KN/Prabhupada 0001 - 1 ಕೋಟಿಗೆ ವಿಸ್ತರಿಸಿ

Revision as of 05:51, 14 April 2024 by Sudhir (talk | contribs)
(diff) ← Older revision | Latest revision (diff) | Newer revision → (diff)


Lecture on CC Adi-lila 1.13 -- Mayapur, April 6, 1975

ಪ್ರಭುಪಾದ: ಚೈತನ್ಯ ಮಹಾಪ್ರಭುಗಳು ಎಲ್ಲಾ ಆಚಾರ್ಯರಿಗೆ ಹೇಳುತ್ತಾರೆ... ನಿತ್ಯಾನಂದ ಪ್ರಭು, ಅದ್ವೈತ ಪ್ರಭು, ಮತ್ತು ಶ್ರೀವಾಸಾದಿ ಗೌರ ಭಕ್ತ ವೃಂದ, ಅವರೆಲ್ಲರೂ ಚೈತನ್ಯ ಮಹಾಪ್ರಭುಗಳ ಆಜ್ಞಾ ಪಾಲಕರು, ಆಚಾರ್ಯರ ವಿಧಿಯನ್ನು ಅನುಸರಿಸಲು ಪ್ರಯತ್ನಿಸಿ. ಆಗ ಜೀವನ ಸಫಲವಾಗುತ್ತದೆ. ಮತ್ತು ಆಚಾರ್ಯರಾಗಲು ಬಹಳ ಕಷ್ಟವೇನಲ್ಲ. ಮೊಟ್ಟಮೊದಲು, ಆಚಾರ್ಯರ ನಿಷ್ಠಾವಂತ ಸೇವಕರಾಗಲು ಅವರು ಹೇಳಿದ್ದನ್ನು ಕಡ್ಡಾಯವಾಗಿ ಪಾಲಿಸಿ. ಅವರನ್ನು ಸಂತೋಷ ಪಡಿಸಲು ಪ್ರಯತ್ನಿಸಿ ಮತ್ತು ಕೃಷ್ಣ ಪ್ರಜ್ಞೆಯನ್ನು ಪ್ರಚಾರ ಮಾಡಿ. ಅಷ್ಟೇ. ಅದೇನೂ ಕಷ್ಟವಲ್ಲ. ನಿಮ್ಮ ಗುರುಗಳ ಆದೇಶಗಳನ್ನು ಪಾಲಿಸಲು ಪ್ರಯತ್ನಿಸಿ ಮತ್ತು ಕೃಷ್ಣ ಪ್ರಜ್ಞೆಯನ್ನು ಪ್ರಚಾರ ಮಾಡಿ. ಅದೇ ಚೈತನ್ಯ ಮಹಾಪ್ರಭುಗಳ ಆಜ್ಞೆ.

ಆಮಾರ ಅಜ್ಞಾಯ ಗುರು ಹನಾ ತಾರ ಏ ದೇಶ ಯಾರೇ ದೇಖಾ ತಾರೆ ಕಹ ಕೃಷ್ಣ ಉಪದೇಶ (ಚೈ.ಚ ಮಧ್ಯ 7.128)

