KN/Prabhupada 0106 - ಭಕ್ತಿಯ ಲಿಫ್ಟ್ ಬಳಸಿ ನೇರವಾಗಿ ಕೃಷ್ಣನನ್ನು ತಲುಪಿ
Lecture on BG 18.67 -- Ahmedabad, December 10, 1972
ಆದ್ದರಿಂದ ಮಮ ವರ್ತ್ಮಾನುವರ್ತಂತೇ ಎಂದರೆ ಮೇಲೆ ಇರುವಂತೆಯೇ… ಅಮೇರಿಕದಲ್ಲಿ ಅನೇಕ ಗಗನಚುಂಬಿ ಕಟ್ಟಡಗಳಿರುವಂತೆಯೇ. ನೂರೈದು ಮಹಡಿಗಳು. ಅದು ಇತ್ತೀಚಿನದು ಅಂದುಕೊಂಡಿದ್ದೇನೆ. ನೀವು ಅತಿ ಎತ್ತರದ ಮಹಡಿಗೆ ಹೋಗಬೇಕು ಎಂದು ಭಾವಿಸೋಣ. ಮೆಟ್ಟಿಲು ಇದೆ. ಎಲ್ಲರೂ ಅಲ್ಲಿಗೆ ಹೋಗಲು ಪ್ರಯತ್ನಿಸುತ್ತಿದ್ದಾರೆ. ಯಾರೋ ಒಬ್ಬರು ಹತ್ತು ಹೆಜ್ಜೆಗಳನ್ನು ಹಾದುಹೋಗಿದ್ದಾರೆ. ಇನ್ನೊಬ್ಬರು ಐವತ್ತು ಹೆಜ್ಜೆಗಳನ್ನು ಹಾದುಹೋದರು. ಮತ್ತೊಬ್ಬರು ನೂರು ಹೆಜ್ಜೆಗಳು. ಆದರೆ ನೀವು ಎರಡು ಸಾವಿರ ಹೆಜ್ಜೆಗಳನ್ನು ಹತ್ತಬೇಕು ಎಂದುಕೊಳ್ಳಿ. ಆದ್ದರಿಂದ ಮೆಟ್ಟಿಲು ಒಂದೇ. ಮಮ ವರ್ತ್ಮಾನುವರ್ತಂತೇ. ಅತಿ ಎತ್ತರದ ಮಹಡಿಗೆ ಹೋಗುವುದೇ ಗುರಿ. ಆದರೆ ಹತ್ತು ಹೆಜ್ಜೆಗಳನ್ನು ದಾಟಿದವನು, ಐವತ್ತು ಹೆಜ್ಜೆಗಳನ್ನು ದಾಟಿದವನಿಗಿಂತ ಕಡಿಮೆ. ಮತ್ತು ಐವತ್ತು ಹೆಜ್ಜೆಗಳನ್ನು ದಾಟಿದವನು, ಅವನು ನೂರು ಹೆಜ್ಜೆಗಳನ್ನು ದಾಟಿದವನಿಗಿಂತ ಕಡಿಮೆ. ಅದೇ ರೀತಿ, ವಿಭಿನ್ನ ಪ್ರಕ್ರಿಯೆಗಳಿವೆ. ಆದರೆ ಎಲ್ಲಾ ಪ್ರಕ್ರಿಯೆಗಳು ಒಂದೇ ಆಗಿರುವುದಿಲ್ಲ. ಅವರು ಒಂದೇ ಗುರಿಯನ್ನು ಹೊಂದಿದ್ದಾರೆ, ಕರ್ಮ, ಜ್ಞಾನ, ಯೋಗ, ಭಕ್ತಿ, ಆದರೆ ಭಕ್ತಿ ಅತ್ಯುನ್ನತ ಹೆಜ್ಜೆ. ಏಕೆಂದರೆ ನೀವು ಭಕ್ತಿಯ ವೇದಿಕೆ ತಲುಪಿದಾಗ, ನೀವು ಕೃಷ್ಣ ಎಂದರೇನು ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಕರ್ಮ, ಜ್ಞಾನ, ಯೋಗದಿಂದ ಅಲ್ಲ. ಅದು ಸಾಧ್ಯವಿಲ್ಲ. ನೀವು ಪ್ರಯತ್ನಿಸುತ್ತಿದ್ದೀರಿ, ನೀವು ಆ ಗುರಿಯತ್ತ ಸಾಗುತ್ತಿದ್ದೀರಿ, ಆದರೆ ಕೃಷ್ಣ ಹೇಳುತ್ತಾನೆ, ಭಕ್ತ್ಯಾ ಮಾಮ್ ಅಭಿಜಾನಾತಿ (ಭ.