KN/Prabhupada 0105 - ಈ ವಿಜ್ಞಾನವನ್ನು ಗುರುಶಿಷ್ಯ-ಪರಂಪರೆಯಿಂದ ಅರ್ಥಮಾಡಿಕೊಳ್ಳಲಾಗುತ್ತದೆ
Lecture on BG 18.67 -- Ahmedabad, December 10, 1972
ಭಕ್ತ: ಶ್ರೀಲ ಪ್ರಭುಪಾದ, ಯಾರೋ ಒಬ್ಬರು ಈ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ: "ನಿಮ್ಮ ನಂತರ ಈ ಚಳುವಳಿಯನ್ನು ಯಾರು ಮುಂದುವರಿಸುತ್ತಾರೆ?"
ಪ್ರಭುಪಾದ: ಯಾರು ನನ್ನನ್ನು ಕೇಳುತ್ತಿದ್ದಾನೋ, ಅವನೇ ಅದನ್ನು ಮಾಡುತ್ತಾನೆ. (ನಗು)
ಭಾರತೀಯ (5): ಪ್ರಿಯ ಭಕ್ತರನ್ನು ಕೇಳಬಹುದೇ? ಮುಂದುವರಿಯಲು ಏನು ನಿಮ್ಮ ಯೋಜನೆ, ನಿಮ್ಮ ನಂತರ ನಿಮ್ಮ ಚಳುವಳಿಯನ್ನು ಸಾಗಿಸಲು, ಶ್ರೀ ಭಕ್ತಿವೇದಾಂತ ಪ್ರಭುವಿನ ನಂತರ ಏನು, ಈ ಏಣಿಯನ್ನು ಎತ್ತಿ ಹಿಡಿಯಲು? ಹರೇ ಕೃಷ್ಣ, ಹರೇ ಕೃಷ್ಣ.
ಪ್ರಭುಪಾದ: ಅದನ್ನು ಭಗವದ್ಗೀತೆಯಲ್ಲಿ ಉಲ್ಲೇಖಿಸಲಾಗಿದೆ:
- ಇಮಂ ವಿವಸ್ವತೇ ಯೋಗಂ
- ಪ್ರೋಕ್ತವಾನ್ ಅಹಂ ಅವ್ಯಯಮ್
- ವಿವಸ್ವಾನ್ ಮನವೇ ಪ್ರಾಹ
- ಮನುರ್ ಇಕ್ಷ್ವಾಕವೇ ‘ಬ್ರವೀತ್
- (ಭ.ಗೀ 4.1)
ಮೊದಲನೆಯದಾಗಿ, ಕೃಷ್ಣನು ಈ ಕೃಷ್ಣ ಪ್ರಜ್ಞೆ ವಿಜ್ಞಾನವನ್ನು ಸೂರ್ಯ-ದೇವನಿಗೆ ತಿಳಿಸಿದನು, ಮತ್ತು ಸೂರ್ಯ-ದೇವನು, ವಿವಸ್ವಾನ್, ಅದನ್ನು ತನ್ನ ಮಗ ಮನುವಿಗೆ ವಿವರಿಸಿದನು. ಮತ್ತು ಮನು ತನ್ನ ಮಗ ಇಕ್ಷ್ವಾಕುವಿಗೆ ವಿವರಿಸಿದನು. ಏವಂ ಪರಂಪರಾ-ಪ್ರಾಪ್ತಂ ಇಮಂ ರಾಜರ್ಷಯೋ ವಿದುಃ (ಭ.ಗೀ 4.2). ಆದ್ದರಿಂದ ಗುರುಶಿಷ್ಯ-ಪರಂಪರಾ, ಇದರಿಂದ ಈ ವಿಜ್ಞಾನವನ್ನು ಅರ್ಥಮಾಡಿಕೊಳ್ಳಲಾಗುತ್ತದೆ. ನನ್ನ ಗುರು ಮಹಾರಾಜರಿಂದ ನಾವು ಪ್ಯಾರಂಪರಾ ಪದ್ಧತಿಯಿಂದ ಅರ್ಥಮಾಡಿಕೊಂಡಂತೆ, ನನ್ನ ಯಾವ ವಿದ್ಯಾರ್ಥಿ ಅರ್ಥಮಾಡಿಕೊಳ್ಳುವನೋ, ಅವನು ಮುಂದುವರಿಸುತ್ತಾನೆ. ಇದು ಪ್ರಕ್ರಿಯೆ. ಇದು ಹೊಸ ವಿಷಯವಲ್ಲ. ಇದು ಹಳೆಯ ವಿಷಯ. ನಾವು ಅದನ್ನು ಸರಿಯಾಗಿ ವಿತರಿಸಬೇಕಾಗಿದೆ, ನಮ್ಮ ಹಿಂದಿನ ಅಚಾರ್ಯರಿಂದ ನಾವು ಕೇಳಿರುವಂತೆ. ಆದ್ದರಿಂದ ಭಗವದ್ಗೀತೆಯಲ್ಲಿ ಇದನ್ನು ಶಿಫಾರಸು ಮಾಡಲಾಗಿದೆ: ಆಚಾರ್ಯ ಉಪಾಸನಂ: "ನಾವು ಆಚಾರ್ಯರ ಬಳಿಸಾರಬೇಕು." ಆಚಾರ್ಯವಾನ್ ಪುರುಷೋ ವೇದ. ಕೇವಲ ಊಹಾಪೋಹಗಳಿಂದ, ನಾಮಮಾತ್ರದ ಪಾಂಡಿತ್ಯದಿಂದ, ಅದು ಸಾಧ್ಯವಿಲ್ಲ. ಅದು ಸಾಧ್ಯವಿಲ್ಲ. ನಾವು ಆಚಾರ್ಯರ ಬಳಿಸಾರಬೇಕು. ಆದ್ದರಿಂದ ಆಚಾರ್ಯರು ಪರಂಪರಾ ಪದ್ಧತಿಯಿಂದ ಬರುತ್ತಾರೆ, ಗುರು-ಶಿಷ್ಯ ಪರಂಪರೆ. ಆದ್ದರಿಂದ ಕೃಷ್ಣ ಶಿಫಾರಸು ಮಾಡುತ್ತಾನೆ, ತದ್ ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ (ಭ.ಗೀ 4.34): "ನಾವು ಆಚಾರ್ಯರ ಬಳಿಸಾರಿ ಪ್ರಣಿಪಾತ, ಶರಣಾಗತಿಯಾಗಿ, ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು." ಈ ಇಡೀ ವಿಷಯವು ಶರಣಾಗತಿಯನ್ನು ಅವಲಂಬಿಸಿರುತ್ತದೆ. ಯೇ ಯಥಾ ಮಾಂ ಪ್ರಪದ್ಯಂತೇ (ಭ.ಗೀ 4.11). ಶರಣಾಗತಿ ಪ್ರಕ್ರಿಯೆ, ಶರಣಾಗತಿಯ ಅನುಪಾತವು ಕೃಷ್ಣನನ್ನು ಅರ್ಥಮಾಡಿಕೊಳ್ಳುವ ಸಾಧನವಾಗಿದೆ. ನಾವು ಸಂಪೂರ್ಣವಾಗಿ ಶರಣಾಗಿದ್ದರೆ, ನಾವು ಸಂಪೂರ್ಣವಾಗಿ ಕೃಷ್ಣನನ್ನು ಅರ್ಥಮಾಡಿಕೊಳ್ಳಬಹುದು. ನಾವು ಭಾಗಶಃ ಶರಣಾಗಿದ್ದರೆ, ನಾವು ಕೃಷ್ಣನನ್ನು ಭಾಗಶಃ ಅರ್ಥಮಾಡಿಕೊಳ್ಳುತ್ತೇವೆ. ಆದ್ದರಿಂದ ಯೇ ಯಥಾ ಮಾಂ ಪ್ರಪದ್ಯಂತೇ (ಭ.ಗೀ 4.11). ಇದು ಶರಣಾಗತಿಯ ಅನುಪಾತ. ಸಂಪೂರ್ಣವಾಗಿ ಶರಣಾದವನು ಈ ತತ್ತ್ವವನ್ನು ಅರ್ಥಮಾಡಿಕೊಳ್ಳಬಲ್ಲನು, ಕೃಷ್ಣನ ಕೃಪೆಯಿಂದ ಬೋಧಿಸಬಹುದು.