"ನನ್ನ ಆಜ್ಞೆಯನ್ನು ಪಾಲಿಸುವ ಮೂಲಕ ನೀವು ಗುರುಗಳಾಗಿ." ಮತ್ತು ನಾವು ಆಚಾರ್ಯರ ವ್ಯವಸ್ಥೆಯನ್ನು ನಿಷ್ಠೆಯಿಂದ ಪಾಲಿಸಿದರೆ ಮತ್ತು ಉತ್ತಮ ರೀತಿಯಲ್ಲಿ ಕೃಷ್ಣ ಪ್ರಜ್ಞೆಯನ್ನು ಪ್ರಚಾರ ಮಾಡಲು ಪ್ರಯತ್ನಿಸಿದರೆ... ಯಾರೇ ದೇಖಾ ತಾರೆ ಕಹ ಕೃಷ್ಣ ಉಪದೇಶ (ಚೈ.ಚ ಮಧ್ಯ 7.128). ಕೃಷ್ಣನ ಉಪದೇಶಗಳು ಎರಡು ಬಗೆ ಇವೆ. ಉಪದೇಶ ಎಂದರೆ ಆದೇಶ. ಕೃಷ್ಣನು ಕೊಟ್ಟ ಆದೇಶವು ಕೃಷ್ಣನ ಉಪದೇಶ, ಮತ್ತು ಕೃಷ್ಣನ ಬಗ್ಗೆ ಪಡೆದ ಆದೇಶ ಕೂಡ ಕೃಷ್ಣ ಉಪದೇಶವೇ. "ಕೃಷ್ಣಸ್ಯ ಉಪದೇಶ ಇತಿ ಕೃಷ್ಣ ಉಪದೇಶ". ಸಮಾಸ ಷಷ್ಟಿ ತತ್ ಪುರುಷ ಸಮಾಸ. ಮತ್ತು "ಕೃಷ್ಣ ವಿಷಯ ಉಪದೇಶ" ಅದೂ ಸಹ ಕೃಷ್ಣ ಉಪದೇಶ. ಬಾಹು ವ್ರೀಹಿ ಸಮಾಸ. ಸಂಸ್ಕೃತ ವ್ಯಾಕರಣವನ್ನು ಈ ರೀತಿ ವಿಷ್ಲೇಶಿಸ ಬೇಕು. ಆದ್ದರಿಂದ, ಕೃಷ್ಣನ ಉಪದೇಶ ಎಂದರೆ ಭಗವದ್ಗೀತೆ. ಅವನು ಸ್ವತಃ ಉಪದೇಶಿಸುತ್ತಿದ್ದಾನೆ. ಆದ್ದರಿಂದ, ಯಾರು ಕೃಷ್ಣನ ಉಪದೇಶವನ್ನು ಪ್ರಚಾರಿಸುತ್ತಾರೋ, ಕೃಷ್ಣನು ಹೇಳಿದಂತೆ ಪುನರುಚ್ಚರಿಸುತ್ತಾರೋ, ಅವರು ಆಚಾರ್ಯರಾಗುತ್ತಾರೆ. ಸ್ವಲ್ಪವೂ ಕಠಿನವಿಲ್ಲ. ಎಲ್ಲ ಇಲ್ಲಿ ತಿಳಿಸಿದೆ. ನಾವು ಗಿಳಿಯಂತೆ ಪುನರುಚರಿಸಬೇಕು. ಅಷ್ಟೇ. ಬರೀ ಗಿಳಿಯಂತೆ ಅಲ್ಲ. ಗಿಳಿಗೆ ಅರ್ಥ ತಿಳಿಯುವುದಿಲ್ಲ. ಅದು ಪುನರುಚರಿಸುತ್ತದೆ ಅಷ್ಟೇ. ಆದರೆ ನೀವು ಅರ್ಥವನ್ನು ತಿಳಿಯಬೇಕು. ಇಲ್ಲವಾದರೆ ನೀವು ಹೇಗೆ ವಿವರಿಸುವಿರಿ? ಆದ್ದರಿಂದ, ನಾವು ಕೃಷ್ಣ ಪ್ರಜ್ಞೆಯನ್ನು ಪ್ರಚಾರ ಮಾದಬೇಕು.ಕೃಷ್ಣನ ಆದೇಶಗಳನ್ನು ತಪ್ಪಾಗಿ ವ್ಯಾಖ್ಯಾನಿಸದೆ ಬಹಳ ಚನ್ನಾಗಿ ಸಿದ್ಧರಾಗಿ. ನಂತರ ಭವಿಷ್ಯದಲ್ಲಿ... ಈಗ ನೀವು ಹತ್ತು ಸಾವಿರ. ನಾವು ಲಕ್ಷ ಜನರಾಗಿ ವಿಸ್ತರಿಸುತ್ತೇವೆ. ಅದು ಅಗತ್ಯ. ನಂತರ ಲಕ್ಷದಿಂದ ಹತ್ತು ಲಕ್ಷ. ಮತ್ತೆ, ಹತ್ತು ಲಕ್ಷದಿಂದ ಕೋಟಿ.

ಶಿಶ್ಯವರ್ಗ: ಹರಿಬೋಲ್! ಜಯ!

ಪ್ರಭುಪಾದ: ಆಗ ಆಚಾರ್ಯರ ಸಂಖ್ಯೆಗೆ ಕೊರತೆ ಇರುವುದಿಲ್ಲ. ಮತ್ತು ಜನರು ಸುಲಭವಾಗಿ ಕೃಷ್ಣ ಪ್ರಜ್ಞೆಯನ್ನು ಅರ್ಥ ಮಾಡಿಕೊಳ್ಳಬಲ್ಲರು. ಅಂತಹ ವ್ಯವಸ್ಥೆಯನ್ನು ರಚಿಸಿ. ಮಿಥ್ಯಾಗರ್ವಿತರಾಗ ಬೇಡಿ. ಆಚಾರ್ಯರ ಆದೇಶವನ್ನು ಪಾಲಿಸಿ. ಮತ್ತು ಸ್ವತಃ ಪರಿಪೂರ್ಣರಾಗಲು ಪ್ರಯತ್ನಿಸಿ, ಪಕ್ಕ್ವರಾಗಿ. ಆಗ ಮಾಯೆಯನ್ನು ಹೊಡೆದೋಡಿಸಲು ಸುಲಭವಾಗುತ್ತದೆ. ಹೌದು. ಆಚಾರ್ಯರು, ಅವರು ಮಾಯೆಯ ವಿರುದ್ಧ ಸಂಗ್ರಾಮ ಮಾಡುತ್ತಾರೆ.