಕಿ ಹೋಗುವುದು, ಮತ್ತೆಂದು ಹಿಂತಿರುಗುವುದಿಲ್ಲ. ನಂತರ ದುರ್ವಾಸನೆ ಬಂದಾಗ... ಹೀಗೆ ನಡೆಯುತ್ತಿದೆ. ಇದು ಕೇವಲ ಮೃಗಗಳ ನಾಗರಿಕತೆ. ಹಸುವಿನಿಂದ ಕೊನೆಯ ಹನಿ ಹಾಲನ್ನು ಹೀರಿ ತಕ್ಷಣ ಅದನ್ನು ಕಸಾಯಿಖಾನೆಗೆ ತಳ್ಳುವುದು. ಅವರು ಹಾಗೆ ಮಾಡುತ್ತಿದ್ದಾರೆ. ಕಸಾಯಿಖಾನೆಗೆ ಕಳುಹಿಸುವ ಮೊದಲು, ಅವರು ಹಸುವಿನಿಂದ ಕೊನೆಯ ಹನಿ ಹಾಲನ್ನು ಹೀರುತ್ತಾರೆ. ಮತ್ತು ತಕ್ಷಣ ಕೊಲ್ಲುವುದು. ನಿಮಗೆ ಹಾಲು ಬೇಕು, ನೀವು ಅಷ್ಟೊಂದು ಹಾಲು ಪಡೆಯುತ್ತಿದ್ದೀರಿ, ಹಾಲು ಇಲ್ಲದೆ... ನೀಮಗೆ ಹಾಲನ್ನು ನೀಡುವ ಪ್ರಾಣಿ, ಅವಳು ನಿಮ್ಮ ತಾಯಿ. ಅವರು ಇದನ್ನು ಮರೆತಿದ್ದಾರೆ. ತಾಯಿ ಹಾಲನ್ನು ನೀಡುತ್ತಾಳೆ, ಆಕೆಯ ದೇಹದಿಂದ ಹಾಲನ್ನು ನೀಡುತ್ತಾಳೆ, ಆದರೆ ನೀವು ತಾಯಿಯನ್ನು ಕೊಲ್ಲುತ್ತಿದ್ದೀರಾ? ಅದು ನಾಗರೀಕತೆಯೇ? ತಾಯಿಯನ್ನು ಕೊಲ್ಲುವುದೇ? ಮತ್ತು ಹಾಲು ಅಗತ್ಯ. ಆದ್ದರಿಂದ ನೀವು ಅದರ ಕೊನೆಯ ಹನಿ ಹೀರುತ್ತೀರಿ. ಇಲ್ಲದಿದ್ದರೆ, ಹಸುವಿನಿಂದ ಕೊನೆಯ ಹನಿ ಹಾಲನ್ನು ತೆಗೆದುಕೊಂಡರೆ ಏನು ಪ್ರಯೋಜನ? ಅದು ಅಗತ್ಯ. ಹಾಗಾದರೆ ಅವಳನ್ನು ಏಕೆ ಬದುಕಲು, ಮತ್ತು ನಿಮಗೆ ಹಾಲನ್ನು ನೀಡಲು ಬಿಡುಬಾರದು? ಮತ್ತು ನೀವು ಹಾಲಿನಿಂದ ಸಾವಿರಾರು ಪೌಷ್ಟಿಕವಾದ ರುಚಿಕರವಾದ ತಿಂಡಿಗಳನ್ನು ಏಕೆ ತಯಾರಿಸಬಾರದು? ಆ ಬುದ್ಧಿವಂತಿಕೆ ಎಲ್ಲಿದೆ? ಹಾಲು ರಕ್ತದ ರೂಪಾಂತರವಲ್ಲದೆ ಬೇರೇನೂ ಅಲ್ಲ. ಆದ್ದರಿಂದ ರಕ್ತವನ್ನು ತೆಗೆದುಕೊಳ್ಳುವ ಬದಲು, ರೂಪಾಂತರವಾದ ಪದಾರ್ಥವನ್ನು ಸ್ವೀಕರಿಸಿ ಪ್ರಾಮಾಣಿಕ ಸಜ್ಜನರಂತೆ ಚೆನ್ನಾಗಿ ಬದುಕಿ. ಇಲ್ಲ. ಅವರು ಸಜ್ಜನರೇ ಅಲ್ಲ. ಧೂರ್ತರು, ಅನಾಗರೀಕರು. ನೀವು ಮಾಂಸವನ್ನು ತಿನ್ನಲು ಬಯಸಿದರೆ, ಯಾವುದೇ ಪ್ರಯೋಜನವಿಲ್ಲದ ಹಂದಿಗಳು