KN/Prabhupada 0053 - ಮೊದಲೆನೆಯದಾಗಿ ನಾವು ಆಲಿಸ ಬೇಕು
Lecture on SB 2.1.5 -- Delhi, November 8, 1973
ನಾವು ಕೂಡ ಪ್ರಕೃತಿ. ನಾವು ಕೂಡ ದೇವರ ಶಕ್ತಿ. ಮತ್ತು ಜಡದ ಸಂಪನ್ಮೂಲಗಳನ್ನು ಬಳಸಲು ಪ್ರಯತ್ನಿಸುತ್ತಿರುವುದರಿಂದ ಭೌತಿಕ ವಸ್ತುಗಳು ಬೆಲೆಯನ್ನು ಪಡೆದುಕೊಂಡಿದೆ. ಇಲ್ಲವಾದರೆ ಅದಕ್ಕೆ ಯಾವ ಬೆಲೆಯೂ ಇಲ್ಲ, ಸೊನ್ನೆ. ಆದರೆ ನಮ್ಮ ವ್ಯವಹಾರವೇನಿದ್ದರು... ಅದನ್ನು ಇಲ್ಲಿ ಹೇಳಲಾಗಿದೆ, ಈಗ ನಾವು ಈ ಜಡದೊಂದಿಗೆ ಸಿಲುಕಿಕೊಂಡಿದ್ದೇವೆ.... ಜಡದೊಂದಿಗೆ ನಮ್ಮ ವ್ಯವಹಾರವಿಲ್ಲ. ನಮ್ಮ ವ್ಯವಹಾರ ಏನಿದ್ದರೂ ಜಡದಿಂದ ಏಗೆ ಹೊರಬರುವುದು ಎಂದು. ಅದು ನಮ್ಮ ನಿಜವಾದ ವ್ಯವಹಾರ. ನಿಮಗೆ ಆ ವ್ಯವಹಾರ ಬೇಕಿದ್ದರೆ, ಅದರ ನಿಯಮ ಇಲ್ಲಿದೆ. ಅದು ಏನು? ಶ್ರೋತವ್ಯ: ಕೀರ್ತಿತವ್ಯಶ್ ಚ(ಶ್ರೀ.ಭಾ 1.2.14). ನೀವು ಶ್ರವಣ ಮಾಡದ ಹೊರತು, ನಿಮ್ಮ ಸ್ಥಾನದ ಬಗ್ಗೆ ಏಗೆ ತಾನೇ ಅರಿತುಕೊಳ್ಳುವಿರಿ? ದೇವರು ಅಥವಾ ಕೃಷ್ಣನನ್ನು ಅರಿತುಕೊಂಡಾಗ, ಹಾಗು ನೀವು ದೇವರ ಆಂಶಿಕ ಭಾಗ ಎಂದು ಅರಿತುಕೊಂಡಾಗ, ಅಥವ ಕೃಷ್ಣನ ಆಂಶಿಕ ಭಾಗ ಎಂದು ಅರಿತುಕೊಂಡಾಗ, ನೀವು ನಿಮ್ಮ ನಿಜವಾದ ಸ್ಥಾನವನ್ನು ಅರಿಯುವುರಿ:" ಓ ನಾವು ದೇವರ ಆಂಶಿಕ ಭಾಗ". ಕೃಷ್ಣನು ಪರಮ ಪುರುಷ, ಷಡ ಐಶ್ವರ್ಯ ಪೂರ್ಣಮ್, ಎಲ್ಲ ಐಶ್ವರ್ಯಗಳನ್ನು ಪೂರ್ಣವಾಗಿ ಹೊಂದಿರುವನು. ಉಚ್ಚ ಮಗನು ಬೀದಿಯಲ್ಲಿ ಅಲೆದಾಡುವಂತೆ, ಆತ ಉತ್ತಮ ಮೆದುಳಿನಿಂದ ಹೀಗೆ ಅರ್ಥ ಮಾಡಿಕೊಂಡರೆ, " ನನ್ನ ತಂದೆ ಬಹಳ ಶ್ರೀಮಂತ, ಬಹಳ ಶಕ್ತಿಶಾಲಿ, ಹೀಗಿರುವಾಗ ನಾನೇಕೆ ಬೀದಿಯಲ್ಲಿ ಉಚ್ಚನಂತೆ ಅಲೆದಾಡುತ್ತಿದ್ದೇನೆ? ನನಗೆ ಉಟವಿಲ್, ಆಶ್ರಯವಿಲ್ಲ. ಮನೆ ಮನೆಗೂ ಹೋಗಿ ಬೇಡುತ್ತಿದ್ದೇನೆ", ಆಗ ಆತ ತನ್ನ ಪ್ರಜ್ಞೆಗೆ ಬರುತ್ತಾನೆ. ಅದನ್ನೇ ಬ್ರಹ್ಮ-ಭೂತ ಸ್ಥಿತಿ (ಭ.ಗೀ 18.54) ಎನ್ನುತ್ತಾರೆ. "ಓ, ನಾನು ಈ ಜಡ ಅಲ್ಲ. ನಾನು ಆತ್ಮ , ದೇವರ ಆಂಶಿಕ ಭಾಗ. ಓ". ಅದುವೆ ಪ್ರಜ್ಞೆ.
