KN/Prabhupada 0116 - ನಿಮ್ಮ ಅಮೂಲ್ಯವಾದ ಜೀವನವನ್ನು ವ್ಯರ್ಥ ಮಾಡಿಕೊಳ್ಳಬೇಡಿ

Revision as of 17:52, 1 October 2020 by Elad (talk | contribs) (Text replacement - "(<!-- (BEGIN|END) NAVIGATION (.*?) -->\s*){2,15}" to "<!-- $2 NAVIGATION $3 -->")
(diff) ← Older revision | Latest revision (diff) | Newer revision → (diff)


Lecture with Allen Ginsberg at Ohio State University -- Columbus, May 12, 1969

ಆತ್ಮವಿದೆ, ಮತ್ತು ಈ ದೇಹವು ಆ ಆತ್ಮದ ಆಧಾರದ ಮೆಲೆ ಅಭಿವೃದ್ಧಿಗೊಂಡಿದೆ, ಮತ್ತು ಆ ಆತ್ಮವು ಒಂದು ದೇಹದಿಂದ ಇನ್ನೊಂದಕ್ಕೆ ಸಾಗುತ್ತಿದೆ. ಅದನ್ನು ವಿಕಸನ ಎಂದು ಕರೆಯಲಾಗುತ್ತದೆ. ಮತ್ತು ಆ ವಿಕಸನ ಪ್ರಕ್ರಿಯೆಯು ನಡೆಯುತ್ತಿದೆ, 84,00,000 ದಷ್ಟು ಜಾತಿಯ ಜೀವಿಗಳು, ಜಲಚರಗಳು, ಪಕ್ಷಿಗಳು, ಮೃಗಗಳು, ಸಸ್ಯಗಳು, ಮತ್ತು ಅನೇಕ ಜಾತಿಯ ಜೀವಗಳು. ಮತ್ತು ನಾವು ಈಗ ಈ ವಿಕಸಿತ ಪ್ರಜ್ಞೆ, ಮಾನವ ರೂಪವನ್ನು ಪಡೆದುಕೊಂಡಿದ್ದೇವೆ. ನಾವು ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಅದೇ ನಮ್ಮ ಕೃಷ್ಣ ಪ್ರಜ್ಞೆ ಚಳುವಳಿ. ನಾವು ಜನರಿಗೆ ಕೇವಲ ಶಿಕ್ಷಣ ನೀಡುತ್ತೇವೆ, "ನಿಮ್ಮ ಅಮೂಲ್ಯವಾದ ಜೀವನವನ್ನು, ಮಾನವನ ಜೀವನವನ್ನು, ವ್ಯರ್ಥ ಮಾಡಬೇಡಿ. ಈ ಅವಕಾಶವನ್ನು ನೀವು ಕಳೆದುಕೊಂಡರೆ, ನೀವು ಆತ್ಮಹತ್ಯೆ ಮಾಡಿಕೊಂಡಂತೆ.” ಅದೇ ನಮ್ಮ ಪ್ರಚಾರ. ಆತ್ಮಹತ್ಯೆ ಮಾಡಿಕೊಳ್ಳಬೇಡಿ. ಈ ಕೃಷ್ಣ ಪ್ರಜ್ಞೆಯನ್ನು ಸ್ವೀಕರಿಸಿ.

