KN/Prabhupada 0143 - ಕೋಟ್ಯಾಂತರ ಬ್ರಹ್ಮಾಂಡಗಳಿವೆ

Revision as of 07:10, 4 October 2021 by Vanibot (talk | contribs) (Vanibot #0005: NavigationArranger - update old navigation bars (prev/next) to reflect new neighboring items)
(diff) ← Older revision | Latest revision (diff) | Newer revision → (diff)


Sri Isopanisad, Mantra 13-15 -- Los Angeles, May 18, 1970

"ಓ ನನ್ನ ದೇವರೇ, ಎಲ್ಲ ಜೀವಗಳ ಪೋಷಕನೇ, ನಿನ್ನ ನಿಜ ಮುಖವು ನಿನ್ನ ಬೆರಗುಗೊಳಿಸುವ ತೇಜಸ್ಸಿನಿಂದ ಆವೃತವಾಗಿದೆ. ದಯವಿಟ್ಟು ಆ ಹೊದಿಕೆಯನ್ನು ತೆಗೆದು ನಿನ್ನ ಶುದ್ಧ ಭಕ್ತನಿಗೆ ನಿನ್ನ ದರ್ಶನ ನೀಡು."

ಇಲ್ಲಿ ವೇದ ಪುರಾವೆಗಳಿವೆ. ಈ ಈಶೋಪನಿಷತ್ತು ಒಂದು ವೇದ, ಯಜುರ್ ವೇದದ ಒಂದು ಭಾಗ. ಹಿರರ್ಣ್ಮಯೇನ ಪಾತ್ರೇಣ ಸತ್ಯಸ್ಯ ಅಪಿಹಿತಂ ಮುಖಮ್ ಎಂದು ಇಲ್ಲಿ ಹೇಳಲಾಗಿದೆ. ಸೂರ್ಯನಂತೆಯೇ. ಸೂರ್ಯ ಗ್ರಹದಲ್ಲಿ ಒಬ್ಬ ಪ್ರಧಾನ ದೇವತೆ ಇದ್ದಾನೆ. ಅವನ ಹೆಸರು ವಿವಸ್ವಾನ್. ನಾವು ಈ ಮಾಹಿತಿಯನ್ನು ಭಗವದ್ಗೀತೆಯಿಂದ ಪಡೆಯಬಹುದು. ವಿವಸ್ವಾನ್ ಮನವೇ ಪ್ರಾಹ (ಭ.ಗೀ 4.1). ಪ್ರತಿ ಗ್ರಹದಲ್ಲಿ ಒಬ್ಬ ಪ್ರಧಾನ ದೇವತೆ ಇರುತ್ತಾನೆ. ನಿಮ್ಮ ಈ ಗ್ರಹದಂತೆಯೇ, ದೇವತೆಯಲ್ಲದಿದ್ದರೂ ಯಾರೋ ಅಧ್ಯಕ್ಷನಿದ್ದಾನೆ. ಹಿಂದೆ, ಈ ಭೂಮಂಡಲದಲ್ಲಿ ಪರೀಕ್ಷಿತ್ ಮಹರಾಜನವರೆಗೆ ಕೇವಲ ಒಬ್ಬ ರಾಜನಿದ್ದನು. ಒಬ್ಬ ರಾಜನಾಗಿದ್ದ. ಈ ಇಡೀ ಗ್ರಹದ ಮೇಲೆ ಒಂದೇ ಒಂದು ಧ್ವಜ ಆಳುತ್ತಿತ್ತು. ಅಂತೆಯೇ, ಪ್ರತಿ ಗ್ರಹದಲ್ಲಿ ಒಬ್ಬ ಪ್ರಧಾನ ದೇವತೆ ಇದ್ದಾನೆ. ಆದ್ದರಿಂದ, ಕೃಷ್ಣನು ಸರ್ವಶ್ರೇಷ್ಠ ದೇವರು ಎಂದು ಹೇಳಲಾಗುತ್ತದೆ, ಇಲ್ಲಿ ಆಧ್ಯಾತ್ಮಿಕ ಆಕಾಶದ ಅತ್ಯುನ್ನತ ಗ್ರಹದಲ್ಲಿ. ಇದು ಐಹಿಕ ಆಕಾಶ. ಐಹಿಕ ಆಕಾಶದ ಬ್ರಹ್ಮಾಂಡಗಳಲ್ಲಿ ಇದೂ ಒಂದು. ದಶಲಕ್ಷಾಂತರ ಮತ್ತು ಕೋಟ್ಯಾಂತರ ಬ್ರಹ್ಮಾಂಡಗಳಿವೆ. ಮತ್ತು ಈ ಬ್ರಹ್ಮಾಂಡದಲ್ಲಿ ಲಕ್ಷಾಂತರ ಮತ್ತು ಕೋಟ್ಯಾಂತರ ಗ್ರಹಗಳಿವೆ. ಯಸ್ಯ ಪ್ರಭಾ ಪ್ರಭವತೋ ಜಗದ್-ಅಂಡ-ಕೋಟಿ (ಬ್ರಹ್ಮ.ಸಂ. 5.40). ಜಗದ್-ಅಂಡ. ಜಗದ್-ಅಂಡ ಎಂದರೆ ಬ್ರಹ್ಮಾಂಡ. ಅಂಡಃ, ಈ ಇಡೀ ಬ್ರಹ್ಮಾಂಡ, ಕೇವಲ ಒಂದು ಮೊಟ್ಟೆಯಂತಿದೆ. ಕೋಟಿ. ಕೋಟಿ ಎಂದರೆ ನೂರಾರು, ಸಾವಿರಾರು. ಆದ್ದರಿಂದ ಬ್ರಹ್ಮಜ್ಯೋತಿಯಲ್ಲಿ ಕೋಟ್ಯಾಂತರ ಬ್ರಹ್ಮಾಂಡಗಳಿವೆ, ಮತ್ತು ಈ ಬ್ರಹ್ಮಾಂಡದೊಳಗೆ ಕೋಟ್ಯಾಂತರ ಗ್ರಹಗಳಿವೆ. ಹಾಗೆಯೇ, ಆಧಯಾತ್ಮಿಕ ಆಕಾಶದಲ್ಲಿ ಕೂಡ, ಕೋಟ್ಯಾಂತರ, ಅಸಂಖ್ಯಾತ ವೈಕುಂಠ ಗ್ರಹಗಳಿವೆ. ಪ್ರತಿ ವೈಕುಂಠ ಗ್ರಹಕ್ಕು ದೇವೋತ್ತಮ ಪರಮಪುರುಷನು ಪ್ರಧಾನವಾಗಿದ್ದಾನೆ. ಕೃಷ್ಣ ಗ್ರಹವನ್ನು ಹೊರತುಪಡಿಸಿ, ಎಲ್ಲಾ ಇತರ ವೈಕಂಠ ಗ್ರಹಗಳಿಗು ನಾರಾಯಣನು ಪ್ರಧಾನವಾಗಿದ್ದಾನೆ. ಮತ್ತು ಪ್ರತಿಯೊಬ್ಬ ನಾರಾಯಣನಿಗೆ ವಿಭಿನ್ನ ಹೆಸರುಗಳಿವೆ, ಅವುಗಳಲ್ಲಿ ಕೆಲವು ನಮಗೆ ತಿಳಿದಿವೆ. ಪ್ರದ್ಯುಮ್ನ, ಅನಿರುದ್ಧ, ಸಂಕರ್ಷಣ ಎಂದು ಕರೆಯುವಂತೆ... ನಮಗೆ ಇಪ್ಪತ್ನಾಲ್ಕು ಹೆಸರುಗಳು ಮಾತ್ರ ಗೊತ್ತಿದೆ, ಆದರೆ ಇನ್ನೂ ಅನೇಕ ಇವೆ. ಅದ್ವೈತಂ ಅಚ್ಯುತಂ ಅನಾದಿಂ ಅನಂತ-ರೂಪಂ (ಬ್ರಹ್ಮ.ಸಂ. 5. 33).

