KN/Prabhupada 0073 - ವೈಕುಂಠವೆಂದರೆ ನಿರಾತಂಕ
Lecture on BG 10.2-3 -- New York, January 1, 1967
ಈ ಸಂಘದಲ್ಲೇ ಇದನ್ನು ನೀವು ಮಾಡಬೇಕೆಂದೆನಿಲ್ಲ. ನೀವು ಈ ಕಲೆಯನ್ನು ಕಲಿತು ನಿಮ್ಮ ಮನೆಯಲ್ಲೂ ಮಾಡಬಹುದು. ನೀವೂ ಇಂತ ಆಹಾರವನ್ನು, ರುಚಿಯಾದ ಆಹಾರವನ್ನು, ಮನೆಯಲ್ಲಿ ಮಾಡಿ ಕೃಷ್ಣನಿಗೆ ಅರ್ಪಿಸಬಹುದು. ಅದು ಕಠಿಣವಲ್ಲ. ನಾವು ಪ್ರತಿ ದಿನ ಅಡುಗೆ ಮಾಡಿ, ಕೃಷ್ಣನಿಗೆ ಅರ್ಪಿಸಿ, ಜಪ ಮಾಡುತ್ತೇವೆ -
- ನಮೋ ಬ್ರಾಹ್ಮಣ್ಯ-ದೇವಾಯ
- ಗೋ-ಬ್ರಾಹ್ಮಣ-ಹಿತಾಯ ಚ
- ಜಗದ್-ಹಿತಾಯ ಕೃಷ್ಣಾಯ
- ಗೋವಿಂದಾಯ ನಮೋ ನಮಃ.
ಅಷ್ಟೇ. ಇದೇನು ಕಠಿಣವಲ್ಲ. ಪ್ರತಿಯೊಬ್ಬರೂ ಅಡುಗೆ ಮಾಡಿ, ಕೃಷ್ಣನಿಗೆ ಅರ್ಪಿಸಿ, ಆಮೇಲೆ ತಿನ್ನಬಹುದು, ನಂತರ ಪರಿವಾರದವರೊಂದಿಗೆ ಅಥವ ಸ್ನೇಹಿತರೊಂದಿಗೆ ಕೃಷ್ಣನ ಚಿತ್ರದ ಮುಂದೆ ಕುಳಿತು ಜಪಿಸುತ
- ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ
ಪರಿಶುದ್ಧವಾದ ಜೀವನ ನಡೆಸಬಹುದು. ಫಲಿತಾಂಶವನ್ನು ನೋಡಿ. ಪ್ರತಿ ಮನೆಯು, ಪ್ರತಿ ವ್ಯಕ್ತಿಯು, ಕೃಷ್ಣನನ್ನು ಅರ್ಥೈಸಿಕೊಳ್ಳುವ ಈ ತತ್ವವನ್ನು ಪಾಲಿಸಿದರೆ, ಅದು… ಈ ವಿಶ್ವವೇ ವೈಕುಂಠವಾಗುತ್ತದೆ. ವೈಕುಂಠವೆಂದರೆ ನಿರಾತಂಕವಾದ್ದದು ಎಂದು. ವೈಕುಂಠ. ವೈ ಎಂದರೆ ಇಲ್ಲದ, ಮತ್ತು ಕುಂಠ ಎಂದರೆ ಆತಂಕ. ಈ ವಿಶ್ವವೇ ಆತಂಕದಿಂದ ತುಂಬಿದೆ. ಸದಾ ಸಮುದ್ವಿಗ್ನ-ದಿಯಾಂ ಅಸದ್-ಗೃಹಾತ್ (ಶ್ರೀ.ಭಾ 7.5.5). ನಾವು ಕೇವಲ ಈ ಭೌತಿಕ ಜೀವನದ ತಾತ್ಕಾಲಿಕ ಅಸ್ತಿತ್ವವನ್ನು ಸ್ವೀಕರಿಸಿರುವ ಕಾರಣದಿಂದ ಆತಂಕಕ್ಕೆ ಸದಾ ಒಳಗಾಗಿರುತ್ತೇವೆ. ಆಧ್ಯಾತ್ಮಿಕ ಲೋಕದಲ್ಲಿ ಇದಕ್ಕೆ ವಿರುದ್ಧವಾದದ್ದನ್ನು ಕಾಣಬಹುದು. ಅಲ್ಲಿನ ಗ್ರಹಗಳನ್ನು ವೈಕುಂಠವೆಂದು ಕರೆಯುತ್ತಾರೆ. ವೈಕುಂಠವೆಂದರೆ ನಿರಾತಂಕವೆಂದು ಅರ್ಥ.