ಈ ಪ್ರಜ್ಞೆಯನ್ನು ಎಚ್ಚರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಅದುವೆ ಜನರಿಗೆ ಸಲ್ಲಿಸುವ ಅತ್ಯುತ್ತಮ ಕಲ್ಯಾಣ ಸೇವೆ, ಅವರ ಕಳೆದುಹೋದ ಪ್ರಜ್ಞೆಯನ್ನು ಎಚ್ಚರಿಸುವುದು. ಆತ ಮೂರ್ಖನಂತೆ ಯೋಚಿಸುತ್ತಿದ್ದಾನೆ," ನಾನು ಜಡದ ಉತ್ಪತ್ತಿ, ಹಾಗು ಈ ಭೌತಿಕ ಜಗತ್ತಿನಲ್ಲಿ ನನ್ನನ್ನು ನಾನು ಸರಿಹೊಂದಿಸಿಕೊಳ್ಳ ಬೇಕು ". ಇದು ಮೂರ್ಖತನ. ನಿಜವಾದ ಬುದ್ಧಿವಂತಿಕೆ ಎಂದರೆ ಬ್ರಹ್ಮ-ಭೂತ, ಅಹಂ ಬ್ರಹ್ಮಾಸ್ಮಿ. ಅಹo ಬ್ರಹ್ಮಾಸ್ಮಿ " ನಾನು ದೇವರ ಆಂಶಿಕ ಭಾಗ. ದೇವರು ಪರ ಬ್ರಹ್ಮನ್. ನನ್ನು ಆಂಶಿಕ ಭಾಗವಾಗಿರುವುದರಿಂದ ..." ಹೇಗೆ ಚಿನ್ನದ ಗಣಿ, ಹಾಗು ಚಿನ್ನದ ಆಂಶಿಕ ಭಾಗದ ಹಾಗೆ, ಅದು ಪುಟ್ಟ ಕಿವಿ ಒಲೆಯಾಗಿರಬಹುದು, ಆದರೆ ಅದು ಕೂಡ ಚಿನ್ನ. ಆಗೇ, ಸಮುದ್ರ ನೀರಿನ ಚಿಕ್ಕ ಕಣವೂ ಸಮುದ್ರ ನೀರಿನ ಗುಣವಾದ ಉಪ್ಪುನ ರುಚಿಯನ್ನು ಪಡೆದಿರುತ್ತದೆ. ಆಗೇ, ನಾವು ದೇವರ ಆಂಶಿಕ ಭಾಗವಾಗಿರುವುದರಿಂದ, ದೇವರ ಗುಣಗಳನ್ನೇ ಹೊಂದಿರುವೆವು. ಗುಣಾತ್ಮಕವಾಗಿ ನಾವು ಒಂದು. ನಾವು ಪ್ರೀತಿಗಾಗಿ ಏಕೆ ಹಾತೊರೆಯುತ್ತೇವೆ? ಏಕೆಂದರೆ ಕೃಷ್ಣನಲ್ಲಿ ಪ್ರೀತಿ ಇದೆ. ನಾವು ಇಲ್ಲಿ ರಾಧಾ-ಕೃಷ್ಣರನ್ನು ಅರಾಧಿಸುತ್ತಿದ್ದೇವೆ. ಮೂಲಭೂತವಾಗಿ ಪ್ರೀತಿ ಇದೆ. ಆದ್ದರಿಂದ ದೇವರ ಆಂಶಿಕ ಭಾಗವಾಗಿರುವ ನಾವು ಕೂಡ ಪ್ರೀತಿಸಲು ಪ್ರಯತ್ನಿಸುತ್ತೆದ್ದೇವೆ. ಒಬ್ಬ ಪುರುಷ ಮಹಿಳೆಯೊಬ್ಬಳನ್ನು ಪ್ರೀತಿಸಲು ಪ್ರಯತ್ನಿಸುತ್ತಿದ್ದಾನೆ, ಒಬ್ಬ ಮಹಿಳೆ ಪುರುಷನೊಬ್ಬನನ್ನು ಪ್ರೀತಿಸಲು ಪ್ರಯತ್ನಿಸುತ್ತಿದ್ದಾಳೆ. ಇದು ಸ್ವಾಭಾವಿಕ. ಇದು ಕೃತಕವಲ್ಲ. ಆದರೆ ಭೌತಿಕ ಮುಸುಕಿನಲ್ಲಿ ಅದು ವ್ಯತಿರಿಕ್ತವಾಗಿದೆ. ಅದು ದೋಷವಾಗಿದೆ. ಈ ಭೌತಿಕ ಆವರಣದಿಂದ ಮುಕ್ತರಾದಾಗಲೇ, ಗುಣಾತ್ಮಕವಾಗಿ ಆನಂದಮಯೋ ಅಭ್ಯಾಸಾತ್ (ವೇದಾಂತ ಸೂತ್ರ 1.1.12), ಖುಷಿಯಾಗಿ...