ಗೀ 18.55). "ಜ್ಞಾನದಿಂದ, ಕರ್ಮದಿಂದ, ಯೋಗದಿಂದ", ಎಂದು ಅವನು ಹೇಳುವುದಿಲ್ಲ. ಇಲ್ಲ. ನಿಮಗೆ ಅರ್ಥವಾಗುವುದಿಲ್ಲ. ನೀವು ಮುಂದೆ ಹೋಗಬಹುದು, ಆಗ ಮೆಟ್ಟಿಲು. ಆದರೆ ನೀವು ಕೃಷ್ಣನನ್ನು ತಿಳಿದುಕೊಳ್ಳಲು ಬಯಸಿದರೆ, ಆಗ ಭಕ್ತಿಯು. ಭಕ್ತ್ಯಾ ಮಾಮ್ ಅಭಿಜಾನತಿ ಯಾವಾನ್ ಯಶ್ ಚಾಸ್ಮಿ ತತ್ವತಃ (ಭ.ಗೀ 18.55). ಇದು ಪ್ರಕ್ರಿಯೆ. ಆದ್ದರಿಂದ ಮಮ ವರ್ತ್ಮಾನುವರ್ತಂತೇ ಎಂದರೆ, "ಪ್ರತಿಯೊಬ್ಬರೂ ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ನನ್ನ ಬಳಿಗೆ ಬರಲು ಪ್ರಯತ್ನಿಸುತ್ತಿದ್ದಾರೆ, ಆದರೆ ನಿಜವಾಗಿಯೂ ನನ್ನನ್ನು ಅರ್ಥಮಾಡಿಕೊಳ್ಳಲು ಬಯಸುವವರು, ಸರಳ ಪ್ರಕ್ರಿಯೆ..." ಮೆಟ್ಟಿಲು ಇರುವಂತೆಯೇ, ಆದರೆ ಈ ದೇಶದಲ್ಲಿ ಅಲ್ಲ, ಯುರೋಪ್ ಮತ್ತು ಅಮೇರಿಕನ್ ದೇಶಗಳಲ್ಲಿ, ಅಕ್ಕಪಕ್ಕದಲ್ಲಿ, ಲಿಫ್ಟ್, ಎಲಿವೇಟರ್ ಇದೆ. ಆದ್ದರಿಂದ ಹಂತ ಹಂತವಾಗಿ ಅತಿ ಎತ್ತರದ ಮಹಡಿಗೆ ಹೋಗುವ ಬದಲು, ನೀವು ಈ ಲಿಫ್ಟ್ ಸಹಾಯವನ್ನು ತೆಗೆದುಕೊಳ್ಳಬಹುದು. ನೀವು ತಕ್ಷಣ ಸೇರುವಿರಿ, ಒಂದು ಕ್ಷಣದೊಳಗೆ. ಆದ್ದರಿಂದ ನೀವು ಭಕ್ತಿಯ ಲಿಫ್ಟ್ ಬಳಸಿದರೆ, ತಕ್ಷಣ ನೀವು ಕೃಷ್ಣನೊಂದಿಗೆ ನೇರವಾಗಿ ಸಂಪರ್ಕಕ್ಕೆ ಬರುವಿರಿ. ಹಂತ ಹಂತವಾಗಿ ಹೋಗುವ ಬದಲು... ಯಾಕೆ ನೀವು ಹಾಗೆ ಹೋಗಬೇಕು? ಆದ್ದರಿಂದ ಕೃಷ್ಣ ಹೇಳುತ್ತಾನೆ: ಸರ್ವ-ಧರ್ಮಾನ್ ಪರಿತ್ಯಜ್ಯ, ಮಾಮ್ ಏಕಂ ಶರಣಂ ವ್ರಜ (ಭ.ಗೀ 18.66). "ನೀನು ನನಗೆ ಕೇವಲ ಶರಣಾಗು. ನಿನ್ನ ವ್ಯವಹಾರವು ಮುಗಿಯಿತು.” ನೀವು ಯಾಕೆ ಹೆಚ್ಚು ಶ್ರಮಿಸಬೇಕು, ಹಂತ ಹಂತವಾಗಿ ಹಂತ ಹಂತವಾಗಿ...?