ನಮಗೆ ನಿರಾತಂಕವಾಗಿರಬೇಕೆಂಬ ಬಯಕೆ. ಎಲ್ಲರು ನಿರಾತಂಕವಾಗಿರಬೇಕೆಂದು ಪ್ರಯತ್ನಿಸುತ್ತಿದ್ದಾರೆ, ಅದರೆ ಹೇಗೆ ನಿರಾತಂಕವಾಗಿರುವುದು ಎಂದು ತಿಳಿಯದು. ನಿರಾತಂಕವಾಗಲು ಮದ್ಯದ ಆಶ್ರಯ ಪಡೆಯುವುದು ವ್ಯರ್ಥ. ಅದೊಂದು ಮಾದಕ ವಸ್ತು. ಅದು ವಿಸ್ಮೃತಿ. ಅಲ್ಪಕಾಲಕ್ಕೆ ನಾವು ಎಲ್ಲವನ್ನು ಮರೆಯುತ್ತೇವೆ ಆದರೆ ಮತ್ತೆ ಪ್ರಜ್ಞೆ ಬರುತ್ತಲೆ ಅದೇ ಆತಂಕಗಳು ಹಾಗು ಅದೇ ವಿಷಯಗಳಿರುತ್ತವೆ. ಆದ್ದರಿಂದ ಅದು ನಿಮಗೇನು ಪ್ರಯೋಜನವಾಗುವುದಿಲ್ಲ.
ನೀವು ನಿರಾತಂಕವಾಗಿ, ನಿಜವಾಗಿಯೂ ಆನಂದ ಮತ್ತು ಜ್ಞಾನದಿಂದಿರುವ ಚಿರಜೀವನ ಬಾಳಬೇಕೆಂದರೆ, ಇದುವೇ ಪ್ರಕ್ರಿಯೆ. ಇದುವೇ ಪ್ರಕ್ರಿಯೆ. ನೀವು ಕೃಷ್ಣನನ್ನು ಅರ್ಥೈಸಿಕೊಳಬೇಕು. ಇಲ್ಲಿ ಸ್ಪಷ್ಠವಾಗಿ ಹೇಳಲಾಗಿದೆ – ನ ಮೇ ವಿದುಃ ಸುರ-ಗಣಾಃ (ಭ.ಗೀ 10.2). ಯಾರಿಗು ಅರ್ಥವಾಗುವುದಿಲ್ಲ. ಆದರೆ ಒಂದು ದಾರಿಯಿದಿ. ಸೇವೊನ್ಮುಖೇ ಹಿ ಜಿಗ್ವಾದೌ ಸ್ವಯಮೇವ ಸ್ಪುರತಿ ಅದಃ (ಬ್ರ. ಸಂ 1.2.234) ಇದೊಂದು ಪ್ರಕ್ರಿಯೆ. ಶ್ರೀಮದ್ ಭಾಗವತದಲ್ಲಿ ಹಲವಾರು ಕಡೆ ವಿಭಿನ್ನ ರೀತಿಯಲ್ಲಿ ಈ ಪ್ರಕ್ರಿಯೆಯನ್ನು ವಿವರಿಸಲಾಗಿದೆ. ಒಂದು ಕಡೆ ಹೀಗೆ ಹೇಳಲಾಗಿದೆ:
- ಜ್ಞಾನೇ ಪ್ರಯಾಸಮ್ ಉದಪಾಸ್ಯ ನಮಂತೇವ
- ಜೀವಂತಿ ಸನ್-ಮುಖರಿತಾಮ್ ಭಾವದೀಯ-ವಾರ್ತಾಮ್
- ಸ್ಥಾನೆ ಸ್ಥಿತಾಃ ಶೃತಿ-ಗತಾಮ್ ತನು-ವಾನ್-ಮನೋಭಿರ್
- ಯೇ ಪ್ರಾಯಶೋಜಿತ ಜಿತೋಪ್ಯಸಿ ತೈಸ್ ತ್ರಿಲೋಕ್ಯಾಮ್
- (ಶ್ರೀ.ಭಾ 10.14.3)
ಇದು ಬಹಳ ಸುಂದರವಾದ ಶ್ಲೋಕ. ಅಜೀತನೆಂದರೆ ಯಾರಿಗೂ ತಿಳಿಯದವ. ದೇವರ ಮತ್ತೊಂದು ಹೆಸರು ಅಜೀತ. ಅಜೀತನೆಂದರೆ ಯಾರೂ ಅವನನ್ನು ನಿಗ್ರಹಿಸಲಾರರು ಎಂದು. ಯಾರೂ ಅವನನ್ನು ಸಮೀಪಿಸಲಾರರು. ಆದ್ದರಿಂದ ಅವನ ಹೆಸರು ಅಜೀತ. ಆದರೆ ಅಜೀತ ಸೋಲುತ್ತಾನೆ. ಅಜೀತ ಜಿತೋಪ್ಯಸಿ. ಭಗವಂತ ಆಜ್ಞೇಯ , ಅಜೇಯ, ಆದರು ಅವನು ಸೋಲುತ್ತಾನೆ. ಹೇಗೆ? ಸ್ಥಾನೆ ಸ್ಥಿತಃ.