KN/Prabhupada 0029 - ಬುದ್ದ ರಾಕ್ಷಸರನ್ನು ವಂಚಿಸಿದನು

Revision as of 01:05, 11 August 2024 by Sudhir (talk | contribs)
(diff) ← Older revision | Latest revision (diff) | Newer revision → (diff)


Sri Isopanisad, Mantra 1 -- Los Angeles, May 3, 1970

ಹೀಗೆ ಭಗವಾನ್ ಬುದ್ಧ ರಾಕ್ಷಸರನ್ನು ವಂಚಿಸಿದರು. ಏಕೆ ವಂಚಿಸಿದರು? ಸದಯ-ಹೃದಯ ದರ್ಶಿತ-ಪಶು-ಘಾತಂ. ಅವರು ಬಹಳ ಸಹಾನುಭೂತಿ ಹೊಂದಿದ್ದರು. ಭಗವಂತನು ಎಲ್ಲ ಜೀವಿಗಳಲ್ಲೂ ಯಾವಾಗಲೂ ಸಹಾನುಭೂತಿಯನ್ನು ಹೊಂದಿದ್ದಾನೆ ಏಕೆಂದರೆ ಎಲ್ಲರೂ ಅವನ ಮಕ್ಕಳು. ಈ ಮೂರ್ಖರು ಅನಿರ್ಬಂಧಿತವಾಗಿ ಪ್ರಾಣಿಗಳನ್ನು ಕೊಲ್ಲುತ್ತಿದ್ದರು. "ಓ, ನೀವು ಯಾಕೆ ಪ್ರಾಣಿಗಳನ್ನು ಕೊಲ್ಲುತ್ತಿದ್ದೀರಿ?" ಎಂದು ಕೇಳಿದರೆ, ಅವರು ತಕ್ಷಣ ಹೇಳುತ್ತಾರೆ, "ಓ, ವೇದಗಳಲ್ಲಿ ಹೇಳಿದೆ: ಪಶವೋ ವಧಾಯ ಸೃಷ್ಟ." ವೇದಗಳಲ್ಲಿ ಪ್ರಾಣಿ ವಧೆಯ ಬಗ್ಗೆ ಹೇಳಲಾಗಿದೆ. ಆದರೆ ಅದರ ಉದ್ದೇಶವೇನು? ಅದು ವೇದ ಮಂತ್ರಗಳ ಪರೀಕ್ಷೆಗಾಗಿ. ಪ್ರಾಣಿಯನ್ನು ಬೆಂಕಿಯಲ್ಲಿ ಹಾಕಲಾಗುತ್ತದೆ ಮತ್ತು ವೈದಿಕ ಮಂತ್ರದಿಂದ ಅದು ಪುನರುಜ್ಜೀವನಗೊಳ್ಳುವುದು. ಇದೇ ಯಜ್ಞ. ಪ್ರಾಣಿ ಬಲಿ. ತಿನ್ನುವುದಕೋಸ್ಕರವಲ್ಲ. ಅದ್ದರಿಂದ, ಈ ಕಲಿಯುಗದಲ್ಲಿ ಚೈತನ್ಯ ಮಹಾಪ್ರಭುಗಳು ಎಲ್ಲಾ ಯಜ್ಞಗಳನ್ನು ನಿಷೇಧಿಸಿದ್ದಾರೆ ಏಕೆಂದರೆ ಮಂತ್ರಗಳನ್ನು ಪಠಿಸಲು ಹಾಗು ವೇದ ಮಂತ್ರಗಳ ಪ್ರಯೋಗಮಾಡಿ ಆ ಪ್ರಾಣಿಯನ್ನು ಹೊರತರಲು ನಿಪುಣರಾದ ಬ್ರಾಹ್ಮಣರು ಇಲ್ಲ. ಯಜ್ಞದ ಮುನ್ನ ಮಂತ್ರದ ಶಕ್ತಿಯ ಪರೀಕ್ಷೆಗಾಗಿ ಪ್ರಾಣಿಗಳನ್ನು ಬಲಿ ಕೊಟ್ಟು, ಅವುಗಳಿಗೆ ಹೊಸ ಜೀವನವನ್ನು ನೀಡಲಾಗುತ್ತದೆ. ಬ್ರಾಹ್ಮಣನು ಸರಿಯಾಗಿ ಮಂತ್ರವನ್ನು ಪಠಿಸುತ್ತಿದ್ದಾನೆ ಎಂದು ಇದರಿಂದ ತಿಳಿಯುತ್ತದೆ. ಅದೊಂದು ಪರೀಕ್ಷೆ. ಪ್ರಾಣಿ ವಧೆಯಲ್ಲ. ಆದರೆ ಈ ಮೂರ್ಖರು, ಪ್ರಾಣಿಗಳನ್ನು ತಿನ್ನಲು ವೇದಗಳನ್ನು ಉಲ್ಲೇಖಿಸುತ್ತಾರೆ. ಕಲ್ಕತ್ತೆಯಲ್ಲಿದಂತೆ... ನೀವು ಕಲ್ಕತ್ತೆಗೆ ಹೋಗಿದ್ದೀರ? ಅಲ್ಲಿ ಒಂದು ರಸ್ತೆ ಇದೆ, ಕಾಲೇಜು ರಸ್ತೆ. ಈಗ ಅದರ ಹೆಸರು ಬದಲಾಗಿದೆ. ಅದನ್ನು ಈಗ ವಿಧಾನ ರಾಯ (?) ಎಂದು ಕರೆಯುತ್ತಾರೆ. ಹೇಗೆಂದರೆ... ಅಲ್ಲಿ ಕೆಲವು ಕಸಾಯಿಖಾನೆಗಳಿವೆ. ಆದ್ದರಿಂದ ಕಸಾಯಿಖಾನೆಗಳೆಂದರೆ ಅಲ್ಲಿನ ಹಿಂದೂಗಳು ಮುಸ್ಲಿಂರ ಅಂಗಡಿಯಿಂದ ಮಾಂಸವನ್ನು ಖರೀದಿಸುವುದಿಲ್ಲ. ಅದು ಅಶುದ್ಧ.(ನಗು). ಅದು ಒಂದೇನೇ: ಈ ಬದಿಯೂ ಮಲ ಆ ಬದಿಯೂ ಮಲ. ಅವರು ಮಾಂಸವನ್ನು ತಿನ್ನುತ್ತಿದ್ದಾರೆ, ಮತ್ತು ಹಿಂದೂ ಅಂಗಡಿ ಶುದ್ಧ, ಮುಸ್ಲಿಂ ಅಂಗಡಿ ಅಶುದ್ಧವೆನ್ನುತ್ತಾರೆ. ಇವು ಊಹಾಪೋಹಗಳು. ಧರ್ಮವು ಹೀಗೆ ಆಚರಿಸಲ್ಪಡುತ್ತದೆ. ಅದ್ದರಿಂದ, "ನಾನು ಹಿಂದೂ, ನಾನು ಮುಸ್ಲಿಂ, ನಾನು ಕ್ರಿಶ್ಚಿಯನ್", ಎಂದು ಅವರು ಹೊಡೆದಾಡುತ್ತಾರೆ. ಯಾರಿಗೂ ಧರ್ಮ ಎಂದರೆ ಏನು ಎಂದು ತಿಳಿದಿಲ್ಲ. ಗೊತ್ತಾಯಿತೆ? ಅವರು ಧರ್ಮವನ್ನು ಬಿಟ್ಟಿದ್ದಾರೆ. ಧೂರ್ತರು. ಅವರಿಗೆ ಧರ್ಮವೇ ಇಲ್ಲ. ನಿಜವಾದ ಧರ್ಮವೆಂದರೆ ಕೃಷ್ಣ ಪ್ರಜ್ಞೆ. ಇದು ಭಗವಂತನನ್ನು ಹೇಗೆ ಪ್ರೀತಿಸಬೇಕು ಎಂಬುದನ್ನು ತಿಳಿಸುತ್ತದೆ. ಅಷ್ಟೇ. ಅದೇ ಧರ್ಮ. ಹಿಂದೂ ಧರ್ಮ, ಮುಸ್ಲಿಂ ಧರ್ಮ, ಕ್ರಿಶ್ಚಿಯನ್ ಧರ್ಮ ಯಾವುದಾದರೂ ಸರಿ. ನೀವು ದೇವರಲ್ಲಿ ಪ್ರೀತಿಯನ್ನು ಬೆಳೆಸುತ್ತಿದ್ದರೆ, ನೀವು ನಿಮ್ಮ ಧರ್ಮದಲ್ಲಿ ಪರಿಪೂರ್ಣರಾಗಿದ್ದೀರಿ.