ಈ ಗ್ರಹಗಳು ಬ್ರಹ್ಮಜ್ಯೋತಿಯ ಪ್ರಕಾಶದಿಂದ ಆವೃತವಾಗಿವೆ. ಹಾಗಾಗಿ ಇಲ್ಲಿ ಹಿರರ್ಣ್ಮಯೇನ ಪಾತ್ರೇಣ ಸತ್ಯಸ್ಯ ಅಪಿಹಿತಂ ಎಂದು ಪ್ರಾರ್ಥಿಸಲಾಗಿದೆ. ಅಪಿಹಿತಂ ಎಂದರೆ ಆವರಿಸಿದೆ ಎಂಧರ್ಥ. ಈ ಬೆರಗುಗೊಳಿಸುವ ಸೂರ್ಯನ ಬೆಳಕಿನಲ್ಲಿ ನೀವು ಸೂರ್ಯಮಂಡಲವನ್ನು ನೋಡಲು ಸಾಧ್ಯವಿಲ್ಲ, ಹಾಗೆಯೇ ಕೃಷ್ಣ ಗ್ರಹ… ಇಲ್ಲಿ ಚಿತ್ರವಿದೆ. ಕೃಷ್ಣ ಗ್ರಹದಿಂದ ತೇಜಸ್ಸು ಹೊರಹೊಮ್ಮುತ್ತಿದೆ. ಆದುದರಿಂದ ನಾವು ಈ ಪ್ರಕಾಶವನ್ನು ಭೇದಿಸಬೇಕು. ಅದನ್ನೇ ಇಲ್ಲಿ ಪ್ರಾರ್ಥಿಸಲಾಗುತ್ತಿದೆ. ಹಿರರ್ಣ್ಮಯೇನ ಪಾತ್ರೇಣ ಸತ್ಯಸ್ಯ. ನಿಜವಾದ ಪರಿಪೂರ್ಣ ಸತ್ಯ, ಕೃಷ್ಣ, ಅವನ ಗ್ರಹವು ಬ್ರಹ್ಮಜ್ಯೋತಿಯಿಂದ ಆವೃತವಾಗಿದೆ. ಆದುದರಿಂದ ಭಕ್ತನು, "ದಯವಿಟ್ಟು ಅದನ್ನು ಸರಿಸು. ನಾನು ನಿನ್ನನ್ನು ನಿಜವಾಗಿಯೂ ನೋಡುವಂತೆ ಅದನ್ನು ಸರಿಸು.” ಬ್ರಹ್ಮಜ್ಯೋತಿ, ಮಾಯಾವಾದ ತತ್ತ್ವಜ್ಞಾನಿಗಳಿಗೆ ಬ್ರಹ್ಮಜ್ಯೋತಿಯನ್ನು ಮೀರಿ ಏನಿದೆ ಎಂದು ತಿಳಿದಿಲ್ಲ. ಬ್ರಹ್ಮಜ್ಯೋತಿಯು ಬಂಗಾರದ ತೇಜಸ್ಸಿನಂತಿದೆ ಎಂಬುದಕ್ಕೆ ವೈದಿಕ ಪುರಾವೆ ಇಲ್ಲಿದೆ. ಹಿರಣ್ಮಯೇನ ಪಾತ್ರೇಣ. ಇದು ಪರಮಾತ್ಮನ ನಿಜವಾದ ಮುಖವನ್ನು ಆವರಿಸಿದೆ. ತತ್ ತ್ವಮ್ ಪೂಷಣ್‌ ಅಪಾವೃಣು. "ನೀನು ಪಾಲಕ, ನೀನೇ ನಿರ್ವಾಹಕ. ನಿನ್ನನ್ನು, ನಿನ್ನ ಮುಖಾರವಿಂದವನ್ನು ನೋಡಲು ದಯವಿಟ್ಟು ಇದನ್ನು ಸರಿಸು."