ಈ ಪ್ರಕ್ರಿಯೆಯು ತುಂಬಾ ಸರಳವಾಗಿದೆ. ನೀವು ಯೋಗ ಪದ್ಧತಿ, ಅಥವಾ ತಾತ್ವಿಕ, ಊಹಾತ್ಮಕ ವ್ಯವಸ್ಥೆಯಂತಹ ಕಠಿಣ ಪ್ರಕ್ರಿಯೆಗಳನ್ನು ಸ್ವೀಕರಿಸಬೇಕಾಗಿಲ್ಲ. ಈ ಯುಗದಲ್ಲಿ ಅದು ಸಾಧ್ಯವಿಲ್ಲ. ಅಂದರೆ... ನಾನು ನನ್ನ ಸ್ವಂತ ಅನುಭವದಿಂದ ಮಾತನಾಡುವುದಿಲ್ಲ, ಆದರೆ ನಾನು ಮಹಾನ್ ಆಚಾರ್ಯರು ಮತ್ತು ಮಹಾನ್ ಪ್ರಬಲ ಋಷಿ ಮುನಿಗಳ ಅನುಭವವನ್ನು ತೆಗೆದುಕೊಳ್ಳುತ್ತಿದ್ದೇನೆ. ಅವರು ಹೇಳುವಂತೆ ಕಲೌ ನಾಸ್ತಿ ಏವ ನಾಸ್ತಿ ಏವ ನಾಸ್ತಿ ಏವ ಗತಿರ್ ಅನ್ಯಥಾ (ಚೈ.ಚ ಆದಿ 17.21). ನೀವು ನಿಮ್ಮನ್ನು ಅರಿತುಕೊಳ್ಳಲು ಬಯಸಿದರೆ, ನಿಮ್ಮ ಮುಂದಿನ ಜನ್ಮ ಯಾವುದು ಎಂದು ತಿಳಿಯಲು ಬಯಸಿದರೆ, ದೇವರು ಯಾರು ಎಂದು ತಿಳಿಯಲು ನೀವು ಬಯಸಿದರೆ, ದೇವರೊಂದಿಗಿನ ನಿಮ್ಮ ಸಂಬಂಧ ಏನು ಎಂದು ತಿಳಿಯಲು ನೀವು ಬಯಸಿದರೆ, ಈ ಎಲ್ಲ ವಿಷಯಗಳು ನಿಮಗೆ ಕಾಣಿಸಿಕೊಳ್ಳುತ್ತವೆ - ಇದು ನೈಜ ಜ್ಞಾನ - ಈ ಮಂತ್ರವನ್ನು ಕೇವಲ ಜಪಿಸುವುದರ ಮೂಲಕ, ಹರೇ ಕೃಷ್ಣ, ಹರೇ ಕೃಷ್ಣ, ಕೃಷ್ಣ ಕೃಷ್ಣ, ಹರೇ ಹರೇ / ಹರೇ ರಾಮ, ಹರೇ ರಾಮ, ರಾಮ ರಾಮ, ಹರೇ ಹರೇ. ಇದು ಪ್ರಾಯೋಗಿಕವಾಗಿದೆ. ನಾವು ಯಾವುದೇ ಶುಲ್ಕ ವಿಧಿಸುತ್ತಿಲ್ಲ. "ನಾನು ನಿಮಗೆ ಯಾವುದೋ ರಹಸ್ಯ ಮಂತ್ರವನ್ನು ನೀಡುತ್ತೇನೆ, ಮತ್ತು ನಿಮಗೆ ಐವತ್ತು ಡಾಲರ್ ಶುಲ್ಕ ವಿಧಿಸುತ್ತೇನೆ", ಎಂದು ನಾವು ನಿಮ್ಮನ್ನು ಮೋಸ ಮಾಡುತ್ತಿಲ್ಲ. ಇದು ಎಲ್ಲರಿಗೂ ಮುಕ್ತವಾಗಿದೆ. ದಯವಿಟ್ಟು ಅದನ್ನು ಸ್ವೀಕರಿಸಿ. ಅದು ನಮ್ಮ ಕೋರಿಕೆ. ನಾವು ನಿಮ್ಮನ್ನು ಬೇಡಿಕೊಳ್ಳುತ್ತಿದ್ದೇವೆ, “ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ. ದಯವಿಟ್ಟು ಈ ಮಂತ್ರವನ್ನು ಸ್ವೀಕರಿಸಿ. ನಿಮಗೆ ಇಷ್ಟವಾದ ಕಡೆ ಜಪಿಸಿ". ನೀವು ಅನುಸರಿಸಬೇಕಾದ ಕಟ್ಟುನಿಟ್ಟಾದ ನಿಯಮಗಳಿಲ್ಲ. ನೀವು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ, ಜೀವನದ ಯಾವುದೇ ಸ್ಥಿತಿಯಲ್ಲಿ... ನಾವು ಅರ್ಧ ಘಂಟೆಯ ಮೊದಲು ಜಪಿಸಿದಂತೆ. ಯಾವುದೇ ಸ್ಥಿತಿ ಇರಿಲಿ, ನೀವು ಭಾವಪರವಶತೆಯನ್ನು ಅನುಭವಿಸುವಿರಿ. ಅಂತೆಯೇ, ನೀವು ಇದನ್ನು ಮುಂದುವರಿಸಬಹುದು. ಈ ಹರೇ ಕೃಷ್ಣ ಮಂತ್ರವನ್ನು ಪಠಿಸಿ. ಇದನ್ನು ನಿಮಗೆ ಉಚಿತವಾಗಿ ನೀಡಲಾಗಿದೆ. ಆದರೆ ಈ ಹರೇ ಕೃಷ್ಣ ಮಂತ್ರವನ್ನು ತತ್ವಶಾಸ್ತ್ರದ ಮೂಲಕ, ಜ್ಞಾನದ ಮೂಲಕ, ತರ್ಕದ ಮೂಲಕ ತಿಳಿದುಕೊಳ್ಳಲು ಬಯಸಿದರೆ, ನಮಲ್ಲಿ ಪುಸ್ತಕಗಳ ಬಂಡಾರವಿದೆ. ನಾವು ಕೇವಲ ಭಾವನಾತ್ಮಕವಾಗಿ ನೃತ್ಯ ಮಾಡುತ್ತಿದ್ದೇವೆ ಎಂದು ಭಾವಿಸಬೇಡಿ. ಇಲ್ಲ, ಇದಕ್ಕೆ ಹಿನ್ನೆಲೆ ಇದೆ. ಆದ್ದರಿಂದ ಈ ಕೃಷ್ಣ ಪ್ರಜ್ಞೆ ಆಂದೋಲನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಈ ಒಳ್ಳೆಯ ಸಂದೇಶವನ್ನು ನಿಮಗೆ ತಲುಪಿಸಲು ನಾನು ವಿಶೇಷವಾಗಿ ನಿಮ್ಮ ದೇಶಕ್ಕೆ ಬಂದಿದ್ದೇನೆ, ಏಕೆಂದರೆ ನೀವು ಇದನ್ನು ಒಪ್ಪಿಕೊಂಡರೆ, ಕೃಷ್ಣ ಪ್ರಜ್ಞೆಯ ಈ ವಿಜ್ಞಾನವನ್ನು ನೀವು ಅರ್ಥಮಾಡಿಕೊಳ್ಳಲು ಸಾಧ್ಯವಾದರೆ, ಪ್ರಪಂಚದ ಇತರ ಭಾಗಗಳು ಸಹ ಅನುಸರಿಸುತ್ತವೆ, ಮತ್ತು ಪ್ರಪಂಚದ ಮುಖವು ಬದಲಾಗುತ್ತದೆ. ಅದು ಸತ್ಯ.