ಹೇಗೆ ಕೃಷ್ಣನು ಸದಾ ನರ್ತಿಸುತ್ತಿರುತ್ತಾನೆ... ಎಂದಿಗೂ ನೀವು ಕಾಣಲಾರಿರಿ ಕೃಷ್ಣನು... ಕೃಷ್ಣನ ಚಿತ್ರವನ್ನು ನೀವು ನೋಡಿರುವಿರಿ. ಆಟ ಕಾಳಿಯ ಸರ್ಪದೊಂದಿಗೆ ಕಾದಾಡುತ್ತೀದ್ದಾನೆ. ಆತ ನರ್ತಿಸುತ್ತಿದ್ದಾನೆ. ಆತ ಸರ್ಪದಿಂದ ಭಯಕೊಂಡಿಲ್ಲ. ಆತ ನರ್ತಿಸುತ್ತಿದ್ದಾನೆ. ಆತ ರಾಸ ಲೀಲೆಯಲ್ಲಿ ಗೋಪಿಯರೊಂದಿಗೆ ನರ್ತಿಸುತ್ತಿದ್ದಾನೆ, ಹಾಗೆ, ಆತ ಸರ್ಪದೊಂದಿಗೆ ನರ್ತಿಸುತ್ತಿದ್ದಾನೆ. ಏಕೆಂದರೆ ಆತ ಆನಂದಮಯೋ ಅಭ್ಯಾಸಾತ್. ಆತ ಆನಂದಮಯ, ಸದಾ ಖುಷಿಯಾಗಿರುವವನು. ನಿತ್ಯವಾಗಿ. ನೀವು ನೋಡುತ್ತೀರ ಕೃಷ್ಣ...ಕೃಷ್ಣ... ಕುರುಕ್ಷೇತ್ರದಲ್ಲಿ ಯುದ್ಧವು ನಡೆಯುತ್ತಿರುವ ಹಾಗೆ. ಕೃಷ್ಣನು ಸಂತೋಷವಾಗಿರುವನು. ಅರ್ಜುನನು ಜೀವಿಯಾಗಿರುವುದರಿಂದ ಆತ ಬೇಸರಗೊಂಡಿರುವನು, ಆದರೆ ಕೃಷ್ಣನು ಬೀಸರಗೊಂಡವನಲ್ಲ. ಆತ ಆನಂದಮಯ. ಅದೇ ದೇವರ ಗುಣ. ಆನoದಮಯೋ ಅಭ್ಯಾಸಾತ್ . ಇದುವೇ ಸೂತ್ರ, ಬ್ರಹ್ಮ ಸೂತ್ರದಲ್ಲಿ, ಏನೆಂದರೆ "ದೇವರು ಆನಂದಮಯ, ಸದಾ ಸಂತೂಷವಾಗಿರುವನು, ಸದಾ ಉಲ್ಲಾಸಭರಿತನು". ನೀವು ಮರಳಿ ಮನೆಗೆ, ದೇವೂತ್ತಮನೆಡೆಗೆ ಹಿಂತಿರುಗುದಾಗ ನೀವು ಕೂಡ ಉಲ್ಲಾಸಭರಿತರಾಗಬಹುದು. ಅದೇ ನಮ್ಮ ಸಮಸ್ಯೆ.
ಆಗಾಗಿ ಅಲ್ಲಿಗೆ ನಾವು ಎಗೆ ಹೋಗುವುದು? ಮೊದಲೆನೆಯದಾಗಿ ನಾವು ಆಲಿಸ ಬೇಕು. ಶ್ರೋತ್ರವ್ಯಹ. ದೇವರಂದರೆ ಯಾರು, ಆತನ ರಾಜ್ಯ ಯಾವುದು, ಎಂದು ಸುಮ್ಮನೆ ಆಲಿಸಿ. ಆತ ಏಗೆ ಕೆಲಸ ಮಾಡುತ್ತಾನೆ, ಆತ ಏಗೆ ಉಲ್ಲಸಭರಿತನಾಗಿದ್ದಾನೆ. ಇವೆಲ್ಲವನ್ನೂ ಕೀಳಿಸಿಕೊಳ್ಳ ಬೇಕು. ಶ್ರವಣಂ. ನೀಮಾಗೇ ಮನವರಿಕೆಯಾದೊಡನೆ," ಓ ದೇವರು ಎಷ್ಟು ಒಳ್ಳೆಯವರು ", ಆಗ ಈ ಸುದ್ದಿಯನ್ನು ಇಡೀ ಜಗತ್ತಿಗೇ ತೋರಿಸಲು ಅಥವ ಪ್ರಸಾರಪಡಿಸಲು ನೀವು ಉತ್ಸುಕರಾಗುತ್ತಿರಿ. ಇದನ್ನು ಕಿರ್ತನಂ ಎನ್ನುತ್ತೇವೆ. ಇದನ್ನು ಕಿರ್ತನಂ ಎನ್ನುತ್ತೇವೆ.