KN/Prabhupada 0131 - ತಂದೆಗೆ ಶರಣಾಗುವುದು ಬಹಳ ಸಹಜ

Revision as of 07:09, 10 May 2021 by Vanibot (talk | contribs) (Vanibot #0005: NavigationArranger - update old navigation bars (prev/next) to reflect new neighboring items)
(diff) ← Older revision | Latest revision (diff) | Newer revision → (diff)


Lecture on BG 7.11-16 -- New York, October 7, 1966

ಈ ಹುಚ್ಚು, ಈ ಭ್ರಮೆ, ಈ ಭೌತಿಕ ಪ್ರಪಂಚದ ಈ ಭ್ರಾಂತಿಯನ್ನು ಜಯಿಸುವುದು ತುಂಬಾ ಕಷ್ಟ. ಅದು ತುಂಬಾ ಕಷ್ಟ. ಆದರೆ ಭಗವಾನ್ ಕೃಷ್ಣನು ಹೇಳುತ್ತಾನೆ, ಮಾಮ್ ಏವ ಯೇ ಪ್ರಪದ್ಯಂತೆ ಮಾಯಾಮ್ ಏತಾಂ ತರಂತಿ ತೇ (ಭ.ಗೀ 7.14). ಯಾರಾದರೂ ಸ್ವಯಂಪ್ರೇರಣೆಯಿಂದ, ಅಥವಾ ಅವನ ಶೋಚನೀಯ ಜೀವನವನ್ನು ಅರ್ಥಮಾಡಿಕೊಂಡು ಕೃಷ್ಣನಿಗೆ ಶರಣಾದರೆ, "ನನ್ನ ಪ್ರಿಯ ಕೃಷ್ಣ, ನಾನು ನಿನ್ನನ್ನು ಅನೇಕ ಜನ್ಮಗಳಿಂದ ಮರೆತಿದ್ದೇನೆ. ಈಗ ನೀನು ನನ್ನ ತಂದೆ, ನೀನು ನನ್ನ ರಕ್ಷಕ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ನಾನು ನಿನಗೆ ಶರಣಾಗುತ್ತೇನೆ.” ಕಳೆದುಹೋದ ಮಗು ತಂದೆಯ ಬಳಿಗೆ ಹೋಗುವಂತೆಯೇ, "ನನ್ನ ಪ್ರೀತಿಯ ತಂದೆ, ನಾನು ನಿಮ್ಮ ಸಂರಕ್ಷಣೆಯಿಂದ ದೂರ ಹೋದದ್ದು ನನ್ನ ತಪ್ಪು, ತುಂಬಾ ನರಳಿದೆ. ಈಗ ನಾನು ನಿನ್ನ ಬಳಿಗೆ ಬಂದಿದ್ದೇನೆ.” ತಂದೆ ಅಪ್ಪಿಕೊಳ್ಳುತ್ತಾನೆ, ಮತ್ತು ಹೇಳುತ್ತಾನೆ, "ನನ್ನ ಪ್ರಿಯ ಮಗನೆ, ಬಳಿಗೆ ಬಾ. ಇಷ್ಟು ದಿನವೂ ನನಗೆ ನಿನ್ನದೆ ಚಿಂತೆ. ಓ, ನಿನ್ನ ಪುನಾರಾಗಮನ ಸಂತೋಷ ತಂದಿದೆ.” ತಂದೆ ತುಂಬಾ ಕರುಣಮಾಯಿ. ಆದ್ದರಿಂದ, ನಾವು ಅದೇ ಸ್ಥಿತಿಯಲ್ಲಿದ್ದೇವೆ. ನಾವು ಪರಮಪ್ರಭುವಿಗೆ ಶರಣಾಗುತ್ತಲೆ… ಅದು ತುಂಬಾ ಕಷ್ಟವಲ್ಲ. ಮಗ ತಂದೆಗೆ ಶರಣಾಗುವುದು ತುಂಬಾ ಕಷ್ಟಕರವಾದ ಕೆಲಸವೇ? ತುಂಬಾ ಕಷ್ಟಕರವಾದ ಕೆಲಸ ಎನ್ನುತ್ತೀರಾ? ಒಬ್ಬ ಮಗ ತಂದೆಗೆ ಶರಣಾಗುತ್ತಿದ್ದಾನೆ. ಅದು ಸಹಜ. ಅದು ಅವಮಾನವಲ್ಲ. ತಂದೆ ಸದಾ ಶ್ರೇಷ್ಠರು. ಹಾಗಾಗಿ ನಾನು ನನ್ನ ತಂದೆಯ ಪಾದಗಳನ್ನು ಮುಟ್ಟಿದರೆ, ನನ್ನ ತಂದೆಗೆ ನಮಸ್ಕರಿಸಿದರೆ ಅದು ಸೌಭಾಗ್ಯ. ಅದು ನನಗೆ ಗೌರವ. ಅದು ಅವಮಾನವಲ್ಲ. ಅದು ತೊಂದರೆಯಲ್ಲ. ನಾವು ಏಕೆ ಕೃಷ್ಣನಿಗೆ ಶರಣಾಗಬಾರದು?

ಆದ್ದರಿಂದ, ಇದು ಪದ್ಧತಿ. ಮಾಮ್ ಏವ ಯೇ ಪ್ರಪದ್ಯಂತೇ. “ಈ ಎಲ್ಲಾ ಭ್ರಮಿತ ಜೀವರಾಶಿಗಳು, ನನಗೆ ಶರಣಾಗತರಾದಾಗ, ಮಾಯಾಮ್ ಏತಾಮ್ ತರಂತಿ ತೇ (ಭ.ಗೀ 7.14), “ಅವನಿಗೆ ಜೀವನದ ಯಾವುದೇ ದುಃಖಗಳಿಲ್ಲ.” ಅವನು ತಕ್ಷಣ ತಂದೆಯ ಸಂರಕ್ಷಣೆಯಲ್ಲಿರುತ್ತಾನೆ. ಭಗವದ್ಗೀತೆಯ ಕೊನೆಯಲ್ಲಿ ನೀವು ಕಾಣಬಹುದು - ಅಹಂ ತ್ವಾಂ ಸರ್ವ ಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ (ಭ.ಗೀ 18.66). ಮಗು ತಾಯಿಯ ಬಳಿ ಬಂದಾಗ, ತಾಯಿ ರಕ್ಷಿಸುತ್ತಾಳೆ. ಯಾವುದೇ ಅಪಾಯವಿದ್ದರೂ, ತಾಯಿ ಮೊದಲು ತನ್ನ ಪ್ರಾಣ ಕೊಡಲು ಸಿದ್ಧವಾಗಿರುತ್ತಾಳೆ, ಮೊದಲು ತಾನು, ನಂತರವೇ ಮಗುವಿನ ಪ್ರಾಣ. ಅಂತೆಯೇ, ನಾವು ದೇವರ ರಕ್ಷಣೆಯಲ್ಲಿದ್ದಾಗ ಭಯವಿಲ್ಲ.