ಮತ್ತು ನಾಯಿಗಳಂತಹ ಅಲ್ಪ ಪ್ರಾಣಿಗಳನ್ನು ನೀವು ಕೊಲ್ಲಬಹುದು. ನೀವು ತಿನ್ನಲೇಬೇಕು ಎಂದರೆ ಅವುಗಳನ್ನು ತಿನ್ನಿ. ಅದನ್ನು ಅನುಮತಿಸಲಾಗಿದೆ, ಹಂದಿಗಳು ಮತ್ತು ನಾಯಿಗಳನ್ನು ಅನುಮತಿಸಲಾಗಿದೆ. ಏಕೆಂದರೆ ಯಾವುದೇ ಸಂಭಾವಿತ ವರ್ಗ ಮಾಂಸವನ್ನು ತಿನ್ನುವುದಿಲ್ಲ. ಅದು ಕೆಳವರ್ಗ. ಆದ್ದರಿಂದ ಅವರಿಗೆ ಅನುಮತಿಸಲಾಯಿತು, "ಸರಿ, ನೀವು ಹಂದಿಗಳನ್ನು ತಿನ್ನಬಹುದು, ಶ್ವಪಚ." ಕೆಳವರ್ಗದ ಮನುಷ್ಯರು, ಅವರು ಹಂದಿಗಳು ಮತ್ತು ನಾಯಿಗಳನ್ನು ತಿನ್ನುತ್ತಿದ್ದರು. ಈಗಲು ತಿನ್ನುತ್ತಿದ್ದಾರೆ. ಆದ್ದರಿಂದ, ನೀವು ಮಾಂಸವನ್ನು ತಿನ್ನಲು ಬಯಸಿದರೆ, ನೀವು ಈ ಅಲ್ಪ ಪ್ರಾಣಿಗಳನ್ನು ಕೊಲ್ಲಬಹುದು. ನಿಮಗೆ ಯಾವ ಪ್ರಾಣಿಯ ಹಾಲಿನ ಕೊನೆಯ ಹನಿಯೂ ಅಗತ್ಯವಿದೆಯೋ ಅದನ್ನು ಏಕೆ ಕೊಲ್ಲುತ್ತಿದ್ದೀರಿ? ಅರ್ಥವೇನು? ಮತ್ತು ನೀವು ಕೃಷ್ಣನನ್ನು ಗಮನಿಸಿದರೆ, ಆತನು ಪೂತನಾಳನ್ನು ಕೊಂದನು ಆದರೆ ಅವಳಿಗೆ ತಾಯಿಯ ಸ್ಥಾನವನ್ನು ಕೊಟ್ಟನು. ಏಕೆಂದರೆ ಕೃಷ್ಣನು ಋಣಿಯಾದನು, "ಪೂತನಾಳ ಉದ್ದೇಶ ಏನೇ ಇರಲಿ, ಆದರೆ ನಾನು ಅವಳ ಎದೆಹಾಲನ್ನು ಕುಡಿದೆ, ಹಾಗಾಗಿ ಅವಳು ನನಗೆ ತಾಯಿ." ನಾವು ಹಸುವಿನಿಂದ ಹಾಲು ಪಡೆಯುತ್ತಿದ್ದೇವೆ. ಹಾಗಾದರೆ ಹಸು ನಮ್ಮ ತಾಯಿಯಲ್ಲವೆ? ಹಾಲು ಇಲ್ಲದೆ ಯಾರು ಬದುಕಬಲ್ಲರು? ಮತ್ತು ಹಸುವಿನ ಹಾಲನ್ನು ಯಾರು ಕುಡಿದಿಲ್ಲ? ಬೆಳಿಗ್ಗೆ ಎದ್ದ ತಕ್ಷಣ ನಿಮಗೆ ಹಾಲು ಬೇಕು. ಮತ್ತು ಆ ಪ್ರಾಣಿ, ಅವಳು ಹಾಲು ನೀಡುತ್ತಿದ್ದಾಳೆ, ಅವಳು ತಾಯಿಯಲ್ಲವೇ? ಅರ್ಥವೇನು? ತಾಯಿಯನ್ನು ಕೊಲ್ಲುವ ನಾಗರೀಕತೆ. ಇಂತಹದರಲ್ಲಿ ಇವರು ಸಂತೋಷವಾಗಿರಲು ಬಯಸುತ್ತಾರೆ. ಮತ್ತು ಇದರ ಪ್ರತಿಫಲವಾಗಿ ನಿಯತಕಾಲಿಕವಾಗಿ ದೊಡ್ಡ ಯುದ್ಧ ಮತ್ತು ಸಾಮೂಹಿಕ ಹತ್ಯಾಕಾಂಡ.